ಮುಂದಿನ ಭವಿಷ್ಯಕ್ಕೆ ಕನ್ನಡಿ ಹಿಡಿಯುವ ದಿನ ಭವಿಷ್ಯ

By: Divya Pandit
Subscribe to Boldsky

ಒತ್ತಡದ ಜೀವನ, ಒಂದಿಲ್ಲೊಂದು ಕಾರಣಕ್ಕೆ ಮಾನಸಿಕ ಕಿರಿಕಿರಿಯನ್ನು ಉಂಟುಮಾಡುವುದು. ಹೀಗೆ ಅನೇಕ ಸಮಸ್ಯೆಗಳು ಹಾಗೂ ಗೊಂದಲಗಳಿಂದ ಬದುಕು ಸಾಕು ಎನ್ನುವಷ್ಟು ಬೇಸರವನ್ನುಂಟು ಮಾಡುತ್ತದೆ. ಕಷ್ಟಗಳ ದಿನಗಳು ಕಳೆದು ಒಳ್ಳೆಯ ದಿನ ಬರಬಹುದೇ? ಎನ್ನುವ ಕಾತುರ ಹಾಗೂ ಹಂಬಲಗಳು ಕಾಡುತ್ತಲಿರುತ್ತವೆ. ಅಂತಹ ಸಂದರ್ಭದಲ್ಲಿ ಮುಂದಿನ ದಿನದ ಆಗು ಹೋಗುಗಳನ್ನು ತಿಳಿಸಿಕೊಡುವುದು ದಿನ ಭವಿಷ್ಯ.

ನಮ್ಮ ಕುಂಡಲಿಯಲ್ಲಿ ಉಂಟಾಗುವ ಗ್ರಹಗತಿಗಳ ಬದಲಾವಣೆ ನಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತಿರುತ್ತದೆ. ಅದು ಪ್ರತಿದಿನ, ಪ್ರತಿ ಘಳಿಗೆಯೂ ಬದಲಾವಣೆಯನ್ನು ಹೊಂದುತ್ತಿರುವುದರಿಂದ ದಿನದ ಭವಿಷ್ಯದಲ್ಲೂ ಬದಲಾವಣೆಯಿರುತ್ತದೆ. ಭವಿಷ್ಯದ ನಿಜ ಸಂಗತಿಗಳನ್ನು ಒಮ್ಮೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಬೋಲ್ಡ್‍ಸ್ಕೈ ಜಾಲ ತಾಣವನ್ನು ವೀಕ್ಷಿಸಬಹುದು. ಇಂದಿನ ಭವಿಷ್ಯದಲ್ಲಿ ನಿಮ್ಮ ಫಲನುಫಲಗಳ ಹೇಗಿದೆ ಎನ್ನುವುದನ್ನು ನಮ್ಮ ಬೋಲ್ಡ್ ಸ್ಕೈ ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ. ಹಾಗಾದರೆ ಇನ್ನೇಕೆ ತಡ? ನಿಮ್ಮ ರಾಶಿಯಾವುದೆಂದು ತಿಳಿದು, ಭವಿಷ್ಯವನ್ನು ಅರಿಯಿರಿ.

ಮೇಷ:

ಮೇಷ:

ಸಮಾಧಾನ ಹಾಗೂ ಸಂತೋಷಗಳನ್ನು ಅನುಭವಿಸುವಿರಿ. ಎರಡು ವರ್ಷಗಳಿಂದ ಅನುಭವಿಸುತ್ತ ಬಂದ ಕಷ್ಟಗಳು ನಿವಾರಣೆ ಹೊಂದುತ್ತದೆ. ನಿಮಗಿದ್ದ ನಿರ್ಧಿಷ್ಟ ಗುರಿಯನ್ನು ತಲುಪುವಿರಿ. ಬಂಧು ಮಿತ್ರರ ಆಗಮನ. ಕಾನೂನು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಮನ್ನಣೆಯನ್ನು ಪಡೆಯುವಿರಿ. ಉದ್ಯೋಗ ಕ್ಷೇತ್ರದಲ್ಲೂ ಲಾಭ ತಂದುಕೊಡುವುದು. ಉತ್ತಮ ಭವಿಷ್ಯಕ್ಕಾಗಿ ಸದ್ಗುರುವನ್ನು ಆರಾಧಿಸಿ.

ವೃಷಭ:

ವೃಷಭ:

ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಮಕ್ಕಳ ಬಗ್ಗೆ ಅತಿಯಾದ ಕಾಳಜಿ ವಹಿಸುವಿರಿ. ಇಂದು ನಿಮಗೆ ಒಳ್ಳೆಯ ಸಮಯ ಎಂದು ಹೇಳಬಹುದು. ಮನೆಯಲ್ಲಿ ಸಂತೋಷದ ವಾತಾವರಣ. ಲಾಭಾಂಶದ ಜೊತೆಗೆ ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ. ಮುಂದಿನ ಒಳಿತಿಗಾಗಿ ಗುರುವನ್ನು ಆರಾಧಿಸಿ. ಸಮಾಧಾನ ಹಾಗೂ ನೆಮ್ಮದಿ ಫಲಿಸಲಿದೆ. ನಿಮಗೆ ಈಗ ಅಷ್ಟಮ ಶನಿ ನಡೆಯುತ್ತಿರುವುದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.

ಮಿಥುನ:

ಮಿಥುನ:

ಇವರಿಗೆ ಇಂದು ಸಾಮಾನ್ಯ ದಿನವೆಂದು ಹೇಳಬಹುದು. ಇಂದು ನಿಮಗೆ ಅಷ್ಟು ಉತ್ತಮ ದಿನವಾಗದಿದ್ದರೂ ಅವಮಾನ ಉಂಟಾಗುವುದಿಲ್ಲ. ಸಮಾಧಾನ ಚಿತ್ತದಲ್ಲಿ ಇರುತ್ತೀರಿ. ನೀವು ಕೈಗೊಂಡ ಕೆಲಸದಲ್ಲೂ ಲಾಭಾಂಶ ದೊರೆಯುವುದು. ಚರಾಸ್ತಿಯಿಂದ ಲಾಭ ಉಂಟಾಗುವುದು. ಬಂಧು ಮಿತ್ರರ ಸಹಕಾರ ದೊರೆಯುವುದು. ಚಾಲಕರಿಗೆ ಹಾಗೂ ಶ್ರಮಪಟ್ಟು ದುಡಿಯುವವರಿಗೆ ಲಾಭದೊರೆಯುವುದು. ನೆಮ್ಮದಿಯ ಬದುಕಿಗೆ ಶಿವನ ಆರಾಧನೆ ಮಾಡಿ.

ಕರ್ಕ:

ಕರ್ಕ:

ಮಾನಸಿಕ ಸಮಾಧಾನ ದೊರೆಯುವುದು. ತಂದೆಯ ಸಹಾಯದಿಂದ ಹೊಸ ಉದ್ಯೋಗಕ್ಕೆ ಕೈ ಹಾಕುವಿರಿ. ಇದರಿಂದ ಲಾಭವು ಉಂಟಾಗುವುದು. ಕೆಲವರು ವಾಹನವನ್ನು ಖರೀದಿಸುವ ಸಾಧ್ಯತೆ ಇದೆ. ರೈತಾಪಿ ಜಿವನವನ್ನನು ಆಯ್ದುಕೊಂಡವರಿಗೆ ನೆಮ್ಮದಿಯ ಬದುಕು ಉಂಟಾಗಲಿದೆ. ತಂದೆ ಮಕ್ಕಳ ನಡುವೆ ಭಿನ್ನಾಭಿಪ್ರಾಯ ದೂರ ಆಗುವುದು. ಲಾಭಾಂಶಕ್ಕಾಗಿ ಗುರುವಿನ ಆರಾಧನೆ ಮಾಡಿ.

ಸಿಂಹ:

ಸಿಂಹ:

ಇಂದು ನೀವು ಬಹಳ ಜಾಗೃತೆಯಿಂದ ವರ್ತಿಸಬೇಕು. ಇಲ್ಲಸಲ್ಲದ ಅಪವಾದಗಳು ನಿಮ್ಮ ಬೆನ್ನೇರುವ ಸಾಧ್ಯತೆ ಇದೆ. ಹೆಣ್ಣುಮಕ್ಕಳಿಂದ ಅಪಮಾನ ಉಂಟಾಗುವ ಸಾಧ್ಯತೆ ಇದೆ. ಬ್ಯಾಂಕ್ ಉದ್ಯೋಗದಲ್ಲಿ ಇರುವವರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಬೆನ್ನುನೋವು ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವುದು ಸೂಕ್ತ. ಹಿರಿಯರ ಮಾತನ್ನು ಯಾವುದೇ ಕಾರಣಕ್ಕೂ ದಿಕ್ಕರಿಸದಿರಿ. ಸಮಾಧಾನ ಹಾಗೂ ಸುಂದರ ಬದುಕಿಗಾಗಿ ಗುರುವಿನ ಉಪಾಸನೆ ಮಾಡಿ.

ಕನ್ಯಾ:

ಕನ್ಯಾ:

ನೀವು ಎಷ್ಟೇ ಸಮಾಧಾನದಿಂದ ಇರಲು ಪ್ರಯತ್ನಿಸಿದರೂ ಸಮಾಧಾನ ನಿಮಗೆ ದೊರೆಯದಂತಹ ಪರಿಸ್ಥಿತಿ. ಕುಟುಂಬದಲ್ಲೂ ಕೆಲವು ವಿಚಾರದ ಕುರಿತು ವಿಪರೀತ ಒತ್ತಡಕ್ಕೆ ಒಳಗಾಗುವಿರಿ. ಮಕ್ಕಳಿಂದಲೂ ಅಶುಭ ವಾರ್ತೆ ಕೇಳುವ ಸಾಧ್ಯತೆ ಇದೆ. ಆದಷ್ಟು ಜಾಗೃತವಾಗಿರಿ. ಹಣಕಾಸಿನ ವಿಚಾರದಲ್ಲೂ ತೊಂದರೆ ಉಂಟಾಗುವುದು. ಮಾನಸಿಕ ಲಾಭಾಂಶವನ್ನು ಪಡೆಯಲು ಕುಲದೇವರ ಆರಾಧನೆ ಮಾಡಿ.

ತುಲಾ:

ತುಲಾ:

ಮನೆಯಲ್ಲಿ ಸಂತೋಷದ ವಾತಾವರಣ ಹಾಗೂ ನೆಮ್ಮದಿಯನ್ನು ಅನುಭವಿಸುವಿರಿ. ಇಂದು ನಿಮಗೆ ಸಮೃದ್ಧಿಯ ದಿನ ಎಂದು ಹೇಳಬಹುದು. ತಾರ್ಕಿಕ ವಿಚಾರಗಳು ಅಂತ್ಯಗೊಳ್ಳಲಿದೆ. ವಾದ ವಿವಾದದಲ್ಲಿ ಜಯಗೆಳಿಸುವಿರಿ. ಸಾಹಿತ್ಯ ಕ್ಷೇತ್ರದಲ್ಲಿ ನೆಮ್ಮದಿ ಹಾಗೂ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಗೌರವ ದೊರೆಯುವುದು. ಹಿರಿಯರು ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಶಿವನ ಆರಾಧನೆ ಮಾಡಿದರೆ ಒಳ್ಳೆಯದು.

ವೃಶ್ಚಿಕ:

ವೃಶ್ಚಿಕ:

ಮಾನಸಿಕ ನೆಮ್ಮದಿಯಲ್ಲಿ ಏರುಪೇರು ಉಂಟಾಗುವುದು. ವಿಪರೀತ ಆಯಾಸ ಹಾಗೂ ಕೆಲವು ಆರೋಗ್ಯ ತೊಂದರೆಗಳಿಗೆ ವೈದ್ಯರನ್ನು ಭೇಟಿಮಾಡಬೇಕಾಗುವ ಸಾಧ್ಯತೆಗಳಿವೆ. ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಇರುವವರಿಗೆ ಇನ್ನಷ್ಟು ಆರೋಗ್ಯ ತೊಂದರೆ ಉಂಟಾಗುವುದು. ಹಣಕಾಸಿನ ವಿಚಾರದಲ್ಲೂ ಏರುಪೇರು ಉಂಟಾಗುವುದು. ಉತ್ತಮ ಭವಿಷ್ಯಕ್ಕಾಗಿ ಕುಲದೇವರ ಆರಾಧನೆ ಕೈಗೊಳ್ಳಿ.

ಧನು:

ಧನು:

ಈ ರಾಶಿಯವರು ಆದಷ್ಟು ಜಾಗೃತರಾಗಿರಬೇಕು. ಇಲ್ಲ ಸಲ್ಲದ ಆರೋಪ ಹಾಗೂ ಅವಮಾನ ಉಂಟಾಗುವ ಸಾಧ್ಯತೆ ಇದೆ. ಹೆಣ್ಣುಮಕ್ಕಳಿಂದ ಅವಮಾನ ಉಂಟಾಗುವುದು. ಉದ್ಯಮದಲ್ಲಿ ಹಿತ ಶತ್ರುಗಳು ತೊಂದರೆಯನ್ನುಂಟುಮಾಡುವರು. ಮೇಲಾಧಿಕಾರಿಗಳು ನಿಮ್ಮ ಮೇಲೆ ಅಪವಾದವನ್ನು ಹೇರಬಹುದು. ಅನಿರೀಕ್ಷಿತ ಸಮಸ್ಯೆಗಳಿಗೆ ನೀವು ತುತ್ತಾಗುವಿರಿ. ಸ್ತ್ರೀಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮನೆಯಿಂದ ಹೊರಡುವಾಗ ಚಿಕ್ಕ ಮಕ್ಕಳ ಮುಖ ದರ್ಶನ ಮಾಡಿ. ಒಳ್ಳೆಯದಾಗುವುದು. ಉತ್ತಮ ಭವಿಷ್ಯಕ್ಯಾಗಿ ಕುಲದೇವರ ಪ್ರಾರ್ಥನೆ ಮಾಡಿ.

ಮಕರ:

ಮಕರ:

ಅಂದುಕೊಂಡ ಕೆಲಸ ಸುಗಮವಾಗಿ ನೆರವೇರದು. ಆದರೂ ಆ ವಿಚಾರದ ಬಗ್ಗೆ ಅತಿಯಾಗಿ ಚಿಂತಿಸುವ ಅಗತ್ಯ ಇರುವುದಿಲ್ಲ. ಹೈನುಗಾರಿಕೆ ವ್ಯಾಪಾರಗಳಿಗೆ ಉತ್ತಮ ಲಾಭ ಹಾಗೂ ಸಗಟು ವ್ಯಾಪಾರಿಗಳಿಗೆ ಸಾಮಾನ್ಯ ಲಾಭ ತಂದುಕೊಡುವುದು. ಬಟ್ಟೆ ವ್ಯಾಪಾರಗಳಿಗೂ ಲಾಭ ಉಂಟಾಗುವುದು. ನೀಲಿ ಬಣ್ಣದ ಉಡುಗೆಯನ್ನು ಧರಿಸದಿರುವುದು ಸೂಕ್ತ. ಒಳ್ಳೆಯ ಲಾಭ ಹಾಗೂ ಬದುಕಿಗೆ ಶಿವನ ಆರಾಧನೆ ಮಾಡುವುದು ಸೂಕ್ತ.

ಕುಂಬ:

ಕುಂಬ:

ಇಂದು ನೀವು ಮಾಡುವ ಕೆಲಸದಲ್ಲಿ ಒಳ್ಳೆಯದಾಗುವುದು. ಇದರೊಟ್ಟಿಗೆ ಮಾನಸಿಕ ನೆಮ್ಮದಿಯೂ ದೊರೆಯುವುದು. ಪ್ರವಾಸೋದ್ಯಮ, ತೈಲ ಹಾಗೂ ಖನಿಜ ಉತ್ಪಾದನೆಯ ಉದ್ಯೋಗದಲ್ಲಿರುವವರಿಗೆ ಲಾಭ ಹಾಗೂ ಸಮಾಧಾನ ದೊರೆಯಲಿದೆ. ಸ್ತ್ರೀಯರ ಡೋಲಾಯಮಾನ ಮನಃ ಸ್ಥಿತಿಯು ಉತ್ತಮವಾಗುವುದು. ಉತ್ತಮ ಭವಿಷ್ಯಕ್ಕೆ ಶಿವ ಆರಾಧನೆ ಮಾಡಿ.

ಮೀನ:

ಮೀನ:

ಉತ್ತಮ ಪ್ರಗತಿಯ ದಿನ ಎಂದು ಹೇಳಬಹುದು. ಬಂಧು ಬಾಂಧವರ ಸಮಾಗಮನದಿಂದ ಮನಸ್ಸಿಗೆ ಸಂತೋಷ ಸಿಗುವುದು. ಒಂದಷ್ಟು ಸಿಹಿ ಪದಾರ್ಥಗಳನ್ನು ಸವಿಯುವ ಅವಕಾಶ ನಿಮ್ಮದಾಗಿರುತ್ತದೆ. ಸ್ಥಿರಾಸ್ತಿಯನ್ನು ಖರೀದಿಸುವ ಕೆಲಸ ಮುಂದುವರಿಸಿದರೆ ಲಾಭ ದೊರೆಯುವುದು. ವಿದೇಶ ಪ್ರಯಾಣ ಮಾಡುವ ಯೋಗವು ನಿಮಗೆ ಸಿಗಲಿದೆ. ಉತ್ತಮ ಭವಿಷ್ಯಕ್ಕಾಗಿ ಗಣೇಶನನ್ನು ಆರಾಧಿಸಿ.

Read more about: astrology
English summary

ಗುರುವಾರದ ಇಂದಿನ ದಿನ ಭವಿಷ್ಯ

Astrology November 2017
Story first published: Thursday, November 2, 2017, 7:00 [IST]
Subscribe Newsletter