For Quick Alerts
ALLOW NOTIFICATIONS  
For Daily Alerts

ಶಿಕ್ಷಕರ ದಿನಾಚರಣೆ 2019: ಎಂದೆಂದಿಗೂ ಸದಾ ನೆನಪಿನಲ್ಲಿ ಉಳಿಯುವ ಇತಿಹಾಸದ ಶ್ರೇಷ್ಠ ಶಿಕ್ಷಕರಿವರು!

By Hemanth
|
Teacher's Day 2018 : ಸದಾ ನೆನಪಿನಲ್ಲಿ ಉಳಿಯುವ ಇತಿಹಾಸದ ಶ್ರೇಷ್ಠ ಶಿಕ್ಷಕರಿವರು! | Oneindia Kannada

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಮಕ್ಕಳ ಮೇಲಿನ ಪ್ರೀತಿಯಿಂದ ತನ್ನ ಜನ್ಮ ದಿನಾಚರಣೆಯನ್ನು ಮಕ್ಕಳ ದಿನವಾಗಿ ಆಚರಿಸಬೇಕೆಂದು ಘೋಷಿಸಿದ್ದರು. ಅದೇ ರೀತಿ ಶಿಕ್ಷಕರಾಗಿದ್ದಂತಹ ಸರ್ವಪಳ್ಳಿ ರಾಧಾಕೃಷ್ಣನ್ ಅವರು ತನ್ನ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸಿಬೇಕೆಂದು ಘೋಷಿಸಿದ್ದರು. ರಾಧಾಕೃಷ್ಣನ್ ಅವರ ಹುಟ್ಟುಹಬ್ಬವು ಸೆ.5ರಂದು. ಇದನ್ನು ಭಾರತದೆಲ್ಲೆಡೆ ಶಿಕ್ಷಕರ ದಿನವಾಗಿ ಆಚರಿಸಲ್ಪಡುವುದು.

ರಾಧಾಕೃಷ್ಣನ್ ಅವರು ಒಬ್ಬ ಜನಪ್ರಿಯ ಶಿಕ್ಷಕರು ಮಾತ್ರವಲ್ಲದೆ ಇಂದಿನ ಶಿಕ್ಷಕರಿಗೂ ಅವರು ಪ್ರೇರಣೆಯಾಗಿದ್ದಾರೆ. ಶಿಕ್ಷಕರ ದಿನದಂದು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಗುಲಾಬಿ ಹೂ ಮತ್ತು ಕೆಲವು ಉಡುಗೊರೆಗಳನ್ನು ನೀಡುವರು. ಇತಿಹಾಸದಲ್ಲಿನ ಕೆಲವು ಮಂದಿ ಶಿಕ್ಷಕರು ಹಲವರಿಗೆ ಪ್ರೇರಣೆ. ಇವರನ್ನು ನೋಡಿಯೇ ಹೆಚ್ಚಿನವರು ತಾವು ಕೂಡ ಶಿಕ್ಷಕರಾಗಬೇಕೆಂದು ಬಯಸಿದ್ದರು.

ನೂರಾರು ಮಂದಿ ವಿದ್ಯಾರ್ಥಿಗಳನ್ನು ನೋಡಿಕೊಳ್ಳುವಂತಹ ಶಿಕ್ಷಕರ ತಾಳ್ಮೆ ಮೆಚ್ಚಲೇಬೇಕು. ಇತಿಹಾಸದಲ್ಲಿರುವಂತಹ ಕೆಲವು ಶಿಕ್ಷಕರು ವಿದ್ಯಾರ್ಥಿಗಳನ್ನು ಒಬ್ಬ ಉತ್ತಮ ನಾಗರಿಕನಾಗಿ ಮಾಡಿರುವುದಲ್ಲದೆ ಇಂದಿಗೂ ಅವರಿಗೆ ಪ್ರೇರಣೆಯಾಗಿದ್ದಾರೆ. 2019ರ ಶಿಕ್ಷಕರ ದಿನಾಚರಣೆ ವಿಶೇಷ ಅಂತಹ ಜನಪ್ರಿಯ ಶಿಕ್ಷಕರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....

ಡಾ. ಸರ್ವಪಳ್ಳಿ ರಾಧಾಕೃಷ್ಣನ್

ಡಾ. ಸರ್ವಪಳ್ಳಿ ರಾಧಾಕೃಷ್ಣನ್

ಭಾರತದಲ್ಲಿ ಶಿಕ್ಷಕರ ದಿನದಂದು ರಾಧಾಕೃಷ್ಣನ್ ಅವರ ಹುಟ್ಟುಹಬ್ಬ ಆಚರಿಸಲಾಗುತ್ತದೆ. ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಕರಾಗಿದ್ದ ರಾಧಾಕೃಷ್ಣನ್ ಅವರು ಭಾರತದ ಉಪರಾಷ್ಟ್ರಪತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಅಲೆಕ್ಸಾಂಡರ್ ಗ್ರಾಂ ಬೆಲ್

ಅಲೆಕ್ಸಾಂಡರ್ ಗ್ರಾಂ ಬೆಲ್

ಟೆಲಿಫೋನ್ ಕಂಡು ಹಿಡಿದಿದ್ದ ಅಲೆಕ್ಸಾಂಡರ್ ಗ್ರಾಂ ಬೆಲ್ ಅವರು ಬೋಸ್ಟನ್ ನ ಮೂಖ ಮತ್ತು ಕಿವುಡರ ಶಾಲೆಯಲ್ಲಿ ಗೋಚರಿಸುವ ಭಾಷೆಯ ಶಿಕ್ಷಕರಾಗಿದ್ದರು. ತನ್ನ ವಿದ್ಯಾರ್ಥಿಯಾಗಿದ್ದ ಮಬೆಲ್ ಹಬ್ಬರ್ಡ್ ಜತೆಗೆ ಉತ್ತಮ ಭಾಂದವ್ಯ ಬೆಳೆಸಿದ ಬೆಲ್ ಬಳಿಕ ಆಕೆಯನ್ನೇ ಮದುವೆಯಾದರು.

 ಪಂಡಿತ್ ರವಿ ಶಂಕರ್

ಪಂಡಿತ್ ರವಿ ಶಂಕರ್

ಭಾರತದಲ್ಲಿ ಇವರು ದಂತಕಥೆ ಮತ್ತು ಇತಿಹಾಸದ ಜನಪ್ರಿಯ ಶಿಕ್ಷಕರಲ್ಲಿ ಒಬ್ಬರಾಗಿದ್ದಾರೆ. ಪಂಡಿತ್ ರವಿ ಶಂಕರ್ ಅವರು ಭಾರತದ ಶ್ರೇಷ್ಠ ಸಂಗೀತ ಶಿಕ್ಷಕರಲ್ಲಿ ಒಬ್ಬರಾಗಿದ್ದರು. ಅವರು ಭಾರತದ ಸಂಗೀತ ಕ್ಷೇತ್ರಕ್ಕೆ ತುಂಬಾ ಕೊಡುಗೆ ನೀಡಿದ್ದಾರೆ.

ಸ್ಟಿಂಗ್

ಸ್ಟಿಂಗ್

ಪೊಲೀಸ್ ಚಿತ್ರದೊಂದಿಗೆ ದೊಡ್ಡ ನಟರಾಗುವ ಮೊದಲು ಸ್ಟಿಂಗ್ ಅವರು ಲಂಡನ್ ನ ಸೇಂಟ್ ಕ್ಯಾಥರೀನ್ಸ್ ಕಾನ್ವೆಂಟ್ ಸ್ಕೂಲ್ ನಲ್ಲಿ ಇಂಗ್ಲಿಷ್, ಸಂಗೀತ ಮತ್ತು ಫುಟ್ಬಾಲ್ ಕಲಿಸುತ್ತಿದ್ದರು.

ರಾಬರ್ಟ್ ಫ್ರಾಸ್ಟ್

ರಾಬರ್ಟ್ ಫ್ರಾಸ್ಟ್

ಶ್ರೇಷ್ಠ ಕವಿಯಾಗಿದ್ದ ರಾಬರ್ಟ್ ಫ್ರಾಸ್ಟ್ ಅವರು ನ್ಯೂ ಹ್ಯಾಂಪ್ ಶೇರ್ ನಲ್ಲಿರುವ ಡೆರ್ರಿಯಲ್ಲಿ ಪಿಂಕರ್ಟನ್ ಅಕಾಡಮಿಯಲ್ಲಿ ಶಿಕ್ಷಕರಾಗಿದ್ದರು. ಈ ವಿಶ್ವವಿದ್ಯಾನಿಲಯದಲ್ಲಿ ಜನಪ್ರಿಯ ಶಿಕ್ಷಕರನ್ನು ಹೆನ್ ಮೆನ್ ಎಂದು ಕರೆಯಲಾಗುತ್ತಿತ್ತು. ಕೋಳಿಗಳಿಗೆ ರಾಬರ್ಟ್ ಹೆದರುತ್ತಾ ಇದ್ದ ಕಾರಣ ಈ ಹೆಸರು ಬಂದಿತ್ತು.

ಸಿಲ್ವಿಸ್ಟರ್ ಸ್ಟಾಲೋನ್

ಸಿಲ್ವಿಸ್ಟರ್ ಸ್ಟಾಲೋನ್

ಸಿಲ್ವಿಸ್ಟರ್ ಸ್ಟಾಲೋನ್ ಹಾಲಿವುಡ್ ನಲ್ಲಿ ಶ್ರೇಷ್ಠ ನಟನಾಗುವ ಮೊದಲು ಜನಪ್ರಿಯ ಶಿಕ್ಷಕರಾಗಿದ್ದರು. ಸ್ವಿಟ್ಜರ್ಲೆಂಟ್ ನಲ್ಲಿರುವ ಅಮೆರಿಕನ್ ಕಾಲೇಜಿನಲ್ಲಿ ಅವರು ಜಿಮ್ ಶಿಕ್ಷಕರಾಗಿದ್ದರು.

English summary

Famous Teachers of India and their contribution to education

Teacher's Day is celebrated with grandeur in all schools and colleges all over India. Teachers are given presents and treated with extra care and made to feel special too. These great and famous teachers in history have made a remarkable impression on most of our teachers today.
X
Desktop Bottom Promotion