For Quick Alerts
ALLOW NOTIFICATIONS  
For Daily Alerts

ಧನಾತ್ಮಕ ಚಿಂತನೆ ಮಾಡುವುದು ಹೇಗೆ ?

By ಲೇಖಕ
|

“ಧನಾತ್ಮಕ ಚಿಂತನೆ ಅಥವಾ ಸಕಾರಾತ್ಮಕ ಚಿಂತನೆ ಇದೊಂದು ವರವಲ್ಲ. ಇದು ಗುರುಗಳು ಕಲಿಸಿಕೊಟ್ಟ ಜೀವನ ಕಲೆ”. ಇದು ಸಾಮಾನ್ಯವಾಗಿ ಎಲ್ಲರ ತರ್ಕ ಅಥವಾ ಮನೋಭಾವ. ಸಿನಿಕತೆಯ ಬೀಜ ಮನುಷ್ಯರ ಮನಸ್ಸಿನಲ್ಲಿ ಹಾಗೆಯೇ ಬೆಳೆಯುತ್ತದೆ ಹಾಗೆಯೇ ಧನಾತ್ಮಕ ಚಿಂತನೆ ಯಾರಲ್ಲಿ ಇದನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇದೆಯೋ ಅವರನ್ನು ಆಧಾರಿಸಿರುತ್ತದೆ.

ನನ್ನಿಂದ ಯಾವ ಕಾರ್ಯವೂ ಆಗುವುದಿಲ್ಲ, ನನ್ನ ಗುರಿ ತಲುಪಲು ಸಾಧ್ಯವಿಲ್ಲ ಎಂಬಿತ್ಯಾದಿ ಮಾತುಗಳು ಋಣಾತ್ಮಕವಾಗಿ (ನೆಗೆಟೀವ್) ಯೋಚನೆ ಮಾಡುವವರಿಗೆ ಮಾತ್ರ ಹುಟ್ಟಿಕೊಳ್ಳುವಂತದ್ದು. ಆದರೆ ಅದೇ ವಿಚಾರಗಳನ್ನು ಧನಾತ್ಮಕವಾಗಿ ಯೋಚಿಸಿದರೆ ಕಷ್ಟ ಎನ್ನುವ ಮಾತು ನಿಮ್ಮಿಂದ ದೂರವೇ ಉಳಿಯುತ್ತವೆ ಬಿಡಿ!

ಇಲ್ಲಿ ಇಂತಹ ಧನಾತ್ಮಕ ಯೋಚನೆಯನ್ನು ನಿಮ್ಮಲ್ಲಿ ಹುಟ್ಟುಹಾಕುವುದಕ್ಕೆ ಕೆಲವು ಸಲಹೆಗಳಿವೆ !

 How To Think Positive

1. ನಿಮ್ಮ ವರ್ತನೆಯನ್ನು ನಿಗ್ರಹಿಸಿ/ ನಿಯಂತ್ರಿಸಿ.

ಕೆಲವೊಮ್ಮೆ ಪ್ರಜ್ಞಾಪೂರ್ವಕ ನಿರ್ಧಾರಗಳನ್ನು ತೆಗೆದುಕೊಳ್ಳುವಾದ ಋಣಾತ್ಮಕವಾಗಿ ಚಿಂತನೆ ಮಾಡದೇ ಇರುವುದು ನಮ್ಮ ಜೀವನದ ದೃಷ್ಟಿಕೋನವನ್ನು ವಿನ್ಯಾಸಗೊಳಿಸುವಲ್ಲಿ ಸಹಕಾರಿಯಾಗಿತ್ತವೆ. ಕೆಲವರು ತಮ್ಮ ನಿರ್ಧಾರಗಳಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಅಂದರೆ ಅವರ ನಿರ್ಧಾರಗಳನ್ನು ನಿರ್ದೇಶನಮಾಡುವಲ್ಲಿ ಸ್ವತಃ ಅವರೇ ಎಡವುತ್ತಾರೆ. ಆದ್ದರಿಂದ ನೀವು ಇಂತಹ ತಪ್ಪುಗಳು ನಿಮ್ಮ ನಿರ್ಧಾರಗಳಲ್ಲಿ ಆಗದಂತೆ ಎಚ್ಚರವಹಿಸಬೇಕು.

2. ಧ್ಯಾನ

ಹಿಂದಿನ ಕಾಲದಲ್ಲಿ ಸಂನ್ಯಾಸಿಗಳು ನಿರ್ವಾಣ ಪಡೆಯಲು ಶತಮಾನಗಳಿಂದ ಧ್ಯಾನ ಮಾಡುತ್ತಿದ್ದರು. ಇಂದು ಈ ಹಳೆಯ ಪದ್ಧತಿಗಳನ್ನೇ ನಾವೂ ಅನುಸರಿಸಬೇಕಾಗಿದೆ. ವಿಜ್ಞಾನಿಗಳ ಪ್ರಕಾರ ಧ್ಯಾನ ಸಮಯದಲ್ಲಿ, ಮನಸ್ಸಿನ ಚಿಂತನೆಯ ಒಂದು ನಿರ್ದಿಷ್ಟ ವಿಷಯದ ಕಡೆಗೆ ಗಮನಹರಿಸುತ್ತದೆ, ಇದರಿಂದ ಒಂದು ನಿರ್ದಿಷ್ಟ ರೀತಿಯ ಶಕ್ತಿ ಹರಡುವಿಕೆ ಆರಂಭವಾಗುತ್ತದೆ. ಈ ಶಕ್ತಿ ವ್ಯಕ್ತಿಗಳು ಜೀವನದಲ್ಲಿ ಅಡಚಣೆಗಳನ್ನು ತಡೆದುಕೊಳ್ಳುವ ಮತ್ತು ಅಂತಿಮವಾಗಿ ಅವುಗಳನ್ನು ಹತ್ತಿಕ್ಕಲು ಶಕ್ತನಾಗುತ್ತಾನೆ ಪ್ರತಿ ದಿನ ಹತ್ತು ನಿಮಿಷಗಳ ಕಾಲ ಯಾವುದೇ ಗೊಂದಲಗಳಿಲ್ಲದ ಕೊಠಡಿಯಲ್ಲಿ ಧ್ಯಾನ ಮಾಡಿ. ಕಣ್ಣು ಮುಚ್ಚಿ ಉಸಿರೆಳೆದುಕೊಂಡು ಉಸಿರನ್ನು ಹೊರಬಿಡುವ ಕ್ರಿಯೆಯನ್ನು ಮಾಡಿ. ಆರಂಭದಲ್ಲಿ ಕಷ್ಟವಾದರೂ ನಂತರ ಅಭ್ಯಾಸವಾಗುತ್ತದೆ.

3. ಧನಾತ್ಮಕ ವ್ಯಕ್ತಿಗಳನ್ನು ಭೇಟಿ ಮಾಡಿ :

ಈ ಜಗತ್ತಿನಲ್ಲಿ ಎಲ್ಲಾ ವ್ಯಕ್ತಿಗಳಲ್ಲಿಯೂ ಹೇಳಿಕೊಳ್ಳುವಂತಹ, ಹಂಚಿಕೊಳ್ಳುವಂತಹ ವಿಚಾರಗಳಿರುತ್ತವೆ. ಆದ್ದರಿಂದ ಧನಾತ್ಮಕ ವ್ಯಕ್ತಿಗಳನ್ನು ಬೇಟಿ ಮಾಡಿ, ನಿಮ್ಮ ಗುರಿಯನ್ನು ಸಾಧಿಸಲು ಹೇಗೆ ಧನಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ಅವರಲ್ಲಿ ಚರ್ಚೆ ಮಾಡಿ. ಋಣಾತ್ಮಕವಾಗಿ ಯೋಚಿಸುವವರು ನಿಮ್ಮಲ್ಲಿರುವ ಸಕಾರಾತ್ಮಕ ಮನೋಭಾವವನ್ನು ಹಾಳುಗೊಡವಬಹುದು. ಆದ್ದರಿಂದ ಸರಿಯಾದ ವ್ಯಕ್ತಿಯನ್ನು ಆಯ್ಕೆಮಾಡಿ.

4. ನಿಮ್ಮ ಗುರಿಗೆ ಬದ್ಧರಾಗಿರಿ

ನಿಮ್ಮ ಮುಂದಿನ ಗುರಿ ಸ್ಪಷ್ಟವಾಗಿರಲಿ. ಅದನ್ನು ಸಾಧಿಸುವುದು ಕಷ್ಟ ಎಂಬ ವಿಚಾರವನ್ನು ದೂರಮಾಡಿ. ಗುರಿ ಮುಟ್ಟಿವುದಕ್ಕಾಗಿ ಸಕಾರಾತ್ಮಕ ಪ್ರಯತ್ನ ಮಾಡಿ. ಇದು ನಿಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬದಲಾಯಿಸುತ್ತದೆ. ಸದಾ ಪ್ರಯತ್ನಶೀಲರಾಗಿರಿ. ಇದರಿಂದ ನೀವು ನಿಮ್ಮ ಗುರಿಯನ್ನು ಸುಲಭವಾಗಿ ಸಾಧಿಸುತ್ತೀರಿ.

5. ನಿಮ್ಮ ಮಾನಸಿಕ ನಿರ್ಮಾಣ/ ಬಿಲ್ಡ್ ಬದಲಿಸಿ

ಕೆಲವು ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ ನಿಮ್ಮ ಜೀವನದ ಒಟ್ಟಾರೆ ಚಿಂತನೆಯನ್ನು ಅವಲಂಭಿಸಿರುತ್ತದೆ. ಧನಾತ್ಮಕ ಪ್ರತಿಕ್ರಿಯೆಯನ್ನು ನೀಡುವುದು ಮುಂದಿನ ನಿರ್ಧಾರಗಳಿಗೆ ನೆರವಾಗುತ್ತದೆ. ಹಾಗೂ ಆ ಕಾರ್ಯ ಸುಲಭವಾಗುವಂತೆ ಮಾಡುತ್ತದೆ. ಬದಲು ಋಣಾತ್ಮಕ ಚಿಂತನೆಗಳು ನಿಮ್ಮ ಮುಂದಿನ ಕಾರ್ಯವನ್ನು ಅಸಾಧ್ಯವಾಗಿಸಿಬಿಡುತ್ತದೆ. ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿ ಜಗತ್ತನ್ನು ಹೊಸ ನೋಟದಿಂದ ನೋಡಿ. ಆಗ ಮಾತ್ರ ನಿಮ್ಮ ಯೋಚನೆಗಳು ಸಕಾರಾತ್ಮಕವಾಗಿರಲು ಸಾಧ್ಯ.

6. ನಿಮ್ಮ ವರ್ತನೆಯನ್ನು ಪ್ರಶ್ನಿಸಿಕೊಳ್ಳಿ
ಯಾವುದೇ ಬದಲಾವಣೆಯನ್ನು ವಿರೋಧಿಸುವುದು ಮನುಷ್ಯ ಸಹಜ ಗುಣ. ಆದರೆ ನಿಮ್ಮ ವರ್ತನೆಯನ್ನು ನೀವೆ ಪ್ರಶ್ನಿಸಲು ಹೊರಟರೆ ಆಗ ನಿಮ್ಮಲ್ಲಿ ಸಕಾರಾತ್ಮಕ ಯೋಚನೆಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ನಿಮ್ಮ ಸಮಸ್ಯೆಗಳೂ ಸುಲಭವಾಗಿ ಬಗೆಹರಿಸುವಂತಾಗಿ, ನಿಮ್ಮನ್ನು ಇನ್ನಷ್ಟು ಉತ್ಸಾಹಿತರನ್ನಾಗಿಸುತ್ತವೆ. ಹಾಗೂ ನಿಮ್ಮನ್ನು ಸದಾ ಧನಾತ್ಮಕ ಚಿಂತಕರನ್ನಾಗಿಡಲು ಸಹಕಾರಿಯಾಗಿತ್ತದೆ.

ಧನಾತ್ಮಕ ಚಿಂತನೆ ಧನಾತ್ಮಕತೆಯನ್ನು ನಕಾರಾತ್ಮಕ ಚಿಂತನೆ ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಎಂಬುದನ್ನು ನೀವು ಸದಾ ನೆನಪಿನಲ್ಲಿಡಬೇಕು. ನೀವು ಸಕಾರಾತ್ಮಕವಾಗಿ ಯೋಚಿಸುವುದರಿಂದಾಗಿ ಜೀವನದಲ್ಲಿ ಎಲ್ಲಾ ಕಾರ್ಯಗಳೂ ಸುಲಲಿತವಾಗಿ ಕೊನೆಯಲ್ಲಿ ಮೌಲ್ಯಯುತ ಜೀವನವನ್ನು ಸಾಗಿಸಬಹುದು !

Read more about: ಕೆಲಸ ಜೀವನ work life
English summary

How To Think Positive | Life And Work | ಧನಾತ್ಮಕ ಚಿಂತನೆ ಮಾಡುವುದು ಹೇಗೆ ? | ಕೆಲಸ ಮತ್ತು ಕಾರ್ಯ

It is at everyone’s disposal. With seeds of cynicism easily growing in the minds of men, positive thinking is the only anchor that one can hold on to. Here are some steps to help you become a positive thinker.
X
Desktop Bottom Promotion