For Quick Alerts
ALLOW NOTIFICATIONS  
For Daily Alerts

ನಿಮ್ಮ ಉಡುಗೆಯ ಬಣ್ಣದ ಹೊಂದಣಿಕೆ ಹೇಗಿದ್ದರೆ ಚೆನ್ನ?

By ಲೇಖಕ
|

ಬಣ್ಣ ಹೊಂದಾಣಿಕೆಯು ಹಲವರಿಗೆ ಮಹತ್ವದ ವಿಷಯವಾಗಿದೆ. ಅದು ನಾವು ತೊಡುವ ಉಡುಗೆಯ ಬಗ್ಗೆ ಆಗಬಹುದು ಅಥವಾ ಜಾಹೀರಾತು ಕ್ಷೇತ್ರದಲ್ಲಿ ಆಗಿರಬಹುದು ಇದು ಬಹಳ ಮಹತ್ವದ್ದಾಗಿದೆ.

ಉಡುಗೆಯ ವಿಷಯಕ್ಕೆ ಬಂದಾಗ ಇದು ಕೇವಲ ಒಂದೇ ಬಣ್ಣದ ತೊಡುಗೆಯಾಗಬೇಕೆಂದಿಲ್ಲ. ಆದರೆ ನಾವು ತೊಟ್ಟ ಉಡುಗೆಯ ಬಣ್ಣಗಳು ಒಂದಕ್ಕೊಂದು ಹೊಂದಾಣಿಕೆಯಾಗಿರಬೇಕು.

How To Be Color Coordinated

ಹಂತಗಳು:

1. ಆಯಾ ಋತುಮಾನಕ್ಕೆ ಸರಿಯಾದ ಉಡುಗೆ ತೊಡಿ. ಚಳಿಗಾಲದಲ್ಲಿ ತಿಳಿ ನೀಲಿ ಅಥವಾ ಬಿಳಿ ಇಂತಹ ಸ್ವಲ್ಪ ತಿಳಿ ಬಣ್ಣದ ಉಡುಗೆಯನ್ನು ಆರಿಸಿ. ಶರತ್ಕಾಲದಲ್ಲಿ ಕೆಂಗಂದು, ಹಸಿರು, ಹಳದಿ ಅಥವಾ ಕಿತ್ತಳೆ ಬಣ್ಣಗಳನ್ನು ತೊಟ್ಟರೆ ಅವು ಆ ಋತುವಿನೊಂದಿಗೆ ಹೊಂದಿಕೊಳ್ಳುವುದರಿಂದ ಚೆನ್ನಾಗಿರುತ್ತದೆ. ವಸಂತ ಋತುವಿನಲ್ಲಿ ಹಸಿರು, ನೀಲಿ, ಗುಲಾಬಿ ಬಣ್ಣಗಳನ್ನು ಹೆಚ್ಚಾಗಿ ಆರಿಸಿಕೊಳ್ಳಿ. ಬೇಸಿಗೆಗಾಲದಲ್ಲಿ ಹಳದಿ, ನೀಲಿ, ಮತ್ತು ಆ ಕಾಲದ ವಾತಾವರಣಕ್ಕೆ ಹೊಂದಿಕೊಳ್ಳುವ ಹಸಿರು ಬಣ್ಣವನ್ನು ಆಯ್ಕೆ ಮಾಡಿ.

2. ಆಯಾ ಕಾಲದ ಹೆಚ್ಚು ಪ್ರಸಿದ್ಧ ಬಣ್ಣಗಳನ್ನು ಗಮನಿಸಿ. ಔಟ್ ಆಫ್ ಫ್ಯಾಷನ್ ಅನ್ನಿಸಿಕೊಳ್ಳುವ ಬಣ್ಣ ಹೊಂದಾಣಿಕೆಯನ್ನು ಎಂದೂ ಮಾಡಬೇಡಿ. ಕಡು ಹಳದಿ ಮತ್ತು ಕೆಂಪು ಬಣ್ಣಗಳು ಇಂದಿನ ಕಾಲಮಾನಕ್ಕೆ ಹೊಂದಿಕೆಯಾಗದ ಕಾರಣ ಹೆಚ್ಚು ಬಳಸಬೇಡಿ.

3. ಜನರು ಅಥವಾ ವಸ್ತುಗಳನ್ನು ನೆನಪಿಸುವಂತಹ ಬಣ್ಣಗಳನ್ನು ಆರಿಸಿಕೊಳ್ಳಿ. ಉದಾಹರಣೆಗೆ ಗುಲಾಲಿ, ಕಂದು ಹಾಗೂ ಬಿಳಿ ನೇಪಲ್ಸ್ ಐಸ್ಕ್ರೀಮ್ ಅನ್ನು ನೆನಪಿಸುತ್ತದೆ. ಇಂತಹ ಬಣ್ಣ ಹೊಂದಾಣಿಕೆಯನ್ನು ಮಾಡಿಕೊಳ್ಳಿ.

4. ಸರಿಯಾದ ಶೈಲಿಯ ಬಟ್ಟೆಗಳಿಗೆ ಸೂಕ್ತವಾದ ಬಣ್ಣಗಳನ್ನು ಆರಿಸಿ: ಉದಾಹರಣೆಗೆ ಚೆಕ್ಸ್ ಇರುವ ಶೈಲಿಯ ಬಟ್ಟೆಗಳಿಗೆ ಎಂದಿಗೂ ಲೈಮ್ ಗ್ರೀನ್ ಅಥವಾ ನಸುಗೆಂಪು ಬಣ್ಣವನ್ನು ಆರಿಸದಿರಿ.

5. ಕಲರ್ ವ್ಹೀಲ್ ಅನ್ನು ಬಳಸಿ. ವಿರುದ್ಧ ಧ್ರುವಗಳು ಆಕರ್ಷಿಸುತ್ತವೆ ಎಂಬ ಮಾತು ಈ ವಿಷಯದಲ್ಲೂ ನಿಜವಾಗಿದೆ. ಉದಾಹರಣೆಗೆ ಬಿಳಿ ಮತ್ತು ಕಪ್ಪು ಎಂದಿಗೂ ಒಂದು ಒಳ್ಳೆಯ ಬಣ್ಣ ಹೊಂದಾಣಿಕೆ. ಕೆನ್ನೇರಳೆ ಮತ್ತು ಹಸಿರು ಕೂಡ ಇದೇ ರೀತಿ. ಹೀಗೆ ವಿರುದ್ಧವಾದರೂ ಒಂದು ಇನ್ನೊಂದರ ಜೊತೆ ಹೊಂದಿಕೊಳ್ಳುವ ಬಣ್ಣಗಳು ಆಕರ್ಷಿಸುತ್ತವೆ.

6. ಒಂದು ರೀತಿಯ ವಿನ್ಯಾಸದ ಬಟ್ಟೆಗಳಿಗೆ ಹೊಂದುವ ಒಂದು ಬಣ್ಣವನ್ನು ಖಾಯಂ ಆಗಿಸಿ. ಮತ್ತು ಅದನ್ನು ನಿರಂತರವಾಗಿ ಬಳಸಿ.

7. ನಿಮ್ಮ ಚರ್ಮದ ಬಣ್ಣಕ್ಕೆ ಹೊಂದಿಕೊಳ್ಳುವ ಬಣ್ಣಗಳನ್ನು ಆರಿಸಿ. ನಿಮ್ಮ ಚರ್ಮದ ಬಣ್ಣದ ವಿರುದ್ಧ ಬಣ್ಣಗಳನ್ನೂ ಪ್ರಯತ್ನಿಸಿ ಮತ್ತು ಯಾವುದು ಉತ್ತಮ ಎಂದು ನಿರ್ಧರಿಸಿ. ಸ್ವಲ್ಪ ಕಪ್ಪಗಿನ ಚರ್ಮದವರು ಹಸಿರು ಬಣ್ಣದ ಉಡುಗೆ ತೊಟ್ಟರೆ ಅತ್ಯುತ್ತಮವಾಗಿರುತ್ತದೆ. ಮತ್ತು ಹುಡುಗಿಯರು ನೀಲಿ ಬಣ್ಣದಲ್ಲಿ ಚೆನ್ನಾಗಿ ಕಾಣಿಸುತ್ತಾರೆ. ಹೀಗೆ ತಮ್ಮ ಚರ್ಮದ ಬಣ್ಣಕ್ಕೆ ಹೊಂದಿಕೊಳ್ಳುವ ಬಣ್ಣವನ್ನು ಆರಿಸಿಕೊಳ್ಳುವುದು ಬಹಳ ಅಗತ್ಯ.

8. ಅಂತರ್ಜಾಲದಲ್ಲಿ ವಿವಿಧ ಬಣ್ಣಗಳ ಹೊಂದಾಣಿಕೆಯನ್ನು ನೋಡಿ ಮತ್ತು ನಿಮಗೆ ಇವುಗಳಲ್ಲಿ ಯಾವ ಬಣ್ಣಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ ನಿರ್ಧರಿಸಿ.

9. ಕೊನೆಯದಾಗಿ ನಿಮ್ಮ ಗೆಳೆಯರು ಅಥವಾ ಕುಟುಂಬದ ಸದಸ್ಯರ ಸಲಹೆಯನ್ನು ಪಡೆಯಲು ಮರೆಯದಿರಿ.

ಸಲಹೆಗಳು:

ನಿಮ್ಮದೇ ಆದ ಶೈಲಿಯನ್ನು ಅಭಿವೃದ್ಧಿಗೊಳಿಸಿ ಯಾರಿಗೆ ಗೊತ್ತು ಇದೇ ಮುಂದಿನ ಟ್ರೆಂಡ್ ಆಗಬಹುದು! ಮಾಮೂಲು ಬಣ್ಣಗಳ ಜೊತೆಗೆ ಸ್ವಲ್ಪ ಗಾಢ ಬಣ್ಣಗಳನ್ನು ಆರಿಸುವುದು ಚೆನ್ನಾಗಿ ಕಾಣುತ್ತದೆ. ಉದಾಹರಣೆಗೆ ಗುಲಾಬಿ ಬಣ್ಣ ತಿಳಿ ಬೂದು ಬಣ್ಣ, ಹಸಿರು ಮತ್ತು ಕಂದು ಬಣ್ಣ. ನೀಲಿ ಮತ್ತು ಮರಳಿನ ಹಾಗಿರುವ ಹಳದಿ. ದ್ರಾಕ್ಷಿ ಕೆಂಪು ಮತ್ತು ಕಪ್ಪು ಬಣ್ಣ ಇತ್ಯಾದಿ.

ಎಚ್ಚರಿಕೆಗಳು:

ರಜಾದಿನದ ಬಣ್ಣಗಳಾದ ಕೆಂಪು ಅಥವಾ ಹಸಿರು ಬಣ್ಣದ ಉಡುಗೆಯನ್ನು ಆ ಸಂದರ್ಭ ಬರುವಲ್ಲಿಯ ತನಕ ತೊಡದಿರಿ.

ಬೂದುಬಣ್ಣಗಳನ್ನು ಗಾಢವಾದ ಹಳದಿ ಮುಂತಾದ ಬಣ್ಣಗಳ ಜೊತೆಗೆ ಬಳಸದಿರಿ.

ನೀವು ತೊಡುವ ಬಣ್ಣಗಳು ಮತ್ತು ವಿನ್ಯಾಸ ಔಟ್ ಡೇಟೇಡ್ ಆಗಿಲ್ಲ ಎಂದು ಖಚಿತಪಡಿಸಿಕೊಳ್ಳಿ.

English summary

How To Be Color Coordinated | How To Do Tips | ನಿಮ್ಮ ಉಡುಗೆಯ ಬಣ್ಣದ ಹೊಂದಣಿಕೆ ಹೇಗಿದ್ದರೆ ಚೆನ್ನ?

Color coordination is important to many people. Whether it's wearing matching colors for an outfit, or using it for things such as advertisements, everyone seeks it.
X
Desktop Bottom Promotion