Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಆತಂಕದಿಂದ ಹೊರಬರಲು ನಟಿ ಆಲಿಯಾ ಹೀಗೆ ಮಾಡಿದ್ರಂತೆ? ಮಗಳ ನಿಕ್ ನೇಮ್ ಏನು ಗೊತ್ತಾ?
ಬಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ನಟಿ ಆಲಿಯಾ ಭಟ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚಿಗೆ ಅವರ ಇನ್ಸ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಏರುತ್ತಲೇ ಇದೆ. ಹಾಗಂತ ಅವರೇನು ತಮ್ಮನ್ನು ಪ್ರಮೋಟ್ ಮಾಡಿಕೊಳ್ಳುತ್ತಿಲ್ಲ, ಬದಲಿಗೆ ಒಂದಿಷ್ಟು ಆರೋಗ್ಯಕರ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿದೆ.
ಇತ್ತೀಚಿಗೆ ಅವರು ನಟ ರಣ್‌ಬೀರ್ ಕಪೂರ್ ಜೊತೆ ವಿವಾಹವಾದ ಬಳಿಕ ಸಿನಿಮಾಗಿಂತಲೂ ಕುಟುಂಬದ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಮಗಳ ಆರೈಕೆಯಲ್ಲಿ ಕಾಲ ಕಳೆಯುತ್ತಿರುವ ಅವರು, ನಿತ್ಯವೂ ಒಂದಲ್ಲ ಒಂದು ಟಿಪ್ಸ್ ನೀಡುತ್ತಿರುತ್ತಾರೆ. ಇದೀಗ ಅವರು ಆತಂಕದಿಂದ ಹೊರಬರುವುದು ಹೇಗೆ ಮತ್ತು ತಮ್ಮಿಷ್ಟದ ಫುಡ್ ಯಾವುದು ಎಂಬ ಮಾಹಿತಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಆಲಿಯಾ ಭಟ್ ಮೊದಲಿನಿಂದಲೂ ಫುಡ್ ಲವರ್ ಅಂತೆ, ಆಕೆಗೆ ಇಷ್ಟವಾದ ಯಾವುದೇ ಫುಡ್ ಆಗಿರಲಿ ಅದನ್ನು ಮುಂಬೈ ಗಲ್ಲಿಯಲ್ಲಾದರೂ ಸರಿ ಹುಡುಕಿಕೊಂಡು ಹೋಗಿ ಸೇವಿಸಿದ್ದಾರಂತೆ. ಅಲ್ಲದೆ ಸಿನಿಮಾ ಶೂಟಿಂಗ್‌ಗಾಗಿ ಸೆಟ್‌ಗೆ ಬಂದಾಗಲೂ ತಮಗೆ ಇಷ್ಟವಾದ ಫುಡ್ ಅನ್ನೇ ಆರ್ಡರ್ ಮಾಡಿ ಸೇವಿಸುತ್ತಿದ್ದರಂತೆ.
ಇತ್ತೀಚೆಗೆ ನಟಿ ಆಲಿಯಾ ಇನ್‌ಸ್ಟಾಗ್ರಾಮ್‌ನಲ್ಲಿನ 'ಆಸ್ಕ್ ಮಿ ಎನಿಥಿಂಗ್' (AMA) ಸೆಷನ್ ನಡೆಸಿದ್ದರು. ಅಭಿಮಾನಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಹಿಂದು ಮುಂದು ನೋಡದೆ ಉತ್ತರ ನೀಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಅವರು ತಮ್ಮಿಷ್ಟದ ಫುಡ್ ಯಾವುದು ಎಂದು ಹಂಚಿಕೊಂಡಿದ್ದಾರೆ.
ಆಲಿಯಾ ಭಟ್‌ಗೆ ಪೋಹಾ ಮತ್ತು ಚಾಸ್, ಫ್ರೆಂಚ್ ಫ್ರೈಸ್, ದಾಲ್ ಚಾವಲ್ + ಭಿಂಡಿ + ತಮಟರ್ ಕಿ ಸಬ್ಜಿ + ತಡ್ಕಾ ದಹಿ, ಸ್ಪಾಗೆಟ್ಟಿ(ನೂಡಲ್ಸ್)" ಎಂದು ಉತ್ತರಿಸಿದ್ದಾರೆ. ಈ ಕುರಿತು ಬಳಿಕ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದರು.
ಆತಂಕದಿಂದ ಹೊರಬರೋದು ಹೇಗೆ?
ಈ ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ ಆಲಿಯಾ ಮಗಳ ಅಡ್ಡ ಹೆಸರು ಬಹಿರಂಗಪಡಿಸಿದ್ದಾರೆ. ಮಗಳು ರಾಹಾ ಭಟ್ ಕಪೂರ್ ಅವರ ಅಡ್ಡಹೆಸರು ರಾಹಾ, ರಾಹು, ರಾರಾ ಮತ್ತು ಲಾಲಿಪಾಪ್ ಎಂದು ಪ್ರೀತಿಯಿಂದ ಕರೆಯುತ್ತೇನೆ ಎಂದಿದ್ದಾರೆ. ಜೊತೆಗೆ ಇತ್ತೀಚಿಗೆ ಜನ ಹೆಚ್ಚಾಗಿ ಆತಂಕ (anxiety)ಯಿಂದ ಬಳಲುತ್ತಾರೆ. ಇದರಿಂದ ಹೊರಬರುವುದು ಹೇಗೆ ಎಂದು ವಿವರಿಸಿದ್ದಾರೆ.
ನಮ್ಮೆಲ್ಲರಿಗೂ ನಮ್ಮ ಆತಂಕವನ್ನು ಉಂಟುಮಾಡುವ ಕೆಲವು ವಿಷಯಗಳಿವೆ - ಉದಾಹರಣೆಗೆ, ಯಾವುದೇ ಹಠಾತ್ ಬದಲಾವಣೆ ಅಥವಾ ನನ್ನ ನಿಯಂತ್ರಣವಿಲ್ಲದ ಪರಿಸ್ಥಿತಿಯೊಂದಿಗೆ ನಾನು ತುಂಬಾ ಕೆಲಸ ಮಾಡುವುದಾಗಿರಬಹುದು. ಆದರೆ ಇದು ನನಗೆ ಬಹಳ ಸಮಯ ತೆಗೆದುಕೊಂಡಿತು. ಆದ್ದರಿಂದ ಈ ಯಾವುದೇ ಕ್ಷಣಗಳಿಗೆ ಮುಂಚಿತವಾಗಿ, ಪರಿಸ್ಥಿತಿಗೆ ಸಿದ್ಧವಾಗಲು ನಾನು ಪ್ರಯತ್ನಿಸುತ್ತೇನೆ. ಇದು ಸಾಧ್ಯವಾಗದಿದ್ದರೆ ಮುಂದಿರುವ ಪರಿಸ್ಥಿತಿಗೆ ಹೊಂದಿಕೊಳ್ಳುತ್ತೇನೆ ಎಂದಿದ್ದಾರೆ.
"ಅವಳನ್ನು (ರಾಹಾ) ಬಿಟ್ಟು ಹೋಗುವುದು ಎಂದಿಗೂ ಸುಲಭವಲ್ಲ. ಆದರೆ ಅದು ಬದಲಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ದೂರದಲ್ಲಿರುವಾಗಲೂ ಅವಳು ಕುಟುಂಬದೊಂದಿಗೆ ಇರುತ್ತಾಳೆಂದು ತಿಳಿದಾಗ ನನಗೆ ಸ್ವಲ್ಪ ಸಮಾಧಾನವಾಗುತ್ತದೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ.
ಆಲಿಯಾ ಮುಂದಿನ ಸಿನಿಮಾಗಳು ಯಾವುದು?
ಈ ಸೆಷನ್‌ನಲ್ಲಿ ಆಲಿಯಾ ತಮ್ಮ ಮುಂದಿನ ಸಿನಿಮಾಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ದೇಶಕ ವಾಸನ್ ಬಾಲಾ ಅವರ ಜಿಗ್ರಾ ಸಿನಿಮಾದಲ್ಲಿ ಆಲಿಯಾ ನಟಿಸುತ್ತಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 27, 2024ರಂದು ತೆರೆಗೆ ಬರಲಿದೆ. ಸದ್ಯ ಅವರು ಈವರೆಗೆ ಶೂಟಿಂಗ್‌ಗೆ ಹಾಜರಾಗಿಲ್ಲ. ಈ ಸಿನಿಮಾದಲ್ಲಿ ಆಲಿಯಾ ಪಾತ್ರವೇ ಪ್ರಮುಖವಾಗಿದ್ದು, ವಿಭಿನ್ನವಾಗಿ ಅವರು ಕಾಣಿಸಿಕೊಂಡಿದ್ದಾರಂತೆ.



Click it and Unblock the Notifications
