Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
70ನೇ ಚಲನ ಚಿತ್ರೋತ್ಸವ ಪ್ರಶಸ್ತಿ: ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ, ಕಾಂತಾರಾ ಅತ್ಯುತ್ತಮ ಮನರಂಜನಾ ಚಿತ್ರ
70ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ದೆಹಲಿಯಲ್ಲಿ ಘೋಷಣೆಯಾಗಿದೆ. 2022 ಜನವರಿ 1ರಿಂದ ಡಿಸೆಂಬರ್ 31ರವರೆಎಗೆ ಸೆನ್ಸಾರ್ ಪ್ರಮಾಣ ಪತ್ರ ಪಡೆದುಕೊಂಡ ಸಿನಿಮಾಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಮನರಂಜನಾ ಚಿತ್ರ: ಕಾಂತಾರ
ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ಚಿತ್ರ : ಆಟ್ಟಂ
ಅತ್ಯುತ್ತಮ ನಟಿ: ಮಾನ್ಸಿ ಪರಾಖ್
ಅತ್ಯುತ್ತಮ ನಟಿ: ನಿತ್ಯ ಮೆನನ್ (ತಮಿಳು: ತಿರುಚಿತ್ರಂಬಲಂ)
ಅತ್ಯುತ್ತಮ ನೃತ್ಯ ನಿರ್ದೇಶನ: ತಿರುಚಿತ್ರಂಬಲಂ (ತಮಿಳು)
ಅತ್ಯುತ್ತಮ ಪೋಷಕ ನಟಿ: ನೀನಾ ಗುಪ್ತಾ
ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ಛಾಯಾಗ್ರಹಣ: ರವಿ ವರ್ಮನ್ (ಪೊನ್ನಿಯನ್ ಸೆಲ್ವನ್ 1)
ಅತ್ಯುತ್ತಮ ಸಂಗೀತ ನಿರ್ದೇಶನ: ಪ್ರೀತಂ (ಬ್ರಹ್ಮಾಸ್ತ್ರ)
ಅತ್ಯುತ್ತಮ ನೃತ್ಯ ನಿರ್ದೇಶನ: ತಿರುಚಿತ್ರಂಬಲಂ(ತಮಿಳು)
ರಾಷ್ಟ್ರ ಪ್ರಶಸ್ತಿ ಪಡೆದ ನಾಲ್ಕನೇ ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ
70ನೇ ಚಲನ ಚಿತ್ರೋತ್ಸವ ಕನ್ನಡಿಗರ ಪಾಲಿಗೆ ತುಂಬಾನೇ ವಿಶೇಷವಾಗಿದೆ, ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ಇತರ ಭಾಷೆಯ ಚಿತ್ರಗಳ ನಡುವೆ ನಮ್ಮ ಕನ್ನಡ ಚಿತ್ರಕ್ಕೆ ಪ್ರಶಸ್ತಿ ಲಭವಿಸಿದೆ, ಅದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ಎರಡು ಚಿತ್ರಗಳಿಗೆ ಎಂಬುವುದು ಇನ್ನೂ ವಿಶೇಷ. ಇ್ನು ಅತ್ಯುತ್ತಮ ನಟ ಪ್ರಶಸ್ತಿ ನಟ ರಿಷಬ್ ಅವರಅದ್ಭುತ ನಟನೆಗೆ ದೊರೆತಿದೆ.
ಕಾಂತರ ಚಿತ್ರ ಮಾಡಿದ ಮೋಡಿ ಎಂಥದ್ದು ಎಂಬುವುದು ಎಲ್ಲರಿಗೂ ಗೊತ್ತು, ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿ ಗಮನ ಸೆಳೆದ ಚಿ್ರ ಕಾಂತರ. ಕರ್ನಾಟಕದ ತುಳುನಾಡಿನ ದೈವಾರಾಧನೆ ಕುರಿತ ಕತೆಯೊಂದು ಅಷ್ಟು ದೊಡ್ಡ ಮೆಟ್ಟದಲ್ಲಿ ಗಮನ ಸೆಳೆಯಿತು. ಕಾಂತರದಲ್ಲಿ ರಿಷಬ್‌ಶೆಟ್ಟಿ ನಟನೆ ನೋಡಿದರೆ ಎಂಥ ನಾಸ್ತಿಕನಿಗೂ ಮೈ ಜುಮ್ ಅನ್ನುತ್ತೆ, ಹಾಗಿದೆ ನಟನೆ. ಈಗ ಅವರ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಲಭಿಸಿದೆ.
ರಾಷ್ಟ್ರ-ಪ್ರಶಸ್ತಿ ಪಡೆದ ಕನ್ನಡದ ನಾಲ್ಕು ನಟರು
ಚೋಮನುಡಿ ಚಿತ್ರಕ್ಕೆ ವಾಸುದೇವ್ ರಾವ್, ತಬರನ ಕಥೆ ಚಿತ್ರಕ್ಕೆ ಚಾರು ಹಾಸನ್ ಅವರಿಗೆ, ನಾನು ಅವನ್ನಲ್ಲ ಅವಳು ಚಿತ್ರಕ್ಕೆ ಸಂಚಾರಿ ವಿಜಯ್, ಕಾಂತರ ಚಿತ್ರಕ್ಕೆ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.
ಚಿತ್ರಗಡೆ ಬಿಡುಗಡೆಯಾದಾಗಲೂ ಕಾಂತಾರ ಕೆಜಿಎಫ್ 2 ತುಂಬಾೇ ಸದ್ದು ಮಾಡಿತ್ತು ಇದೀಗ70ನೇ ಚಲನ ಚಿತ್ರೋತ್ಸವ ಪ್ರಶಸ್ತಿ ಸಮಾರಂಭ ಕೂಡ ಕನ್ನಡಿಗರಿಗೆ ತುಂಬಾನೇ ವಿಶೇಷವಾಗಿದೆ.



Click it and Unblock the Notifications
