For Quick Alerts
ALLOW NOTIFICATIONS  
For Daily Alerts

ಕೋಪವನ್ನು ನಿಯಂತ್ರಿಸಲು 4 ಮಂತ್ರ

|
How To Control Anger
ಕೋಪ ಯಾರಿಗೆ ಬರಲ್ಲ ಹೇಳಿ? ಕೆಲವೊಂದು ವಿಷಯಕ್ಕೆ ಕೋಪ ಬರುತ್ತದೆ. ಆ ಕ್ಷಣ ದುರ್ವಾಸ ಮುನಿಗಳ ಅವತಾರವನ್ನು ತಾಳಿ ವಿವೇಚನೆ ಕಳೆದುಕೊಳ್ಳುತ್ತೇವೆ. ಆದರೆ ಸಣ್ಣ ಪುಟ್ಟ ವಿಷಯಕ್ಕೆ ಕೋಪ ಮಾಡಿಕೊಳ್ಳುವ ಬುದ್ಧಿ ಇದ್ದರೆ ಅದು ನಿಮ್ಮ ಜೀವನ ಅಷ್ಟೆ ಅಲ್ಲ ನಿಮ್ಮ ಸುತ್ತ-ಮುತ್ತ ಇರುವವರ ನೆಮ್ಮದಿಯನ್ನು ಕೂಡ ಹಾಳು ಮಾಡುತ್ತದೆ.

ಕೋಪ ಮಾಡಿಕೊಳ್ಳಬಾರದು ಎಂದು ಅಂದುಕೊಂಡಿರುತ್ತೇವೆ. ಆದರೂ ಚಿಕ್ಕ ವಿಷಯಕ್ಕೆ ಕೂಡ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಕೋಪದಿಂದ ಅಪಾಯವಾಗುವುದು ಹೆಚ್ಚು. ಆದ್ದರಿಂದ ಕೋಪ ಬಂದಾಗ ನಿಯಂತ್ರಣ ಮಾಡಿಕೊಳ್ಳುವುದು ಒಳ್ಳೆಯದು.

ಈ ಕೆಳಗಿನ ಕೆಲ ಸಲಹೆಗಳು ಕೋಪವನ್ನು ನಿಯಂತ್ರಿಸಲು ಸಹಾಯಮಾಡುತ್ತದೆ.

1. ಯೋಚನೆ: ತುಂಬಾ ಕೋಪ ಬಂದರೆ ಕೋಪಕ್ಕೆ ಕಾರಣವಾದ ವಿಷಯವನ್ನು ಯೋಚಿಸಬಾರದು. ಅದರ ಬಗ್ಗೆ ಯೋಚಿಸಿದಷ್ಟು ಕೋಪ ಹೆಚ್ಚಾಗುವುದು ಅಲ್ಲದೆ ಕಡಿಮೆಯಾಗುವುದಿಲ್ಲ. ಕೋಪದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಕೋಪ ಸ್ವಲ್ಪ ತಣಿದ ಮೇಲೆ ನಂತರ ಯೋಚಿಸಿ ನಿಮ್ಮ ನಿರ್ಧಾರ, ಇಷ್ಟ-ಕಷ್ಟಗಳ ಬಗ್ಗೆ ಹೇಳುವುದು ಒಳ್ಳೆಯದು.

2. ಉಸಿರಾಟ: ತುಂಬಾ ಕೋಪ ಬಂದು ಅದನ್ನು ನಿಯಂತ್ರಿಸಲು ಸಾಧ್ಯನೆ ಇಲ್ಲ ಎಂದು ಅನಿಸಿದರೆ ಈ ರೀತಿ ಮಾಡಿ. ಈ ಸಲಹೆ ನಿಮಗೆ ಸಿಲ್ಲಿ ಅನಿಸಿದರೂ ಕೋಪ ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ಎಲ್ಲಾ ಯೋಚನೆ ಬಿಟ್ಟು ನಿಮ್ಮ ಉಸಿರಾಟದ ಕಡೆ ಗಮನ ಕೊಡಿ. ಈ ರೀತಿ ಎರಡು ನಿಮಿಷ ಮಾಡಿದರೆ ಸಾಕು ಕೋಪ ತನ್ನಿಂದ ತಾನೆ ಕಡಿಮೆಯಾಗುತ್ತದೆ.

3. ನಿರ್ಧಾರ: ಕೋಪ ತಣ್ಣಗಾದ ಮೇಲೆ ಸರಿ-ತಪ್ಪುಗಳ ಬಗ್ಗೆ ಯೊಚಿಸಿ. ಅಗ ತಪ್ಪು ಅನಿಸಿದ್ದನ್ನು ಹೇಳಿಬಿಡಿ. ಸಾಕಷ್ಟು ಬಾರಿ ನಮ್ಮ ತಪ್ಪು ನಮಗೆ ಗೊತ್ತಾಗುವುದಿಲ್ಲ.

4. ಕ್ಷಮೆ: ಒಂದು ವೇಳೆ ನಿಮ್ಮ ಕಡೆಯಿಂದ ತಪ್ಪು ಇದೆ ಎಂದು ಮನವರಿಕೆಯಾದರೆ ಕ್ಷಮೆ ಕೇಳಲು ಹಿಂಜರಿಕೆ ಬೇಡ. ಈ ರೀತಿಯ ವ್ಯಕ್ತಿತ್ವ ಬೆಳೆಸಿಕೊಂಡರೆ ನಿಮಗೆ ಲಾಭ ಹೊರತು ನಷ್ಟವೇನು ಉಂಟಾಗುವುದಿಲ್ಲ.

English summary

How To Control Anger | Tips For Better Life | ಕೋಪವನ್ನು ನಿಯಂತ್ರಿಸಲು ಕೆಲ ಸಲಹೆಗಳು | ಉತ್ತಮ ಜೀವನಕ್ಕಾಗಿ ಕೆಲ ಸಲಹೆಗಳು

Never make any decisions or share opinions when angry. Because the result always will be worst. So when we will get angry first we should calm down. Then we should think over the issue why we get angry. Here there are few tips to control your anger.
Story first published: Friday, April 6, 2012, 17:37 [IST]
X
Desktop Bottom Promotion