For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮ: ಪೂಜಾ ಗೃಹದಲ್ಲಿ 'ಅಗರಬತ್ತಿಯ' ಮಹತ್ವ

By Jaya
|

ಪೂಜೆ ಪುನಸ್ಕಾರಗಳ ಸಮಯದಲ್ಲಿ ದೇವರಿಗೆ ಅಲಂಕಾರ ಮಾಡುವುದರ ಜೊತೆಗೆ ಧೂಪ, ದೀಪ, ಆರತಿ ಅಂತೆಯೇ ಅಗರಬತ್ತಿಯನ್ನು (ಊದುಬತ್ತಿ) ಹಚ್ಚಿ ದೇವರಿಗೆ ಇಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಪುರಾತನ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿ ಇದು ಪ್ರಸಿದ್ಧವಾಗಿದೆ. ಆದರೆ ಅಗರಬತ್ತಿಯನ್ನು ಏಕೆ ದೇವರ ಮುಂದೆ ಹಚ್ಚಿಡಲಾಗುತ್ತದೆ ಎಂಬುದರ ಕುರಿತು ಧಾರ್ಮಿಕ ನಂಬಿಕೆ ಇದ್ದು ಇಂದಿನ ಲೇಖನದಲ್ಲಿ ಈ ಅಂಶದ ಮೇಲೆ ಬೆಳಕು ಚೆಲ್ಲೋಣ.

Why Do We Light Incense Sticks Before God?

ಆಧ್ಯಾತ್ಮಿಕ ಕಾರಣ
ಊದುಬತ್ತಿ ಅಥವಾ ಅಗರಬತ್ತಿಯನ್ನು ದೇವರ ಮುಂದೆ ಉರಿಸುವುದರ ಹಿಂದೆ ಆಧ್ಯಾತ್ಮಿಕ ಕಾರಣವಿದೆ. ಗಾಳಿಯಲ್ಲಿ ಪ್ರಸಾರವಾಗುವ ಊದುಬತ್ತಿಯ ಪರಿಮಳವು ದೇವರನ್ನು ಹೋಗಿ ಸೇರುತ್ತದೆ ಎಂಬ ಕಾರಣ ಇದರ ಹಿಂದೆ ಅಡಗಿದೆ. ನಿಮ್ಮ ಆಲೋಚನೆಗಳನ್ನು ಇದು ಶುದ್ಧ ಮತ್ತು ಸುಂದರವಾಗಿಸುತ್ತದೆ ಎಂಬ ನಂಬಿಕೆ ಇದೆ.

ಗಾಳಿಯೊಂದಿಗೆ ಸುವಾಸಿತ ಪರಿಮಳವನ್ನು ಬೆರೆಸಿ ಊದುಬತ್ತಿ ತನ್ನನ್ನು ಸಂಪೂರ್ಣವಾಗಿ ಉರಿಸಿಕೊಳ್ಳುತ್ತದೆ, ಅಂತ್ಯದಲ್ಲಿ ಬೂದಿ ಮಾತ್ರ ಉಳಿಯುತ್ತದೆ. ಮಾನವತ್ವದ ಬೆಲೆ ಮತ್ತು ಗುಣಮಟ್ಟವನ್ನು ಇದು ಕೇಂದ್ರೀಕರಿಸುತ್ತಿದ್ದು ನಾವು ಹೇಗೆ ಇರಬೇಕು ಎಂಬುದನ್ನು ಸಾರುತ್ತದೆ. ಇತತರಿಗಾಗಿ ನಮ್ಮನ್ನು ನಾವು ಹೇಗೆ ತ್ಯಾಗ ಮಾಡಿಕೊಳ್ಳುವುದು ಎಂಬುದನ್ನು ಇದು ಸೂಚಿಸುತ್ತದೆ. ಇನ್ನೊಬ್ಬರ ಖುಷಿಗಾಗಿ, ನಿಮ್ಮದೇ ದುರಾಸೆಯನ್ನು ತ್ಯಜಿಸಿ ಫಲಾಫಲಗಳನ್ನು ಅಪೇಕ್ಷಿಸದೇ ಬಾಳುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಆದ್ದರಿಂದಾಗಿಯೇ ಪೂಜೆ ಮತ್ತು ಇತರ ದೈವತಾ ಕಾರ್ಯಗಳಲ್ಲಿ ಅಗರಬತ್ತಿಯನ್ನು ನಾವು ಉರಿಸುತ್ತೇವೆ.

ವೈಜ್ಞಾನಿಕ ಕಾರಣ
ಹಲವಾರು ಕಾಯಿಲೆಗಳಿಗೆ ಔಷಧವಾಗಿ ಊದುಬತ್ತಿಯನ್ನು ಬಳಸಲಾಗುತ್ತದೆ. ಊದುಬತ್ತಿಯನ್ನು ಉರಿಸಿದಾಗ ಇದರ ಪರಿಮಳವು ಗಾಳಿಯಲ್ಲಿ ಬೆರೆತು ನಿಮ್ಮ ಮನಸ್ಸನ್ನು ಉಲ್ಲಾಸಿತವಾಗಿಸುತ್ತದೆ. ನೀವು ಧಾರ್ಮಿಕ ಆಚರಣೆಗಳಿಗೆ ಕುಳಿತುಕೊಂಡಾಗ ನಿಮ್ಮನ್ನು ಮಾನಸಿಕವಾಗಿ ಸಿದ್ಧಪಡಿಸಿ ತೊಂದರೆಗಳನ್ನು ನೀಗಿಸುತ್ತದೆ.
ನಿಮ್ಮ ಮನಸ್ಸು ಮತ್ತು ಆತ್ಮವನ್ನು ಬಳಸಿಕೊಂಡು ದೇವರನ್ನು ಪ್ರಾರ್ಥಿಸಲು ಇದು ಸಹಕಾರಿಯಾಗಿದೆ. ನಿಮ್ಮ ಒತ್ತಡ ಮತ್ತು ಖಿನ್ನತೆಯನ್ನು ದೂರಮಾಡುವ ಮಾಧ್ಯಮ ಕ್ರಿಯೆಯಾಗಿ ಇದು ಕೆಲಸ ಮಾಡುತ್ತದೆ. ಸುಗಂಧವನ್ನು ಬೀರುವ 'ಅಗರಬತ್ತಿ' ಹಿಂದೆ ಅಡಗಿರುವ ಕರಾಳ ಸತ್ಯ

ಸುವಾಸನೆಯನ್ನು ಬೀರುತ್ತದೆ
ಊದುಬುತ್ತಿಯ ಸುವಾಸನೆಯು ಸುತ್ತಲಿನ ಕೆಟ್ಟ ವಾಸನೆಯನ್ನು ದೂರಮಾಡುತ್ತದೆ. ಹಿಂದೂ ಧರ್ಮದಲ್ಲಿ ದೇವತಾ ಕಾರ್ಯಗಳನ್ನು ಮಾಡುವಾಗ ಕೆಟ್ಟವಾಸನೆಗಳನ್ನು ನಿವಾರಿಸಿ ಸುವಾಸನೆಯನ್ನು ಬೀರುತ್ತದೆ. ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಗೆ ಸಂಬಂಧವನ್ನು ಪಡೆದುಕೊಂಡಿರುವ ಅಗರಬತ್ತಿಯು ನೈಸರ್ಗಿಕ ಕ್ರಿಮಿ ನಾಶಕವಾಗಿ ಕೂಡ ಕೆಲಸ ಮಾಡುತ್ತದೆ.

ಇತರ ಕಾರಣಗಳು
ಊದುಬತ್ತಿಯು ಹಿಂದೂ ಧರ್ಮದ ಆಚರಣೆಗಳ ಒಂದು ಭಾಗವಾಗಿ ಮಾತ್ರ ಕಾರ್ಯನಿರ್ವಹಿಸುವುದಿಲ್ಲ. ಈಜಿಪ್ಟ್, ಚೀನಾ, ಟಿಬೇಟಿಯನ್ ಸಂಸ್ಕೃತಿಗಳಲ್ಲಿ ಹಲವಾರು ಶತಮಾನಗಳಿಂದ ಇದನ್ನು ಬಳಸಿಕೊಳ್ಳಲಾಗುತ್ತಿದೆ.
ಇವರುಗಳು ತಮ್ಮ ಧಾರ್ಮಿಕ ಕೆಲಸಗಳಲ್ಲೂ ಇದನ್ನು ಬಳಸಿಕೊಳ್ಳುವುದಲ್ಲದೆ ಆರ್ಮೊಥೆರಪಿಗೂ ಉಪಯೋಗಿಸುತ್ತಾರೆ. ಮುಂದಿನ ಬಾರಿ ಊದುಬತ್ತಿಯನ್ನು ಉರಿಸುವಾಗ ಇದು ಹಲವಾರು ವಿಧಾನದಲ್ಲಿ ಬಳಕೆಯಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

English summary

Why Do We Light Incense Sticks Before God?

Wonder why we light incense sticks during a religious ceremony? There is more than one reason to it. You must have noticed that among all the other things that you do during a religious ceremony, you have to light incense sticks in front of the God's idol. There are some definite and scientific reasons behind most of the Hindu rituals. Let us find out the reasons behind lighting incense sticks.
X
Desktop Bottom Promotion