For Quick Alerts
ALLOW NOTIFICATIONS  
For Daily Alerts

ಯಶಸ್ಸು ಮತ್ತು ಧನ ಪ್ರಾಪ್ತಿಗಾಗಿ ಕುಬೇರನನ್ನು ಒಲಿಸಿಕೊಳ್ಳುವುದು ಹೇಗೆ?

By Jaya Subramanya
|

ಜೀವನದಲ್ಲಿ ನಾವು ಶ್ರಮ ಪಡುವುದೇ ಚೆನ್ನಾಗಿ ದುಡಿದು ಹಣ ಸಂಪಾದನೆ ಮಾಡಬೇಕು ಎಂಬ ಕಾರಣಕ್ಕೆ. ಆದರೆ ಹಣ ನಿಮ್ಮ ಬಳಿ ಸಂಪಾದನೆಯಾಗಬೇಕು ಎಂದಾದಲ್ಲಿ ಅದೃಷ್ಟದ ಜೊತೆಗೆ ನೀವು ಆ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲೂ ಸಫಲರಾಗಬೇಕು. ಧನದ ಅಧಿದೇವತೆ ಲಕ್ಷ್ಮೀ ಎಂಬುದು ನಮಗೆಲ್ಲಾ ತಿಳಿದಿರು ವಿಷಯವಾಗಿದೆ. ನೀವು ಧನಿಕರಾಗಬೇಕು ಎಂದಾದಲ್ಲಿ ಯಾವುದೇ ದೋಷವಿಲ್ಲದೆ ಲಕ್ಷ್ಮೀ ಪೂಜೆಯನ್ನು ಮಾಡಬೇಕು ಮತ್ತು ಆ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕು.

ಆದರೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವುದರ ಜೊತೆಗೆ ನೀವು ಕುಬೇರನನ್ನೂ ಪೂಜಿಸಿ ಅವರ ಅನುಗ್ರಹವನ್ನು ಪಡೆದುಕೊಳ್ಳಬೇಕು ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ. ದೇವತೆಗಳಿಗೆ ಸಾಲ ಕೊಡುವವರು ಕುಬೇರ ಎಂಬ ಮಾತಿದೆ. ಕುಬೇರನ ಕೃಪಾಕಟಾಕ್ಷ ನಮ್ಮ ಮೇಲಿದ್ದರೆ ಧನದ ಮಳೆ ನಮ್ಮ ಮೇಲೆ ಆಗುತ್ತಿರುತ್ತದೆ. ಜೀವನದಲ್ಲಿ ಯಾವುದೇ ಕಷ್ಟಕ್ಕೂ ನಾವು ಒಳಗಾಗುವುದಿಲ್ಲ ಎಂಬ ಮಾತೂ ಇದೆ.

ಯಕ್ಷ ಅಧಿಪತಿ ಎಂದೆನಿಸಿರುವ ಕುಬೇರ ವಿಶ್ವದಲ್ಲಿನ ಸುಖ ಸಂತೋಷಕ್ಕೆ ಕಾರಣೀಭೂತರಾಗಿದ್ದಾರೆ. ಇವರು ಕುಳ್ಳನೆಯ ದೇಹಾಕಾರವನ್ನು ಹೊಂದಿದ್ದು ಮೈತುಂಬಾ ಆಭರಣಗಳನ್ನು ಧರಿಸಿದ್ದಾರೆ ಮತ್ತು ಚಿನ್ನದಿಂದ ತುಂಬಿರುವ ಕೊಡವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಕುಬೇರನನ್ನು ಪೂಜಿಸಿ ಅವರನ್ನು ಸಂತೋಪಡಿಸಿದಲ್ಲಿ ಹಣದ ಯಾವುದೇ ಮುಗ್ಗಟ್ಟು ನಮ್ಮನ್ನು ಬಾಧಿಸುವುದಿಲ್ಲ ಎಂಬುದು ಶಾಸ್ತ್ರಗಳಲ್ಲಿ ತಿಳಿಸಿರುವ ವಿಷಯವಾಗಿದೆ....

ಕುಬೇರನ ಪ್ರಾಮುಖ್ಯತೆ

ಕುಬೇರನ ಪ್ರಾಮುಖ್ಯತೆ

ಪುರಾಣಗಳಲ್ಲಿ ಕುಬೇರನ ಬಗ್ಗೆ ಕಥೆಯನ್ನು ಹುಡುಕುತ್ತಾ ಹೋದರೆ ಒಮ್ಮೆ ರಾವಣನು ಕುಬೇರನ ಬಳಿ ಸಾಲ ಮಾಡಿರುತ್ತಾನೆ. ವೆಂಕಟೇಶ್ವರ ವಿವಾಹ ಸಂದರ್ಭದಲ್ಲಿ ಕೂಡ ವೆಂಕಟೇಶ ದೇವರು ಕುಬೇರನಿಂದ ಸಾಲವನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಈಗ ತಿರುಪತಿಯಲ್ಲಿ ಭಕ್ತರು ವೆಂಕಟೇಶ್ವರನ ಹುಂಡಿಗೆ ಹಾಕುತ್ತಿರುವ ಕಾಣಿಕೆಯು ಕುಬೇರನ ಸಾಲವನ್ನು ತೀರಿಸುತ್ತಿದೆ ಎಂಬ ಮಾತೂ ಇದೆ. ಧನ ಸಂಪತ್ತಿಗೆ ಅಧಿಪತಿಯಾಗಿರುವ ಕುಬೇರನ ಮೂರ್ತಿಯನ್ನು ಆರ್‌ಬಿಐ ಸಂಸ್ಥೆಯ ಮುಂಭಾಗದಲ್ಲಿ ನೀವು ಕಾಣಬಹುದು.

ಕುಬೇರ ಯಂತ್ರದ ಪ್ರಾಮುಖ್ಯತೆ

ಕುಬೇರ ಯಂತ್ರದ ಪ್ರಾಮುಖ್ಯತೆ

ಚಿನ್ನ, ಬೆಳ್ಳಿ ಅಥವಾ ಪಂಚಲೋಹವನ್ನು ಬಳಸಿಕೊಂಡು ಕುಬೇರ ಯಂತ್ರವನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಜೀವನದಲ್ಲಿ ಬರುವ ದುರಾದೃಷ್ಟವನ್ನು ಈ ಯಂತ್ರ ನಿವಾರಿಸುತ್ತದೆ ಮತ್ತು ಮನೆಗೆ ಶ್ರೀಮಂತಿಕೆಯನ್ನು ತರುತ್ತದೆ. ಹಣವನ್ನು ನೀವಿರಿಸುವ ಲಾಕರ್‌ ಕುಬೇರ ಯಂತ್ರವನ್ನು ಇರಿಸಲು ಸೂಕ್ತ ಸ್ಥಳವಾಗಿದೆ. ಕುಬೇರ ಪೂಜೆಯ ಸಮಯದಲ್ಲಿ ಯಂತ್ರವನ್ನು ಪೀಠದ ಮೇಲೆ ಪ್ರತಿಷ್ಠಾಪಿಸಿ ನಂತರ ಅದನ್ನು ಸುಭದ್ರ ಲಾಕರ್‌ನಲ್ಲಿ ಇರಿಸಬೇಕು.

ಕುಬೇರ ಮತ್ತು ಲಕ್ಷ್ಮೀ ದೇವತೆ

ಕುಬೇರ ಮತ್ತು ಲಕ್ಷ್ಮೀ ದೇವತೆ

ಅದೃಷ್ಟ ದೇವತೆ ಮತ್ತು ಧನ ದೇವತೆ ಎಂದಿಗೂ ಪರಸ್ಪರ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. ವರುಣನನ್ನು ನಿರ್ಮಿಸಿರುವುದು ಕುಬೇರನು ಎಂಬ ಕಥೆ ಇದ್ದು, ಸಮುದ್ರದಿಂದ ಲಕ್ಷ್ಮೀ ಜನ್ಮತಾಳಿರುತ್ತಾರೆ. ಆದ್ದರಿಂದ ಲಕ್ಷ್ಮೀ ದೇವತೆಯ ಪಿತ ಕುಬೇರನಾಗಿದ್ದಾನೆ. ಅಂತೆಯೇ ನಿಧಿ ಮತ್ತು ರಿಧಿ ಕುಬೇರನ ಪತ್ನಿಯರು ಎಂದೂ ಆಗಿದೆ. ಲಕ್ಷ್ಮೀಯ ಅಂಶವೆಂದಾಗಿ ಇವರನ್ನು ಕರೆಯಲಾಗಿದೆ. ಈ ಎರಡೂ ದೇವತೆಗಳನ್ನು ನೀವು ಪೂಜಿಸುವುದರಿಂದ ನಿಮ್ಮ ಮನೆಯಲ್ಲಿ ಅಷ್ಟ ಐಶ್ವರ್ಯ ಉಂಟಾಗುವುದು ಸಹಜವಾಗಿದೆ.

ಕುಬೇರ ಮತ್ತು ವೆಂಕಟೇಶ

ಕುಬೇರ ಮತ್ತು ವೆಂಕಟೇಶ

ಕುಬೇರನು ಹೆಚ್ಚು ಶ್ರೀಮಂತನಾಗಿದ್ದರಿಂದ ತಿರುಪತಿಯ ಅಧಿಪತಿ ವೆಂಕಟರಮಣನು ಆತನಿಂದ ಹಣವನ್ನು ಪಡೆದುಕೊಂಡಿದ್ದರು ಎಂದಾಗಿ ಕಥೆಯಿದೆ. ಕುಬೇರನಿಂದ ಪಡೆದ ಸಾಲವನ್ನು ತನ್ನ ಭಕ್ತರ ಕಾಣಿಕೆಗಳಿಂದ ತೀರಿಸುವುದಾಗಿ ವೆಂಕಟರಮಣನು ಕುಬೇರನಿಗೆ ಆಶ್ವಾಸನೆಯನ್ನಿತ್ತಿದ್ದರು. ಆದ್ದರಿಂದ ನೀವು ವೆಂಕಟೇಶ್ವರನಿಗೆ ಅರ್ಪಿಸುವುದು ನೇರ ಕುಬೇರನಿಗೆ ತಲುಪುತ್ತದೆ. ಅಂತೆಯೇ ವೆಂಕಟೇಶನನ್ನು ಪೂಜಿಸುವುದು ನಿಮಗೆ ಧನಕನಕವನ್ನು ನೀಡಲಿದೆ.

ಕುಬೇರ ಮಂತ್ರ

ಕುಬೇರ ಮಂತ್ರ

ಓಂ ಯಕ್ಷಾಯ, ಕುಬೇರಾಯ, ವ್ಯಾಸರವನಾಯ, ದಂಡನ್ಯಾಥಿಪತಯೇ, ಧಂಡನ್ನಾಯ ಸಮುದ್ರಯೇ ದೇಹಿ ದಪಾಯ ಸ್ವಾಹಾ

ಕುಬೇರ ಮಂತ್ರ

ಕುಬೇರ ಮಂತ್ರ

ಕುಬೇರ ಧನ್ಯ ಮಂತ್ರ

ಮನುಜ ಭಯ ವಿಮಾನ ವರುಸ್ತಿತಮ್ ಗರುಡ ರತ್ನ ನಿಭಮ್ ನಿಧಿನಾಯಕಂ ಸಿವಸಖ ಮುಕ್ತಾದಿ ವಿಭೂಶಿತಂ ವರದೇಹಯತಂ ಭಜಂ ತಮ್‌ತಿಲಂ ಅಗಸ್ಯ ದೇವ ದೇವೇಶ ಮತ್ಸ್ಯಲೋಕ ಹಿತೇಚಯ ಪೂಜಾಯಾಮಿ ವಿಧಾನೇನ ಪ್ರಸನ್ನ ಸುಮುಖೋಭವ

ಕುಬೇರನಿಗಾಗಿ ಮಂತ್ರಗಳು

ಕುಬೇರನಿಗಾಗಿ ಮಂತ್ರಗಳು

ಕುಬೇರನ ಆಶೀರ್ವಾದವನ್ನು ಪಡೆಯಲು ಕೆಲವೊಂದು ಮಂತ್ರಗಳಿವೆ. ರಾತ್ರಿ ಮತ್ತು ಸಂಜೆ ಈ ಮಂತ್ರಗಳನ್ನು ಪಠಿಸುವುದರಿಂದ ಶುಭವನ್ನು ಪಡೆದುಕೊಳ್ಳಬಹುದಾಗಿದೆ. ಅಕ್ಷಯ ತೃತೀಯ, ಗ್ರಹಣಗಳು, ದೀಪಾವಳಿ, ಧನ್‌ತೇರಾಸ್ ದಿನಗಳಂದು ಈ ಮಂತ್ರಗಳನ್ನು ಪಠಿಸುವುದರಿಂದ ಶುಭವನ್ನು ಕಂಡುಕೊಳ್ಳಬಹುದಾಗಿದೆ.

ಕುಬೇರ ಧನ ಪ್ರಾಪ್ತಿ ಮಂತ್ರ ಓಂ ಶ್ರೀಂ ಒಂ ಹ್ರೀಂ ಶ್ರೀಂ ಓಂ ಹ್ರೀಂ ಶ್ರೀಂ ಕ್ಲೀಮ್ ವಿತ್ತೆಶ್ವರಾಯ ನಮಃ

ಕುಬೇರ ಅಷ್ಟ-ಲಕ್ಷ್ಮೀ ಮಂತ್ರ

ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟ-ಲಕ್ಷ್ಮೀ ಮಮ ಗೃಹೆ ಧನಂ ಪುರಾಯ ಪುರಾಯ ನಮಃ

ಓಂ ಯಕ್ಷಾಯ ಕುಬೇರಾಯ ವೈಶಾರಾವಣ್ಯ ಧನಧಾನ್ಯಧಿಪತಯೇ ಧನಧಾನ್ಯಸಮ್ರಿದ್ಧಿಹಿಂ ಮೆ ದೇಹಿ ದಪಾಯ ಸ್ವಾಹ

ಕುಬೇರನಿಗೆ ನಡೆಸುವ ಪೂಜೆ ಮತ್ತು ಜಾತ್ರೆಗಳು

ಕುಬೇರನಿಗೆ ನಡೆಸುವ ಪೂಜೆ ಮತ್ತು ಜಾತ್ರೆಗಳು

ಧನ್‌ತೇರಾಸ್ - ಧನ್‌ತ್ರಯೋದಶಿ ಅಥವಾ ಧನ್‌ತೇರಾಸ್ ಹಬ್ಬವನ್ನು ಕುಬೇರನಿಗೆ ಅರ್ಪಿಸಲಾಗಿದೆ. ಲಕ್ಷ್ಮೀ ಮತ್ತು ಕುಬೇರನನ್ನು ಪೂಜಿಸುವ ವಿಶೇಷ ದಿನ ಇದಾಗಿದೆ. ಚಿನ್ನವನ್ನು ಖರೀದಿಸಲು ಇದು ಉತ್ತಮ ದಿನವಾಗಿದೆ. ಶರದ್ ಪೂರ್ಣಿಮ - ಕುಬೇರನ ಜನ್ಮದಿನವನ್ನು ಈ ದಿನ ಸಂಕೇತಿಸುತ್ತದೆ. ಈ ದಿನ ಕುಬೇರನನ್ನು ಪೂಜಿಸುವುದರಿಂದ ಸಂಪತ್ತನ್ನು ಪಡೆದುಕೊಳ್ಳಬಹುದಾಗಿದೆ. ತ್ರಯೋದಶಿ ಮತ್ತು ಪೂರ್ಣಿಮ ದಿನಗಳಂದು ಕೂಡ ಕುಬೇರನನ್ನು ಪೂಜಿಸಿ ಅವರ ಕೃಪಾಕಟಾಕ್ಷಕ್ಕೆ ಒಳಗಾಗಬಹುದಾಗಿದೆ.

ಕುಬೇರ ಪೂಜಾ ನಿಯಮಗಳು

ಕುಬೇರ ಪೂಜಾ ನಿಯಮಗಳು

ಈ ಪೂಜೆಯನ್ನು ನಡೆಸಲು ಸೂಕ್ತವಾಗಿರುವ ಸಮಯ ತ್ರಯೋದಶಿಯಾಗಿದೆ (ಚಂದ್ರ ಮಾಸದ ಹದಿಮೂರನೆಯ ದಿನ). ಅದಾಗ್ಯೂ ನೀವು ಯಾವುದೇ ದಿನ ಕೂಡ ಪೂಜೆಯನ್ನು ಮಾಡಬಹುದಾಗಿದೆ. ಪ್ರಾತಃ ಕಾಲದಲ್ಲಿ ಎದ್ದು ಸ್ನಾನವನ್ನು ಮಾಡಿ ಪೂಜೆಗೆ ಬೇಕಾದ ವಸ್ತುಗಳನ್ನು ಅಣಿಗೊಳಿಸಿಕೊಂಡು ಪೂಜೆಯನ್ನು ಪ್ರಾರಂಭಿಸಬಹುದಾಗಿದೆ. ಅಲ್ತಾರ್‌ ಅನ್ನು ಶುದ್ಧೀಕರಿಸಿ ಇದರ ಮೇಲೆ ಕುಬೇರ ಯಂತ್ರವನ್ನು ಇರಿಸಿ. ಅರಶಿನ, ಕುಂಕುಮ ಮತ್ತು (ಹಳದಿ ಅಕ್ಕಿ) ಯೊಂದಿಗೆ ಅದನ್ನು ಸಿಂಗರಿಸಿ. ಹೂವುಗಳನ್ನಿಟ್ಟು ಅಣಿಗೊಳಿಸಿ.

ತುಪ್ಪದ ದೀಪವನ್ನು ಹಚ್ಚಿ ಗಣೇಶನ ಪೂಜೆ ಮಾಡಿ

ತುಪ್ಪದ ದೀಪವನ್ನು ಹಚ್ಚಿ ಗಣೇಶನ ಪೂಜೆ ಮಾಡಿ

ತುಪ್ಪದ ದೀಪವನ್ನು ಹಚ್ಚಿ ಗಣೇಶನ ಪೂಜೆಯನ್ನು ಮಾಡಲು ಆರಂಭಿಸಿ. ಊದುಬತ್ತಿಯನ್ನು ಹಚ್ಚಿ. ಕುಬೇರ ಧ್ಯಾನ ಮಂತ್ರವನ್ನು ಪಠಿಸಿ ನಂತರ ಕುಬೇರ ಮಂತ್ರವನ್ನು 108 ಬಾರಿ ಜಪಿಸಿ. ಜೇನು, ಬಿಳಿ ಬೆಲ್ಲ ಮತ್ತು ಒಣ ಹಣ್ಣುಗಳನ್ನು ಅರ್ಪಿಸಿ. ಕರ್ಪೂರವನ್ನು ಹಚ್ಚಿ ಕುಬೇರ ಯಂತ್ರಕ್ಕೆ ಆರತಿ ಮಾಡಿ. ಪೂಜೆಯ ಕೊನೆಯಲ್ಲಿ ಯಂತ್ರದ ಮುಂದೆ ಸ್ವಲ್ಪ ಸಮಯ ಧ್ಯಾನ ಮಾಡಿ ಮತ್ತು ನಿಮ್ಮ ಪ್ರಾರ್ಥನೆಯನ್ನು ಹೇಳಿ. ಯಂತ್ರದ ಸುತ್ತ ಸುತ್ತು ಬಿನ್ನಿ ಮತ್ತು ನಮಸ್ಕಾರ ಮಾಡಿ.

English summary

Which pooja should you do to get money?

A famous quote in Sanskrit says, “Dhana Moolam Idam Jagat” meaning money is the basis of everything in this world. Starting from procuring the basic necessities of life like food, clothing and shelter, money goes about getting everything to man including comforts, status, happiness and assets on this earth. None would respect an individual who does not have money. Often, you might fall short of money during critical times or would want money for achieving your dreams. Kuber Puja can get you the desired money quickly.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more