Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಝೆನ್ ಕಥೆ : ಮಹಾನುಭಾವ, ಇದೇ ಅಹಂಕಾರ!

ಎಷ್ಟೇ ಯಶಸ್ಸು, ಕೀರ್ತಿ ಲಭಿಸಿದ್ದರೂ ಪ್ರಧಾನಿ ಆಗಾಗ ತನಗೆ ಆಪ್ತರಾದ ಝೆನ್ ಗುರುಗಳ ಬಳಿ ಅಧ್ಯಯನಕ್ಕೆಂದು ಬರುತ್ತಿದ್ದ. ಆಡಳಿತಕ್ಕೆ ಸಂಬಂಧಿಸಿದಂತೆ ರಾಜ್ಯದ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಆಗಾಗ ಝೆನ್ ಗುರುಗಳ ಬಳಿ ಉಪದೇಶ ಯಾಚಿಸುತ್ತಿದ್ದ. ಅವರಿಬ್ಬರ ನಡುವೆ ಯಾವುದೇ ಹಮ್ಮಿಬಿಮ್ಮುಗಳಿರಲಿಲ್ಲ. ಗುರು ಮತ್ತು ಶಿಷ್ಯ ಸಂಬಂಧದ ಹೊರತಾಗಿ ಅವರಿಬ್ಬರ ನಡುವೆ ಯಾವುದೇ ವ್ಯಾವಹಾರಿಕ ಸಂಬಂಧವಿರಲಿಲ್ಲ.
ಒಂದು ದಿನ ಅವನ ಸಾಮಾನ್ಯ ಭೇಟಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯು ಝೆನ್ ಗುರುವನ್ನು ಕೇಳಿದ, "ಗುರುಗಳೆ, ಬುದ್ಧ ತತ್ವದ ಪ್ರಕಾರ ಅಹಂಕಾರ ಎಂದರೆ ಏನು?" ಗುರುವಿನ ಮುಖ ಕೆಂಪಾಯಿತು, ಸಿಟ್ಟಿನಿಂದ ಪ್ರಧಾನಿಯನ್ನು ಅವಮಾನಿಸುವ ರೀತಿಯಲ್ಲಿ "ಇದೆಂಥಾ ಮೂರ್ಖ ಪ್ರಶ್ನೆ?" ಎಂದು ಏರು ದನಿಯಲ್ಲಿ ಮರು ಪ್ರಶ್ನೆ ಹಾಕಿದರು.
ಇಂಥ ಪ್ರತಿಕ್ರಿಯೆಯನ್ನು ಪ್ರಧಾನಿ ನಿರೀಕ್ಷಿಸಿರಲಿಲ್ಲ. ಈ ಅನಿರೀಕ್ಷಿತ ಪ್ರಶ್ನೆಯು ಪ್ರಧಾನಿಗೆ ಆಶ್ಚರ್ಯವನ್ನು ತಂದಿತಲ್ಲದೆ, ಸಿಟ್ಟು ಮತ್ತು ಅವಮಾನದಿಂದ ಕುದಿಯಲು ಪ್ರಾರಂಭಿಸಿದ. ಮುಖ ವಿವರ್ಣವಾಯಿತು. ಆಗ ಶಾಂತತೆಯಿಂದ ಝೆನ್ ಗುರು ನಗುತ್ತಾ ಹೇಳಿದ, "ಮಹಾನುಭಾವ, ಇದೇ ಅಹಂಕಾರ!"



Click it and Unblock the Notifications
