For Quick Alerts
ALLOW NOTIFICATIONS  
For Daily Alerts

Varalakshmi Vratha 2021: ವರಲಕ್ಷ್ಮಿ ವ್ರತ ಪೂಜೆ ಸಾಮಗ್ರಿಗಳ ಪಟ್ಟಿ ಹಾಗೂ ಪೂಜೆಯ ವಿಧಾನ

|

ವರಲಕ್ಷ್ಮಿ ವ್ರತದ ನಿಯಮಗಳನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ವ್ರತವನ್ನು ವಿವಾಹಿತ ಮಹಿಳೆಯರು ಕೈಗೊಳ್ಳುತ್ತಾರೆ. ತಮ್ಮ ಗಂಡ ಹಾಗೂ ಮಕ್ಕಳ ಆರೋಗ್ಯ ವೃದ್ಧಿಸಲು, ಮನೆಯ ಐಶ್ವರ್ಯ ಹೆಚ್ಚಿಸಲು , ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸುವಂತೆ ಮಾಡು ತಾಯೇ ಎಂದು ಲಕ್ಷ್ಮಿಯಲ್ಲಿ ಈ ವ್ರತದ ಮೂಲಕ ಕೇಳಿ ಕೊಳ್ಳಲಾಗುವುದು.

ಹಿಂದೂ ಸಂಪ್ರದಾಯದ ಪ್ರಕಾರ ವರಲಕ್ಷ್ಮಿ ವ್ರತ ಪಾಲಿಸಿದರೆ ಅಷ್ಟಲಕ್ಷ್ಮಿಯರನ್ನು ಪೂಜಿಸಿದ್ದಕ್ಕೆ ಸಮ ಎಂದು ಹೇಳಲಾಗುವುದು. ವರಲಕ್ಷ್ಮಿ ವ್ರತ ಪಾಲಿಸಿದರೆ ಐಶ್ವರ್ಯ, ಸಂತಾನ ಭಾಗ್ಯ, ಜ್ಞಾನ, ಪ್ರೀತಿ, ಯಶಸ್ಸು, ಶಾಂತಿ, ಧೈರ್ಯ ಹೀಗೆ ಎಲ್ಲಾ ಐಶ್ವರ್ಯಗಳೂ ದೊರೆಯುವುದು.

2021ರಲ್ಲಿ ವರಲಕ್ಷ್ಮಿ ವ್ರತವನ್ನು ಆಗಸ್ಟ್‌ 20ರಂದು ಆಚರಿಸಲಾಗುತ್ತಿದೆ. ವರಲಕ್ಷ್ಮಿ ವ್ರತದಿಂದ ಅಷ್ಟಲಕ್ಷ್ಮಿಯರನ್ನು ಪೂಜಿಸಲಾಗುವುದು.

ಅಷ್ಟ ಲಕ್ಷ್ಮಿಯರು

ಅಷ್ಟ ಲಕ್ಷ್ಮಿಯರು

* ಆದಿ ಲಕ್ಷ್ಮಿ

* ಧನ ಲಕ್ಷ್ಮಿ

* ಧೈರ್ಯ ಲಕ್ಷ್ಮಿ

* ಸೌಭಾಗ್ಯ ಲಕ್ಷ್ಮಿ

* ವಿಜಯ ಲಕ್ಷ್ಮಿ

* ಧಾನ್ಯ ಲಕ್ಷ್ಮಿ

* ಸಂತಾನ ಲಕ್ಷ್ಮಿ

* ವಿದ್ಯಾ ಲಕ್ಷ್ಮಿ

ವರಲಕ್ಷ್ಮಿ ವ್ರತಕ್ಕೆ ಬೇಕಾಗುವ ಸಾಮಗ್ರಿಗಳು

ವರಲಕ್ಷ್ಮಿ ವ್ರತಕ್ಕೆ ಬೇಕಾಗುವ ಸಾಮಗ್ರಿಗಳು

* ಮೊದಲಿಗೆ ಬೇಕಾಗಿರುವುದು ಪೀಠ ಅಂದ್ರೆ ಮಣೆ

* ನಂತರ ಪೀಠದ ಮೇಲೆ ಹಾಕಲು ವಸ್ತ್ರ

* ರಂಗೋಲಿ ಹಾಕಲು ಅಕ್ಕಿ ಹಿಟ್ಟು

* ಎರಡು ತೆಂಗಿನಕಾಯಿ (ಒಂದು ಕಳಶಕ್ಕೆ, ಮತ್ತೊಂದು ಪೂಜೆಗೆ)

* ಕಳಶದ ಚೊಂಬು (ತಾಮ್ರ ಅಥವಾ ಬೆಳ್ಳಿಯದ್ದು)

* ಕಶಸದ ಚೊಂಬಿಗೆ ತುಂಬಲು ಅಕ್ಕಿ, ಒಣ ಖರ್ಜೂರ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಕಲ್ಲು ಸಕ್ಕರೆ ಹಾಗೂ ಎಲ ಹಣ್ಣುಗಳು. (ಇದನ್ನು ಲಕ್ಷ್ಮಿ ಕಳಸ ಎಂದು ಕರೆಯಲಾಗುವುದು)

* ದೇವಿಯ ಸಮೀಪ ಇಡಲು ಎರಡು ಆನೆಗಳು

* ಅರಿಶಿನದ ಕೊಂಬು

* ಹಸಿರು ಬಳೆಗಳು

* ದೇವಿಗೆ ಉಡಿಸಲು ಸೀರೆ

* ತಾಂಬೂಲಕ್ಕೆ ಬ್ಲೌಸ್‌ ಪೀಸ್‌

* ಹಾಗೂ ಇನ್ನೂ ಕೆಲವು ಬ್ಲೌಸ್ ಪೀಸ್‌ಗಳು

* ಅರಿಶಿಣ

* ಕುಂಕುಮ

* ಅಕ್ಷತೆ

* ಬಿಡಿ ಹೂಗಳು

* ಶ್ರೀಗಂಧ

* ವೀಳ್ಯೆದೆಲೆ

* ಅಡಿಕೆ

* ಖರ್ಜೂರ

* ಅಗರ ಬತ್ತಿ

* ನಾಣ್ಯಗಳು

* ಮಾವಿನ ಎಲೆಯ ತೋರಣ

* ಬಾಳೆ ಹಣ್ಣು

* 9 ಬಿಳಿ ದಾರಗಳು

ತಿಂಡಿ-ತಿನಿಸುಗಳು

* ದೀಪದ ಎಣ್ಣೆ ಅಥವಾ ಹಸುವಿನ ತುಪ್ಪ

* ಬತ್ತಿ

* ಕರ್ಪೂರ

(ಈ ಎಲ್ಲಾ ಸಾಮಗ್ರಿಗಳನ್ನು ಮೊದಲೇ ರೆಡಿ ಮಾಡಿಡಿ)

ವ್ರತದ ವಿಧಾನ

ವ್ರತದ ವಿಧಾನ

* ಬೆಳಗ್ಗೆ ಬೇಗ ಅಂದ್ರೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಮನೆಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ನೈವೇದ್ಯಕ್ಕೆ ರೆಡಿ ಮಾಡಿ.

* ಪೂಜೆಯ ಸ್ಥಳದಲ್ಲಿ ಪೂರ್ವಾಭಿಮುಖವಾಗಿ ಎಂಟು ದಳದ ಕಮಲದ ರಂಗೋಲಿ ಹಾಕಬೇಕು. ಮಂಟಪದ ಎರಡೂ ಕಡೆ ದೀಪ ಹಚ್ಚಿಡಬೇಕು. ದೀಪಕ್ಕೆ ಅರಿಶಿಣ ಕುಂಕುಮ, ಹೂ ಇಡಬೇಕು. ನಂತರ ಬಟ್ಟಲಿಗೆ 5 ಮುಷ್ಠಿ ಅಕ್ಕಿ ತೆಗೆದು ಹಾಇ ಅದನ್ನು ಹರಡಿ, ಇದನ್ನು ರಂಗೋಲಿಯ ಮಧ್ಯ ಭಾಗದಲ್ಲಿ ಇಟ್ಟು ಸ್ವಸ್ತಿಕವನ್ನು ಬರೆದು ಕಳಶ ಇಡಬೇಕು.

* ಕಳಶಕ್ಕೆ ಬೇಕಾದ ಸಾಮಗ್ರಿಗಳನ್ನು ತುಂಬಿ ನಂತರ ಶ್ರೀಗಂಧ ಹಚ್ಚಿ, ಅಕ್ಷತೆ ಹಾಕಿಡಿ. ಅದರ ಮೇಲೆ 5 ವೀಳ್ಯೆದೆಲೆ ಇಡಿ. ಈಗ ತೆಂಗಿನಕಾಯಿಯ ಎರಡು ಕಣ್ಣುಗಳು ಮುಂಭಾಗ ಬರುವಂತೆ ಕಳಶದ ಮೇಲೆ ಇಡಿ. ತೆಂಗಿನಕಾಯಿಗೆ ಮೊದಲೇ ಅರಿಶಿಣ ಹಚ್ಚಿ ಅಲಂಕಾರ ಮಾಡಿ.

* ಅದರ ಮೇಲೆ ದೇವಿಯ ಮುಖವಾಡ ಇಡಬೇಕು. ನಂತರ ಮುಖವಾಡಕ್ಕೆ ಅರಿಶಿಣ ಕುಂಕುಮ ಹಚ್ಚಿ ಕಾಡಿಗೆ ತೀಡಿ ಅಲಂಕಾರ ಮಾಡಿ. ಅರಿಶಿಣ, ಕುಂಕುಮ, ಬೆಳೆ, ಇತ್ಯಾದಿಗಳನ್ನು ದೇವಿಯ ಪಕ್ಕ ಇಡಿ. ದೇವಿಯ ಎದುರು ಮೂವತ್ತೆರಡು ನಾನ್ಯಗಳನ್ನು ಇಡಬೇಕು. ದೇವಿಗೆ ಮಾಂಗಲ್ಯ ಸರ ಹಾಗೂ ಅರಿಶಿಣ ಕೊಂಬನ್ನು ದಾರದಲ್ಲಿ ಕಟ್ಟಿ ಹಾಕಿ.

* ನಂತರ ಒಡವೆಗಳಿಂದ ಅಲಂಕರಿಸಿ. ತಾವರೆ ಹೂವನ್ನು ಮುಡಿಸಿ. ಕಳಶದ ಹಿಂದೆ ದೇವಿಯ ಫೋಟೋ ಇಡಬಹುದು. ಐದು ಅಥವಾ ಒಂಭತ್ತು ಬಗೆಯ ಹಣ್ಣುಗಳನ್ನು ಇಡಿ.

* ನಂತರ ಮಡಲಿಕ್ಕಿ ತಯಾರಿಸಬೇಕು. ಎರಡು ವೀಳ್ಯೆದೆಲೆ, ಅಡಿಕೆ, ಬಳೆ, ಬ್ಲೌಸ್, ಕಾಯಿ, ಅಕ್ಕಿ, ಹೂ, ಹಣ್ಣುಗಳು, ಕೊಬ್ಬರಿ ಇವುಗಳನ್ನು ಬಲಸಿ ತಯಾರಿಸಿ.

ಪೂಜೆಯ ವಿಧಾನ

ಪೂಜೆಯ ವಿಧಾನ

* ಮೊದಲಿಗೆ ಗಣೇಶನನ್ನು ಪೂಜಿಸಿ.

* ನಂತರ ಪಂಚ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಹೂ ಹಾಕಿ, ಅದರಿಂದ ದೇವಿಗೆ ಪ್ರೋಕ್ಷಣೆ ಮಾಡಿ.

* ಒಂದು ಪ್ಲೇಟ್‌ನಲ್ಲಿ ಚಿಕ್ಕ ಲಕ್ಷ್ಮಿಯ ಮೂರ್ತಿ ಇಟ್ಟು, ಅದರಲ್ಲಿ ವೀಳ್ಯದೆಲೆ ಇಟ್ಟು ಅಭಿಷೇಕಕ್ಕೆ ರೆಡಿಯಾದ ಪಂಚಾಮೃತವನ್ನು ಇಡಿ. ಆ ಪಂಚಾಮೃತಕ್ಕೆ ಹೂವನ್ನು ಅದ್ದಿ ದೇವಿಗೆ ಸಮರ್ಪಿಸಿ. ಬಳಿಕ ದೇವಿಗೆ ಅರಿಶಿನ ಕುಂಕುಮ, ಕಾಡಿಗೆ ಹಚ್ಚಿ ಗಂಧಾಕ್ಷತೆ ಹಾಕಬೇಕು.

* ನಂತರ ದೇವಿಗೆ ಹೂಗಳಿಂದ ಸಹಸ್ರಾಚನೆ ಮಾಡುತ್ತಾ ಪೂಜೆ ಮಾಡಿ. ನಂತರ ಕುಂಕುಮಾರ್ಚನೆ ಮಾಡಬೇಕು, ಅಷ್ಟೋತ್ತರ ಹೇಳುತ್ತಾ ಕುಂಕುಮಾರ್ಚನೆ ಮಾಡಿ. ಬಳಿಕ ಧೂಪ, ದೀಪದಿಂದ ದೇವಿಗೆ ಆರತಿ ನಾಡಿ, ತೆಂಗಿನ ಕಾಯಿ ಒಡೆದು ನೈವೇದ್ಯ ಮಾಡಬೇಕು. ಈಗ ದೇವಿಗೆ ಬಾಳೆಹಣ್ಣು, ಹಾಲಿನ ನೈವೇದ್ಯ ಮಾಡಿ ಕೊನೆಯಲ್ಲಿ ಮಂಗಳಾರತಿ ಮಾಡಿ.

* ನಂತರ ವರಮಹಾಲಕ್ಷ್ಮಿ ವ್ರತದ ಕತೆ ಪುಸ್ತಕಕ್ಕೆ ಅರಿಶಿನ ಕುಂಕುಮ ಹಚ್ಚಿ, ಹೂವು ಹಾಕಿ ನಮಸ್ಕಾರ ಮಾಡಿ. ವ್ರತದ ಕತೆಯನ್ನು ಓದಿ.

* ಆರತಿಗೆ ನಮಸ್ಕರಿಸಿ ಅಕ್ಷತೆ ಕೈಯಲ್ಲಿ ತೆಗೆದುಕೊಂಡು ಸಂಕಲ್ಪ ಮಾಡಿ, ಬಳಿಕ ಆ ಅಕ್ಷತೆಯನ್ನು ದೇವಿಗೆ ಹಾಕಿ, ಸುತ್ತು ಬಂದು ನಮಸ್ಕಾರ ಮಾಡಿ.

* ಹೀಗೆ ಪೂಜೆ ಆದಮೇಲೆ ಒಂಭತ್ತೆಳೆ ದಾರವನ್ನು ಹೂವಿನೊಂದಿಗೆ ಕಟ್ಟಿ ಅದನ್ನು ಮನೆ ಹಿರಿಯರಿಂದ ಕೈಗೆ ಕಟ್ಟಿಸಿಕೊಳ್ಳಿ. ನಂತರ ಮುತ್ತೈದೆಯರಿಗೆ ತಾಂಬೂಲ ನೀಡಿ.

ವಿಸರ್ಜನೆ ಮಾಡುವ ಮುನ್ನ ಮಂಗಳಾರತಿ ಮಾಡಿ ಕಳಸದ ಬಲಭಾಗ ಸ್ವಲ್ಪ ಅಲುಗಿಸಿ ನಂತರ ವಿಸರ್ಜನೆ ಮಾಡಬೇಕು.

English summary

Varalakshmi Vratha Puja Vidhi, Vrat vidhi, Puja Samagri, fasting rules and Importance

Puja Samagri Puja Vidhi, Vrat vidhi, Puja Samagri, fasting rules and Importance, read on....
X
Desktop Bottom Promotion