For Quick Alerts
ALLOW NOTIFICATIONS  
For Daily Alerts

  ಭಾರತದ ಅತ್ಯಂತ ಜನಪ್ರಿಯ ಮತ್ತು ಪವಾಡಭರಿತ ದೇವಾಲಯಗಳು

  By Lekhaka
  |

  ಭಾರತದ ಪ್ರತಿ ಹಳ್ಳಿಯೂ ಒಂದಲ್ಲ ಒಂದು ಇತಿಹಾಸ ಹೊಂದಿದ ದೇವಸ್ಥಾನವೊಂದನ್ನು ಹೊಂದಿರುತ್ತದೆ. ಇದನ್ನು ಪಟ್ಟಿಮಾಡಲು ಹೋದರೆ ವರ್ಷಗಟ್ಟಲೇ ಬೇಕಾದೀತು. ಆದರೆ ಇವುಗಳಲ್ಲಿ ಕೆಲವು ಹೆಚ್ಚಿನ ಮಹತ್ವವನ್ನು ಹೊಂದಿದ್ದು ಹೆಚ್ಚು ಜನಪ್ರಿಯತೆಯನ್ನು ಪಡೆದಿವೆ.

  ತಮ್ಮ ಇಷ್ಟದೇವರು ಈ ದೇವಾಲಯದಲ್ಲಿ ನೆಲೆಸಿದ್ದಾರೆ, ಈ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ದೇವರ ಅನುಗ್ರಹ ಮತ್ತು ಆಶೀರ್ವಾದವನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ನಂಬಿಕೆಯಿಂದ ದಿನಂಪ್ರತಿ ಈ ದೇವಾಲಯಕ್ಕೆ ಸಹಸ್ರಾರು ಭಕ್ತರು ಆಗಮಿಸುವ ಕಾರಣ ಈ ದೇವಾಲಯಗಳು ಸದಾ ತುಂಬಿ ತುಳುಕುತ್ತಿರುತ್ತವೆ.

  ಉದಾಹರಣೆಗೆ ಆಂಧ್ರಪ್ರದೇಶದಲ್ಲಿರುವ ತಿರುಪತಿ ದೇವಾಲಯ ನಿಸ್ಸಂಶಯವಾಗಿಯೂ ಭಾರತದ ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಇದರಂತೆಯೇ ಭಾರತದಾದ್ಯಂತ ಹತ್ತು ಹಲವು ದೇವಾಲಯಗಳಿದ್ದು ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿವೆ. ಭಾರತದಲ್ಲಿರುವ 6 ಶ್ರೀ ಕೃಷ್ಣನ ದೇವಾಲಯಗಳು 

  ಇದಕ್ಕೆ ಭಕ್ತರು ನೀಡುವ ಕಾರಣವೆಂದರೆ ಈ ಸ್ಥಳಗಳಿಗೆ ಭೇಟಿ ನೀಡಿ ಪ್ರಾರ್ಥಿಸುವುದರಿಂದ ತಮ್ಮ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ ಎಂಬುದು. ಈ ದೇವರಿಗೆ ಭಕ್ತರು ಜಾಗೃತ ದೇವರು ಎಂದು ಕರೆಯುತ್ತಾರೆ. ಭಾರತದಾದ್ಯಂತ ಇರುವ ಇಂಥ ದೇವಾಲಯಗಳಲ್ಲಿ ಪ್ರಮುಖವದುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

  ತಿರುಪತಿ ದೇವಾಲಯ

  ತಿರುಪತಿ ದೇವಾಲಯ

  ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಮಲ ಬೆಟ್ಟದ ಮೇಲಿರುವ ಈ ದೇವಾಲಯ ಭಗವಾನ್ ವಿಷ್ಣುವಿನ ಒಂದು ಅವತಾರವಾದ ಬಾಲಾಜಿ ಅಥವಾ ವೆಂಕಟೇಶ್ವರ ದೇವರ ಆಲಯವಾಗಿದೆ. ಪುರಾಣದ ಪ್ರಕಾರ ಶ್ರೀಮಂತ ಕುಬೇರನಿಂದ ತನ್ನ ಮಗಳ ಮದುವೆಗಾಗಿ ಬಾಲಾಜಿ ಸಾಲ ಪಡೆದುಕೊಂಡಿದ್ದು ಈ ಸಾಲವನ್ನು ತೀರಿಸಲು ಭಕ್ತರಿಂದ ದೇಣಿಗೆಯನ್ನು ಸ್ವೀಕರಿಸುತ್ತಾನೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಭಕ್ತರು ನೀಡುವ ಅಪಾರ ಧನಕನದ ಕಾರಣ ತಿರುಪತಿ ದೇವಾಲಯ ಭಾರತದ ಅತ್ಯಂತ ಹೆಚ್ಚಿನ ಆದಾಯವನ್ನು ಪಡೆಯುವ ದೇವಾಲಯವಾಗಿದೆ.

  ಕಾಮಾಕ್ಯ ದೇವಾಲಯ

  ಕಾಮಾಕ್ಯ ದೇವಾಲಯ

  ಪೂರ್ವದ ಅಸ್ಸಾಂ ರಾಜ್ಯದಲ್ಲಿರುವ ಕಾಮಾಕ್ಯದೇವಿ ದೇವಾಲಯ ಒಂದು ಶಕ್ತಿಪೀಠವೆಂದು ಪರಿಗಣಿತವಾಗಿದ್ದು ಜನಪ್ರಿಯ ದೇವಾಲಯವಾಗಿದೆ. ಪುರಾಣದ ಪ್ರಕಾರ ಶಿವನ ಪತ್ನಿಯಾದ ಸತಿಯ ತಂದೆ ಯಜ್ಞವೊಂದನ್ನು ಮುಗಿಸಿದ ಬಳಿಕ ಶಿವನನ್ನು ಹೀಯಾಳಿಸಿದುದನ್ನು ತಡೆಯಲಾಗದೇ ಅದೇ ಕುಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಬಳಿಕ ಆಗಮಿಸಿದ ಶಿವ ಕೋಪೋದ್ರಿಕ್ತನಾಗಿ ತನ್ನ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು ತಾಂಡವನೃತ್ಯ ಆರಂಭಿಸುತ್ತಾನೆ. ಇದನ್ನು ತಡೆಯಲು ವಿಷ್ಣು ಸತಿಯ ದೇಹವನ್ನು ತನ್ನ ಚಕ್ರದಿಂದ ನೂರಾ ಎಂಟು ಭಾಗಗಳನ್ನಾಗಿ ವಿಂಗಡಿಸಿ ಭರತಖಂಡದಾದ್ಯಂತ ಬೀಳಿಸುತ್ತಾನೆ. ಮುಂದೆ ಓದಿ

  Photos Courtesy : commons.wikimedia.org

  ಕಾಮಾಕ್ಯ ದೇವಾಲಯ

  ಕಾಮಾಕ್ಯ ದೇವಾಲಯ

  ಇವುಗಳನ್ನು ಶಕ್ತಿಪೀಠಗಳೆಂದು ಕರೆಯುತ್ತಾರೆ. ಕಾಮಾಕ್ಯ ದೇವಾಲಯವಿರುವಲ್ಲಿ ಸತಿಯ ಗರ್ಭಕೋಶ ಮತ್ತು ಗುಪ್ತಾಂಗಗಳು ಬಿದ್ದುದರಿಂದ ಇದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆಷಾಢ ಮಾಸದಲ್ಲಿ (ಜೂನ್) ದೇವಿ ಮೂರು ದಿನಗಳಿಗಾಗಿ ಮೈ ನೆರೆಯುತ್ತಾಳೆಂದೂ ಆಗ ಸಮೀಪದ ಬ್ರಹ್ಮಪುತ್ರ ನದಿ ಕೆಂಪಗಾಗುತ್ತದೆಂದೂ ಭಕ್ತರು ನಂಬುತ್ತಾರೆ. ಈ ಮೂರು ದಿನಗಳಂದು ದೇವಾಲಯ ಪೂರ್ಣವಾಗಿ ಮುಚ್ಚಿರುತ್ತದೆ. ಈ ಮೂರು ದಿನಗಳಲ್ಲಿ ನದಿಯ ನೀರನ್ನು ಭಕ್ತರು ಅತಿ ಪವಿತ್ರವಾದ ಜಲವೆಂದು ಭಾವಿಸಿ ಸ್ವೀಕರಿಸುತ್ತಾರೆ. ಈ ದಿನಗಳಲ್ಲಿ ಆ ಸ್ಥಳ ಜನರಿಂದ ಕಿಕ್ಕಿರಿದು ತುಂಬಿರುತ್ತದೆ.

  courtesy

  ಕೇದಾರನಾಥ ದೇವಾಲಯ

  ಕೇದಾರನಾಥ ದೇವಾಲಯ

  ಹಿಮಾಲಯದ ಬೆಟ್ಟವೊಂದರ ತುದಿಯಲ್ಲಿರುವ ಕೇದಾರನಾಥ ಶಿವನಿಗೆ ಮುಡಿಪಾಗಿರುವ ದೇವಾಲಯವಾಗಿದ್ದು ಹಿಂದೂಗಳಿಗೆ ಪವಿತ್ರವಾದ ನಾಲ್ಕು ಧಾಮ (ಚಾರ್ ಧಾಮ್) ಗಳಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ ಪಾಂಡವರು ತಮ್ಮ ಭವಿಷ್ಯವನ್ನು ತಿಳಿಯಲು ಶಿವನನ್ನು ಭೇಟಿಯಾಗಿದ್ದರು ಎಂಬ ಕಥೆಯಿಂದ ಕೇದಾರನಾಥ ದೇವಾಲಯ ಅತ್ಯಂತ ಶೀತಲವಾಗಿದ್ದರೂ ಜನರಿಂದ ಕಿಕ್ಕಿರಿದಿರುತ್ತದೆ.

  ಮೀನಾಕ್ಷಿ ಅಮ್ಮಾನ್ ದೇವಾಲಯ

  ಮೀನಾಕ್ಷಿ ಅಮ್ಮಾನ್ ದೇವಾಲಯ

  ತಮಿಳುನಾಡಿನ ಮದುರೈಯಲ್ಲಿರುವ ಮೀನಾಕ್ಷಿ ಅಮ್ಮಾನ್ ದೇವಾಲಯ ಶಿವನ ಸತಿಯಾದ ಪಾರ್ವತಿಗೆ ಮೀಸಲಾದ ದೇವಾಲಯವಾಗಿದ್ದು ಅತ್ಯಂದ ಭವ್ಯವಾದ ಹೊರಾಂಗಣವನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿಯೇ ಅತ್ಯಂತ ಎತ್ತರವಾದ ಗೋಪುರ, ಚಿನ್ನದ ವಿಮಾನಗಳು, ಎರಡು ಗರ್ಭಗುಡಿಗಳನ್ನು ಹೊಂದಿರುವ ಇದು ಇನ್ನೊಂದು ಶ್ರೀಮಂತ ದೇವಾಲಯವಾಗಿದೆ. ಮುಂದೆ ಓದಿ

  Photos Courtesy : commons.wikimedia.org

  ಮೀನಾಕ್ಷಿ ಅಮ್ಮಾನ್ ದೇವಾಲಯ

  ಮೀನಾಕ್ಷಿ ಅಮ್ಮಾನ್ ದೇವಾಲಯ

  ಪ್ರತಿದಿನ ಹದಿನೈದು ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ. ಶುಕ್ರವಾರ ಇಪ್ಪತ್ತೈದು ಸಾವಿರ ಜನರು ಭೇಟಿ ನೀಡುತ್ತಾರೆ. ವಿಶೇಷವೆಂದರೆ ಈ ದೇವಾಲಯದ ಆವರಣದಲ್ಲಿ ಅಂದಾಜು 33,000 ವಿಗ್ರಹಗಳಿವೆ. |

  Photos Courtesy : en.wikipedia.org

  ಪುರಿ ಜಗನ್ನಾಥ ದೇವಾಲಯ

  ಪುರಿ ಜಗನ್ನಾಥ ದೇವಾಲಯ

  ವಿಷ್ಣುವಿನ ಒಂದು ರೂಪವಾದ ಜಗನ್ನಾಥ, ಅಣ್ಣ ಬಲರಾಮ ಮತ್ತು ತಂಗಿ ಸುಭದ್ರೆ (ಅರ್ಜುನನ ಪತ್ನಿ) ರಿಗಾಗಿ ಕಟ್ಟಿಸಿರುವ ಈ ದೇವಾಲಯ ಒರಿಸ್ಸಾ ರಾಜ್ಯದ ಪುರಿ ಜಿಲ್ಲೆಯಲ್ಲಿದೆ. ಈ ದೇವಾಲಯ ಸಹಾ ಹಿಂದೂಗಳಿಗೆ ಪವಿತ್ರವಾದ ಚಾರ್ ಧಾಮ್ ಗಳಲ್ಲಿ ಒಂದಾಗಿದೆ. ವರ್ಷಕ್ಕೊಂದು ಬಾರಿ ರಥಯಾತ್ರೆಯಲ್ಲಿ ಈ ಎಲ್ಲಾ ದೇವರ ಮರದ ಆಕೃತಿಗಳನ್ನು ಮೆರವಣಿಗೆಯಲ್ಲಿ ಇವರ ಸ್ವಗ್ರಹಕ್ಕೆ ಕೊಂಡೊಯ್ಯಲಾಗುತ್ತದೆ.

  ಪುರಿ ಜಗನ್ನಾಥ ದೇವಾಲಯ

  ಪುರಿ ಜಗನ್ನಾಥ ದೇವಾಲಯ

  ಈ ಯಾತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ಕೆಲವೊಮ್ಮೆ ರಥದ ಚಕ್ರದಡಿಗೆ ಸಿಲುಕಿ ಅಪಘಾತಗಳೂ ಆಗುವುದುಂಟು. ಹತ್ತು ದಿನಗಳ ಬಳಿಕ ಮತ್ತೆ ದೇವಾಲಯಕ್ಕೆ ಕರೆತರಲಾಗುತ್ತದೆ. ಪ್ರತಿ ಹತ್ತೊಂಭತ್ತು ವರ್ಷಗಳಿಗೊಮ್ಮೆ ಈ ಮರದ ವಿಗ್ರಹಗಳನ್ನು ಬೇವಿನ ಮರದಿಂದ ಹೊಸದಾಗಿ ನಿರ್ಮಿಸಲಾಗುತ್ತದೆ. ಈ ವಿಧಿಗೆ ನಾಬಾ ಕಳೇಬರ ಎಂದು ಕರೆಯಲಾಗುತ್ತದೆ.

  ವೈಷ್ಣೋ ದೇವಿ ದೇವಾಲಯ

  ವೈಷ್ಣೋ ದೇವಿ ದೇವಾಲಯ

  ಭಾರತದ ಶಿಖೆಯಲ್ಲಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ವೈಷ್ಣೋದೇವಿ ದೇವಾಲಯವನ್ನು ಶೇರಾವಾಲಿ ಮಾತಾ ಎಂದೂ ಕರೆಯಲಾಗುತ್ತದೆ. ಶೇರ್‍ ಎಂದರೆ ಹಿಂದಿಯಲ್ಲಿ ಹುಲಿ. ಶೇರಾವಾಲಿ ಎಂದರೆ ಹುಲಿಯನ್ನು ಏರಿ ಕುಳಿತಿರುವವಳು ಎಂಬ ಅರ್ಥ ಬರುತ್ತದೆ. ಮುಂದೆ ಓದಿ

  ವೈಷ್ಣೋ ದೇವಿ ದೇವಾಲಯ

  ವೈಷ್ಣೋ ದೇವಿ ದೇವಾಲಯ

  ಹುಲಿಯನ್ನು ಸವಾರಿ ಮಾಡುತ್ತಿರುವ ದೇವಿಯ ಈ ದೇವಾಲಯ ದುರ್ಗಮ ಬೆಟ್ಟದ ತುದಿಯಲ್ಲಿರುವ ಗುಹೆಯಲ್ಲಿದ್ದು ದರ್ಶನಕ್ಕೆ ತಲುಪುವುದು ಅಷ್ಟು ಸುಲಭವಲ್ಲ. ಕೇವಲ ದೇವಿಯ ಪರಿಶುದ್ಧ ಭಕ್ತರು ಮತ್ತು ಸತ್ಯಂತರು ಮಾತ್ರ ಈ ಸ್ಥಳವನ್ನು ತಲುಪಬಲ್ಲರು ಎಂಬ ನಂಬಿಕೆಯಿಂದ ಹೆಚ್ಚಿನ ಜನರು ಈ ಸ್ಥಳವನ್ನು ತಲುಪಲು ಶ್ರಮಿಸುತ್ತಾರೆ.

  ಬದರೀನಾಥ ದೇವಲಯ

  ಬದರೀನಾಥ ದೇವಲಯ

  ಉತ್ತರಖಂಡದ ಚಾಮೋಳಿ ಜಿಲ್ಲೆಯಲ್ಲಿರುವ ಬದರೀನಾಥ ದೇವಾಲಯವೂ ಹಿಂದೂಗಳಿಗೆ ಪವಿತ್ರವಾದ ಚಾರ್ ಧಾಮ್ ಕ್ಷೇತ್ರಗಳಲ್ಲಿ ಒಂದಾಗಿದೆ. ಶಿವನಿಗೆ ಮುಡಿಪಾಗಿರುವ ಈ ದೇವಾಲಯ ಅಲಕನಂದಾ ನದಿಯ ತಟದ ಘಡ್ವಾಲ್ ಬೆಟ್ಟದ ತುದಿಯಲ್ಲಿದೆ. ಮುಂದೆ ಓದಿ

  ಬದರೀನಾಥ ದೇವಲಯ

  ಬದರೀನಾಥ ದೇವಲಯ

  ಗರ್ಭಗುಡಿಯಲ್ಲಿರುವ ಒಂದು ಮೀಟರ್ ಎತ್ತರದ ವಿಷ್ಣುವಿನ ವಿಗ್ರಹ ಸ್ವಯಂ ಉದ್ಭವವಾದ ಒಟ್ಟು ಎಂಟು ವಿಗ್ರಹಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕೆ ಈ ಕ್ಷೇತ್ರವನ್ನು ಸ್ವಯಂ ವ್ಯಕ್ತ ಕ್ಷೇತ್ರ ಎಂದು ಕರೆಯಲಾಗುತ್ತದೆ. ಕಷ್ಟಕರವಾದ ದಾರಿಯಿದ್ದರೂ ವರ್ಷಕ್ಕೆ ದಾಖಲೆಯ ಹತ್ತು ಲಕ್ಷದ ಅರವತ್ತು ಸಾವಿರ ಜನ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

  ಸಿದ್ಧಿ ವಿನಾಯಕ ದೇವಾಲಯ

  ಸಿದ್ಧಿ ವಿನಾಯಕ ದೇವಾಲಯ

  ಮಹಾರಾಷ್ಟ್ರದ ಮುಂಬೈ ನಗರದ ಪ್ರಭಾದೇವಿಯಲ್ಲಿರುವ ಜನನಿಬಿಡ ಸ್ಥಳದಲ್ಲಿರುವ ಸಿದ್ದಿ ವಿನಾಯಕ ದೇವಾಲಯ ವಿನಾಯಕನಿಗೆ ಮುಡಿಪಾದ ದೇವಾಲಯವಾಗಿದೆ. ಗಣೇಶದಲ್ಲಿ ಕೇಳಿಕೊಂಡ ಯಾವುದೇ ಕೋರಿಕೆಯೂ ಇಲ್ಲಿ ಸಿದ್ದಿಸುವುದು ಎಂಬ ನಂಬಿಕೆಯಿಂದಲೇ ಸಿದ್ದಿ ಎಂಬ ಪದದ ಬಳಕೆಯಾಗಿದೆ. ಮುಂದೆ ಓದಿ

  ಸಿದ್ಧಿ ವಿನಾಯಕ ದೇವಾಲಯ

  ಸಿದ್ಧಿ ವಿನಾಯಕ ದೇವಾಲಯ

  1801ರಲ್ಲಿ ಕಟ್ಟಲಾದ ಈ ದೇವಾಲಯಕ್ಕೆ ಬಾಲಿವುಡ್ ನ ಖ್ಯಾತ ನಟ ನಟಿಯರು ಮತ್ತು ಗಣ್ಯರು ಭೇಟಿ ನೀಡಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುವುದು ಈ ದೇವಾಲಯದ ಮಹತ್ವವನ್ನು ಸಾರುತ್ತದೆ.

  ಅಮೃತಸರದ ಚಿನ್ನದ ದೇವಾಲಯ

  ಅಮೃತಸರದ ಚಿನ್ನದ ದೇವಾಲಯ

  ಪಂಜಾಬ್ ರಾಜ್ಯದ ಅಮೃತಸರದಲ್ಲಿರುವ ಚಿನ್ನದ ಮಂದಿರವೆಂದು ಕರೆಯಲಾಗುವ ಈ ಕಟ್ಟಡ ವಾಸ್ತವವಾಗಿ ಒಂದು ಗುರುದ್ವಾರವಾಗಿದೆ. ಸಿಖ್ ಜನಾಂಗದವರಿಗೆ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿರುವ ಈ ಸ್ಥಳ ಕೆರೆಯ ನಟ್ಟ ನಡುವೆ ಇದ್ದು ದೇವಾಲಯದ ಹೊರಗೋಡೆ ಮತ್ತು ಗೋಪುರದ ಚಿನ್ನದ ಹಾಳೆಗಳನ್ನು ಹೊದಿಸಿರುವುದರಿಂದ ಇದಕ್ಕೆ ಚಿನ್ನದ ದೇವಾಲಯವೆಂಬ ಹೆಸರು ಬಂದಿದೆ. ಮುಂದೆ ಓದಿ

  ಅಮೃತಸರದ ಚಿನ್ನದ ದೇವಾಲಯ

  ಅಮೃತಸರದ ಚಿನ್ನದ ದೇವಾಲಯ

  ಸಿಖ್ಖರಿಗೆ ಅತ್ಯಂತ ಪವಿತ್ರವಾದ ಗುರು ಗ್ರಂಥ್ ಸಾಹಿಬ್ ಧರ್ಮಗ್ರಂಥವೂ ಈ ಗುರುದ್ವಾರದಲ್ಲಿದ್ದು ದಿನದ ಅವಧಿಯಲ್ಲಿ ತೆರೆಯಲಾಗುತ್ತದೆ. ರಾತ್ರಿ ಇದನ್ನು ಸುರಕ್ಷಿತವಾಗಿರಿಸುವ ಪ್ರಕ್ರಿಯೆಗೆ ಸುಖಾಸನ ಎಂದು ಕರೆಯಲಾಗುತ್ತದೆ. ಪ್ರತಿದಿನ ಮುಂಜಾವಿನ ಮೂರು ಘಂಟೆಗೇ ತೆರೆಯಲಾಗುವ ಈ ಗುರುದ್ವಾರಕ್ಕೆ ವಾರ್ಷಿಕ ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ.

  ಸಾಯಿ ಬಾಬಾ ದೇವಾಲಯ

  ಸಾಯಿ ಬಾಬಾ ದೇವಾಲಯ

  ಹಿಂದೂ ಮತ್ತು ಮುಸ್ಲಿಮರಿಂದ ಸಮಾನವಾಗಿ ಪ್ರವಾದಿ ಎಂದು ಪರಿಗಣಿಸಲ್ಪಟ್ಟ ಸಾಯಿ ಬಾಬಾರ ದೇವಾಲಯವಾದ ಶಿರ್ಡಿಯ ಸಾಯಿ ಬಾಬಾ ದೇವಾಲಯ ಎರಡೂ ಪಂಗಡಗಳ ನೆಚ್ಚಿನ ಯಾತ್ರಾಸ್ಥಳವಾಗಿದೆ. ಸಾಯಿ ಬಾಬಾ ಹದಿನಾರು ವರ್ಷದವರಿದ್ದಾಗ ತಪಸ್ಸು ಮಾಡಿದ್ದರೆಂದು ನಂಬಲಾದ ಬೇವಿನ ಮರವೂ ಧಾರ್ಮಿಕ ಮಹತ್ವ ಪಡೆದಿದೆ. ಮುಂದೆ ಓದಿ

  ಸಾಯಿ ಬಾಬಾ ದೇವಾಲಯ

  ಸಾಯಿ ಬಾಬಾ ದೇವಾಲಯ

  ಇದರ ಶಾಖೆಯೊಂದು ಸಾಯಿ ಬಾಬಾರಿಗೆ ನೆರಳು ನೀಡಿತ್ತೆಂಬ ಕಾರಣದಿಂದ ಈ ರೆಂಬೆಯ ಎಲೆಗಳು ಸಿಹಿಯಾಗಿದೆ ಎಂದೂ ಉಳಿದ ರೆಂಬೆಗಳ ಎಲೆಗಳು ಕಹಿಯಾಗಿವೆ ಎಂದೂ ಜನರು ನಂಬುತ್ತಾರೆ. ಈ ಮರ ಇಂದಿಗೂ ಜೀವಂತವಿದ್ದು ಭಕ್ತರು ಎಲೆಗಳನ್ನು ಸೇವಿಸಲು ಉತ್ಸುಕರಾಗಿರುತ್ತಾರೆ.

  ಶಬರಿಮಲೆ ದೇವಾಲಯ

  ಶಬರಿಮಲೆ ದೇವಾಲಯ

  ಕೇರಳದ ಶಬರಿಮಲೈಯಲ್ಲಿರುವ ಈ ದೇವಾಲಯ ಅಯ್ಯಪ್ಪ ಸ್ವಾಮಿಗೆ ಮುಡಿಪಾದ ದೇವಾಲಯವಾಗಿದೆ. ಶಿವ ಮತ್ತು ವಿಷ್ಣುವಿನ ಏಕಮಾತ್ರ ಹೆಣ್ಣು ಅವತಾರವಾದ ಮೋಹಿನಿನ ಸಂಗದಿಂದ ಜನಿಸಿದ ಅಯ್ಯಪ್ಪಸ್ವಾಮಿಗೆ ಹರಕೆ ಹೊತ್ತು ವರ್ಷಕ್ಕೊಂದು ಬಾರಿಯ ಮೇಳದಲ್ಲಿ ಭಾಗವಹಿಸುವುದರಿಂದ ಪಾಪಗಳಿಂದ ಮುಕ್ತಿ ದೊರಕುತ್ತದೆ ಎಂದು ಭಕ್ತರು ನಂಬುತ್ತಾರೆ. ಪ್ರತಿ ವರ್ಷ ಮೂರು ಕೋಟಿಗೂ ಹೆಚ್ಚು ಭಕ್ತರು ಭೇಟಿ ನೀಡುವುದೇ ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

  ಅಮರನಾಥ ಗುಹಾಲಯ

  ಅಮರನಾಥ ಗುಹಾಲಯ

  ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಅಮರನಾಥ ದೇವಾಲಯ ವಾಸ್ತವವಾಗಿ ನೈಸರ್ಗಿಕ ಗುಹೆಯಾಗಿದ್ದು ಅಮರನಾಥ ಗುಹಾಲಯವೆಂದೇ ಪ್ರಸಿದ್ಧವಾಗಿದೆ. ಶ್ರೀನಗರದದಿಂದ 141 ಕಿ.ಮೀ ದೂರವಿದ್ದು 3,888 ಮೀಟರ್ ಎತ್ತರಕ್ಕಿರುವ ಈ ಗುಹೆಯನ್ನು ತಲುಪುವುದು ಅಷ್ಟು ಸುಲಭವಲ್ಲ. ಈ ಗುಹೆಯೊಳಗೆ ಪ್ರತಿವರ್ಷ ಹಿಮ ಸಂಗ್ರಹವಾಗುತ್ತಾ ಶಿವಲಿಂಗದ ರೂಪ ತಳೆಯುತ್ತದೆ.

  ಅಮರನಾಥ ಗುಹಾಲಯ

  ಅಮರನಾಥ ಗುಹಾಲಯ

  ಪೂರ್ಣವಾದ ಈ ಶಿವಲಿಂಗ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹಿಂದೂಗಳಿಗೆ ಅತಿ ಪವಿತ್ರವಾದ ಈ ಸ್ಥಾನ ವಾಸ್ತವವಾಗಿ ಮುಸ್ಲಿಂ ಕುರುಬನೊಬ್ಬ ಪ್ರಥಮವಾಗಿ ನೋಡಿದ್ದ. ಅಂದಿನಿಂದ ಬೇಸಿಗೆಯ ಕೆಲವು ದಿನ ಮಾತ್ರ ತೆರೆದಿರುವ ಈ ಕ್ಷೇತ್ರಕ್ಕೆ 2011ರಲ್ಲಿ ಗರಿಷ್ಟ 6,34,000 ಭಕ್ತರು ಭೇಟಿ ನೀಡಿದ್ದರು.

  ರಾಮೇಶ್ವರಂ ದೇವಾಲಯ

  ರಾಮೇಶ್ವರಂ ದೇವಾಲಯ

  ತಮಿಳುನಾಡು ರಾಜ್ಯದ ಭೂಪಟ ನೋಡಿದರೆ ಸೂಜಿಯಂತೆ ಒಂದು ಭಾಗ ಶ್ರೀಲಂಕಾದತ್ತ ಚಾಚಿದ್ದು ಆ ಮುಳ್ಳಿನ ತುತ್ತ ತುದಿಯಲ್ಲಿರುವ ರಾಮೇಶ್ವರಂನಲ್ಲಿರುವ ಶಿವನ ದೇವಾಲಯ ಒಂದು ಜ್ಯೋತಿರ್ಲಿಂಗವಿರುವ ದೇವಾಲಯವಾಗಿದೆ. ಇಡಿಯ ವಿಶ್ವದಲ್ಲಿ ಒಟ್ಟು ಹನ್ನೆರಡು ಜ್ಯೋತಿರ್ಲಿಂಗಗಳಿದ್ದು ಇದರಲಿ ರಾಮೇಶ್ವರಂ ದೇವಾಲಯ ಪ್ರಮುಖವಾಗಿದೆ. ರಾಮಾಯಣದ ಪ್ರಕಾರ ಲಂಕೆಯ ಯುದ್ಧದ ಸಮಯದಲ್ಲಿ ಬ್ರಾಹ್ಮಣನೊಬ್ಬನನ್ನು ವಧಿಸಿದ ಪಾಪದಿಂದ ಮುಕ್ತಿ ಪಡೆಯಲು ಶಿವನಲ್ಲಿ ಪ್ರಾರ್ಥಿಸಲು ಈ ಸ್ಥಳವನ್ನು ಆಯ್ದುಕೊಂಡಿದ್ದ ಎಂದು ನಂಬಲಾಗಿದೆ.

  Photo Courtesy: Vishnukiran L.S Rameswaram temple

  English summary

  Top Famous and Miraculous Tempes in India

  India is literally stuffed with sacred temples. The number of holy places in India is very high. However, some temples have been blessed with incredible fame and the devotees have blind faith in deities that reside in these temples.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more