For Quick Alerts
ALLOW NOTIFICATIONS  
For Daily Alerts

ನವರಾತ್ರಿ ಹಬ್ಬದ ವಿಶೇಷ: ಚಂದ್ರಘಂಟ ದೇವಿಯ ಆರಾಧನೆ

By Jaya Subramanya
|

ನವರಾತ್ರಿಯ ಮೂರನೇ ದಿನವು ದೇವತೆ ಚಂದ್ರಘಂಟನಿಗೆ ಮೀಸಲಾಗಿದೆ. ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟನನ್ನು ನವರಾತ್ರಿಯ ಮೂರನೇ ದಿನ ಪೂಜಿಸಲಾಗುತ್ತದೆ. ದುರ್ಗಾ ಮಾತೆಯ ರೌದ್ರ ಸ್ವರೂಪವೆಂಬುದಾಗಿ ಕೂಡ ಚಂದ್ರಘಂಟನನ್ನು ಕರೆಯಲಾಗುತ್ತದೆ. ಕೆಟ್ಟ, ದುಷ್ಟ ಶಕ್ತಿಗಳಿಗೆ ಸಿಂಹಸ್ವಪ್ನವಾಗಿ ಚಂದ್ರಘಂಟ ಅವತಾರವು ಅಸುರ ಶಕ್ತಿಯನ್ನು ಬೆಚ್ಚಿಬೀಳಿಸುತ್ತದೆ.

ಕೆಟ್ಟವರಿಗೆ ಭಯಾನಕವಾಗಿರುವ ಚಂದ್ರಘಂಟ ಮಾತೆಯು ತನ್ನ ಭಕ್ತರಿಗೆ ಅಭಯಹಸ್ತೆಯಾಗಿದ್ದಾರೆ. ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿಯಾಗಿದ್ದಾರೆ. ಇಂದಿನ ಲೇಖನದಲ್ಲಿ ವಿಶೇಷವಾಗಿ ಚಂದ್ರಘಂಟ ಸ್ವರೂಪಿಯ ಕುರಿತು ಮತ್ತಷ್ಟು ಸುದ್ದಿಗಳನ್ನು ಅರಿತುಕೊಳ್ಳೋಣ.

Goddess Chandraghanta

ಚಂದ್ರಘಂಟ ದೇವತೆಯ ಉದ್ಭವ

ಚಂದ್ರಘಂಟ ದೇವತೆಯು ಮೂರು ಕಣ್ಣುಗಳು ಮತ್ತು ಹತ್ತು ಕೈಗಳನ್ನು ಹೊಂದಿದ್ದಾರೆ. ತನ್ನ ಪ್ರತಿಯೊಂದು ಕೈಗಳಲ್ಲಿ ಕೂಡ ಆಯುಧಗಳನ್ನು ಈಕೆ ಹೊಂದಿದ್ದಾರೆ. ಅಂತೆಯೇ ಉಳಿದ ಎರಡು ಕೈಗಳಿಂದ ಅಭಯವನ್ನು ನೀಡುತ್ತಿದ್ದಾರೆ. ಸಿಂಹದ ಮೇಲೆ ಈಕೆ ಆಸೀನರಾಗಿದ್ದಾರೆ. ಆಕೆಯ ವಾಹನದಿಂದಲೇ ಆಕೆ ಎಷ್ಟೊಂದು ಧೈರ್ಯವಂತಳು ಮತ್ತು ಸಾಹಸಪ್ರಿಯರು ಎಂಬುದರ ಅರಿವಾಗುತ್ತದೆ.

ಮಾತೆಯ ಹೆಸರು

ಚಂದ್ರಘಂಟ ಎಂಬ ಹೆಸರು ಎರಡು ಹೆಸರುಗಳಿಂದ ಕೂಡಿದೆ. ಚಂದ್ರ ಎಂಬುದು ಚಂದ್ರನನ್ನು ಸೂಚಿಸುತ್ತಿದ್ದರೆ, ಘಂಟ ಎಂಬುದು ಘಂಟೆಯನ್ನು ತಿಳಿಸುತ್ತಿದೆ. ಆಕೆಯ ತಲೆಯಲ್ಲಿರುವ ಅರ್ಧಚಂದ್ರನು ಘಂಟೆಯ ಆಕಾರದಲ್ಲಿದೆ ಎಂಬುದನ್ನು ಇದು ಸೂಚಿಸುತ್ತಿದೆ. ಈ ಘಂಟೆಯು ಕೆಟ್ಟದ್ದನ್ನು ಮಾಡುವವರಿಗೆ ಎಚ್ಚರಿಕೆಯನ್ನು ನೀಡುತ್ತಿದೆ. ಅಂತೆಯೇ ಘಂಟಾನಾದವು ಭಕ್ತರಿಗೆ ಮಾತೆಯಿಂದ ರಕ್ಷಣೆಯನ್ನು ಸೂಚಿಸುತ್ತಿದೆ.

Goddess Chandraghanta

ಚಂದ್ರಘಂಟ ದೇವಿಯ ಕಥೆ

ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾ ಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಪಾರ್ವತಿ ದೇವಿಯು ಕಠಿಣವಾದ ತಪ್ಪಸ್ಸನ್ನು ಮಾಡಿ ಶಿವನು ತನ್ನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ತನ್ನ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾರೆ. ಆ ಸಂದರ್ಭದಲ್ಲಿ ಶಿವನು ಅತಿ ಭಯಂಕರನಾಗಿ ಕಾಣುತ್ತಿದ್ದರು. ಶಿವನನ್ನು ನೋಡಿ ಪಾರ್ವತಿಯ ತಾಯಿ ಮೂರ್ಛೆ ತಪ್ಪುತ್ತಾರೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷರಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾರೆ. ಹೀಗೆ ಶಿವನು ಸುಂದರ ವರನ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೀಗೆ ಶಿವ ಪಾರ್ವತಿ ವಿವಾಹ ನೆರವೇರುತ್ತದೆ.

Goddess Chandraghanta

ನವರಾತ್ರಿಯ ಮೂರನೇ ದಿನದ ಮಹತ್ವ

ನವರಾತ್ರಿ ಸಮಯದಲ್ಲಿ ಯೋಗ ಮತ್ತು ತಂತ್ರ ಮಂತ್ರಗಳು ಸಕ್ರಿಯಗೊಳ್ಳುತ್ತವೆ. ಮಾತೆ ಚಂದ್ರಘಂಟನಿಗೆ ಯೋಗಿಗಳು ಪೂಜೆಯನ್ನು ನಡೆಸಿ ಮಣಿಪುರ ಚಕ್ರವನ್ನು ಎಚ್ಚರಿಸುತ್ತಾರೆ. ಈ ಚಕ್ರವು ಸಕ್ರಿಯಗೊಂಡಾಗ ಸುತ್ತಲಿನ ವಾತಾವರಣ ಆಧ್ಯಾತ್ಮದಿಂದ ಕಂಗೊಳಿಸುತ್ತದೆ ಮತ್ತು ಒಂದು ರೀತಿಯ ರಕ್ಷಾ ಕವಚ ರೂಪುಗೊಳ್ಳುತ್ತದೆ. ಸಾಧಕರು ಮತ್ತು ಯೋಗಾಭ್ಯಾಸವನ್ನು ನಡೆಸುವವರು ಈ ಸಮಯದಲ್ಲಿ ಎಚ್ಚರಿಕೆಯಿಂದ ಇದ್ದು ಮಾತೆಯ ಪೂಜೆಯನ್ನು ಶ್ರದ್ಧೆಯಿಂದ ಮಾಡಬೇಕು.

Goddess Chandraghanta

ಮೂರನೆಯ ದಿನದ ಗ್ರಹಗತಿ

ನವರಾತ್ರಿಯ ಮೂರನೆ ದಿನ ಶುಕ್ರನ ಅಧಿಪತ್ಯ ನಡೆಯುತ್ತದೆ. ಚಂದ್ರಘಂಟ ಮಾತೆಯ ಪೂಜೆ ಮತ್ತು ಶುಕ್ರ ಗ್ರಹದ ಆರಾಧನೆಯಿಂದ ಜೀವನದಲ್ಲಿರುವ ಸರ್ವ ಕಷ್ಟಗಳು ನಿವಾರಣೆಯಾಗುತ್ತವೆ.

English summary

Things You Need To Know About Goddess Chandraghanta

The third day of the festivities is dedicated to Goddess Chandraghanta. The Goddess Chandraghanta is the married form of the Mother Goddess, Goddess Durga. The Goddess Chandraghanta is one among the 'Raudra' forms of Mother Durga. She appears as a horrific and a fear-inducing form to the evil and wicked of the mind. Her name alone can instill terror into the minds of the Asuras and those who terrorize the simple-minded devotees. But to her devotees, she appears to be benevolent and loving.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more