For Quick Alerts
ALLOW NOTIFICATIONS  
For Daily Alerts

ವಿಷಕಾರುವ, ಹೊಟ್ಟೆಕಿಚ್ಚಿನ ಜನರ ದೂರವಿಟ್ಟರೆ ನಮ್ಮ ಜೀವನದಲ್ಲಿ ಹೀಗೆಲ್ಲಾ ಸಂಭವಿಸುತ್ತೆ!

|

ನಮ್ಮ ಜೀವನದಲ್ಲಿ ಒಳ್ಳೆಯವರು ಕೆಟ್ಟವರು ಬಂದು ಹೋಗುತ್ತಾರೆ. ಒಳ್ಳೆಯವರು ಒಳ್ಳೆಯ ಹಾಗೂ ಸವಿ ನೆನಪನ್ನು ಕೊಟ್ಟರೆ. ಕೆಟ್ಟವರು ಕೆಟ್ಟ ಹಾಗೂ ಕಹಿ ನೆನಪನ್ನು ನೀಡುತ್ತಾರೆ. ಹೀಗೆ ಕೆಟ್ಟದು ಅಥವಾ ಒಳ್ಳೆಯವರನ್ನು ಆಯ್ಕೆ ಮಾಡಿಕೊಳ್ಳುವುದು ಹಾಗೂ ಬಿಡುವುದು ನಮ್ಮ ಕೈಯಲ್ಲೇ ಇರುತ್ತದೆ. ಇದು ಕೇವಲ ಪ್ರೀತಿಗೆ ಮಾತ್ರ ಸಂಬಂಧಪಟ್ಟ ವಿಷಯ ಅಲ್ಲ ಸ್ನೇಹಕ್ಕೂ ಸಂಬಂಧಪಟ್ಟದ್ದು.

ಹೌದು, ನಾವು ಒಬ್ಬರನ್ನು ಪ್ರೀತಿಸುತ್ತೇವೆ ಆದರೆ ಅವರು ಎಲ್ಲದಕ್ಕೂ ನೆಗೆಟಿವ್ ಆಗಿ ಮಾತನಾಡಿದರೆ ನಮಗೆ ನಿಜಕ್ಕೂ ಬೇಸರ ಅನಿಸಿಬಿಡುತ್ತೆ. ಮನಸ್ಸಲ್ಲಿ ಅದೆಂತ ವಿಷ ತುಂಬಿಕೊಂಡಿದ್ದಾರೆ ಅನಿಸಿಬಿಡುತ್ತೆ ಅಲ್ವಾ. ಹಾಗೇ ನಮ್ಮ ಸ್ನೇಹಿತರು ಕೂಡ ಈ ರೀತಿಯ ವಿಷ ಮನಸ್ಸು ಹೊಂದಿದ್ದರೆ ಅವರ ನಡವಳಿಕೆ ನಮಗೆ ನೋವು ತರುತ್ತದೆ. ಅವರನ್ನು ಸ್ನೇಹದ ಮುಂದೆ ಕೆಲವೊಂದುಬಾರಿ ಸೋತು ಅವರನ್ನು ಬಿಟ್ಟು ಬಿಡಲು ನಿಮಗೆ ಮನಸು ಬರುವುದಿಲ್ಲ. ಆದರೆ ನಾವು ಹೇಳುವ ಈ ಸ್ಟೋರಿ ಓದಿ. ಇಂತಹ ವಿಷಕಾರಿ ಜನರಿಂದ ದೂರವಾದ್ರೆ ನಿಮ್ಮ ಜೀವನ ಸುಖಿಯಾಗಿರುತ್ತೆ. ಈ ಎಲ್ಲಾ ಕೆಳಗಿನ ವಿಚಾರ ನಿಮ್ಮ ಜೀವನದಲ್ಲಿ ನಡೆಯುತ್ತದೆ.

ನಿಮ್ಮ ಜೀವನ ಅಂತ್ಯವಾಗೋದಿಲ್ಲ!

ನಿಮ್ಮ ಜೀವನ ಅಂತ್ಯವಾಗೋದಿಲ್ಲ!

ನಮ್ಮ ಸ್ನೇಹಿತರು ಅಥವಾ ನಮ್ಮ ಸಂಗಾತಿಯ ನೈಜ ಸ್ವರೂಪ ತಿಳಿದಾಗ ನಿಮ್ಮ ಜೀವನ ಅಲ್ಲೋಲಕಲ್ಲೋಲವಾಗುತ್ತದೆ. ಅವರನ್ನು ಬಿಡಬೇಕು ಎಂದು ಅನೇಕ ಬಾರಿ ಯೋಚನೆ ಮಾಡಿದರೂ ಮನಸ್ಸು ಕೇಳುವುದಿಲ್ಲ. ಇಂತಹ ಸಂಗಾತಿ ಅಥವಾ ಸ್ನೇಹಿತರನ್ನು ಬಿಟ್ಟರೆ ಭವಿಷ್ಯದ ಜೀವನ ಹೇಗೆ, ಮತ್ತೆ ಸ್ನೇಹಿತರು ಅಥವಾ ಸಂಗಾತಿ ಸಿಗುತ್ತಾರಾ ಎಂದು ಯೋಚನೆ ಮಾಡುತ್ತಾರೆ. ಆದ್ರೆ ಒಂದು ಬಾರಿ ಇಂತಹ ಜನರಿಂದ ಹೊರಗೆ ಬನ್ನಿ ನಿಮಗೆ ನೈಜ ಜೀವನದ ಸುಖ ಗೊತ್ತಾಗುತ್ತೆ. ಹೊಸ ಜೀವನ ತೆರೆದಾಗ ಇಷ್ಟು ದಿನ ನಾವು ಇಂತಹ ವಿಷಕಾರಿ ಜನರೊಂದಿಗೆ ಇದ್ವಿ ಅನ್ನೋದನ್ನ ಯೋಚನೆ ಮಾಡಿದರೆ ನಿಮಗೆ ಸಿಟ್ಟು ಬರಬಹುದು. ಯಾಕೆಂದರೆ ಹೊಸ ಜೀವನ ನಿಮಗೆ ಜೀವನ ಅಂತ್ಯವಾಗಿಲ್ಲ ಅಂತ ತೋರಿಸುತ್ತೆ. ಅವರಿಲ್ಲದೆ ನೀವು ಬದುಕಬಹುದು ಎಂದು ಹೇಳುತ್ತದೆ. ಲೈಫ್ ಈಸ್ ಬ್ಯೂಟಿಫುಲ್ ವೆನ್ ಟಾಕ್ಸಿಕ್ ಪೀಪಲ್ ಔಟ್ ಫ್ರಂಮ್ ಮೈ ಲೈಫ್ ಅಂತ ಅನಿಸಿಬಿಡುತ್ತೆ. ಈ ನಷ್ಟದ ನಂತರ ನೀವು ನಿಮ್ಮ ಜೀವನವನ್ನು ಮರುನಿರ್ಮಾಣ ಮಾಡಬಹುದು ಎಂದು ನೀವು ಶೀಘ್ರದಲ್ಲೇ ಅರಿತುಕೊಳ್ಳುತ್ತೀರಿ.

ಡ್ರಾಮಾದಿಂದ ನಿಮಗೆ ಮುಕ್ತಿ!

ಡ್ರಾಮಾದಿಂದ ನಿಮಗೆ ಮುಕ್ತಿ!

ವಿಷಕಾರಿ ಮನಸ್ಸುಗಳುಳ್ಳ ಜನರು ಯಾವಾಗಲೂ ನಾಟಕವನ್ನು ಇಷ್ಟಪಡುತ್ತಾರೆ. ಅಂದರೆ ನಿಮ್ಮ ಮುಂದೆ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಹೇಳುತ್ತಾಲೆ ದೊಡ್ಡ ಡ್ರಾಮವನ್ನೇ ಮಾಡುತ್ತಾರೆ. ಉದಾಹರಣೆಗೆ ಇಂತಹ ಮನಸ್ಥಿತಿಯುಳ್ಳ ವ್ಯಕ್ತಿಅ ಚಿಕ್ಕದೊಂದು ಅಪಘಾತ ಸಂಭವಿಸುತ್ತದೆ. ಆದರೆ ಆ ವ್ಯಕ್ತಿ ನಿಮ್ಮ ಮುಂದೆ ಡ್ರಾಮಾ ಮಾಡುತ್ತ. ಸಣ್ಣ ವಿಷಯವನ್ನು ದೊಡ್ಡದಾಗಿ ಬಿಂಬಿಸುತ್ತಾರೆ. ಅಷ್ಟಕ್ಕೇ ಸಾಲದೆ ನಿಮ್ಮ ತಲೆಯನ್ನೂ ಅವರು ಬದಲಿಸಿ ಬಿಡುತ್ತಾರೆ. ನಿಮ್ಮ ಯೋಚನೆಯೂ ಬದಲಾಗುತ್ತೆ. ಕಾಳಜಿಯಿಂದ ಇಂತಹ ವಿಚಾರಗಳಲ್ಲಿ ನೀವು ಸಲಹೆ ಕೊಟ್ಟರೆ ಅದಕ್ಕೆ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಅದು ಬಿಟ್ಟು ಎಲ್ಲಾ ರೀತಿಯ ಡ್ರಾಮಾ ಮಾಡುತ್ತಿರುತ್ತಾರೆ. ಸಮಸ್ಯೆಗಳನ್ನು ಮುಗಿಸಲು ಅವರು ಇಷ್ಟಪಡುವುದಿಲ್ಲ. ಇದು ನಿಮಗೂ ತಲೆಬಿಸಿ ಉಂಟು ಮಾಡುತ್ತದೆ. ಹೀಗೆ ಇಂತಹ ವಿಷಕಾರಿ ಜನರಿಂದ ದೂರವಿದ್ದರೆ ಸಣ್ಣ ಸಣ್ಣ ವಿಷಯಗಳಿಗೆ ಹೈಡ್ರಾಮಾ ಮಾಡುವವರಿಂದ ದೂರವಿದ್ದು. ಪೀಸ್ ಫುಲ್ ಲೈಫ್ ಲೀಡ್ ಮಾಡಬಹುದಾಗಿದೆ.

ಒತ್ತಡ ಅನುಭವಿಸುವುದಿಲ್ಲ!

ಒತ್ತಡ ಅನುಭವಿಸುವುದಿಲ್ಲ!

ವಿಷಕಾರಿ ಜನರನ್ನು ಭಾವನಾತ್ಮಕ ರಕ್ತಪಿಶಾಚಿಗಳು ಎಂದೂ ಕರೆಯುತ್ತಾರೆ ಯಾಕೆಂದರೆ ಕೆಲವೊಂದು ಭಾವನಾತ್ಮಕ ವಿಚಾರಗಳ ಮೂಲಕ ನಿಮ್ಮ ರಕ್ತವನ್ನು ಅವರು ಹೀರುತ್ತಾರೆ. ಹೌದು, ಈ ವಿಷಕಾರಿ ತುಂಬಿದ ಜನರು ಕೆಲವೊಂದ್ಯ್ ವಿಚಾರದಲ್ಲಿ ನಿಮ್ಮನ್ನು ಅತೀ ಕೀಳಾಗಿ ಅವರು ನೋಡಬಹುದು. ನಿಮ್ಮನ್ನು ಅಪಹಾಸ್ಯ ಮಾಡಬಹುದು. ಅಲ್ಲದೇ ಬೇರೆಯವರ ಬಗ್ಗೆ ಕೆಟ್ಟದು ಮಾತನಾಡಿ ನಿಮ್ಮ ತಲೆಯನ್ನು ಹಾಳು ಮಾಡಬಹುದು. ಇಂತಹ ಮಾತುಗಳಿಂದ ನೀವು ಒತ್ತಡವನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ವಿಷಕ್ಕಿಂತ ವಿಷಕಾರಿ ಜನಗಳು ಡೇಂಜರ್ ಎನ್ನುತ್ತಾರೆ. ಹೀಗೆ ನೀವು ವಿಷಕಾರಿ ಜನಗಳಿಂದ ಬೆರೆತರೆ ನೀವು ಖಿನ್ನತೆ ಒತ್ತಡ ಹೆಚ್ಚು ಮಾಡಿಕೊಳ್ಳಬಹುದೇ ವಿನಃ ಅದರಿಂದ ಏನು ಲಾಭವಿಲ್ಲ. ಹೀಗೆ ನೀವು ಇಂತಹ ಜನಗಳಿಂದ ದೂರ ಇದ್ದರೆ ನಿಮ್ಮ ಒತ್ತಡ ದೂರವಾಗುತ್ತದೆ. ಹೃದಯ ಹಾಯಾಗಿ ಇರುತ್ತದೆ.

ನೀವು ಹೆಚ್ಚಿನ ಶಕ್ತಿ ಪಡೆಯುತ್ತೀರಿ!

ನೀವು ಹೆಚ್ಚಿನ ಶಕ್ತಿ ಪಡೆಯುತ್ತೀರಿ!

ನೀವು ಇಂತಹ ಟಾಕ್ಸಿಕ್ ಜನರೊಂದಿಗೆ ಇದ್ದರೆ ನೀವು ಯಾವುದೇ ಕೆಲಸಗಳು ಮಾಡಲು ಹೊರಟರು ಅದಕ್ಕೆ ಅವರು ತಡೆಯಂತೆ ನಿಲ್ಲುತ್ತಾರೆ. ಅದು ಮಾಡಬೇಡ, ಅದು ವೇಸ್ಟ್ ಹಾಗೇ ಹೀಗೆ ಹೇಳಿ ನಿಮ್ಮ ತಲೆಯಲ್ಲಿ ನೆಗೆಟಿವಿಟಿ ತುಂಬಿರುತ್ತಾರೆ. ಆದ್ರೆ ನೀವು ಅಂತಹ ಜನರಿಂದ ದೂರವಿದ್ದರೆ ಹೊಸ ಹೊಸ ಅಲೋಚನೆಗಳನ್ನು ಮಾಡುತ್ತೀರಿ. ಯಾವುದೇ ಹೊಸ ಕೆಲಸಗಳನ್ನು ಮಾಡುವಾಗ ನೀವು ಹೆಚ್ಚು ಶಕ್ತಿ ಪಡೆಯುತ್ತೀರಿ. ಅಲ್ಲದೇ ಉತ್ಸಾಹದಿಂದ ಮಾಡುತ್ತೀರಿ. ಹೀಗಾಗಿ ನಿಮ್ಮ ಕೆಲಸ ನೂರು ಪ್ರತಿಶತ ಯಶಸ್ವಿಯಾಗುತ್ತದೆ.

ಜೀವನವನ್ನು ನೀವು ಸಖತ್ ಎಂಜಾಯ್ ಮಾಡ್ತೀರಾ!

ಜೀವನವನ್ನು ನೀವು ಸಖತ್ ಎಂಜಾಯ್ ಮಾಡ್ತೀರಾ!

ನೀವು ಅಂತಿಮವಾಗಿ ನಕಾರಾತ್ಮಕತೆಯಿಂದ ಹೊರಬಂದಾಗ. ನೀವು ಭರವಸೆಯೊಂದಿಗೆ ಜೀವನವನ್ನು ಮುಂದುವರಿಸುತ್ತೀರಿ. ವೈಫಲ್ಯಗಳು ಅಥವಾ ನಿರಾಶೆಗಳು ಸಹ ನಿಮ್ಮನ್ನು ಅಲುಗಾಡಿಸುವುದಿಲ್ಲ ಏಕೆಂದರೆ ಈಗ ನೀವು, ನೀವು ಬಯಸಿದಂತೆ ನಿಮ್ಮ ನಿಯಮಗಳ ಪ್ರಕಾರ ನಿಮ್ಮ ಜೀವನವನ್ನು ನಡೆಸುತ್ತೀರಿ ಎಂಬ ಅರಿವು ನಿಮಗೆ ಮೂಡುತ್ತದೆ. ಇಲ್ಲಿ ನೆಗೆಟಿವಿಟಿ ತುಂಬಲೂ ಅಥವಾ ಮಧ್ಯ ಮೂಗುತುರಿಸಲು ಯಾರು ಇಲ್ಲ ಎಂಬ ಅರಿವು ನಿಮ್ಮನ್ನು ತುಂಬಾನೇ ಖುಷಿಪಡಿಸುತ್ತದೆ. ಅಲ್ಲದೇ ನೀವು ಏನು ಮಾಡುತ್ತಿದ್ದೀರಿ ಎಂಬುದರ ಮೌಲ್ಯವನ್ನು ನೀವು ಅರಿಯುತ್ತೀರಿ. ನೀವು ಮಾಡುವ ದೊಡ್ಡ ಅಥವಾ ಸಣ್ಣ ಕೆಲಸವೇ ಆಗಲಿ ನಿಮ್ಮದೇ ಯೋಚನೆಯಿಂದ ಆಗಿರುವುದರಿಂದ ಅದು ನಿಮ್ಮನ್ನು ಹೆಚ್ಚು ಆನಂದವಾಗುವಂತೆ ಮಾಡುತ್ತದೆ. ಅಲ್ಲದೇ ಮುಂದಿನ ದಿನಗಳಲ್ಲಿ ನೀವು ಸಂತೋಷವಾಗಿರಲು ಮತ್ತು ಕೃತಜ್ಞರಾಗಿರಲು ಸಾಕಷ್ಟು ವಿಷಯಗಳನ್ನು ಕಂಡುಕೊಳ್ಳಲು ನಿಮ್ಮ ಮನಸ್ಸು ತುಡಿಯುತ್ತೆ. ಏಕೆಂದರೆ ಯಾವುದಾದರೂ ಒಳ್ಳೆಯದರಲ್ಲಿ ಕೆಟ್ಟದ್ದನ್ನು ತೋರಿಸಲು ಆ ವಿಷಕಾರಿ ಜನರು ಅಥವಾ ವ್ಯಕ್ತಿ ನಿಮ್ಮ ಜೊತೆ ಇರುವುದಿಲ್ಲ.

ನಿಮ್ಮ ಸ್ವಾಭಿಮಾನ ಮತ್ತು ನಿಮ್ಮ ಮೌಲ್ಯವನ್ನು ನೀವು ಮರಳಿ ಪಡೆಯುತ್ತೀರಿ!

ನಿಮ್ಮ ಸ್ವಾಭಿಮಾನ ಮತ್ತು ನಿಮ್ಮ ಮೌಲ್ಯವನ್ನು ನೀವು ಮರಳಿ ಪಡೆಯುತ್ತೀರಿ!

ವಿಷಕಾರಿ ಜನರಿಂದ ಬರುವ ವಿಷವು ನಿಮ್ಮ ಸ್ವಾಭಿಮಾನವನ್ನು ಕುಗ್ಗಿಸಿರಬಹುದು, ಆದರೆ ಒಮ್ಮೆ ಅವರು ನಿಮ್ಮ ಜೀವನದಲ್ಲಿ ಇಲ್ಲವಾದರೆ, ನೀವು ಕಳೆದುಕೊಂಡಿದ್ದನ್ನು ನೀವು ಮರಳಿ ಪಡೆಯುತ್ತೀರಿ. ನೀವು ಹೊಸ ವಿಷಯಗಳನ್ನು ಮಾಡಲು ಮುಂದಾದಾಗ ಈ ವೇಳೆ ಮತ್ತೆ ನಿಮ್ಮ ಸಾಮಾರ್ಥ್ಯ, ನಿಮ್ಮ ಸ್ವಾಭಿಮಾನ, ನಿಮ್ಮ ಮೌಲ್ಯವನ್ನು ನೀವು ಅರಿಯುತ್ತೀರಿ. ಯಾಕೆಂದರೆ ಈಗ ನಿನಗೆ ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಜನರು ನಿಮ್ಮ ಜೊತೆ ಇರುವುದಿಲ್ಲ. ಈ ಕೆಲಸ ನನಗೆ ಮಾಡಲು ಆಗುತ್ತದೆ ಎಂದು ಸ್ವಾಭಿಮಾನದಿಂದ ನೀವು ಹೇಳುತ್ತೀರಿ.

ನಿಮ್ಮ ಮೌಲ್ಯವೂ ನಿಮಗೆ ತಿಳಿಯುತ್ತದೆ.

ನೀವು ಇತರ ಜನರೊಂದಿಗೆ ಮರುಸಂಪರ್ಕವನ್ನು ಪಡೆಯುತ್ತೀರಿ!

ನೀವು ಇತರ ಜನರೊಂದಿಗೆ ಮರುಸಂಪರ್ಕವನ್ನು ಪಡೆಯುತ್ತೀರಿ!

ನೀವು ವಿಷಕಾರಿ ಜನಗಳೊಂದಿಗೆ ಇದ್ದರೆ ಅವರು ಹೇಳುವ ಸುಳ್ಳು, ಗಾಸಿಪ್ ಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುತ್ತೀರಿ. ಅವರ ಹೇಳುವ ಜಗತ್ತಿನೊಳಗೆ ಜೀವಿಸುತ್ತಿರುತ್ತೀರಿ. ನೀವು ಅವರಿಂದ ಸಂಪರ್ಕ ಕಡಿತಗೊಂಡು ಹೊರಗೆ ಬಂದಾಗ ನೀವು ಬೇರೆ ಜನರೊಂದಿಗೆ ಬೆರೆಯಲು ಆರಂಭಿಸುತ್ತೀರಿ. ಅವರೊಂದಿಗೆ ಮರು ಸಂಪರ್ಕವನ್ನು ಸಾಧಿಸುತ್ತೀರಿ. ಇದರಿಂದ ನೀವು ನಿಮ್ಮ ಹಳೆ ಅಥವಾ ಹೊಸ ಉತ್ತಮ ಸ್ನೇಹಿತರನ್ನು ಪಡೆಯಬಹುದು. ಕುಟುಂಬಸ್ಥರೊಂದಿಗೆ ಮರು ಸಂಪರ್ಕ ಸಾಧಿಸಬಹುದು. ಇದು ನಿಮಗೆ ಉತ್ತಮ ಫೀಲ್ ನೀಡುತ್ತದೆ. ಹೊಸ ಜೀವನ ಆರಂಭಿಸಿದ್ದೀರಿ ಅಂತ ಅನಿಸಿಬಿಡುತ್ತದೆ. ಹಲವು ವಿಷಕಾರಿ ವ್ಯಕ್ತಿಗಳು ಬೇರೆಯವರೊಂದಿಗೆ ಮಾತನಾಡಲು ನಿರ್ಬಂಧ ಹಾಕುವುದು ಇದೆ. ಹೀಗಾಗಿ ನೀವು ನಿಮ್ಮ ಸಂಬಂಧದ ಕೊಂಡಿಯನ್ನೇ ಕಳಚಿಕೊಂಡಿರುತ್ತೀರಿ.

ನೀವು ನಿರುತ್ಸಾಹಗೊಳ್ಳುವುದಿಲ್ಲ!

ನೀವು ನಿರುತ್ಸಾಹಗೊಳ್ಳುವುದಿಲ್ಲ!

ನಿಮ್ಮನ್ನು ನಿರಂತರ ಪ್ರೋತ್ಸಾಹ ಮಾಡುವ ಜನರು ನಿಜಕ್ಕು ನಿಮ್ಮ ಆಸ್ತಿಯಾಗಿರುತ್ತಾರೆ. ಅವರು ನೀವು ನಿಮ್ಮ ಕೆಲಸವನ್ನು ಸರಿಯಾಗಿ ಮಾಡದೆ ಇದ್ದರು ಸಹ ನಿಮ್ಮನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸುವುದಿಲ್ಲ. ಆದರೆ ನಿಮ್ಮನ್ನು ನಿರುತ್ಸಾಹಪಡಿಸುವ ಜನರು ನಿಮ್ಮ ಸುತ್ತಾ ಇದ್ದಲ್ಲಿ, ಅವರು ನಿಮ್ಮ ಪಾಲಿಗೆ ವಿಷಕಾರುವ ಜನರು ಎಂಬುದನ್ನು ಮರೆಯಬೇಡಿ. ಹೀಗಾಗಿ ನೀವು ಇಂತಹ ಜನರಿಂದ ದೂರ ಇದ್ದರೆ ನೀವು ಹೊಸ ಜೀವನದಲ್ಲಿ ತುಂಬಾನೇ ಉತ್ಸಾಹಿಗಳಾಗಿರುತ್ತೀರಿ. ಎಲ್ಲ ಕೆಲಸಗಳನ್ನು ಅತ್ಯುತ್ತಮ ಉತ್ಸಾಹದಿಂದ ಮಾಡುತ್ತೀರಿ.

ಖುಷಿಯ ಜೀವನ ಕಂಡುಕೊಳ್ಳುತ್ತೀರಿ!

ಖುಷಿಯ ಜೀವನ ಕಂಡುಕೊಳ್ಳುತ್ತೀರಿ!

ನಿಮ್ಮ ಜೀವನದಿಂದ ವಿಷಕಾರಿ ಜನರನ್ನು ನೀವು ದೂರ ಮಾಡಿದ ನಂತರ ಸಂತೋಷದ ಅನ್ವೇಷಣೆಯು ನಿಜವಾಗಿಯೂ ಸರಳವಾಗಿದೆ ಎಂದು ನೀವು ಕಂಡುಕೊಳ್ಳುತ್ತೀರಿ. ಒತ್ತಡ ಮತ್ತು ಋಣಾತ್ಮಕತೆಯಿಂದ ಮುಕ್ತವಾಗಿ ನೀವು ಮಾಡಿದ ಆಯ್ಕೆಗಳನ್ನು ಆನಂದಿಸುವ ಸ್ವಾತಂತ್ರ್ಯವನ್ನು ನೀವು ಹೊಂದುತ್ತೀರಿ. ಇಲ್ಲಿ ಯಾರು ಕೂಡ ನಿಮ್ಮ ಕಾಲು ಎಳೆಯುವುದಿಲ್ಲ ಎಂಬ ಧೈರ್ಯ ನಿಮ್ಮಲ್ಲಿ ಇರುತ್ತದೆ.

English summary

Things That Happen When You Get Toxic People Out of Your Life in kannada

Tips for Happy Life: This is what happen when you get toxic People out of your life read on.. , read on,
Story first published: Wednesday, August 3, 2022, 17:42 [IST]
X
Desktop Bottom Promotion