Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಮಂಗಳವಾರ ಹೀಗೆ ಮಾಡುವುದರಿಂದ, ಎಲ್ಲಾ ಕಾರ್ಯ ಶುಭವಾಗುತ್ತದೆ!
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಘಳಿಗೆ ಮತ್ತು ದಿನವೂ ತುಂಬಾ ಮಹತ್ವದ್ದಾಗಿರುತ್ತದೆ. ವಾರದ ಏಳು ದಿನಗಳಿಗೂ ಅದರದ್ದೇ ಆಗಿರುವಂತಹ ಮಹತ್ವವಿರುತ್ತದೆ. ಆಯಾಯ ದಿನಗಳ ಮಹತ್ವವನ್ನು ತಿಳಿದುಕೊಂಡು ಅದಕ್ಕೆ ಅನುಸಾರವಾಗಿ ನಡೆದುಕೊಂಡು ಹೋದರೆ ಖಂಡಿತವಾಗಿಯೂ ಯಶಸ್ಸು ಸಿಗುವುದು. ಹಿಂದೂ ಧರ್ಮದಲ್ಲಿ ಮಂಗಳವಾರಕ್ಕೆ ಅದರದ್ದೇ ಆಗಿರುವಂತಹ ಮಹತ್ವವಿದೆ. ಮಂಗಳವಾರವನ್ನು ತುಂಬಾ ಶುಭವೆಂದು ಪರಿಗಣಿಸಲಾಗಿದೆ.
ಈ ದಿನದಂದು ಹಿಂದೂಗಳು ಗಣೇಶ, ದುರ್ಗಾ, ಕಾಳಿ ಮತ್ತು ಹನುಮಂತನನ್ನು ಪೂಜಿಸುತ್ತಾರೆ. ಕೆಲವರು ದೇವಸ್ಥಾನಗಳಿಗೆ ಹೋದರೆ ಇನ್ನು ಕೆಲವರು ಇಡೀ ದಿನ ಉಪವಾಸವಿರುತ್ತಾರೆ. ಮಂಗಳವಾರವನ್ನು ಮಂಗಳ ಗ್ರಹದ ದಿನವೆಂದು ಪರಿಗಣಿಸಲಾಗಿದೆ. ಆತ ತುಂಬಾ ಸಮಸ್ಯೆಗಳನ್ನು ಉಂಟು ಮಾಡುವವ ಎಂದು ಪರಿಗಣಿಸಲಾಗಿದೆ. ಉಪವಾಸವಿದ್ದರೆ ಆತನಿಂದ ಆಗುವಂತಹ ಹಾನಿಯನ್ನು ತಪ್ಪಿಸಬಹುದು ಎನ್ನಲಾಗಿದೆ. ಮಂಗಳವಾರದ ಮಹತ್ವವೇನು ಮತ್ತು ಅದೃಷ್ಟಕ್ಕಾಗಿ ಜನರು ಏನು ಮಾಡಬೇಕು ಎಂದು ತಿಳಿಯಲು ಮುಂದೆ ಓದುತ್ತಾ ಸಾಗಿ...

ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ!
ಮಂಗಳವಾರ ಕೆಂಪು ಬಣ್ಣಕ್ಕೆ ಸೀಮಿತವಾಗಿದೆ. ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವ ವ್ಯಕ್ತಿಗಳು ಒಳ್ಳೆಯ ಅದೃಷ್ಟವನ್ನು ಪಡೆಯುತ್ತಾರೆ.

ಹನುಮಂತ, ಕಾರ್ತಿಕೇಯ, ದುರ್ಗೆಯ ಪೂಜೆ ಮಾಡಿ
ಹನುಮಂತ, ಕಾರ್ತಿಕೇಯ, ದುರ್ಗಾ ಅಥವಾ ಕಾಳಿಯನ್ನು ಒಲೈಸಿಕೊಳ್ಳಲು ಹೆಚ್ಚಿನವರು ಮಂಗಳವಾರದಂದು ಉಪವಾಸ ಮಾಡುತ್ತಾರೆ. ಗಂಡು ಮಗು ಬೇಕೆಂದು ಬಯಸುವ ದಂಪತಿ ಈ ದಿನ ಉಪವಾಸ ಮಾಡಲೇಬೇಕು. ಇಂದು ಉಪವಾಸ ಮಾಡುವುದರಿಂದ ಮಂಗಳ ಗ್ರಹದಿಂದ ಆಗುವಂತಹ ದುಷ್ಪರಿಣಾಮವನ್ನು ತಡೆಯಬಹುದು.

ಒಂದು ಹೊತ್ತಿನ ಊಟ ಮಾತ್ರ ಮಾಡಿ...
ಮಂಗಳವಾರದಂದು ಉಪವಾಸ ವ್ರತ ಮಾಡುವಂತಹವರು ಕೇವಲ ಒಂದು ಹೊತ್ತಿನ ಊಟ ಮಾತ್ರ ಮಾಡಬೇಕು. ಸಂಪೂರ್ಣ ದಿನ ಉಪವಾಸವಿರಬೇಕು. ಗೋಧಿ ಮತ್ತು ಬೆಲ್ಲದಿಂದ ಮಾಡಿದಂತಹ ಫಲಾಹಾರವನ್ನು ಒಂದು ಹೊತ್ತು ಸೇವಿಸಬೇಕು. ಹೆಚ್ಚಿನವರು ಯಾವುದೇ ಅಡೆತಡೆಯಿಲ್ಲದೆ 21 ದಿನಗಳ ಕಾಲ ಉಪವಾಸ ಆಚರಿಸುತ್ತಾರೆ.

ಹನುಮಂತನನ್ನು ಪ್ರಾರ್ಥಿಸಿ
ಮಂಗಳವಾರದಂದು ಹನುಮಂತನಿಗೆ ಭಕ್ತರು ಕೆಂಪು ಹೂವನ್ನು ಸಮರ್ಪಿಸುತ್ತಾರೆ. ಮಂಗಳ ಗ್ರಹದಿಂದ ಉಂಟಾಗುವಂತಹ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಲು ಶಕ್ತಿ ಕೊಡು ಎಂದು ಹನುಮಂತನಲ್ಲಿ ಭಕ್ತರ ಪ್ರಾರ್ಥನೆಯಾಗಿದೆ.

ಉಪವಾಸ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ
ಕೆಲವರು ಮಂಗಳವಾರದಂದು ಕೇವಲ ಸಸ್ಯಾಹಾರ ಮಾತ್ರ ಸೇವಿಸುತ್ತಾರೆ. ಈ ದಿನ ಅವರು ಉಪವಾಸ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಮದುವೆಗೆ ಕೇವಲ ಸೂರ್ಯನ ತಿಂಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಧಿಕ ಮಾಸ,ಕ್ಷಯ ಮಾಸ ಮತ್ತು ಚತುರ್ಮಾಸದಂದು ಮದುವೆ ಮಾಡಲಾಗುವುದಿಲ್ಲ. ಚತುರ್ಮಾಸದಲ್ಲಿ ಬರುವಂತಹ ಪಿತೃ ಪಕ್ಷ ಅಥವಾ ಮಹಾಲಯ ಶ್ರಾದ್ಧದಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ.

ಮದುವೆ ಕಾರ್ಯಕ್ರಮಗಳಿಗೆ ಮಂಗಳವಾರ ಒಳ್ಳೆಯ ದಿನವಲ್ಲ
ಮದುವೆಗೆ ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಶುಭವೆಂದು ಪರಿಗಣಿಸಲಾಗಿದೆ. ಮದುವೆಗೆ ಮಂಗಳವಾರ ಒಳ್ಳೆಯ ದಿನವಲ್ಲ.



Click it and Unblock the Notifications