'ದುಷ್ಟ ಶಕ್ತಿ'ಯಿಂದ ರಕ್ಷಣೆ ನೀಡುವ ದಾರಗಳಿವು! ಕೈಗೆ ಕಟ್ಟಿ ನೋಡಿ

By: manu
Subscribe to Boldsky

ಹಿಂದೂ ಧರ್ಮದಲ್ಲಿ ಅನೇಕ ಶಾಸ್ತ್ರ-ಸಂಪ್ರದಾಯಗಳಿವೆ. ಪ್ರತಿಯೊಂದು ತನ್ನದೇ ಆದ ಪವಿತ್ರ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಅದರಲ್ಲಿ ಮೌಲಿ ಧರಿಸುವುದು ಒಂದು. ಅನೇಕರು ಮಣಿಕಟ್ಟಿನ ಮೇಲೆ ಕೆಂಪು, ಹಳದಿ, ಕಪ್ಪು ಮತ್ತು ಕಿತ್ತಳೆ ಬಣ್ಣದ ದಾರವನ್ನು ಕಟ್ಟಿಕೊಂಡಿರುವುದನ್ನು ಕಂಡಿರುತ್ತೇವೆ. ಈ ಪವಿತ್ರ ದಾರವನ್ನು ಕಲಾವ ಅಥವಾ ಮೌಲಿ ಎಂದು ಕರೆಯುತ್ತಾರೆ. 

ಹಿಂದೂ ಧರ್ಮದಲ್ಲಿ ಕೆಂಪು ಬಣ್ಣ ಏಕೆ ಮಂಗಳಕರ?

ಇದರ ಮಹತ್ವ ಅಪಾರವಾದದ್ದು. ಇವುಗಳನ್ನು ಕಟ್ಟಿಕೊಳ್ಳುವುದರಿಂದ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಲಕ್ಷ್ಮಿ, ಪಾರ್ವತಿ, ಸರಸ್ವತಿಯರ ಆಶೀರ್ವಾದಗಳು ಆಕರ್ಷಿತವಾಗುತ್ತವೆ ಎನ್ನಲಾಗುತ್ತದೆ. ಇದನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಉಂಟಾಗುವ ಉಪಯೋಗ ಹಾಗೂ ಮಹತ್ವದ ಬಗೆಗಿನ ಕಿರು ಪರಿಚಯ ಇಲ್ಲಿದೆ ನೋಡಿ....

ಪುರಾಣ ಕಥೆಗಳ ಪ್ರಕಾರ...

ಪುರಾಣ ಕಥೆಗಳ ಪ್ರಕಾರ...

ವಿಷ್ಣುವಿನ ಅವತಾರ ಎನಿಸಿಕೊಂಡ ವಾಮನನು ಬಲಿ ರಾಜನ ಕೈಗೆ (ಮಣಿಕಟ್ಟಿನ ಮೇಲೆ) ಈ ದಾರವನ್ನು ಕಟ್ಟಿದ್ದನು ಎನ್ನಲಾಗುತ್ತದೆ.

ಹಳದಿ ಮತ್ತು ಕೆಂಪು ದಾರ ಮಂಗಳಕರ

ಹಳದಿ ಮತ್ತು ಕೆಂಪು ದಾರ ಮಂಗಳಕರ

ಪುರಾತನ ಕಾಲದಿಂದಲೂ ಮಂಗಳಕರ ಎನ್ನುವ ಹಳದಿ ಮತ್ತು ಕೆಂಪು ದಾರವನ್ನು ಕಟ್ಟಿಕೊಳ್ಳುವ ಸಂಪ್ರದಾಯ ಅಸ್ತಿತ್ವಕ್ಕೆ ಬಂದಿತ್ತು ಎನ್ನಲಾಗುತ್ತದೆ.

ಶತ್ರುಗಳ ಕಾಟ ತಪ್ಪಿಸುತ್ತದೆ...

ಶತ್ರುಗಳ ಕಾಟ ತಪ್ಪಿಸುತ್ತದೆ...

ಕೆಂಪು ದಾರವನ್ನು ಕಾಳವೆ ಎಂದು ಕರೆಯುತ್ತಾರೆ. ಈ ಬಣ್ಣ ದೀರ್ಘ ಜೀವನ, ಜೀವಂತಿಕೆ ಮತ್ತು ಶತ್ರುಗಳ ವಿರುದ್ಧ ಸಂರಕ್ಷಿಸುತ್ತದೆ.

ಈ ದಾರ ಕಟ್ಟುವ ವಿಧಾನ...

ಈ ದಾರ ಕಟ್ಟುವ ವಿಧಾನ...

ಈ ದಾರವನ್ನು ಪುರುಷರು ಮತ್ತು ಅವಿವಾಹಿತ ಮಹಿಳೆಯರ ಬಲಗೈ ಮಣಿಕಟ್ಟಿನ ಮೇಲೆ ಕಟ್ಟುತ್ತಾರೆ. ವಿವಾಹಿತ ಮಹಿಳೆಯರಾಗಿದ್ದರೆ ಎಡಗೈ ಮಣಿಕಟ್ಟಿನ ಮೇಲೆ ಕಟ್ಟಬೇಕು..

ಕಿತ್ತಳೆ, ಹಳದಿ, ಕೆಂಪು ಬಣ್ಣಗಳ ದಾರ

ಕಿತ್ತಳೆ, ಹಳದಿ, ಕೆಂಪು ಬಣ್ಣಗಳ ದಾರ

ಕಿತ್ತಳೆ, ಹಳದಿ, ಕೆಂಪು ಬಣ್ಣಗಳ ದಾರವನ್ನು ಹಿಂದೂ ಧರ್ಮದಲ್ಲಿ ಮಂಗಳಕರ ಎಂದು ಪರಿಗಣಿಸುತ್ತಾರೆ. ಅಲ್ಲದೆ ಇವು ಗುರು, ಮಂಗಳ ಮತ್ತು ಸೂರ್ಯನಿಗೆ ಹೆಚ್ಚು ಪ್ರಾಶಸ್ತ್ಯವಾದವು ಎನ್ನಲಾಗುತ್ತದೆ.

English summary

The Significance Of Wearing Red-Yellow Thread On Your Wrist

You may have noticed a red, yellow and orange colour thread tied on the wrist of many people. This holy thread is called a kalava or mauli. Let's check out the significance of this thread and why people tie this. It is said that tying this thread attracts blessings of the trinity- Brahma, Vishnu, Mahesh as well as of Goddesses Laxmi, Parvati and Saraswati. Called as 'Mauli', it literally means one at the highest position.
Subscribe Newsletter