For Quick Alerts
ALLOW NOTIFICATIONS  
For Daily Alerts

ದೀಪಾವಳಿ ಕುರಿತು ಹೆಚ್ಚಿನವರಿಗೆ ತಿಳಿಯದ ಕತೆಗಳಿವು

|

ದೀಪಾಗಳ ಹಬ್ಬ ದೀಪಾವಳಿ ಎಂದರೆ ಎಲ್ಲೆಡೆ ಸಡಗರ ಸಂಭ್ರಮ. ಬಾಳಿನಲ್ಲಿರುವ ಕತ್ತಲನ್ನು ನೀಗಿ ಬೆಳಕನ್ನು ಮೂಡಿಸು ದೇವರೇ ಎಂಬ ಆಶಯದೊಂದಿಗೆ ನಾವೆಲ್ಲಾ ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ.

ದೀಪಾವಳಿಯ ಬಗ್ಗೆ ಕೆಲ ಸ್ವಾರಸ್ಯಕರ ಸಂಗತಿಗಳಿವೆ, ಈ ಕುರಿತು ಹೆಚ್ಚಿನವರಿಗೆ ತಿಳಿದಿರುವುದಿಲ್ಲ, ಶ್ರೀರಾಮ ವನವಾಸ ಮುಗಿಸಿ ಅಯೋಧ್ಯೆಗೆ ಹಿಂತಿರುಗಿದ ದಿನ ಅಯೋಧ್ಯೆ ಪ್ರಜೆಗಳು ಮನೆ-ಮನೆಗಳಲ್ಲಿ ದೀಪ ಬೆಳಗಿ ಸ್ವಾಗತಿಸಿದರು, ಅಲ್ಲಿಂದ ಆ ನೆನಪಿಗಾಗಿ ದೀಪಾವಳಿ ಆಚರಣೆಗೆ ಬಂತು ಎಂಬುವುದು ಮಾತ್ರ ಹೆಚ್ಚಿನವರಿಗೆ ತಿಳಿದರುತ್ತದೆ. ಆದರೆ ದೀಪಾವಳಿ ಆಚರಣೆಯ ಇನ್ನು ಅನೇಕ ಕತೆಗಳಿವೆ, ಬನ್ನಿ ಅವುಗಳು ಏನೆಂದು ತಿಳಿಯೋಣ:

ನರಕಾಸುರನನ್ನು ಕೃಷ್ಣ ಸಂಹರಿಸಿದ ದಿನ

ನರಕಾಸುರನನ್ನು ಕೃಷ್ಣ ಸಂಹರಿಸಿದ ದಿನ

Image Courtesy

ನರಕಾಸುರ ಭೂದೇವಿ ಹಾಗೂ ವರಹಾನ ಪುತ್ರ. ನರಕಾಸುರ ಶಕ್ತಿವಂತನಾಗಿರಬೇಕು ಹಾಗೂ ದೀರ್ಘಾಯುಸ್ಸು ಹೊಂದಿರಬೇಕು ಎಂದು ಭೂದೇವಿ ವಿಷ್ಣುವಿನ ಬಳಿ ವರವನ್ನು ಕೇಳಿದ್ದಳು. ನರಕಾಸುರ ಭೂಲೋಕ ಹಾಗೂ ಸ್ವರ್ಗಲೋಕವನ್ನು ಯುದ್ಧ ಮಾಡಿ ಗೆಲ್ಲುತ್ತಾನೆ, ಇದರಿಂದಾಗಿ ಎಲ್ಲಾ ದೇವತೆಗಳು ವಿಷ್ಣುವಿನ ಬಳಿ ನರಕಾಸುರ ಕಾಟದಿಂದ ಮುಕ್ತಿ ನೀಡುವಂತೆ ಬೇಡುತ್ತಾರೆ. ವಿಷ್ಣು ನರಕಾಸುರನನ್ನು ಕೊಲ್ಲಲು ಕೃಷ್ಣನ ಅವತಾರ ತಾಳುತ್ತಾನೆ. ಶ್ರೀ ಕೃಷ್ಣನು ನರಕಾಸುರನ ವಶದಲ್ಲಿ ಹದಿನಾರು ಸಾವಿರ ಸ್ತ್ರೀಯರನ್ನು ಕಾಪಾಡುತ್ತಾನೆ, ಅವರ ಬಳಿಗೆ ಗೌರವ ಮತ್ತೆ ದೊರಕಲು ಅವರನ್ನೆಲ್ಲಾ ಮದುವೆಯಾಗುತ್ತಾನೆ. ಸಾಯುವ ಮುಂಚೆ ನರಕಾಸುರ ತನ್ನ ಸಾವನ್ನು ಆಚರಿಸುವಂತೆ ಕೋರುತ್ತಾನೆ. ನರಕಾಸುರನನ್ನು ನೆನೆದು ದೀಪಾವಳಿಯನ್ನು ಆಚರಿಸಲಾಗುವುದು.

ಜೈನ ಧರ್ಮದ ತೀರ್ಥಂಕರ ಮಹಾವೀರ ನಿರ್ವಣ ಸ್ವೀಕರಿಸಿದ ದಿನ

ಜೈನ ಧರ್ಮದ ತೀರ್ಥಂಕರ ಮಹಾವೀರ ನಿರ್ವಣ ಸ್ವೀಕರಿಸಿದ ದಿನ

Image Courtesy

ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರ ಜೈನರು ನಿರ್ವಣ ಅಥವಾ ಮೋಕ್ಷವನ್ನು ಪಡೆದ ದಿನ. ಮೋಕ್ಷ ಪಡೆದ ಇವರ ಆತ್ಮ ಅತ್ಯಂತ ಪವಿತ್ರವಾದ ಆತ್ಮವಾಗಿದೆ.

 ಲಕ್ಷ್ಮಿಯನ್ನು ರಕ್ಷಿಸಿದ ದಿನ

ಲಕ್ಷ್ಮಿಯನ್ನು ರಕ್ಷಿಸಿದ ದಿನ

Image Courtesy

ಮಹಾಬಲಿ ತುಂಬಾ ಶಕ್ತಿಯುತ ರಾಜನಾಗಿದ್ದ. ಈತ ತನ್ನ ಶಕ್ತಿ ಸಾಮಾರ್ಥ್ಯದಿಂದ ಮೂರು ಲೋಕವನ್ನು ಗೆದ್ದು ಅಧಿಪತಿಯಾಗಿದ್ದ ಹಾಗೂ ಲಕ್ಷ್ಮಿಯನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿದ್ದ. ಆಗ ಮಹಾವಿಷ್ಣು 5ನೇ ಅವತಾರವಾದ ವಾಮನನ ರೂಪ ತಾಳಿ ಮಹಾಬಲಿ ಬಳಿ ಬರುತ್ತಾನೆ. ಮಹಾಬಲಿ ದಾನಕ್ಕೆ ತುಂಬಾ ಹೆಸರುವಾಸಿಯಾಗಿದ್ದ. ರಾಜನ ಬಳಿ ಬಂದ ವಾಮನ ಮೂರ್ತಿಯ ಬಳಿ ರಾಜ ನಿನಗೇನು ಬೇಕು ಕೊಡುವೆ ಎಂದಾಗ ನನಗೆ ನನ್ನ ಪಾದದ ಮೂರು ಅಡಿಯಷ್ಟು ಜಾಗ ನೀಡು ಎಂದು ವಾಮನ ಮೂರ್ತಿ ಹೇಳುತ್ತಾನೆ. ಬಾಲಕನ ನೋಡಿ ಗಹಗಹಿಸಿ ನಕ್ಕ ಮಹಾಬಲಿ ತೆಗೆದಿಕೋ ಎಂದು ಹೇಳುತ್ತಾನೆ. ಆಗ ವಾಮನನು ದೈತ್ಯವಾಗಿ ಬೆಳೆಯುತ್ತಾನೆ, ಆತ ಒಂದು ಅಡಿ ಇಡುವಾಗ ಭೂ ಮಂಡಲ ಮುಚ್ಚಿ ಹೋಗುತ್ತದೆ, ಮತ್ತೊಂದು ಅಡಿಗೆ ಆಕಾಶ, ಮೂರನೇಯ ಅಡಿಯನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಮಹಾಬಲಿ ತನ್ನ ತಲೆಯನ್ನು ನೀಡುತ್ತಾನೆ, ಆಗ ಮಹಾಬಲಿಯನ್ನು ನರಕ್ಕೆ ತಳ್ಳಲಾಗುತ್ತದೆ, ಹೀಗೆ ಲಕ್ಷ್ಮಿಯನ್ನು ರಕ್ಷಿಸಲಾಗುವುದು. ಆದ್ದರಿಂದ ದೀಪಾವಳಿಯಂದು ಲಕ್ಷ್ಮಿ ಪೂಜೆ ಕೂಡ ವಿಶೇಷವಾಗಿದೆ.

 ವಿಕ್ರಮಾದಿತ್ಯನಿಗೆ ಪಟ್ಟಾಭಿಷೇಕವಾದ ದಿನ

ವಿಕ್ರಮಾದಿತ್ಯನಿಗೆ ಪಟ್ಟಾಭಿಷೇಕವಾದ ದಿನ

Image Courtesy

ಉಜ್ವೈನ್ ರಾಜ್ಯದ ರಾಜನಾಗಿದ್ದ ವಿಕ್ರಮಾದಿತ್ಯ ಬುದ್ಧಿವಂತಿಕೆಗೆ ತುಂಬಾ ಪ್ರಸಿದ್ಧಿಯಾಗಿದ್ದನು. ದೀಪಾವಳಿಯ ಮಾರನೇಯ ದಿನ ವಿಕ್ರಮಾದಿತ್ಯ ಪಟ್ಟಾಭಿಷಕವಾಯಿತು ಎಂಬ ಕತೆಯಿದೆ.

 ಪಾಂಡವರು ಅಜ್ಞಾತವಾಸದಿಂದ ಮರಳಿದ ದಿನ

ಪಾಂಡವರು ಅಜ್ಞಾತವಾಸದಿಂದ ಮರಳಿದ ದಿನ

Image Courtesy

ಮಹಾಭಾರತದ ಪ್ರಕಾರ ಪಾಂಡವರು ಅಜ್ಞಾತವಾಸ ಮುಗಿಸಿ ಹಸ್ತಿನಾಪುರಕ್ಕೆ ಹಿಂತಿರುಗಿದ ದಿನದಂದು ಹಸ್ತಿನಾಪುರದ ಪ್ರಜೆಗಳು ಹಣತೆ ದೀಪ ಹಚ್ಚಿ ಸಂಭ್ರಮಿಸಿದರು, ಅದುವೇ ದೀಪಾವಳಿ.

ಹೀಗೆ ದೀಪಾವಳಿ ಕುರಿತ ಅನೇಕ ದಂತ ಕತೆಗಳಿವೆ, ಎಲ್ಲಾ ಕತೆಯು ದೀಪಾವಳಿ ಕಷ್ಟಗಳನ್ನು ನೀಗುವ ಹಬ್ಬ ಎಂಬ ನೀತಿ ಪಾಠ ಹೇಳುತ್ತದೆ.

English summary

The Lesser Known Stories About Diwali In Kannada

Here are leseer known stories about diwali, Read on,
X
Desktop Bottom Promotion