For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಉಪವಾಸ-ವ್ರತ ಮಾಡಿದರೆ ಕಷ್ಟ-ಕಾರ್ಪಣ್ಯ ದೂರವಾಗುತ್ತೆ

|

ಶ್ರಾವಣ ಮಾಸ ಎನ್ನುವುದು ಹೊಸ ಭರವಸೆ, ಹೊಸ ಹುಮ್ಮಸ್ಸನ್ನು ನೀಡುವ ಮಾಸ. ಈ ಪವಿತ್ರ ತಿಂಗಳು ಈ ವರ್ಷ 30 ದಿನಗಳನ್ನು ಒಳಗೊಂಡಿದೆ. ಇದು ದೀರ್ಘ ಸಮಯದ ನಂತರ ಒಂದಿದೆ ಎನ್ನಲಾಗುತ್ತದೆ. ಅಧಿಕ ಮಾಸ ಇದ್ದಾಗ ಮಾತ್ರ ಶ್ರಾವಣ ಮಾಸದಲ್ಲಿ 30 ದಿನಗಳು ಬರುತ್ತವೆ ಎನ್ನಲಾಗುವುದು. ಈ ತಿಂಗಳಲ್ಲಿ ಬಂದ ಎಲ್ಲಾ ಸೋಮವಾರಗಳು ಮಂಗಳಕರವಾಗಿರುತ್ತವೆ ಎನ್ನಲಾಗುವುದು.

ಶ್ರಾವಣ ಮಾಸದಲ್ಲಿ ಪೂಜೆ, ಹಬ್ಬ ಹರಿದಿನಗಳು, ವ್ರತಗಳು ಹಾಗೂ ಶ್ರಾವಣ ಸೋಮವಾರ ಶ್ರಾವಣ ಮಂಗಳವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ ಎಂದು ಆಚರಿಸುತ್ತಾರೆ. ಅದರಲ್ಲೂ ಶ್ರಾವಣ ಸೋಮವಾರ ಎನ್ನುವುದು ಅತ್ಯಂತ ಪ್ರಸಿದ್ಧವಾದ ಆಚರಣೆ. ಪುರಾಣಗಳ ಪ್ರಕಾರ ಅಮೃತವನ್ನು ಪಡೆದುಕೊಳ್ಳುವ ಉದ್ದೇಶದಿಂದ ಒಮ್ಮೆ ದೇವತೆಗಳೆಲ್ಲಾ ಸಮುದ್ರ ಮಂಥನ ನಡೆಸಿದರು. ಇದರಿಂದ ವಿಷದ ಉಚ್ಛಾಟನೆ ಮೊದಲಾಯಿತು. ಆಗ ಆ ವಿಷವನ್ನು ಏನು ಮಾಡುವುದು ಎನ್ನುವ ಗೊಂದಲ ಪ್ರಾರಂಭವಾಯಿತು. ಆಗ ಶಿವನು ತಾನು ಕುಡಿದು ಗಂಟಲಿನಲ್ಲಿ ಇಟ್ಟಿಕೊಳ್ಳುವುದಾಗಿ ಹೇಳಿ, ವಿಷವನ್ನು ಕುಡಿದನು. ಈ ಹಿನ್ನೆಲೆಯಲ್ಲೇ ಶಿವನ ಬಣ್ಣ ಹಾಗೂ ಗಂಟಲು ನೀಲಿ ವರ್ಣಕ್ಕೆ ತಿರುಗಿತು.

ಜನರು ಅಂದಿನಿಂದ ನೀಲಕಂಠ ಎಂದು ಕರೆದರು. ಗಂಟಲಿನಲ್ಲಿ ಇರಿಸಿಕೊಂಡ ವಿಷದ ಪರಿಣಾಮವನ್ನು ತಗ್ಗಿಸಲು ತಲೆಯಮೇಲೆ ಅರ್ಧಚಂದ್ರನನ್ನು ಇರಿಸಿಕೊಂಡನು ಎಂದು ಹೇಳಲಾಗುತ್ತದೆ. ಇನ್ನು ಪುರಾಣ ಕಥೆಗಳ ಪ್ರಕಾರ ಕ್ಷೀರಸಾಗರ ಮಂಥನದ ಸಮಯದಲ್ಲಿ ಉದ್ಭವಿಸಿದ ಭಯಾನಕ ಹಾಲಾಹಲದಿಂದ ಎಲ್ಲಾ ಜೀವಿಗಳಿಗು ಅಪಾಯವೊದಗುವ ಸಂದರ್ಭ ಬಂದಾಗ ಶಿವನು ಮಧ್ಯ ಪ್ರವೇಶಿಸಿ ಅದನ್ನು ಸೇವಿಸಿದನು. ಇದನ್ನು ಸೇವಿಸಿದ ನಂತರ ಶಿವನು ಮೂರ್ಛೆ ತಪ್ಪಿದನು. ಆಗ ದೇವತೆಗಳ ಸಲಹೆಯಂತೆ ಬ್ರಹ್ಮದೇವನು ಶಿವನಿಗೆ ಜಲಾಭಿಷೇಕವನ್ನು ಮಾಡಿ, ಹಲವಾರು ಗಿಡಮೂಲಿಕೆಗಳಿಂದ ಶಿವನಿಗೆ ಚಿಕಿತ್ಸೆ ನೀಡಿದನು. ಆಗ ಶಿವನು ಪ್ರಜ್ಞೆಗೆಮರಳಿದನು. ಇದರಿಂದಾಗಿಯೇ ಲಿಂಗದ ಮೇಲೆ ಜಲಾಭಿಷೇಕವನ್ನು ಮಾಡುವ ಪದ್ಧತಿ ಅನುಷ್ಟಾನಕ್ಕೆ ಬಂದಿತು.

ಶ್ರಾವಣ ಮಾಸದ ಪ್ರತಿ ಸೋಮವಾರದ ಉಪವಾಸ ಹಾಗೂ ವ್ರತವನ್ನು ಕೈಗೊಳ್ಳುವುದರಿಂದ ಅನೇಕ ದೋಷಗಳು ನಿವಾರಣೆಯಾಗುವುದು. ಜೊತೆಗೆ ಜೀವನದಲ್ಲಿ ಮಂಗಳಕರವಾದ ಸಂಗತಿಗಳು ಉದ್ಭವಿಸುವುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ...

ಶ್ರಾವಣ ಸೋಮವಾರದ ಉಪಯೋಗಗಳು

ಶ್ರಾವಣ ಸೋಮವಾರದ ಉಪಯೋಗಗಳು

ಶ್ರಾವಣ ತಿಂಗಳಲ್ಲಿ ಬರುವ ಸೋಮವಾರವನ್ನು ಶ್ರಾವಣ ಸೋಮವಾರ ಎಂದು ಕರೆಯಲಾಗುತ್ತದೆ. ಸೋಮವಾರದಂದು ಉಪವಾಸವನ್ನು ಕೈಗೊಳ್ಳಲಾಗುವುದು. ಮಹಿಳೆಯರು ಪತಿಯ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗಾಗಿ ಈ ವೃತವನ್ನು ಕೈಗೊಳ್ಳುತ್ತಾರೆ. ಕುಡುಂಬದ ಯೋಗಕ್ಷೇಮ ಮತ್ತು ವೃತ್ತಿಪರ ಪ್ರಗತಿಗಾಗಿ ಪುರುಷರು ಈ ವ್ರತವನ್ನು ಕೈಗೊಳ್ಳುತ್ತಾರೆ. ಮೊದಲ ಶ್ರಾವಣ ಮಾಸದಿಂದ ಉಪವಾಸವನ್ನು ಆಚರಿಸುವುದರ ಮೂಲಕ 16 ದಿನ ಉಪವಾಸವನ್ನು ಕೈಗೊಂಡರೆ ಹುಡುಗಿಯರು ಬಯಸಿದಂತಹ ಹುಡುಗನ ಜೊತೆ ವಿವಾಹವಾಗುವುದು ಎಂದು ಹೇಳಲಾಗುತ್ತದೆ. ಭಗವಾನ್ ಶಿವನು ಆದರ್ಶ ವ್ಯಕ್ತಿ. ಅವನನ್ನು ಹೋಲುವ ಪುರುಷರು ತಮ್ಮ ಪತಿಯಾಗಬೇಕು ಎಂದು ಬಯಸುತ್ತಾರೆ.

ಮೊದಲ ಸೋಮವಾರ

ಮೊದಲ ಸೋಮವಾರ

ಮೊದಲ ಶ್ರಾವಣ ಸೋಮವಾರವು ಸೌಭಾಗ್ಯ ಯೋಗ, ದ್ವಿಪುಷ್ಕರ ಯೋಗವನ್ನು ನೀಡುತ್ತದೆ. ಅಂದು ಧನಿಷ್ಠ ನಕ್ಷತ್ರ ಇರುತ್ತದೆ. ಇವೆಲ್ಲವೂ ಒಟ್ಟಾಗಿ ಬಹಳ ಮಂಗಳಕರ ಸಂಗತಿಯನ್ನು ತೋರುತ್ತವೆ ಎಂದು ಹೇಳಲಾಗುವುದು. ಈ ದಿನದಂದು ದಂಪತಿಗಳು ಭಗವಾನ್ ಶಿವ ಮತ್ತು ಪಾರ್ವತಿಯನ್ನು ಪೂಜಿಸಿದರೆ ಅವರು ಸಂತೋಷದ ಜೀವನದ ಆಶೀರ್ವಾದವನ್ನು ಪಡೆದುಕೊಳ್ಳುವರು. ವಾಸ್ತವವಾಗಿ ಈ ವರ್ಷದಲ್ಲಿ ಎಲ್ಲಾ ಸದ್ಗುಣಗಳು ಭಕ್ತರಿಗೆ ಎರಡು ಪ್ರಯೋಜನಗಳನ್ನು ನೀಡುತ್ತವೆ. ಆದ್ದರಿಂದ ಅಂದು ದಾನ, ಪೂಜೆ, ಪವಿತ್ರ ಸ್ನಾನವನ್ನು ಕೈಗೊಳ್ಳಬೇಕು. ಇನ್ನು ಭಗವಾನ್ ಶಿವನಿಗೆ ಶಿವ ಶ್ರಾವಣ ಮಾಸವು ಹೆಚ್ಚು ಅಚ್ಚುಮೆಚ್ಚಿನದ್ದಾಗಿದೆ. ಪಾರ್ವತಿ ದೇವಿಯೊಂದಿಗೆ ಶಿವನು ಮತ್ತೆ ಒಂದಾಗಿರುವುದು ಈ ಮಾಸದಂದೇ ಎಂಬ ಪ್ರತೀತಿ ಇದ್ದು ಸ್ತ್ರೀಯರು ತಾವು ಬಯಸಿದವರನ್ನು ಪತಿಯಾಗಿ ಪಡೆದುಕೊಳ್ಳಲು ಈ ಮಾಸದಂದು ಶಿವನನ್ನು ಬೇಡಿಕೊಂಡರೆ ಅವರ ಮನೋಭಿಲಾಷೆ ಈಡೇರುತ್ತದೆ.

ಎರಡನೇ ಸೋಮವಾರ

ಎರಡನೇ ಸೋಮವಾರ

ಎರಡನೇ ಸೋಮವಾರವು ಸರ್ವಾರ್ಥ ಸಿದ್ಧಿಯೋಗ ಮತ್ತು ವೃದ್ಧಿಯೋಗವನ್ನು ನೀಡುತ್ತದೆ. ಸರ್ವಾರ್ಥ ಸಿದ್ಧಿಯೋಗವು ಯಾವುದೇ ಮಂಗಳಕರ ಘಟನೆಯನ್ನು ಆಯೋಜಿಸಲ್ಪಡುವ ಸಮಯ ಮತ್ತು ಅದು ಫಲಪ್ರದವಾಗುತ್ತದೆ. ಈ ವಾರದಂದು ಪೂಜೆ ವ್ರತ ಕೈಗೊಳ್ಳುವುದರಿಂದ ಅದ್ಭುತ ಯೋಗವು ಲಭಿಸುವುದು. ಅಂದು ಶುಕ್ರ ಅಸ್ತ, ಪಂಚಕ, ಭದ್ರಾ ಮೊದಲಾದ ವಿಚಾರಗಳ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.

ಮೂರನೇ ಸೋಮವಾರ

ಮೂರನೇ ಸೋಮವಾರ

ಮೂರನೇ ಸೋಮವಾರ ಆಗಸ್ಟ್ 13ರಂದು ಬರುತ್ತದೆ. ಅಂದು ಪರ್ವ ಫಾಲ್ಗುಣಿ ನಕ್ಷತ್ರವು ಶಿವ ಯೋಗದೊಂದಿಗೆ ಸಂಭವಿಸುತ್ತದೆ. ಇದಲ್ಲದೆ ಶಿವ ಯೋಗ ಮಂಗಳಕರವಾಗಿದೆ. ಮಧ್ಠ್ವರಾನಿ ಪರ್ವ ಇದಕ್ಕೆ ಸೇರುತ್ತದೆ. ಈ ಸಂದರ್ಭವು ಅದೃಷ್ಟವನ್ನು ತರುವವನು. ಇದಲ್ಲದೆ ಇದು ಶಿವಯೋಗವಾಗಿದ್ದಾಗ, ಶಿವನ ಪೂಜೆ ಇತರ ದಿನಗಳಿಗಿಂತ ಹೆಚ್ಚು ಪ್ರಭಾವ ಬೀರುವುದು ಮತ್ತು ಶ್ರೇಷ್ಠವಾದದ್ದು ಎಂದು ಹೇಳಲಾಗುವುದು.

ನಾಲ್ಕನೇ ಸೋಮವಾರ

ನಾಲ್ಕನೇ ಸೋಮವಾರ

ಆಗಸ್ಟ್ 20ರಂದು ಬರುವ ಈ ಸೋಮವಾರವು ವೈದೃತಿ ಯೋಗವು ಜೇಷ್ಠ ನಕ್ಷತ್ರದೊಂದಿಗೆ ನೀಡುತ್ತದೆ. ಈ ಯೋಗವು ವಿತ್ತೀಯ ದೃಷ್ಟಿಕೋನದಿಂದ ಮಂಗಳಕರವಾಗಿದೆ. ಶಿವಲಿಂಗಕ್ಕೆ ಹಾಲು ಮತ್ತು ಕಬ್ಬಿನ ಹಾಲಿನ ಅಭಿಷೇಕವು ಹೆಚ್ಚು ಫಲವನ್ನು ನೀಡುವುದು.

ಶ್ರಾವಣ ಮಾಸದಲ್ಲಿ 5 ಸೋಮವಾರ ಬರುವುದೇ?

ಶ್ರಾವಣ ಮಾಸದಲ್ಲಿ 5 ಸೋಮವಾರ ಬರುವುದೇ?

ಕೆಲವು ಬಾರಿ ಶ್ರಾವಣದಲ್ಲಿ 5 ಸೋಮವಾರ ಬರುವುದರಿಂದ ಕೆಲವು ಗೊಂದಲವು ಉಂಟಾಗಬಹುದು. ಭಾರತೀಯರು 2 ಪಂಚಾಗವನ್ನು ಅನುಸರಿಸುತ್ತೇವೆ ಎಂದು ಹೇಳಲಾಗುವುದು. ಒಂದು ಪಂಚಾಗದ ಪ್ರಕಾರ ನಾಲ್ಕು ಸೋಮವಾರಗಳು ಇವೆ. ಭಾರತದ ಕೆಲವು ಪ್ರದೇಶದಲ್ಲಿ ಸಂಕ್ರಾತಿಯನ್ನು ಗಮನಿಸಿ, ಜುಲೈ 16, 2018 ಶ್ರಾವಣದ ಮೊದಲ ವಾರ ಎಂದು ಪರಿಗಣಿಸಲಾಗುತ್ತದೆ. ಶ್ರಾವಣದ ಮೊದಲ ಸೋಮವಾರವನ್ನು ಜುಲೈ 30ರಂದು ಆಚರಿಸಲಾಗುತ್ತದೆ.

ಶ್ರಾವಣ ಸೋಮವಾರದ ಪೂಜೆಯ ಪ್ರಯೋಜನಗಳು

ಶ್ರಾವಣ ಸೋಮವಾರದ ಪೂಜೆಯ ಪ್ರಯೋಜನಗಳು

*ಈ ತಿಂಗಳಿನ ಎಲ್ಲಾ ದಿನಗಳಲ್ಲಿ ನಿಮ್ಮ ಊರಿಗೆ ಸಮೀಪದ ನದಿತಟಕ್ಕೆ ಬಂದು ಮೀನುಗಳಿಗೆ ಹಿಟ್ಟಿನುಂಡೆಗಳ ಆಹಾರ ನೀಡಿ. ನಿಮ್ಮಲ್ಲಿರುವ ಅಷ್ಟೂ ಆಹಾರವನ್ನು ಮೀನುಗಳು ತಿನ್ನುವವರೆಗೆ ಶಿವನನ್ನು ಆರಾಧಿಸಿ. ಈ ಮೂಲಕ ನಿಮ್ಮ ಜೀವನದಲ್ಲಿ ಹೆಚ್ಚಿನ ಧನಾಗಮನಕ್ಕೆ ಶಿವನ ಅನುಗ್ರಹ ದೊರಕುತ್ತದೆ.

*ಪ್ರತಿ ಸೋಮವಾರ ಇಪ್ಪತ್ತೊಂದು ಬಿಲ್ವಪತ್ರೆ ಎಲೆಗಳ ಮೇಲೆ ಚಂದನದ ಕಡ್ಡಿಯಿಂದ ಓಂನಮಃಶಿವಾಯ ಮಂತ್ರ ಬರೆದು ಶಿವಲಿಂಗಕ್ಕೆ ಅರ್ಪಿಸಿ.

*ಶ್ರಾವಣ ಸೋಮವಾರದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸಿ. ಈ ಅವಧಿಯಲ್ಲಿ ಮಹಾ ಮೃತ್ಯುಂಜಯ ಮಂತ್ರ ಅಥವಾ ಓಂ ನಮಃ ಶಿವಾಯ ಮಂತ್ರವನ್ನು ಇಡಿಯದಿನ ಸಾಧ್ಯವಾದಷ್ಟು ಪಠಿಸಿರಿ.

English summary

The Auspicious Third Monday Of Shravana

After a long time, the Shravana will consist of 30 days this year. This happens only when there is Adhikmasa, which is an extra thirteenth month as per the Hindu Panchang. This year all the Mondays of the month are auspicious. Here we have brought the information about why all these Mondays are more auspicious this year, with the details about every month. Before that let us enlighten you a little about the benefits of observing fasts on Shravana Mondays.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more