For Quick Alerts
ALLOW NOTIFICATIONS  
For Daily Alerts

ನಂಬುತ್ತೀರೋ ಬಿಡುತ್ತೀರೋ 'ಮೆಹೆಂದಿಯ' ಹಿಂದೆಯೂ ಕಟ್ಟುಕಥೆ ಇದೆ!

By Manu
|

ಭಾರತೀಯ ಮದುವೆಗಳಲ್ಲಿ ಮೆಹೆಂದಿಯದ್ದು ಶ್ರೇಷ್ಠ ಪಾತ್ರವಿದೆ. ಮದುವೆಯ ಹಿಂದಿನ ದಿನ ಮೆಹೆಂದಿ ಶಾಸ್ತ್ರವನ್ನು ನಡೆಸಿ ವರ ಮತ್ತು ವಧುವಿಗೆ ಅವರವರ ಮನೆಯಲ್ಲಿ ಈ ಶಾಸ್ತ್ರವನ್ನು ಮಾಡುವ ಸಂಪ್ರದಾಯವಿದೆ. ಇವರ ಜೊತೆಗೆ ಮನೆಯ ಸಂಬಂಧಿಕರು ಮೆಹೆಂದಿಯನ್ನು ಹಚ್ಚಿ ಮರುದಿನದ ಸಡಗರಕ್ಕೆ ಅಣಿಯಾಗುತ್ತಾರೆ. ಬರಿಯ ಮದುವೆಗಳಲ್ಲಿ ಮಾತ್ರವಲ್ಲದೆ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಕೂಡ ಮೆಹೆಂದಿ ಕೈಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

Superstitions about Mehndi, that will shock you..!

ಮಧ್ಯ ಪೂರ್ವದಲ್ಲಿ ಉಗಮವಾದ ಮೆಹೆಂದಿ ಭಾರತಕ್ಕೆ ಪರಿಚಯಿಸಲ್ಪಟ್ಟಿದ್ದು ಮೊಗಲರ ಕಾಲದಲ್ಲಾಗಿದೆ. ಶ್ರೀಮಂತ ಸಂಪ್ರದಾಯವಾಗಿದ್ದ ಮೆಹೆಂದಿಯನ್ನು ಶ್ರೀಮಂತರು ಮತ್ತು ಅತಿ ಗಣ್ಯ ವ್ಯಕ್ತಿಗಳು ಮಾತ್ರವೇ ಹಚ್ಚುತ್ತಿದ್ದ ಕಾಲವಿತ್ತು. ಆದರೆ ಕಾಲ ಕ್ರಮೇಣ ಮೆಹೆಂದಿ ಇಂದು ಪ್ರತಿಯೊಬ್ಬರ ಮನೆ ಮನವನ್ನು ಕದ್ದಿದೆ. ಕೈಯ ಚೆಲುವನ್ನು ಮಾತ್ರವೇ ಇಮ್ಮಿಡಿಸುವುದಲ್ಲದೆ ಉದ್ಯೋಗದ ಆಧಾರವೂ ಆಗಿದೆ.

ಆದರೆ ಮೂಢನಂಬಿಕೆಯೆಂಬ ಪೆಡಂಭೂತ ಮೆಹೆಂದಿಯನ್ನು ಬಿಟ್ಟಿಲ್ಲ. ಮೆಹೆಂದಿ ಹಚ್ಚಿಕೊಂಡರೆ ಹಾಗಾಗುತ್ತದೆ ಹೀಗಾಗುತ್ತದೆ ಎಂಬ ಮಾತುಗಳನ್ನು ಅವರಿವರ ಹೇಳುತ್ತಿದ್ದು ಅದು ಎಷ್ಟು ಸುಳ್ಳು ಸತ್ಯ ಎಂಬುದನ್ನು ಅವಲೋಕಿಸಲೇಬೇಕಾಗುತ್ತದೆ. ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸಿ!

ಗಾಢವಾಗಿ ಹಚ್ಚಿಕೊಳ್ಳುವುದು
ಮೆಹೆಂದಿಯನ್ನು ಹಚ್ಚಿಕೊಳ್ಳಲು ಯಾವುದೇ ನಿಯಮಗಳಿಲ್ಲ. ಅದಾಗ್ಯೂ ಮೆಹೆಂದಿಯ ಹಿಂದಿರುವ ಒಂದು ಮೂಢ ನಂಬಿಕೆಯೆಂದರೆ ಇದನ್ನು ವಧುವಿನ ಕೈಗೆ ಗಾಢವಾಗಿ ಹಚ್ಚಿದರೆ ಮುಂದೆ ಸತಿಪತಿಯರ ಬಾಂಧವ್ಯ ಹಸನಾಗಿರುತ್ತದೆ ಎಂದಾಗಿದೆ. ವಧುವಿನ ಅತ್ತೆ ಕೂಡ ಸೊಸೆಯೊಂದಿಗೆ ಪ್ರೀತಿಯಿಂದ ಇರುತ್ತಾರೆ. ಆದ್ದರಿಂದಲೇ ವಧುವಿಗೆ ಗಾಢವಾಗಿ ಮೆಹೆಂದಿಯನ್ನು ಹಚ್ಚುತ್ತಾರೆ.

ಹೆಸರಿನಲ್ಲಿ ಏನಿದೆ
ಮೆಹೆಂದಿ ವಿನ್ಯಾಸದಲ್ಲಿ ಅಡಗಿರುವ ವಿಶೇಷತೆಯನ್ನು ಅರಿತುಕೊಳ್ಳುವುದು ಕೂಡ ಮೆಹೆಂದಿಯ ಹಿಂದಿರುವ ಮೂಢನಂಬಿಕೆಯಾಗಿದೆ. ಭಾರತದ ಕೆಲವೊಂದು ಕಡೆಗಳಲ್ಲಿ ವಧುವಿನ ಕೈಯಲ್ಲಿ ವರನ ಹೆಸರನ್ನು ಬರೆಯಲಾಗುತ್ತದೆ, ಇದನ್ನು ವರನು ಇದನ್ನು ಕಂಡುಹಿಡಿಯಬೇಕು. ಒಂದು ವೇಳೆ ಆತ ಹೆಸರು ಪತ್ತೆಹಚ್ಚುವಲ್ಲಿ ವಿಫಲನಾದರೆ ಪತ್ನಿಯು ಹೆಚ್ಚು ಹಕ್ಕು ಚಲಾಯಿಸುವವಳು ಅಧಿಕಾರ ಚಲಾಯಿಸುವವಳು ಎಂಬುದಾಗಿ ಪರಿಗಣಿಸಲ್ಪಡುತ್ತದೆ. ವರನು ತನ್ನ ಪತ್ನಿಯ ಕೈಯಲ್ಲಿ ಹೆಸರನ್ನು ಪತ್ತೆ ಮಾಡುವವರೆಗೆ ಪ್ರಥಮ ರಾತ್ರಿಯನ್ನು ಕೂಡ ಮುಂದೂಡಲಾಗುತ್ತದೆ..! ಮೂಢನಂಬಿಕೆ ವಿಚಿತ್ರವೆನಿಸಿದರೂ ಇದುವೇ ಸತ್ಯ!

ಸೂಕ್ತ ವರ
ಮೆಹೆಂದಿಯೊಂದಿಗೆ ತಳುಕು ಹಾಕಿಕೊಂಡಿರುವ ಇನ್ನೊಂದು ಮೂಢನಂಬಿಕೆ ಹೆಚ್ಚು ಆಸಕ್ತಿಕರವಾಗಿದೆ. ಮದುವೆಯಾಗುವ ಹುಡುಗಿಯು ಮಧುವಣಗಿತ್ತಿಯಿಂದ ಎಲೆಗಳನ್ನು ಉಜ್ಜಿಸಿಕೊಂಡರೆ ಆಕೆಗೆ ಸೂಕ್ತ ವರ ದೊರಕುತ್ತಾನಂತೆ!, ಹೀಗೆ ಮೆಹೆಂದಿಯ ಕುರಿತಾದ ಮೂಢನಂಬಿಕೆಗಳು ನಿತ್ಯಜೀವನದಲ್ಲಿ ಆಳವಾಗಿ ಅಚ್ಚೊತ್ತಿವೆ. ನಿಮಗೂ ಇಂತಹ ಸಂಗತಿಗಳು ಅರಿವಿದ್ದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

English summary

Superstitions about Mehndi, that will shock you..!

There is nothing very strictly spiritual or sacred about mehendi. Married as well as unmarried women can apply mehendi. But applying mehendi during a wedding is considered very auspicious. It is a symbol of prosperity and the bride is considered blessed if mehendi is put on her palms before the wedding. Apart from all of these facts, there are also a few superstitions related to mehendi. Have a look
Story first published: Monday, August 8, 2016, 20:29 [IST]
X
Desktop Bottom Promotion