For Quick Alerts
ALLOW NOTIFICATIONS  
For Daily Alerts

ಭಗವಾನ್ ಶ್ರೀಕೃಷ್ಣನ ಕಥೆಯ ಆಧ್ಯಾತ್ಮಿಕ ಸಂಕೇತಗಳು

By Hemanth
|

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವದೇವತೆಗಳು ಇದ್ದಾರೆ ಎನ್ನುವುದು ಪುರಾಣಗಳಲ್ಲಿ ಇದೆ. ಅದರಲ್ಲೂ ಭಗವಾನ್ ಶ್ರೀಕೃಷ್ಣನು ಹಲವಾರು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾನೆ. ವಿಷ್ಣುವಿನ ಏಳು ಅವತಾರಗಳಲ್ಲಿ ಶ್ರೀಕೃಷ್ಣ ಅವತಾರವು ಒಂದಾಗಿದೆ. ಶ್ರೀಕೃಷ್ಣನು ತನ್ನ ಭಕ್ತರನ್ನು ತುಂಬಾ ಪ್ರೀತಿಸುತ್ತಾನೆ ಮತ್ತು ಭಕ್ತರು ಆತನನ್ನು ಮರೆತರೂ ಆತ ತುಂಬಾ ತಾಳ್ಮೆಯಿಂದ ತಾಯಿಯೊಬ್ಬಳು ಮಗುವಿಗೆ ಕಾದಂತೆ ಕಾಯುತ್ತಾ ಇರುತ್ತಾನೆ ಎನ್ನುವ ಮಾತಿದೆ.

ಶ್ರೀಕೃಷ್ಣನು ಹಿಂದೂ ಧರ್ಮದಲ್ಲಿರುವ ಇತರ ದೇವದೇವತೆಗಳಿಗಿಂತ ತುಂಬಾ ಭಿನ್ನ. ಇತರ ದೇವದೇವತೆಗಳು ತಮ್ಮ ಸೆಳವು ಮತ್ತು ವ್ಯಕ್ತಿತ್ವಕ್ಕೆ ಅಂಟಿಕೊಂಡಿರುವರು. ಆದರೆ ಶ್ರೀಕೃಷ್ಣ ಮಾತ್ರ ಬಹುಮುಖಿಯಾಗಿದ್ದು, ಆತನ ವ್ಯಕ್ತಿತ್ವಕ್ಕೆ ಯಾವುದೇ ಮಿತಿಯಿಲ್ಲ. ಶ್ರೀಕೃಷ್ಣನ ಪ್ರತಿಯೊಂದು ಕಥೆ ಕೂಡ ನಮಗೆ ಹೊಸತನ್ನು ಕಲಿಸುತ್ತದೆ. ಕಥೆ ಹಾಗೂ ವ್ಯಕ್ತಿತ್ವದ ಬಗ್ಗೆ ಹೆಚ್ಚಿನ ಗಮನಹರಿಸಿದರೆ ಹಲವಾರು ಆಧ್ಯಾತ್ಮಿಕ ಪಾಠಗಳನ್ನು ನಾವು ಕಲಿಯಬೇಕಾಗಿದೆ. ಶ್ರೀಕೃಷ್ಣನ ಕಥೆಗಳ ಬಗ್ಗೆ ಇರುವ ಕೆಲವೊಂದು ರಹಸ್ಯ ಹಾಗೂ ಸಂಕೇತಗಳನ್ನು ನಿಮ್ಮ ಮುಂದಿಡಲಿದ್ದೇವೆ....ಯಾವುದೇ ರೀತಿಯ ಭಕ್ತಿಯಿಲ್ಲ ಪುರಾಣಗಳಲ್ಲಿ ಕಥೆಗಳನ್ನು ನಾವು ಕೇಳಿದಾಗ ವೈವಿಧ್ಯಮಯವಾದ ಭಕ್ತಿಯು ನಮಗೆ ಕಾಣಸಿಗುವುದು. ಪುರಾಣಗಳಲ್ಲಿ ಇರುವಂತೆ ಗೋಪಿಕೆಯರು ಶ್ರೀಕೃಷ್ಣನನ್ನು ತಮ್ಮ ಪ್ರಿಯತಮನಾಗಿ ಪ್ರೀತಿಸಿದರು.

Lord Sri Krishna’s

ಕೃಷ್ಣನಿಗೆ ಸುದಾಮನೆಂಬ ಗೆಳೆಯನಿದ್ದ. ಶ್ರೀಕೃಷ್ಣನು ಒಬ್ಬ ಆತ್ಮೀಯ ಸ್ನೇಹಿತ, ಸೋದರ ಮತ್ತು ದ್ರೌಪದಿಗೆ ಆತ ರಕ್ಷಕನಾಗಿದ್ದ. ಇತ್ತೀಚಿನ ಸಮಯದಲ್ಲಿ ಮೀರಾ ಭಾಯಿ ಎಂಬಾಕೆ ಕೃಷ್ಣನ ಪ್ರೀತಿಗಾಗಿ ತನ್ನ ಕುಟುಂಬವನ್ನೇ ತ್ಯಜಿಸಿದಳು. ಕೇರಳದ ಕುರುರ್ ಅಮ್ಮ ಎನ್ನುವಾಕೆ ಶ್ರೀಕೃಷ್ಣನ ಮೂರ್ತಿಗೆ ತನ್ನ ಮಗನಿಗೆ ಬೈಯುವಂತೆ ಮತ್ತು ಹೊಡೆಯುವಂತೆ ಮಾಡುತ್ತಿದ್ದಳು. ಮುಸ್ಲಿಮನೊಬ್ಬನಿಗೆ ಹೋರಿಯ ರೂಪದಲ್ಲಿ ಶ್ರೀಕೃಷ್ಣ ಕಂಡುಬಂದಿದ್ದನಂತೆ. ಭಕ್ತಿಯಲ್ಲಿ ರೂಪವು ಅಪ್ರಸ್ತುತ ಎಂದು ಇದು ನಮಗೆ ಕಲಿಸಿಕೊಡುತ್ತದೆ. ಯಾವುದೇ ರೂಪದಲ್ಲಿ ಕೃಷ್ಣನನ್ನು ಪೂಜಿಸಿದರೂ ಆತ ನಿಮ್ಮೊಂದಿಗೆ ಇರುವನು.

ಕೃಷ್ಣನ ಅವತಾರದ ಸಂಕೇತಗಳು
ಅವತಾರವು ಸಂಸ್ಕೃತ ಪದವೊಂದರ ರೂಪವಾಗಿದೆ. ಅವ' ಎಂದರೆ ಬರುವುದು ಎಂದರ್ಥ ಮತ್ತು ತಾರ' ಎಂದರೆ ನಕ್ಷತ್ರವೆಂದು ಅರ್ಥವಿದೆ. ಶ್ರೀಕೃಷ್ಣನ ಜನ್ಮವೇ ಸಂಕಷ್ಟದ ಸಮಯದಲ್ಲಿ ಆಗಿದೆ. ಶ್ರೀಕೃಷ್ಣನ ಸೋದರಮಾವ ಕಂಸನು ಆ ಸಮಯದಲ್ಲಿ ಅಧರ್ಮದಿಂದ ಮೆರೆಯುತ್ತಾ ತನ್ನ ದುಷ್ಕೃತ್ಯಗಳನ್ನು ನಡೆಸುತ್ತಿದ್ದ. ಕಂಸನು ಕೃಷ್ಣನ ತಂದೆತಾಯಿಯನ್ನು ಬಂಧನದಲ್ಲಿರಿಸಿದ್ದ. ಹಲವಾರು ಬಾಗಿಲುಗಳಿದ್ದ ಜೈಲಿನಲ್ಲಿ ಅವರಿಬ್ಬರನ್ನು ಸಂಕೋಲೆಯಿಂದ ಬಂಧಿಸಲಾಗಿತ್ತು.

ಹೆತ್ತವರು ಆತ್ಮದ ಸಂಕೇತವೆನ್ನಬಹುದು. ಬಾಗಿಲುಗಳು ಮತ್ತು ಇತರ ಅಡೆತಡೆಗಳು ನಮ್ಮನ್ನು ದೇವರು ಹಾಗೂ ಜ್ಞಾನೋದಯದಿಂದ ದೂರವಿಡುತ್ತದೆ. ಎಷ್ಟೇ ರೀತಿಯ ಅಡೆತಡೆಗಳು ಮತ್ತು ಸಂಕೋಲೆಗಳು ಇದ್ದರೂ ಶ್ರೀಕೃಷ್ಣನು ಜೈಲಿನಲ್ಲೇ ಜನ್ಮ ತಾಳಿದ. ದ್ವಾರಪಾಲಕರು, ಸಂಕೋಲೆ ಮತ್ತು ಜೈಲಿನ ಕಬ್ಬಿಣದ ಬಾಗಿಲುಗಳು ಕೃಷ್ಣನನ್ನು ಹೊರಗಡೆ ಹೋಗುವುದರಿಂದ ತಡೆಯಲು ಸಾಧ್ಯವಾಗಲಿಲ್ಲ.

ಶ್ರೀಕೃಷ್ಣನ ಆರು ಮಂದಿ ಸೋದರರು
ಪುರಾಣ ಕಥೆಗಳ ಪ್ರಕಾರ ಶ್ರೀಕೃಷ್ಣನಿಗಿಂತ ಮೊದಲು ಹುಟ್ಟಿದ ಆರು ಮಂದಿ ಸೋದರರನ್ನು ಕಂಸನು ಕೊಂದಿದ್ದಾನೆ ಎಂದು ಹೇಳಲಾಗಿದೆ. ಇದು ಕೂಡ ಒಂದು ರೀತಿಯ ಸಂಕೇತವಾಗಿದೆ. ತನ್ನ ಸತ್ತಿರುವ ಆರು ಮಂದಿ ಮಕ್ಕಳನ್ನು ನೋಡಬೇಕೆಂದು ಶ್ರೀಕೃಷ್ಣನ ತಾಯಿ ದೇವಕಿಯು ಬಯಸುತ್ತಾಳೆ. ಈ ವೇಳೆ ಶ್ರೀಕೃಷ್ಣನು ಸತ್ತ ಮಕ್ಕಳನ್ನು ಮರಳಿ ತರುತ್ತಾನೆ. ಅವರಿಗೆ ಸ್ಮರಾ, ಉದ್ಧಿತಾ, ಪರಿಸ್ವಂಗ, ಪತಂಗ, ಸುದ್ರತ್ ಮತ್ತು ಘರ್ನಿ ಎಂದು ಹೆಸರಿಡಲಾಗುತ್ತದೆ. ಈ ಹೆಸರುಗಳು ಮಾನವನ ವಿವಿಧ ಅಂಗಗಳನ್ನು ಪ್ರತಿನಿಧಿಸುವುದು. ಉದ್ಧಿತಾ ಎಂದರೆ ಮಾತು, ಪರಿಸ್ವಂಗ ಎಂದರೆ ಕೇಳುವುದು ಹೀಗೆ ಇವುಗಳನ್ನು ವಿವರಿಸಲಾಗಿದೆ. ಇವರೆಲ್ಲರೂ ಸತ್ತ ಬಳಿಕ ಶ್ರೀಕೃಷ್ಣನು ಹುಟ್ಟಿದ ಎಂದು ಕೇಳಲಾಗುತ್ತದೆ. ಇದರ ಸಾರವೆಂದರೆ ಎಲ್ಲಾ ಭಾವನೆಗಳಿಂದ ಮುಕ್ತನಾಗಿ ಹೊಸ ಜಗತ್ತಿನಲ್ಲಿ ಶ್ರೀಕೃಷ್ಣ ಹುಟ್ಟಿದ.

ನೀಲಿ ಶ್ರೀಕೃಷ್ಣ ಮತ್ತು ಆತನ ಹಳದಿ ಬಣ್ಣದ ಬಟ್ಟೆಗಳು
ಶ್ರೀಕೃಷ್ಣ ದೇವರನ್ನು ಯಾವಾಗಲೂ ನೀಲಿ ಬಣ್ಣ ಅಥವಾ ಮೋಡಗಳಿಗೆ ವರ್ಣಿಸಲಾಗುತ್ತದೆ. ಈ ಬಣ್ಣವು ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ. ಹಳದಿ ಬಣ್ಣ ಕೂಡ ಭೂಮಿಯನ್ನು ಪ್ರತಿನಿಧಿಸುವುದು. ನೀಲಿ ಮತ್ತು ಹಳದಿ ಬಣ್ಣದ ಅರ್ಥವೆಂದರೆ ಶ್ರೀಕೃಷ್ಣ ಪರಮಾತ್ಮನು ಪ್ರತಿಯೊಂದರಲ್ಲೂ ಇದ್ದಾನೆ. ಆತನೇ ಭೂಮಿ ಮತ್ತು ಆತನೇ ಆಕಾಶ ಎನ್ನುವುದಾಗಿದೆ. ಆತನ ಅವತಾರವನ್ನು ವರ್ಣಿಸಲು ಸಾಧ್ಯವೇ ಇಲ್ಲ.

ವಸ್ತ್ರ ಹರಣ
ಗೋಪಿಕೆಯರು ಸ್ನಾನ ಮಾಡುತ್ತಾ ಇರುವಾಗ ಶ್ರೀಕಷ್ಣನು ಅವರ ವಸ್ತ್ರಗಳನ್ನು ಕದಿಯುತ್ತಾನೆ ಎನ್ನುವ ಕಥೆಯಿದೆ. ಇದು ಭಕ್ತರಲ್ಲಿ ಇರುವಂತಹ ಅಂಹಕಾರವನ್ನು ತೆಗೆದುಹಾಕುವುದಾಗಿದೆ. ಗೋಪಿಕೆಯರು ಆತನಿಗೆ ಶರಣಾದಾಗ ವಸ್ತ್ರಗಳನ್ನು ಮರಳಿ ನೀಡುವನು.

ಗೋಪಿಕೆಯರೊಂದಿಗಿನ ಪ್ರೇಮಕಥೆ
ಇದು ತುಂಬಾ ವಿಶಿಷ್ಟವಾಗಿರುವಂತದ್ದಾಗಿದೆ. ಹಲವಾರು ಪುರಾಣಗಳಲ್ಲಿ ಇದು ವಿವಿಧ ರೀತಿಯಿಂದ ವರ್ಣಿಸಲಾಗಿದೆ. ಇದು ತುಂಬಾ ತೀಕ್ಷ್ಣವಾದದ್ದು ಮತ್ತು ಭಕ್ತಿಯಿಂದ ದೈಹಿಕವಾಗಿ ಹಾತೊರೆಯುತ್ತಿದ್ದರು ಎನ್ನಲಾಗಿದೆ. ಆದರೆ ಗೋಪಿಕೆಯರು ಮದುವೆಯಾಗಿದ್ದರು ಮತ್ತು ಅವರಿಗೂ ಸಂಸಾರಗಳಿದ್ದವು. ಅವರು ಕೂಡ ತಾಯಿ, ಸೋದರಿ ಮತ್ತು ಮಗಳಾಗಿದ್ದಳು. ಅವರೆಲ್ಲರೂ ಮನಸ್ಸಿನಲ್ಲಿ ಶ್ರೀಕೃಷ್ಣನ ಧ್ಯಾನ ಮಾಡುತ್ತಾ ದೈನಂದಿನ ಏಕತಾನತೆಯನ್ನು ಕೆಲಸದ ಮೂಲಕ ದೂರ ಮಾಡಿಕೊಳ್ಳುತ್ತಿದ್ದರು. ಭಗವಂತನದ ಆರಾಧನೆಗೆ ನಾವು ಪ್ರತಿಯೊಂದನ್ನು ತ್ಯಜಿಸುವ ಅಗತ್ಯವಿಲ್ಲ. ನಮ್ಮ ಜವಾಬ್ದಾರಿ ಮತ್ತು ಕರ್ತವ್ಯದ ಮಧ್ಯೆಯು ದೇವರನ್ನು ಪೂಜಿಸಬಹುದು ಎಂದು ಈ ಕಥೆಯು ಹೇಳುತ್ತದೆ.

ರಾಧೆ ಮತ್ತು ಶ್ರೀಕೃಷ್ಣನ ಪ್ರೇಮ
ರಾಧೆಯು ಆತ್ಮವನ್ನು ಪ್ರತಿನಿಧಿಸಿದರೆ ಶ್ರೀಕೃಷ್ಣನು ಪರಮಾತ್ಮ. ಶ್ರೀಕೃಷ್ಣನನ್ನು ರಾಧೆಯು ಪ್ರೀತಿಸುವುದು ಪರಮಾತ್ಮನ ಬಗ್ಗೆ ಆತ್ಮವು ಯಾವ ರೀತಿ ಭಾವನೆ ತೋರಿಸುತ್ತದೆ ಎನ್ನುವುದಾಗಿದೆ. ಪರಸ್ಪರರ ಬಗ್ಗೆ ಯಾವಾಗಲೂ ಯೋಚಿಸುತ್ತಾ ಇದ್ದರೂ ಅವರಿಬ್ಬರು ಪ್ರತ್ಯೇಕವಾಗಿದ್ದರು. ಪ್ರತ್ಯೇಕತೆ ವೇಳೆ ಆತ್ಮವು ತನ್ನ ನೈತಿಕ ನೀತಿಯನ್ನು ನಿಭಾಯಿಸಿಸುವುದು ಮತ್ತು ಪರಮಾತ್ಮನ ಭೇಟಿಗಾಗಿ ಕಾಯುತ್ತಾ ಇರುತ್ತದೆ. ಆದರೆ ಕೃಷ್ಣನನ್ನು ಬಿಟ್ಟು ರಾಧೆ, ಅದೇ ರೀತಿ ರಾಧೆಯನ್ನು ಬಿಟ್ಟು ಕೃಷ್ಣ ಇರಲಾರ. ಇದೇ ರೀತಿ ಆತ್ಮ ಮತ್ತು ಪರಮಾತ್ಮ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಪರಿಪೂರ್ಣರಾಗಲಾರರು.

ಮಹಾಭಾರತ ಯುದ್ಧದಲ್ಲಿ ಕೃಷ್ಣ ಭಾಗಿಯಾಗಲಿಲ್ಲ
ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣನು ಭಾಗಿಯಾಗಿಲ್ಲ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಯುದ್ಧಭೂಮಿಯಲ್ಲಿ ಕೃಷ್ಣನು ಅರ್ಜುನನಿಗೆ ಸಾರಥಿಯಾದ. ಯುದ್ಧದ ಅಂತ್ಯದಲ್ಲಿ ಬಾರ್ಬಿಕ ಒಂದು ಮಾತನ್ನು ಹೇಳುತ್ತಾನೆ. ಈ ಯುದ್ಧವು ಸಂಪೂರ್ಣವಾಗಿ ಕೃಷ್ಣಮಯವಾಗಿತ್ತು. ಪ್ರತಿಯೊಬ್ಬರೂ ಕೃಷ್ಣನಾಗಿದ್ದರು. ಸತ್ತವರು ಕೃಷ್ಣ, ಕೊಂದವರು ಕೃಷ್ಣ, ಪ್ರತಿಯೊಂದು ಕೃಷ್ಣನಿಂದಲೇ ನಡೆಯಿತು. ಈ ಕಥೆಯ ಸಾರಾಂಶವೆಂದರೆ ಶ್ರೀಕಷ್ಣನು ನೇರವಾಗಿ ನಮ್ಮ ದೇಹದಲ್ಲಿ ಇರುವುದಿಲ್ಲ. ಆದರೆ ಆತ ಸರ್ವವ್ಯಾಪಿ. ನಮ್ಮನ್ನು ಜೀವನದಲ್ಲಿ ಸಾರಥಿಯಾಗಿ ಮುನ್ನಡೆಸುತ್ತಾನೆ. ಕರ್ಮದಂತೆ ಕೆಟ್ಟವರನ್ನು ಶಿಕ್ಷಿಸುತ್ತಾನೆ ಮತ್ತು ಒಳ್ಳೆಯವರನ್ನು ಆಶೀರ್ವದಿಸುವನು.

English summary

Spiritual Symbolism Of Lord Sri Krishna’s Tales

Lord Sri Krishna is for many the ultimate god. The eighth avatar of Lord Maha Vishnu is benevolent and loving towards his devotees. It is said that Lord Sri Krishna's love for his devotees is so great that even if his devotees forget him, he waits patiently for them to remember him, just as a mother would wait for her child's return.
Story first published: Saturday, August 12, 2017, 17:53 [IST]
X
Desktop Bottom Promotion