For Quick Alerts
ALLOW NOTIFICATIONS  
For Daily Alerts

ಸಾಲ, ಕಷ್ಟಗಳಿಂದ ಪರಿಹಾರ ಹೊಂದಲು ಆಷಾಢ ಶುಕ್ರವಾರ ಲಕ್ಷ್ಮಿ ವ್ರತ ಮಾಡುವ ವಿಧಾನ

|

ಆಷಾಢ ಮಾಸವೆಂದರೆ ಸಾಮಾನ್ಯವಾಗಿ ಆ ತಿಂಗಳಿನಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬಾರದು ಎಂಬ ನಂಬಿಕೆ. ಆದರೆ ಆಷಾಢ ಶುಕ್ರವಾರದ ಪೂಜೆಗೆ ತುಂಬಾನೇ ಮಹತ್ವವಿದೆ. ಆಷಾಢ ಶುಕ್ರವಾರದೆಂದು ದೇವಿಯರನ್ನು ಆರಾಧಿಸಲಾಗುವುದು. ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಆಷಾಢ ಶುಕ್ರವಾರದಂದು ಲಕ್ಷ್ಮಿ ವ್ರತ ಆಚರಿಸಲಾಗುವುದು.

ಆಷಾಢ ಶುಕ್ರವಾರದ ಪೂಜೆ ಈ ವರ್ಷ ಯಾವ ದಿನಾಂಕಗಳಲ್ಲಿ ಬಂದಿದೆ, ಇದರ ಮಹತ್ವವೇನು, ಆಚರಣೆ ಹೇಗೆ ಮಾಡಬೇಕು ನೋಡೋಣ ಬನ್ನಿ:

ಆಷಾಢ ಶುಕ್ರವಾರದ ದಿನಾಂಕಗಳು

ಜುಲೈ 16
ಜುಲೈ 23
ಜುಲೈ 30
ಆಗಸ್ಟ್ 6

ಈ ವ್ರತವನ್ನು ಶಕಾ ವ್ರತ ಎಂದು ಕರೆಯಲಾಗುವುದು. ಈ ದಿನದಂದು ಲಕ್ಷ್ಮಿಯ ಆರಾಧನೆ ಮಾಡಿದರೆ ಸಂಪತ್ತು ವೃದ್ಧಿಯಾಗುವುದು.

ಆಷಾಢ ಲಕ್ಷ್ಮಿ ಪೂಜೆ

ಕೆಲವರು ಲಕ್ಷ್ಮಿ ಪೂಜೆ ವ್ರತವನ್ನು ಆಷಾಢ ಪೂರ್ತಿ ಮಾಡಿದರೆ ಇನ್ನು ಕೆಲವರು ಆಷಾಢ ಶುಕ್ಲ ದಶಮಿಯಂದು ಪೂಜೆ (ಆಷಾಢ ತಿಂಗಳ 10ನೇ ದಿನಕ್ಕೆ) ಪ್ರಾರಂಭಿಸಿ ಶ್ರಾವಣ ಮಾಸ ಶುಕ್ಲ ದಶಮಿಗೆ (ಶ್ರಾವಣ ಮಾಸದ 10ನೇ ದಿನಕ್ಕೆ) ಮುಕ್ತಾಯ ಮಾಡುತ್ತಾರೆ.

ಆಷಾಢ ಶುಕ್ರವಾರ ಪೂಜಾ ವಿಧಾನ

ಲಕ್ಷ್ಮಿಯ ಮೂರ್ತಿ ಅಥವಾ ಫೋಟೋ ಇಟ್ಟು ಅದಕ್ಕೆ ಹೂಗಳನ್ನು ಅರ್ಪಿಸಿ, ದೀಪ ಹಚ್ಚಿ ಪೂಜಿಸಲಾಗುವುದು. ಪೂಜೆ ಮಾಡುವಾಗ ಲಕ್ಷ್ಮಿ ಸಹಸ್ರನಾಮ ಪಠಿಸಬೇಕು. ಈ ಪೂಜೆ ಮಾಡುವುದರಿಂದ ಮನೆಯಲ್ಲಿ ಐಶ್ವರ್ಯ ಹೆಚ್ಚುವುದು, ಸಂಪತ್ತು ವೃದ್ಧಿಯಾಗುವುದು.

ಆಷಾಢ ಶುಕ್ರವಾರ ಮನೆಗೆ ಅಕ್ಕಪಕ್ಕದ ಗೃಹಿಣಿಯರನ್ನೂ ಪೂಜೆಗೆ ಆಹ್ವಾನಿಸಲಾಗುವುದು. ನಂತರ ಅವರಿಗೆ ತಾಂಬೂಲ ನೀಡಲಾಗುವುದು.

ಸಾಲಬಾಧೆ, ಕಷ್ಟಗಳಿಗೆ ವ್ರತದಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ?

ಆಷಾಢ ಶುಕ್ರವಾರ ಪ್ರಾತಃಕಾಲದಲ್ಲಿ ಎದ್ದು ಸ್ನಾನ ಮಾಡಿ ಬಿಳಿ ಬಟ್ಟೆ ಧರಿಸಿ ಉತ್ತರಾಭಿಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ಕಲಶ ಸ್ಥಾಪನೆ ಮಾಡಬೇಕು. ನಂತರ ಪದ್ಮಪ್ರಿಯೆ, ಪದ್ಮನಿ, ಪದ್ಮ ಹಸ್ತೆ, ಪದ್ಮಾಲಯೆ, ವಿಶ್ವಪ್ರಿಯೆ, ವಿಶ್ವಮನೋನುಕೂಲೆ, ತದ್ಬಾದ ಪದ್ಮಂ ವಹಿ ಸನ್ನಿಧತ್ವ ಎಂದು ಕೆಯನ್ನು ಆರಾಧಿಸಬೇಕು. ಪದ್ಮಾಸನ ಹಾಕಿ ಕುಳಿತಿರುವ ಲಕ್ಷ್ಮಿಯನ್ನು ಆಹ್ವಾನಿಸಬೇಕು. ಅಷ್ಟದಳವನ್ನಿಟ್ಟು, ಅದರ ಮೇಲೆ ಶ್ರೀಚಕ್ರವನ್ನಿಟ್ಟು ಕಲಶ ಸ್ಥಾಪನೆ ಮಾಡಿ ಪ್ರಾಣ ಪ್ರತಿಷ್ಠಪನೆ ಮಾಡಬೇಕು. ಪ್ರಾಣ ಪ್ರತಿಷ್ಠಾಪನೆ ಮಾಡುವಾಗ ವೇದ ಮಂತ್ರಗಳನ್ನು ಹೇಳಬೇಕು. ದೇವಿಗೆ ನೈವೇದ್ಯ ಅರ್ಪಿಸಿ ಮನೆಗೆ ಬಂದ ಸುಮಂಗಲಿಯರಿಗೆ ಅರಿಶಿಣ-ಕುಂಕುಮ ಹಾಗೂ ತಾಂಬೂಲ ನೀಡಿ. ಇದರಿಂದ ಕಷ್ಟಗಳು ನಿವಾರಣೆಯಾಗುವುದು.

English summary

Significance Of Laxmi Puja On Ashada Friday in Kannada

Significance Of laxmi puja on ashada friday in Kannada, read on..
Story first published: Thursday, July 15, 2021, 18:28 [IST]
X
Desktop Bottom Promotion