Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಒಂದಾದ ಮೇಲೊಂದು ಕಷ್ಟಗಳು ಬರುತ್ತಿದೆಯೇ? ಹಾಗಾದರೆ ಹೀಗೆ ಮಾಡಿ...
ನಾವು ಹುಟ್ಟಿದ ಘಳಿಗೆಯಿಂದಲೇ ನಮ್ಮ ಅದೃಷ್ಟ ನಿರ್ಧಾರವಾಗುತ್ತದೆ. ಹಾಗಂತ ಹುಟ್ಟಿದ ಸಮಯವನ್ನು ಬದಲಾಯಿಸಲಾಗುವುದಿಲ್ಲ. ನಾವು ಹೇಗೆ ಜೀವನವನ್ನು ಎದುರಿಸಬೇಕು ಎನ್ನುವುದನ್ನು ಶನಿದೇವರು ಕಲಿಸುತ್ತಾನೆ. ಜೀವನದಲ್ಲಿ ಯಾರು ಹೆಚ್ಚು ಶ್ರಮಪಡುತ್ತಾರೆ? ಯಾರಿಗೆ ಸಹಾನುಭೂತಿಯ ಗುಣವಿದೆ? ಅಂತಹವರನ್ನು ದೇವರು ಪ್ರೀತಿಸುತ್ತಾನೆ ಎನ್ನುವ ನಂಬಿಕೆಯಿದೆ. ಅಲ್ಲದೆ ಜೀವಿತಾವಧಿಯಲ್ಲಿ ತಿಳಿಯದೇ ಅಥವಾ ತಿಳುವಳಿಕೆ ಇಲ್ಲದೆ ಮಾಡಿರುವ ಕೆಲಸಗಳಿಗೆ ಕ್ಷಮಿಸುತ್ತಾನೆ.
ಮಾಡಿದ ತಪ್ಪುಗಳಿಗೆ ಶನಿದೇವರಲ್ಲಿ ಕ್ಷಮೆಯಾಚಿಸಲು ಶನಿವಾರ ಸೂಕ್ತ ಕಾಲ. ಶನಿ ದೇವರ ಪ್ರೀತಿಗೆ ಒಳಗಾದರೆ ಉತ್ತಮ ಭವಿಷ್ಯ ನಮ್ಮದಾಗುತ್ತದೆ. ಶನಿದೇವನನ್ನು ಸಂತೋಷಗೊಳಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು. ಆಗ ಸಮಸ್ಯೆಗಳು ಮಂಜಿನಂತೆ ಕರಗುತ್ತವೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹಾಗಾದರೆ ಆ ಕೆಲವು ಕ್ರಮಗಳು ಯಾವುದೆಂದು ತಿಳಿಯಲು ಮುಂದೆ ಓದಿ....

ಮೊಸರನ್ನ ದಾನ ಮಾಡಿ...
ಶನಿವಾರದಂದು ಶನಿ ದೇವಾಲಯಕ್ಕೆ ಅಥವಾ ಬಡವರಿಗೆ ನೀವೇ ತಯಾರಿಸಿರುವ ಮೊಸರನ್ನವನ್ನು ದಾನ ಮಾಡಿ....

ಕರಿ ಎಳ್ಳು...
ಕಪ್ಪು ಬಟ್ಟೆಯೊಂದರಲ್ಲಿ ಸ್ವಲ್ಪ ಕರಿ ಎಳ್ಳನ್ನು ಕಟ್ಟಿ, ಎಳ್ಳೆಣ್ಣೆಯಲ್ಲಿ ಅದ್ದಿ. ಅದನ್ನು ಸಮೀಪದ ಶನಿ ದೇವಾಲಯದಲ್ಲಿ ದೀಪದಂತೆ ಬೆಳಗಿಸಿ.

ಶನಿದೇವನ ಇಷ್ಟದ ಬಣ್ಣ ಕಪ್ಪು...
ಶನಿದೇವನ ಇಷ್ಟದ ಬಣ್ಣವೆಂದರೆ ಕಪ್ಪು. ಆದ್ದರಿಂದ ಶನಿವಾರದಂದು ಕಪ್ಪುಬಟ್ಟೆಯನ್ನು ತೊಡುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಲು ಸುಲಭವಾಗುವುದು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಜೊತೆಗೇ, ಶನಿವಾರದಂದು ಚರ್ಮದ ಅಥವಾ ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಖರೀದಿಸದಿರುವುದು ಉತ್ತಮ.

ಅಂಗವಿಕಲರಿಗೆ ಸಹಾಯ ಮಾಡಿ...
ಕುಷ್ಠರೋಗಿಗಳಿಗೆ ಅಥವಾ ಅಂಗವಿಕಲರಿಗೆ ಯಾವುದೇ ರೀತಿಯಲ್ಲಾದರೂ ಆರ್ಥಿಕ ಸಹಾಯ ಮಾಡಿ.

ಶನಿವಾರ ಯಾವುದೇ ಅಡುಗೆ ಎಣ್ಣೆಯನ್ನು ಖರೀದಿಸಬೇಡಿ
ಶನಿವಾರ ಯಾವುದೇ ಲೋಹ ಮತ್ತು ಅಡುಗೆ ಎಣ್ಣೆಯನ್ನು ಖರೀದಿಸದಿರಿ.

ಕಾಗೆಗೆ ಅನ್ನ ಹಾಕಿ
ಪ್ರತಿದಿನ ಕಾಗೆಗೆ ಅನ್ನ ಹಾಕಿ. ಕಾಗೆಯನ್ನು ಶನಿದೇವ ಎಂದು ಪರಿಗಣಿಸಲಾಗುತ್ತದೆ.

ಶನಿ ಮ೦ತ್ರ ಪಠಿಸಿ
"ನೀಲಾ೦ಜನ ಸ೦ಭಾಸ೦ ರವಿಪುತ್ರ೦ ಯಮಾಗ್ರಜ೦ ಛಾಯಾ ಮಾರ್ತ೦ಡ ಸ೦ಭೂತ೦ ತ೦ ನಮಾಮಯೇ ಶನೈಶ್ಚರ೦" ಈ ಮ೦ತ್ರವನ್ನು ಶನಿವಾರಗಳ೦ದು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪಠಿಸಿರಿ. ಈ ಮ೦ತ್ರವನ್ನು ಕನಿಷ್ಟ ಪಕ್ಷ ನೂರಾ ಎ೦ಟು ಬಾರಿಯಾದರೂ ಪಠಿಸಲು ನೀವು ಪ್ರಯತ್ನವನ್ನು ಮಾಡಬೇಕು.

ಶನಿದೇವರಿಗೆ ಬಡವರೇ ಪ್ರಿಯರು
ಶನಿದೇವನಿಗೆ ಬಡವರು ಮತ್ತು ಬಲ್ಲಿದರು ಇಷ್ಟವಾಗಿದ್ದು ಅವರಿಗೆ ಹೆಚ್ಚಿನ ಸಹಾಯ ಮಾಡುತ್ತಾನೆಂದು ನಂಬಲಾಗಿದೆ. ಬಡವರಿಗೆ ನೆರವಾಗುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಬಹುದು ಮತ್ತು ಶನಿದೋಷದಿಂದ ಮುಕ್ತಿ ಹೊಂದಬಹುದು ಎಂದು ಭಾವಿಸುವ ಭಕ್ತರು ಬಡಬಗ್ಗರಿಗೆ ಅಗತ್ಯವಿವಸ್ತುಗಳನ್ನು ದಾನರೂಪದಲ್ಲಿ ನೀಡುವ ಮೂಲಕ ಶನಿಯ ಪ್ರಭಾವದಿಂದ ಹೊರಬರಲು ಯತ್ನಿಸುತ್ತಾರೆ. ಬಡವರಿಗೆ ಬಟ್ಟೆ ಅಥವಾ ಹಣವನ್ನು ಶನಿವಾರದಂದು ನೀಡಲಾಗುತ್ತದೆ. ಪರ್ಯಾಯವಾಗಿ ಬಡವರಿಗೆ ಕಪ್ಪು ಬಟ್ಟೆಯ ಚಿಕ್ಕ ತುಂಡನ್ನೂ ದಾನರೂಪದಲ್ಲಿ ಬಡಬಗ್ಗರಿಗೆ ನೀಡಬಹುದು.

ಹನುಮ೦ತನನ್ನು ಆರಾಧಿಸಿ
ಮ೦ಗಳವಾರ ಹಾಗೂ ಶನಿವಾರಗಳ೦ದು ಭಗವಾನ್ ಹನುಮ೦ತನನ್ನು ಆರಾಧಿಸುವುದರಿ೦ದ ಶನಿಯು ಶಾ೦ತನಾಗಲು ನೆರವಾಗುತ್ತದೆ. ಜೊತೆಗೆ, ಪ್ರತಿದಿನವೂ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ ಶನಿದೇವನಿ೦ದ ಸ೦ಭವಿಸಬಹುದಾದ ವೈಪರೀತ್ಯಗಳು ಉಪಶಮನಗೊಳ್ಳಲು ನೆರವಾಗುತ್ತದೆ.
ಶನಿ ದೋಷವಿದ್ದಲ್ಲಿ, ಹನುಮಂತನನ್ನು ನೆನೆಯಿರಿ, ಸಂಕಷ್ಟ ಪರಿಹಾರವಾಗುವುದು


Click it and Unblock the Notifications











