Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಧ್ಯಾನ ಮಾಡುವಾಗ ಬೆಕ್ಕನ್ನು ಕಟ್ಟಿಹಾಕಬೇಕಾ?

ಯಾವ ಕಾರಣಕ್ಕೆ ಅಂತಹ ಆಚರಣೆಗಳನ್ನು ಕಣ್ಮುಚ್ಚಿಕೊಂಡು ಆಚರಿಸಿಕೊಂಡು ಬರಲಾಗುತ್ತಿತ್ತು ಎಂದು ತಿಳಿಯುವ ಕುತೂಹಲ ಕೂಡ ಅನೇಕರಲ್ಲಿ ಇರುವುದಿಲ್ಲ. ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಅರಿಯುವ ತಾಳ್ಮೆಯೂ ಇರುವುದಿಲ್ಲ. ಕೆಲ ಆಚರಣೆಗಳು ಅರ್ಥಹೀನವಾಗಿದ್ದರೂ, ಅಜ್ಜ ನೆಟ್ಟ ಆಲದ ಮರಕ್ಕೆ ಜೋತುಬೀಳುವವರ ಸಂಖ್ಯೆಯೇನು ಕಡಿಮೆಯಿಲ್ಲ.
ಅರ್ಥವಿಲ್ಲದ ಆಚರಣೆಗಳನ್ನು ಇಂದಿನ ಆಧುನಿಕ ಯುಗದಲ್ಲಿ ಕೂಡ ಆಚರಿಸುವುದು ಎಷ್ಟು ಸರಿ? ಇಂಥವುಗಳನ್ನು ಹಿಂಬಾಲಿಸುವವರ ಮನೋಧರ್ಮವನ್ನು ಬದಲಾಯಿಸುವುದು ಹೇಗೆ? ಇದನ್ನೆಲ್ಲ ಚಿಂತಿಸುತ್ತಿರುವಾಗ ಚಿಂತನೆಗೆ ಹಚ್ಚುವ ಝೆನ್ ಕಥೆಯೊಂದು ನೆನಪಾಗುತ್ತದೆ.
ಒಂದಾನೊಂದು ಕಾಲದಲ್ಲಿ ಆಧ್ಯಾತ್ಮಿಕ ಗುರುವೊಬ್ಬರು ಗುರುಕುಲ ನಡೆಸುತ್ತಿದ್ದರು. ಒಂದು ದಿನ ಸಂಜೆ ಆಧ್ಯಾತ್ಮಿಕ ಗುರುವು ತನ್ನ ಶಿಷ್ಯರೊಂದಿಗೆ ಧ್ಯಾನವನ್ನು ಆರಂಭಿಸಿದರು. ಆಗ ಆ ಮಠದೊಳಗೆ ಇದ್ದ ತುಂಟ ಬೆಕ್ಕು ತುಂಬಾ ಶಬ್ಧ ಮಾಡುತ್ತಿತ್ತು. ಇದರಿಂದ ಅವರ ಧ್ಯಾನಕ್ಕೆ ಅಡಚಣೆ ಉಂಟಾಯಿತು.
ಇದರ ಬಗ್ಗೆ ಚಿಂತಿಸಿದ ಗುರುಗಳು ಸಂಜೆ ಅಭ್ಯಾಸದ ಸಮಯದಲ್ಲಿ ಆ ಬೆಕ್ಕನ್ನು ಕಟ್ಟಿ ಹಾಕುವಂತೆ ಆಜ್ಞೆ ಹೊರಡಿಸಿದರು. ಹಲವು ವರ್ಷಗಳ ನಂತರ ಆ ಗುರುಗಳು ನಿಧನ ಹೊಂದಿದರು. ಆದರೆ ಧ್ಯಾನದ ಸಮಯದಲ್ಲಿ ಆ ಬೆಕ್ಕನ್ನು ಕಟ್ಟಿ ಹಾಕುವುದು ಹಾಗೆಯೇ ಮುಂದುವರೆಯಿತು.
ಮತ್ತು ಅಂತಿಮವಾಗಿ ಒಂದು ದಿನ ಆ ಬೆಕ್ಕು ಸಹ ಒಂದು ದಿನ ಮರಣ ಹೊಂದಿತು. ಆದರೆ ಮಠದ ವಾಸಿಗಳು ಸುಮ್ಮನಾಗಲಿಲ್ಲ. ನಂತರ ಆ ಮಠಕ್ಕೆ ಮತ್ತೊಂದು ಬೆಕ್ಕನ್ನು ಕರೆತಂದರು. ಮತ್ತು ಅದನ್ನೂ ಹಿಂದೆ ಗುರುಗಳು ಕಟ್ಟುತ್ತಿದ್ದ ಹಾಗೆ ಕಟ್ಟಲು ಆರಂಭಿಸಿದರು.
ಶತ ಶತಮಾನಗಳು ಕಳೆದವು. ಆಧ್ಯಾತ್ಮ ಗುರುಗಳ ವಂಶಸ್ಥರು "ಧ್ಯಾನ ಮತ್ತು ಅಭ್ಯಾಸವನ್ನು ಮಾಡುವಾಗ ಬೆಕ್ಕನ್ನು ಕಟ್ಟಿಹಾಕಬೇಕು" ಎಂಬುದರ ಬಗ್ಗೆ ವಿದ್ವತ್ಪೂರ್ಣವಾದ, ಶ್ರೇಷ್ಠ ಗ್ರಂಥಗಳನ್ನು ಬರೆದರು.



Click it and Unblock the Notifications
