For Quick Alerts
ALLOW NOTIFICATIONS  
For Daily Alerts

ರಂಜಾನ್‌ ಉಪವಾಸ ನಿಯಮಗಳು: ಈ ಪವಿತ್ರ ತಿಂಗಳು ಈ ಕಾರ್ಯಗಳನ್ನು ಮಾಡಲೇಬಾರದು

|

ಮಾರ್ಚ್ 23ರಿಂದ ರಂಜಾನ್ ಮಾಸ ಪ್ರಾರಂಭವಾಗಿದೆ. ರಂಜಾನ್‌ ಮುಸ್ಲಿಂರಿಗೆ ತುಂಬಾ ಪವಿತ್ರವಾದ ಮಾಸ. ಈ ಮಾಸದಲ್ಲಿ ಕಟ್ಟು ನಿಟ್ಟಿನ ಉಪವಾಸ ಪಾಲಿಸುವುದು ಮಾತ್ರವಲ್ಲ, ಕೆಲವೊಂದು ನಿಯಮಗಳನ್ನೂ ಪಾಲಿಸಬೇಕಾಗುತ್ತದೆ.

Ramadan

ರಂಜಾನ್‌ ಮಾಸದಲ್ಲಿ ಮುಸ್ಲಿಂ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಪಾಪಗಳಿಂದ ಮೋಕ್ಷ ಸಿಗುವುದು, ಅಲ್ಲಾನ ಕೃಪೆಗೆ ಪಾತ್ರರಾಗುತ್ತೇವೆ ಎಂಬ ನಂಬಿಕೆ.

ಬೆಳಗ್ಗೆ ಸೆಹ್ರಿ ಬಳಿಕ ಉಪವಾಸವನ್ನು ಹಿಡಿದ ಮೇಲೆ ಉಪವಾಸ ಹಿಡಿಯಬೇಕು. ಯಾರು ಉಪವಾಸ ಮಾಡಬೇಕು, ಯಾರು ಮಾಡಬಾರದು? ಉಪವಾಸ ಹಿಡಿದ ಮೇಲೆ ಏನೆಲ್ಲಾ ಮಾಡಬಾರದು ಎಂಬುವುದರೆ ಬಗ್ಗೆ ಈ ರೀತಿ ಹೇಳಲಾಗಿದೆ:

ರಂಜಾನ್ ಉಪವಾಸ ನಿಯಮಗಳು

ರಂಜಾನ್ ಉಪವಾಸ ನಿಯಮಗಳು

* ನೀವು ಆರೋಗ್ಯವಂತರಾಗಿದ್ದು ಹದಿ ಹರೆಯದ ಪ್ರಾಯಕ್ಕೆ ಬಂದಿದ್ದರೆ ಉಪವಾಸ ಮಾಡಬೇಕು. ಚಿಕ್ಕ ಮಕ್ಕಳಿಗೆ ಉಪವಾಸವಿಲ್ಲ.

* ನೀವು ಪ್ರಯಾಣ ಮಾಡುವುದಾದರೆ ಅಥವಾ ಆರೋಗ್ಯ ಸರಿಯಿಲ್ಲದಿದ್ದರೆ ಉಪವಾಸ ಮಾಡಬೇಕಾಗಿಲ್ಲ, ಆದರೆ ನಂತರದ ದಿನಗಳಲ್ಲಿ ಮಾಡಬೇಕಾಗುತ್ತದೆ.

* ಮುಟ್ಟಿನ ಸಮಯದಲ್ಲಿ ಅಥವಾ ಬಾಣಂತಿಯರು ಉಪವಾಸ ಮಾಡಬೇಕಾಗಿಲ್ಲ.

* ಎದೆ ಹಾಲುಣಿಸುವ ತಾಯಿ ಬೇಕಾದರೆ ಉಪವಾಸ ಮಾಡದಿರಬಹುದು. ನಂತರ ಬೇಕಾದರೆ ಉಪವಾಸ ಮಾಡಬಹುದು ಅಥವಾ ಫಿದಿಯಾ ಅಂದರೆ ಮಿಸ್ಸಾದ ದಿನಗಳ ಉಪವಾಸ ಮಾಡಬಹುದು.

ಈ ಕಾರ್ಯಗಳನ್ನು ಮಾಡಲೇಬಾರದು:

ಈ ಕಾರ್ಯಗಳನ್ನು ಮಾಡಲೇಬಾರದು:

ಏನೂ ಸೇವಿಸಬಾರದು: ಬೇಕಂತಲೇ ತಿನ್ನುವುದು, ಕುಡಿಯುವುದು ಮಾಡಬಾರದು ಹಾಗೆ ಮಾಡಿದರೆ ಉಪವಾಸ ಕಟ್‌ ಆಗುವುದು.ಒಂದುವೇಳೆ ಉಪವಾಸವಿರುವುದು ಮರೆತು ತಿನ್ನುವುದು-ಕುಡಿಯುವುದು ಮಾಡಿದರೆ ಉಪವಾಸ ಮುರಿಯುವುದು.

ವಾಂತಿ ಮಾಡುವುದು

ವಾಂತಿ ಬಂದಂತೆ ಅನಿಸಿದರೆ ಉಪವಾಸ ಮುಂದುವರೆಯುತ್ತೆ, ಆದರೆ ವಾಂತಿ ಮಾಡಿದರೆ ಉಪವಾಸ ಕಟ್‌ ಆಗುವುದು.

ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು

ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು

ರಂಜಾನ್‌ ಉಪವಾಸದ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಮಹಾಪಾಪ. ಹಾಗೇ ಮಾಡಿದರೆ 60 ದಿನಗಳ ಕಾಲ ಉಪವಾಸ ಮಾಡಬೇಕಾಗುತ್ತೆ ಹಾಗೂ 60 ಬಡವರಿಗೆ ಆಹಾರ ನೀಡಬೇಕು.

ಬಾಣಂತಿಯರು, ಮುಟ್ಟಾದ ಮಹಿಳೆಯರು ಉಪವಾಸ ಮಾಡುವಂತಿಲ್ಲ

ದೇಹದಲ್ಲಿ ರಕ್ತಸ್ರಾವವಿರುವಾಗ ಉಪವಾಸ ಮಾಡುವಂತಿಲ್ಲ. ಉಪವಾಸವಿದ್ದ ಮಹಿಳೆಗೆ ಎಂಜೆಗೆ ಮುನ್ನ ಮುನ್ನ ಮುಟ್ಟಾದರೆ ಆ ದಿನದ ಉಪವಾಸವನ್ನು ಪರಿಗಣಿಸಲು ಆಗುವುದಿಲ್ಲ, ಅದರ ಬದಲಿಗೆ ಬೇರೆ ದಿನಗಳಲ್ಲಿ ಮಾಡಬೇಕಾಗುತ್ತೆ.

ಉಪವಾಸದಲ್ಲಿ ಇರುವಾಗ ಈ ರೀತಿ ಮಾಡಲು ಅನುಮತಿ ಇದೆ

ಉಪವಾಸದಲ್ಲಿ ಇರುವಾಗ ಈ ರೀತಿ ಮಾಡಲು ಅನುಮತಿ ಇದೆ

* ಮುಖವನ್ನು ತೊಳೆಯಬಹುದು, ಆದರೆ ಯಾವುದೇ ಕಾರಣಕ್ಕೆ ಒಂದು ಹನಿ ನೀರು ಸೇವಿಸುವಂತಿಲ್ಲ.

* ಸ್ನಾನ ಮಾಡಬಹುದು, ಬಾಯಿ ಮುಕ್ಕಳಿಸಬಹುದು ಆದರೆ ನೀರನ್ನು ಸೇವಿಸುವಂತಿಲ್ಲ.

* ಕಣ್ಣಿಗೆ ಕಡಿಗೆ ಹಚ್ಚಿಕೊಳ್ಳಬಹುದು, ಕಣ್ಣಿಗೆ ಡ್ರಾಪ್‌ ಹಾಕಬಹದು.

* ಆರೋಗ್ಯ ಸಮಸ್ಯೆ ಇರುವವರು ಲಸಿಕೆಯನ್ನು ಪಡೆಯಬಹುದು.

* ಗೊತ್ತಿಲ್ಲದೆ ಎಂಜಲು ನುಂಗಿದರೆ ಅಥವಾ ದೂಳಿನ ಪ್ರದೇಶಕ್ಕೆ ಹೋದಾಗ ನಮಗೆ ಗೊತ್ತಿಲ್ಲದೆ ಸ್ವಲ್ಪ ದೂಳು ಬಾಯಿಯೊಳಗೆ ಹೋದರೆ ಉಪವಾಸ ಮುರಿಯಲ್ಲ.

* ಆಹಾರದ ರುಚಿ ನೋಡಿ ಅದನ್ನು ತಿನ್ನದೆ ಉಗುಳಿ ಬಾಯಿಯನ್ನು ತೊಳೆದರೆ ಉಪವಾಸ ಮುರಿಯಲ್ಲ.

* ಸಂಗಾತಿಗೆ ಒಂದು ಅಪ್ಪುಗೆ ಅಥವಾ ಮುತ್ತು ನೀಡಬಹುದು, ಆದರೆ ಲೈಂಗಿಕಕ್ರಿಯೆಯಲ್ಲಿ ತೊಡಗುವಂತಿಲ್ಲ.

English summary

Ramadan 2023: Fasting Rules: Tips, Facts and Things to Avoid in in kannada

Ramadan: Fasting Rules: Tips, Facts and Things to Avoid in in kannada, read on...
X
Desktop Bottom Promotion