For Quick Alerts
ALLOW NOTIFICATIONS  
For Daily Alerts

ರಾಮ ನವಮಿ ಆಚರಣೆಯ ಹಿಂದಿರುವ ಮಹತ್ವ

|

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವ ದೇವತೆಗಲಿದ್ದಾರೆ. ವಿಷ್ಣು ಹಾಗೂ ಶಿವನ ಆರಾಧಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶ್ರೀರಾಮ ಕೂಡ ವಿಷ್ಣುವಿನ ಅವತಾರವೆಂದು ಹೇಳಲಾಗುತ್ತದೆ. ಹೀಗಾಗಿ ಭಾರತದಲ್ಲಿ ಶ್ರೀರಾಮ ದೇವರನ್ನು ಕೋಟ್ಯಂತರ ಮಂದಿ ಪೂಜಿಸುವರು. ಶ್ರೀರಾಮ ದೇವರ ಹುಟ್ಟುಹಬ್ಬವನ್ನು ನಾವೆಲ್ಲರೂ ಶ್ರೀರಾಮ ನವಮಿ ಎಂದು ಆಚರಿಸುತ್ತೇವೆ.

Ram Navami 2020

ಇದೇ ಬರುವ ಎಪ್ರಿಲ್ 2, 2020ರಂದು ರಾಮ ನವಮಿ. ಇದು ಮಹಾವೀರ ಜಯಂತಿಗಿಂತ ನಾಲ್ಕು ದಿನ ಮೊದಲು ಬರುತ್ತಿದೆ.
ರಾಮ ನವಮಿ

ರಾಮ ನವಮಿ

ಈ ವರ್ಷ ರಾಮ ನವಮಿ 2020ರ ಪ್ರಾಮುಖ್ಯತೆ

ವಿಷ್ಣುವಿನ ಅವತಾರ ಎಂದು ಹೇಳಲಾಗುವ ರಾಮ ದೇವರ ಹುಟ್ಟುಹಬ್ಬವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ. ರಾಮ ದೇವರು ಭೂಲೋಕದಲ್ಲಿ ರಾಜ ದಶರಥ ಮತ್ತು ರಾಣಿ ಕೌಶಲ್ಯೆಯ ಮಗನಾಗಿ ಅಯೋಧ್ಯೆಯಲ್ಲಿ ಜನ್ಮ ತಾಳಿದರು ಎಂದು ಪುರಾಣಗಳು ಹೇಳುತ್ತವೆ. ಅವರು ತ್ರೇತಾಯುಗದಲ್ಲಿ ಜನ್ಮ ಪಡೆದರು ಎಂದು ಹೇಳಲಾಗುತ್ತದೆ.

ರಾಮ ದೇವರು ವಿಷ್ಣುವಿನ ಏಳನೇ ಅವತಾರ ಎಂದು ನಂಬಲಾಗುತ್ತದೆ ಮತ್ತು ಅವರನ್ನು ಪೂಜಿಸುವ ಕಾರಣದಿಂದ ದುಷ್ಟಶಕ್ತಿಗಳು ದೂರವಾಗುವುದು ಮತ್ತು ಭೂಮಿ ಮೇಲೆ ದೈವಿ ಶಕ್ತಿಯ ಪ್ರವೇಶವಾಗುವುದು ಎಂದು ನಂಬಲಾಗಿದೆ.

ರಾಮ ನವಮಿ 2020: ದಿನ ಮತ್ತು ಪೂಜೆಯ ಸಮಯ

ರಾಮ ನವಮಿ 2020: ದಿನ ಮತ್ತು ಪೂಜೆಯ ಸಮಯ

ದ್ರಿಕ್ ಪಂಚಾಂಗದ ಪ್ರಕಾರ ರಾಮ ನವಮಿಯು ಎಪ್ರಿಲ್ 2, 2020ರ ಗುರುವಾರದಂದು ಆಚರಿಸಲಾಗುತ್ತದೆ.

ರಾಮ ನವಮಿಯು ಪೂಜೆಯ ಸಮಯವು ಈ ರೀತಿಯಾಗಿ ಇದೆ.

ರಾಮ ನವಮಿಯ ಮಧ್ಯಾಹ್ನ ಮುಹೂರ್ತ: ಪೂರ್ವಾಹ್ನ 11.57 ಅಪರಾಹ್ನ 2.35

ಸಮಯ: 2 ಗಂಟೆ 38 ನಿಮಿಷ

ಸೀತಾ ನವಮಿ ಮೇ 1, 2020

ರಾಮ ನವಮಿ ಮಧ್ಯಾಹ್ನ ಮುಹೂರ್ತ ಮಧ್ಯಾಹ್ನ1.16

ರಾಮ ನವಮಿ ತಿಥಿ ಆರಂಭ: ಎಪ್ರಿಲ್ 01, 2020, ರಾತ್ರಿ 11.10

ನವಮಿ ತಿಥಿ ಅಂತ್ಯ: ಎಪ್ರಿಲ್ 02, 2020 ರಾತ್ರಿ 10.13

ರಾಮ ನವಮಿ 2020 ಆಚರಣೆ

ರಾಮ ನವಮಿ 2020 ಆಚರಣೆ

ರಾಮ ನವಮಿಯು ಹಿಂದೂಗಳಿಗೆ ಹೆಚ್ಚು ಪವಿತ್ರವಾಗಿದ್ದು, ಈ ದಿನದಂದು ಹೆಚ್ಚಿನ ಜನರು ದಿನವಿಡಿ ಉಪವಾಸ ಮಾಡುವರು. ಇದು ಬೆಳಗ್ಗಿನಿಂದ ಆರಂಭವಾಗಿ ಮರುದಿನ ಬೆಳಗ್ಗಿನ ತನಕ ಇರುತ್ತದೆ. ಇವರು ರಾಮ ಜಪ ಮಾಡುವರು ಅಥವಾ ರಾಮಾಯಣ ಅಥವಾ ನಮ ರಾಮಾಯಣವನ್ನು ಪಠಿಸುವರು. ರಾಮ ನವಮಿಯ ಮೆರವಣಿಗೆ ವೇಳೆ ರಾಮ ಮತ್ತು ಸೀತೆಗೆ ಮದುವೆ ಕೂಡ ಮಾಡಲಾಗುತ್ತದೆ.

ರಾಮ ನವಮಿಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಭಜನೆ ಮತ್ತು ಕೀರ್ತನೆಗಳು ನಡೆಯುತ್ತಲೇ ಇರುತ್ತದೆ.

ರಾಮ ನವಮಿ ಉಪವಾಸ

ರಾಮ ನವಮಿ ಉಪವಾಸ

ರಾಮ ನವಮಿ ಸಂದರ್ಭದಲ್ಲಿ ಉಪವಾಸ ಮಾಡುವವರು ತುಂಬಾ ಕಠಿಣ ವ್ರತಾಚರಣೆ ಮಾಡುವರು. ಇವರು ಯಾವುದೇ ಅನ್ನಾಹಾರ, ನೀರು ಸೇವಿಸದೆ ಉಪವಾಸ ಮಾಡುವರು. ಕೆಲವು ಭಕ್ತರು ನೀರು ಮತ್ತು ಹಣ್ಣುಗಳನ್ನು ಸೇವಿಸುವರು.

ರಾಮ ದೇವರು ಅಯೋಧ್ಯೆಯಲ್ಲಿ ಜನಿಸಿದರು ಎಂದು ನಂಬಲಾಗಿದೆ ಮತ್ತು ರಾಮನವಮಿಯನ್ನು ಅಯೋಧ್ಯೆಯಲ್ಲಿ ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಾಮ ನವಮಿ ಸಂದರ್ಭದಲ್ಲಿ ಭಕ್ತರು ಅಯೋಧ್ಯೆಗೆ ಬಂದು ಸರಾಯು ನದಿಯಲ್ಲಿ ಸ್ನಾನ ಮಾಡುವರು ಮತ್ತು ಹುಟ್ಟುಹಬ್ಬದ ಆಚರಣೆಗೆ ರಾಮ ಮಂದಿರಗಳಿಗೆ ಭೇಟಿ ನೀಡುವರು.

English summary

Ram Navami 2020 Date and Significance Of Rituals

Here are Ram Navami 2020 Date and significance of rituals, Read on.
Story first published: Tuesday, March 31, 2020, 16:00 [IST]
X
Desktop Bottom Promotion