For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ 'ದೇವರ ಕೋಣೆ' ಹೀಗಿರಲಿ, ಎಲ್ಲವೂ ಶುಭವಾಗುವುದು...

By Hemanth
|

ಮನೆಯೇ ಮಂತ್ರಾಲಯ, ಮನಸೇ ದೇವಾಲಯ ಎನ್ನುವ ಹಾಡು ಈಗಲೂ ನಮ್ಮ ನೆನಪಿನಲ್ಲಿದೆ. ಮನೆಯೆಂದರೆ ದೇವಾಲಯದಂತೆ ಎನ್ನುವ ಮಾತಿದೆ. ಯಾವುದೇ ಧರ್ಮವಾಗಲಿ ಅಲ್ಲಿ ದೇವರ ಪ್ರಾರ್ಥನೆಗೆಂದೇ ಒಂದು ಜಾಗವಿರುತ್ತದೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಮನೆಯಲ್ಲಿ ಒಂದು ಸಣ್ಣ ಕೋಣೆಯನ್ನು ದೇವರ ಪೂಜಾ ಸ್ಥಳವಾಗಿ ನಿರ್ಮಿಸಿರುತ್ತಾರೆ.

ಮನೆಯ ಶಾಂತಿ ನೆಮ್ಮದಿಗೆ-ಒಂದು ಲೋಟ 'ಉಪ್ಪು' ನೀರಿನ ಪರೀಕ್ಷೆ!

ಈ ಕೋಣೆಯಲ್ಲಿ ಕುಳಿತುಕೊಂಡು ದೇವರನ್ನು ಸ್ಮರಿಸಿದರೆ ಆಗ ಮನಸ್ಸಿನಲ್ಲಿರುವ ನೋವು ಕಡಿಮೆಯಾಗಿ ಮನಸ್ಸಿಗೆ ಶಾಂತಿ ಸಿಗುವುದು. ಮನೆಯಲ್ಲಿರುವ ನಕಾರಾತ್ಮಕ ಅಂಶ ದೂರ ಮಾಡಿ ಧನಾತ್ಮಕ ಅಂಶ ಬರುವಂತೆ ಮಾಡಲು ಮನೆಯ ಮಂದಿರ ಅತೀ ಮುಖ್ಯವಾಗಿದೆ. ಮನೆಯಲ್ಲಿ ಮಂದಿರವನ್ನು ಹೇಗೆ ಇಟ್ಟುಕೊಳ್ಳಬೇಕು, ಅಲ್ಲಿ ಏನು ಇಡಬೇಕು ಮತ್ತು ಏನನ್ನು ಇಡಬಾರದು ಮೊದಲಾದ ಸುವಿಚಾರಗಳನ್ನು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ತಿಳಿಯಲು ಓದನ್ನು ಮುಂದುವರಿಸಿ.....

ಮೂರ್ತಿ ಬೆನ್ನು ಹಾಕಿರಬಾರದು

ಮೂರ್ತಿ ಬೆನ್ನು ಹಾಕಿರಬಾರದು

ಮನೆಯಲ್ಲಿರುವ ಮಂದಿರದಲ್ಲಿ ಯಾವುದೇ ಮೂರ್ತಿಯು ನಿಮಗೆ ಬೆನ್ನು ಹಾಕಿರಬಾರದು. ಯಾವುದೇ ಮೂರ್ತಿಯ ಬೆನ್ನನ್ನು ಇನ್ನೊಂದು ಮೂರ್ತಿ ನೋಡುತ್ತಿರಬಾರದು. ಹೀಗಿದ್ದರೆ ಮೂರ್ತಿಯ ಹಿಂಭಾಗವನ್ನು ಮುಚ್ಚಿಬಿಡಿ. ಯಾವುದೇ ದಿಕ್ಕಿನಿಂದ ಹಿಂಭಾಗ ಕಾಣಬಾರದು.

ನಕಲು

ನಕಲು

ಮಂದಿರದಲ್ಲಿ ಒಂದೇ ದೇವರ ಎರಡು ಮೂರ್ತಿಗಳು ಇರಬಾರದು. ಅವುಗಳು ಸ್ವಲ್ಪ ಭಿನ್ನವಾಗಿ ಕಾಣಿಸುತ್ತದೆ ಎಂದು ನಿಮಗನಿಸಿದರೂ ಇದನ್ನು ಇಡಬಾರದು. ನಿಮಗೆ ಬೇಕೇಬೇಕು ಎಂದಾದರೆ ಒಂದು ಮೂರ್ತಿ ಮತ್ತು ಇನ್ನೊಂದು ಫೋಟೋ ಇಡಿ. ಆದರೆ ಎರಡು ಮೂರ್ತಿಗಳನ್ನು ಇಡಲೇಬೇಡಿ.

ಚಿತ್ರಿಸಿದ ಮೂರ್ತಿ

ಚಿತ್ರಿಸಿದ ಮೂರ್ತಿ

ಚಿತ್ರಿಸಿದ ಮೂರ್ತಿ ಎಷ್ಟೇ ಪ್ರಾಮುಖ್ಯವಾಗಿದ್ದರೂ ಮತ್ತು ಹಳೆಯದ್ದಾಗಿದರೂ ಅದನ್ನು ಮನೆಯ ಮಂದಿರದಲ್ಲಿ ಇಡಬೇಡಿ. ಇದನ್ನು ಮಂದಿರದಿಂದ ಹೊರಗಿಟ್ಟು ಅದಕ್ಕೆ ತೀರ್ಥ ಸ್ನಾನ ಮಾಡಿಸಬಹುದು. ಅಶ್ವತ್ಥ ಮರದ ಕೆಳಗಡೆ ಚಿತ್ರಿಸಿದ ಮೂರ್ತಿ ಇಡಬಹುದು.

ಮನೆಯ ಪೂಜಾ ಗೃಹದ ವಿನ್ಯಾಸಕ್ಕೂ ಆದ್ಯತೆ ನೀಡಿ

ಯುದ್ಧ ಮಾಡುವ ದೇವರು

ಯುದ್ಧ ಮಾಡುವ ದೇವರು

ದೇವರು ಯಾರೊಂದಿಗೂ ಯುದ್ಧ ಮಾಡುತ್ತಾ ಇರುವ ಅಥವಾ ಯಾವುದನ್ನೋ ಧ್ವಂಸ ಮಾಡುತ್ತಿರುವ ಮೂರ್ತಿ ಮನೆಯ ಮಂದಿರದಲ್ಲಿ ಇಡಬೇಡಿ. ದೇವರು ಭೂಮಿಯ ಒಲಿತಿಗಾಗಿ ಯುದ್ಧ ಮಾಡಿದ್ದರೂ ಅದು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಅಶುಭ.

ಅತಿಯಾದ ಭಾವನೆಗಳಿರುವ ಮೂರ್ತಿಗಳು

ಅತಿಯಾದ ಭಾವನೆಗಳಿರುವ ಮೂರ್ತಿಗಳು

ಕೆಲವೊಂದು ದೇವರು ಕೋಪದಿಂದ ಇರುವ ಮೂರ್ತಿಗಳು ಇರುತ್ತದೆ. ನಟರಾಜನ ಮೂರ್ತಿಯು ಸುಂದರವಾಗಿ ಕಾಣಿಸುತ್ತದೆ ಮತ್ತು ಶಿವನ ರುದ್ರನರ್ತನದ ಮೂರ್ತಿ ಮನೆಯ ಮಂದಿರದಲ್ಲಿ ಇಡುವುದನ್ನು ತಪ್ಪಿಸಿ. ಅತಿಯಾದ ಭಾವನೆ ಇರುವ ಮೂರ್ತಿಗಳು ಮನೆಯ ಮಂದಿರದಲ್ಲಿ ಇರಬಾರದು. ತುಂಬಾ ಆರಾಮವಾಗಿರುವ ಮೂರ್ತಿಗಳು ಒಳ್ಳೆಯದು.

ಮಂದಿರಕ್ಕೆ ವಾಸ್ತು ಸಲಹೆ

ಮಂದಿರಕ್ಕೆ ವಾಸ್ತು ಸಲಹೆ

ಮನೆ ಅಥವಾ ಕಚೇರಿಯಲ್ಲಿ ಇರುವಂತಹ ಮಂದಿರಗಳು ನಮ್ಮನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ನಾವು ಕೋಪ, ಬೇಸರ ಹಾಗೂ ಭೀತಿಯಲ್ಲಿರುವಾಗ ನಮಗೆ ನೆರವಾಗುತ್ತದೆ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ. ಇದರಿಂದ ಮನೆಯಲ್ಲಿರುವ ಇತರ ಕೋಣೆಗಳಂತೆ ಮನೆಯಲ್ಲಿರುವ ಮಂದಿರಕ್ಕೆ ಹೆಚ್ಚಿನ ಗಮನ ನೀಡಬೇಕು.

ಎತ್ತರ

ಎತ್ತರ

ಮನೆಯ ನೆಲಕ್ಕಿಂತ ಕೆಲವು ಇಂಚು ಎತ್ತರದಲ್ಲಿ ದೇವರ ಮಂದಿರವಿರಬೇಕು. ನಾವು ನಿಂತುಕೊಳ್ಳುವಾಗ ನಮ್ಮ ಎದೆಯ ನೇರಕ್ಕೆ ಮೂರ್ತಿಯ ತಳವಿರಬೇಕು. ದೇವರ ಮೂರ್ತಿ ಎತ್ತರದಲ್ಲಿದ್ದರೆ ಮನುಷ್ಯನು ಮೂರ್ತಿಯ ಮುಖವನ್ನು ನೋಡಲು ಸಾಧ್ಯವಿಲ್ಲ. ಕೆಳಮಟ್ಟದಲ್ಲಿದ್ದರೆ ದೇವರಿಗೆ ನಾವು ಅಗೌರವ ಸೂಚಿಸಿದಂತೆ.

ಆರಾಮವಾಗಿರಲಿ

ಆರಾಮವಾಗಿರಲಿ

ಮನೆಯಲ್ಲಿನ ಮಂದಿರವು ಕುಳಿತುಕೊಳ್ಳಲು ಮತ್ತು ನಿಲ್ಲಲು ಸುಲಭವಾಗಿರಬೇಕು. ಅತಿಯಾಗಿ ತಂಪಿದ್ದರೆ ಹೀಟರ್ ಬಳಸಿ. ಕಡಿಮೆ ಬೆಳಕಿದ್ದರೆ ಹೆಚ್ಚಿನ ದೀಪಗಳನ್ನು ಹಚ್ಚಿ. ನಮ್ಮಂತೆ ದೇವರಿಗೂ ಆರಾಮದಾಯಕವಾಗಿರುವ ಸ್ಥಳವಿಷ್ಟ.

ಮನೆಯಲ್ಲಿ ಗಣೇಶ ವಿಗ್ರಹ ಸ್ಥಾಪನೆಗೆ ಸೂಕ್ತ ಜಾಗ ಯಾವುದು?

ಮರ

ಮರ

ಮನೆಯಲ್ಲಿ ಮರದಿಂದ ಮಂದಿರ ನಿರ್ಮಿಸಿದರೆ ತುಂಬಾ ಒಳ್ಳೆಯದು. ಇದರಿಂದ ನಕಾರತ್ಮಕತೆ ದೂರವಾಗಿ ಶಾಂತಿಯ ವಾತಾವರಣ ನಿರ್ಮಾಣವಾಗುವುದು. ಮರ ಹೊರತುಪಡಿಸಿ ಮಾರ್ಬಲ್ ನಿಂದಲೂ ಇದನ್ನು ತಯಾರಿಸಬಹುದು.

ಬೆಳಕಿನ ಕೊರತೆ

ಬೆಳಕಿನ ಕೊರತೆ

ಮಂದಿರದಲ್ಲಿ ಯಾವಾಗಲೂ ದೀಪಗಳನ್ನು ಉರಿಸುತ್ತಿರುವಿರಾದರೆ ಅದನ್ನು ಆಗ್ನೇಯ ಭಾಗದಲ್ಲಿಡಿ. ಇದು ಮನೆಗೆ ಧನಾತ್ಮಕತೆ ಉಂಟು ಮಾಡುವುದಲ್ಲದೆ ಸಮೃದ್ಧಿಯನ್ನು ತರಲಿದೆ. ಗಾಢ ಬಣ್ಣದ ದೀಪಗಳನ್ನು ಮಂದಿರದಲ್ಲಿ ಹಚ್ಚಿ.

ದಿಕ್ಕು

ದಿಕ್ಕು

ಮನೆಯ ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಮಂದಿರ ನಿರ್ಮಿಸಿ. ಮನೆಯ ಈಶಾನ್ಯ ಭಾಗವು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಅಡುಗೆ ಮನೆ ಅಥವಾ ಶೌಚಾಲಯ ಆ ಭಾಗದಲ್ಲಿ ಇಲ್ಲದೆ ಇದ್ದರೆ ನೀವು ಅಲ್ಲಿ ಮಂದಿರ ನಿರ್ಮಾಣ ಮಾಡಬಹುದು.

ಪೂರ್ವಕ್ಕೆ ಮುಖ

ಪೂರ್ವಕ್ಕೆ ಮುಖ

ಪ್ರಾರ್ಥನೆ ಮಾಡುವಾಗ ಮುಖವು ಪೂರ್ವಕ್ಕೆ ಇರಬೇಕು ಎನ್ನುವುದು ನೆನಪಿರಲಿ. ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಪ್ರಾರ್ಥನೆಗಳು ನೇರವಾಗಿ ದೇವರನ್ನು ತಲುಪುವುದು. ಮಂದಿರದ ಪಶ್ಚಿಮ ಭಾಗದಲ್ಲಿ ನಿಂತುಕೊಂಡು ಪ್ರಾರ್ಥಿಸಬಹುದು.

ಫೋಟೋಗಳು

ಫೋಟೋಗಳು

ಕೆಲವು ಮಂದಿ ತಮ್ಮನ್ನು ಅಗಲಿದ ಪ್ರೀತಿಪಾತ್ರರ ಫೋಟೋಗಳನ್ನು ಮಂದಿರದಲ್ಲಿ ಇಡುತ್ತಾರೆ. ಇದು ಸರಿಯಲ್ಲ. ಭೂಮಿಯ ನಿಯಮದ ಪ್ರಕಾರ ಮನುಷ್ಯರು ಮತ್ತು ದೇವತೆಗಳು ಒಂದೇ ಕಡೆ ಇರಲು ಸಾಧ್ಯವಿಲ್ಲ. ಮನುಷ್ಯರು ಯಾವತ್ತೂ ಅಮರರಾಗಲು ಸಾಧ್ಯವಿಲ್ಲ. ಅವರ ಫೋಟೋಗಳನ್ನು ಬೇರೆ ಕಡೆ ಇಡಬಹುದು.

ಪ್ರಾರ್ಥನೆ ಮಾತ್ರ

ಪ್ರಾರ್ಥನೆ ಮಾತ್ರ

ಮನೆಯ ಮಂದಿರವನ್ನು ಕೇವಲ ಪ್ರಾರ್ಥನೆಗೆ ಮಾತ್ರ ಬಳಸಬೇಕು. ಸ್ಥಳದ ಅಭಾವವಿದ್ದರೆ ಬೇರೆ ಕೋಣೆಯಲ್ಲಿ ಮಂದಿರವಿದೆಯೆಂದಾದರೆ ನೀವು ಯಾವುದಾದರೂ ಬಟ್ಟೆಯಿಂದ ಮಂದಿರವನ್ನು ಮುಚ್ಚಿಡಬಹುದು.

ಹರಳುಗಳು

ಹರಳುಗಳು

ಮನೆಯ ಮಂದಿರದಲ್ಲಿ ಹರಳುಗಳು ತುಂಬಾ ಪ್ರಾಮುಖ್ಯತೆ ಪಡೆಯುತ್ತವೆ. ಹರಳಿನ ಕಳಶ ಮತ್ತು ಹರಳಿನ ಶಂಖ ಮನೆಯ ಮಂದಿರದಲ್ಲಿಟ್ಟರೆ ತುಂಬಾ ಒಳ್ಳೆಯದು. ನೀವು ಯಾವಾಗಲೂ ಬಳಸುವ ಶಂಖವನ್ನು ಮಂದಿರದಲ್ಲಿ ಇಟ್ಟುಬಿಡಿ. ಪ್ರತೀ ದಿನ ಪ್ರಾರ್ಥನೆ ಬಳಿಕ ಇದನ್ನು ಊದಿ.

ಹರಳು: ಸ್ವಲ್ಪ ಎಡವಟ್ಟಾದರೂ, ಕಷ್ಟದ ಮೇಲೆ ಕಷ್ಟ ಬರಬಹುದು!

English summary

Praying to such idols in your home temple can land you in trouble!

Most of us have a temple at home --- while we might or might not pray there daily, it nevertheless is the residence of God in our abode --- hence efforts must be made to keep it as clean and perfect as possible. However, do you know that there are certain kinds of idols that should not be kept in your home temple? Read on to know more...
X
Desktop Bottom Promotion