For Quick Alerts
ALLOW NOTIFICATIONS  
For Daily Alerts

ನಿರ್ಜಲ ಏಕಾದಶಿ 2021: ಶುಭ ಫಲ ದೊರೆಯಲು ಈ ದಿನ ಏನು ಮಾಡಬೇಕು, ಏನು ಮಾಡಬಾರದು?

|

ಹಿಂದೂ ಧರ್ಮದಲ್ಲಿ ನಿರ್ಜಲ ಏಕಾದಶಿಗೆ ತುಂಬಾನೇ ಮಹತ್ವವಿದೆ. ಉಳಿದ 23 ಏಕಾದಶಿಗಳ ಫಲ ಈ ಒಂದು ಏಕಾದಶಿ ಆಚರಣೆ ಮಾಡಿದರೆ ಸಿಗುವುದು ಎಂಬ ನಂಬಿಕೆ ಇದೆ.

ನಿರ್ಜಲ ಏಕಾದಶಿಯನ್ನು ಜ್ಯೇಷ್ಠ ಮಾಸದ ಶುಕ್ಲ ಪಕ್ಷದ 11ನೇ ದಿನದಂದು ಅಂದ್ರೆ ಜೂನ್‌ 21ರಂದು ಆಚರಿಸಲಾಗುವುದು. ಈ ಏಕಾದಶಿಯನ್ನು ಯಾರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೋ ಅವರು ಮಾಡಿರುವ ಪಾಪಗಳಿಂದ ಮುಕ್ತಿ ಪಡೆಯುತ್ತಾರೆ ಅಲ್ಲದೆ ಅವರ ಬದುಕಿನಲ್ಲಿ ಸಂತೋಷ, ಸಂಪತ್ತು ತುಂಬಿರುತ್ತದೆ ಎಂದು ಹೇಳಲಾಗುತ್ತದೆ.

ನಿರ್ಜಲ ಏಕಾದಶಿ ಆಚರಿಸಲು ಕೆಲವೊಂದು ನಿಯಮಗಳಿವೆ, ಅವುಗಳನ್ನು ಪಾಲಿಸಿದರಷ್ಟೇ ಇದರ ಫಲ ಸಿಗುವುದು. ಈ ದಿನ ಉತ್ತಮ ಫಲಕ್ಕಾಗಿ ಏನು ಮಾಡಬಾರದು, ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಶ್ರೀ ವಿಷ್ಣುವಿನ ಆರಾಧನೆಯಲ್ಲಿ ತುಳಸಿ ಇರಲಿ

ಶ್ರೀ ವಿಷ್ಣುವಿನ ಆರಾಧನೆಯಲ್ಲಿ ತುಳಸಿ ಇರಲಿ

ಏಕಾದಶಿ ಎಂಬುವುದು ವಿಷ್ಣುವಿಗೆ ಸಮರ್ಪಿತವಾದ ದಿನ. ವಿಷ್ಣುವಿಗೆ ಪ್ರಿಯವಾದವಳು ತುಳಸಿ. ಆದ್ದರಿಂದ ವಿಷ್ಣುವಿನ ಆರಾಧನೆಯಲ್ಲಿ ತುಳಸಿಗೆ ತುಂಬಾನೇ ಪ್ರಾಶಸ್ತ್ಯ ನೀಡಲಾಗಿದೆ. ಈ ದಿನ ವಿಷ್ಣು ಹಾಗೂ ಲಕ್ಷ್ಮೀಯನ್ನು ಆರಾಧಿಸುವಾಗ ತುಳಸಿ ಬಳಸಲು ಮರೆಯದಿರಿ.

ಉಪವಾಸ ಇರಬೇಕು

ಉಪವಾಸ ಇರಬೇಕು

ಯಾರಿಗೆ ಇತರ ಏಕಾದಶಿ ಮಾಡಲು ಸಾಧ್ಯವಿಲ್ಲವೋ ಅವರು ನಿರ್ಜಲ ಏಕಾದಶಿ ಮಾಡಿದರೆ ಸಾಕು, ಅವುಗಳ ಪುಣ್ಯ ಎಲ್ಲಾ ಈ ಒಂದು ಏಕಾದಶಿ ಆಚರನೆಯಿಂದ ಸಿಗುವುದು. ಆದರೆ ಹೆಸರೇ ಸೂಚಿಸುವಂತೆ ಏಕಾದಶಿ ದಿನ ನೀರು ಕೂಡ ಮುಟ್ಟುವಂತಿಲ್ಲ. ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ಉಪವಾಸದ ಸಂಕಲ್ಪ ಕೈಗೊಳ್ಳಬೇಕು. ನಂತರ ಶ್ರೀವಿಷ್ಣುವಿನ ಪೂಜೆ ಮಾಡಬೇಕು.

ಭಗವಂತ ವಿಷ್ಣುವಿಗೆ ನೈವೇದ್ಯ ಅರ್ಪಿಸಿ

ಭಗವಂತ ವಿಷ್ಣುವಿಗೆ ನೈವೇದ್ಯ ಅರ್ಪಿಸಿ

ಈ ದಿನ ಭಗವಾನ್ ವಿಷ್ಣುವಿಗೆ ನೈವೇದ್ಯ ಅರ್ಪಿಸಿ, ನೈವೇದ್ಯಕ್ಕೆ ಸಾತ್ವಿಕ ಆಹಾರವನ್ನು ಬಳಸಿ. ಸಿಹಿ, ಹಣ್ಣುಗಳನ್ನು ಅರ್ಪಿಸಿ. ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರೀ ವಿಷ್ಣುವಿಗೆ ನೈವೇದ್ಯ ಅರ್ಪಿಸುವಾಗ ತುಳಸಿಯನ್ನು ಇಟ್ಟು ಅರ್ಪಿಸಬೇಕು, ಇಲ್ಲದಿದ್ದರೆ ವಿಷ್ಣು ಆ ಆಹಾರಗಳನ್ನು ಸ್ವೀಕರಿಸುವುದಿಲ್ಲ.

ಅನ್ನ ತಿನ್ನಬೇಡಿ

ಅನ್ನ ತಿನ್ನಬೇಡಿ

ಉಪವಾಸ ಮಾಡುವವರು ಏನೂ ತಿನ್ನುವಂತಿಲ್ಲ, ಎಲ್ಲರಿಗೆ ಉಪವಾಸ ಮಾಡಲು ಸಾಧ್ಯವಾಗುವುದಿಲ್ಲ ಅಂಥವರು ಏಕಾದಶಿಯಂದು ಅಕ್ಕಿಯ ಯಾವುದೇ ಆಹಾರ ಸೇವಿಸಬಾರದು.

ಮಾಂಸ ಮತ್ತು ಮದ್ಯವನ್ನು ಸೇವಿಸಬೇಡಿ

ಮಾಂಸ ಮತ್ತು ಮದ್ಯವನ್ನು ಸೇವಿಸಬೇಡಿ

ಏಕಾದಶಿ ದಿನವನ್ನು ವಿಷ್ಣುವಿನ ಆರಾಧನೆಗೆ ಸಮರ್ಪಿಸಲಾಗಿದೆ. ಈ ದಿನ ಮಾಂಸ ಮತ್ತು ಮದ್ಯ ಸೇವಿಸಬಾರದು. ನಿರ್ಜಲ ಏಕಾದಶಿ ದಿನದಂದು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.

ಸ್ತ್ರೀ-ಪುರುಷ ಸೇರಬಾರದು

ಸ್ತ್ರೀ-ಪುರುಷ ಸೇರಬಾರದು

ಏಕಾದಶಿ ದಿನದಂದು ಮಿಲನ ಕ್ರಿಯೆ ನಡೆಸಬಾರದು. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ದೇವರ ಕೋರ್ತನೆ ಹಾಡಬೇಕು, ಶ್ರೀ ವಿಷ್ಣುವಿನ ಮಂತ್ರ ಪಠಿಸುತ್ತಾ ದಿನ ಕಳೆಯಬೇಕು. ಮನಸ್ಸಿನಲ್ಲಿ ಯಾವುದೇ ಕೆಡಕು ಬಯಸಬಾರದು.

English summary

Nirjala Ekadashi 2021: Dos And Don'ts In Kannada

Nirjala Ekadashi 2021: dos and don'ts in Kannada, read on...
X
Desktop Bottom Promotion