ಈ ಮಂತ್ರಗಳನ್ನು ಹೇಳಿ ಒಳ್ಳೆಯ ಮದುವೆ ಸಂಬಂಧ ಪಡೆದುಕೊಳ್ಳಿ

By Divya Pandith
Subscribe to Boldsky

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖವಾದ್ದು. ಜೀವನದುದ್ದಕ್ಕೂ ನಮ್ಮವರು, ನಮಗಾಗಿ ಮಾಡುತ್ತಾರೆ, ನಮ್ಮ ಸಂಸಾರ, ನಮ್ಮ ಮಗ ಎನ್ನುವ ಹೊಸ ಪ್ರಪಂಚದ ಸೃಷ್ಟಿಯಾಗುತ್ತದೆ. ನಾವು ಈ ಪ್ರಂಪಂಚವನ್ನು ಬಿಡುವವರೆಗೂ ನಮ್ಮೊಂದಿಗೆ ಹೊಸ ಪ್ರಪಂಚ ಇರುತ್ತದೆ. ಹಾಗಾಗಿ ಮದುವೆಯ ನಂತರ ಜೀವನ ಸುಖಕರವಾಗಿರಲಿ, ಒಳ್ಳೆಯ ಹುಡುಗ ಸಿಗಲಿ ಎಂದು ಪ್ರತಿಯೊಬ್ಬ ಹುಡುಗಿಯೂ ಆಶಿಸುತ್ತಾಳೆ.

Marriage

ನಮ್ಮ ಜೀವನ ಸಂಗಾತಿ ಸಿಗುವುದು ನಮ್ಮ ಅದೃಷ್ಟದ ಮೇಲೆ ಹಾಗೂ ಜಾತಕದ ಆಧಾರದ ಮೇಲೆ. ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳ ಆಧಾರದ ಮೇಲೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಮ್ಮ ಪಾಪ ಪುಣ್ಯಗಳ ಆಧಾರದ ಮೇಲೆ ಹಾಗೂ ಜಾತಕದಲ್ಲಿರುವ ದೋಷಗಳ ಆಧಾರದಿಂದ ಮದುವೆಯೂ ತಡವಾಗುವುದು ಅಥವಾ ಬಹು ಬೇಗ ಗಂಡನನ್ನು ಕಳೆದುಕೊಳ್ಳುವುದು. ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ.

Marriage

ಆದರೆ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಕೆಲವು ಹೋಮ, ಮಂತ್ರ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ನಿಮಗೂ ನಿಮ್ಮ ಮದುವೆ ಎನ್ನುವುದು ನೀವು ಬಯಸುವಂತಹ ಹುಡುಗನೊಂದಿಗೆ ಆಗಬೇಕು ಎಂದಾದರೆ ಈ ಮಂತ್ರಗಳನ್ನು ಹೇಳಿ... ಇದರಿಂದ ವಿಳಂಬಿತ ಮದುವೆ ಸಮಸ್ಯೆಯಿದ್ದರೂ, ಬಹು ಬೇಗ ಕಂಕಣ ಭಾಗ್ಯ ಕೂಡಿ ಬರುವುದು.

ಮಂತ್ರದಿಂದ ಕಂಕಣ ಭಾಗ್ಯ

"ಟಟೌಯ ಯಾರಂಪು ರೋಗಮಾ ಐಶಹನಾ ಐಃ

ಸೃಂಗಲ್ಮಧ್ಯಾ ದಿವ್ಭಗೃ ದದ್ತ್ಯಹ್"

ಈ ಮಂತ್ರ ಹೇಳಲು ಕೆಲವು ನಿಯಮಗಳನ್ನು ಅನುಸರಿಸಬೇಕು.

-ಒಮ್ಮೆ ಈ ಮಂತ್ರ ಹೇಳಲು ಪ್ರಾರಂಭಿಸಿದ ಮೇಲೆ 108 ಬಾರಿ ಹೇಳಬೇಕು.

-ಮಂತ್ರ ಹೇಳುವ ಕ್ರಿಯೆಯು ಸೂರ್ಯೋದಯದ ಮೊದಲು ಹಾಗೂ ಸೂರ್ಯೋದಯದ ನಂತರ ಮಾಡಬೇಕು.

-ಮುಟ್ಟಿನ ಸಮಸಯದಲ್ಲಿ ಮಂತ್ರವನ್ನು ಹೇಳಬಾರದು.

-ಫಲಿತಾಂಶ ಸ್ವೀಕರಿಸುವ ವರೆಗೂ (ಮುಟ್ಟಿನ ದಿನವನ್ನು ಹೊರತು ಪಡಿಸಿ) ಮಂತ್ರ ಹೇಳುವ ಪ್ರಕ್ರಿಯೆ ಮುಂದುವರಿದಿರಬೇಕು.

ಉತ್ತಮ ಮದುವೆ ಪ್ರಸ್ತಾಪ ತರುವುದು

ಮಂತ್ರ ಪಠಣೆ ಆರಮಭವಾದ ದಿನದಂದ ಏಳನೇ ದಿನದಿಂದಲೇ ಮುದವೆಯ ಪ್ರಸ್ತಾಪಗಳು ಬರುವುದು. ಮಗಳ ಮದುವೆಗಾಗಿ ತಂದೆ ಮಂತ್ರವನ್ನು ಪಠಿಸುತ್ತಿದ್ದರೆ, ಅವರು ಪ್ರತಿದಿನ ಪಠಿಸಬಹುದು. ಮದುವೆಯ ಪ್ರಸ್ತಾಪ ಪಡೆದ ತಕ್ಷಣ ನಿಲ್ಲಿಸಬಾರದು. ಮದುವೆ ನಡೆಯುವ ತನಕವೂ ಮಠಣವನ್ನು ಮುಂದುವರಿಸಬೇಕು.

ಭಾರತದಂತಹ ಸಾಂಪ್ರದಾಯಿಕ ರಾಷ್ಟ್ರದಲ್ಲಿ ಮದುವೆ ಎನ್ನುವುದು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಉತ್ತಮ ಸಂಬಂಧವು ಬಂದು ಮದುವೆಯ ಪ್ರಸ್ತಾಪ ಮಾಡಲು ಶಿವ-ಪಾರ್ವತಿಯನ್ನು ಪೂಜಿಸಬೇಕು. 

"ಓಂ ನಮಃ ನಮೋಭಿಲಾಷಿತಂ ವರಂದೇಹಿ ವರಂಹಿ, ಓಂ ಗೋರಾ ಪಾರ್ವತಿ ದೇವೈ ನಮಃ" ಈ ಮಂತ್ರವನ್ನು ಹೇಳುವುದರಿಂದ ಹೆಣ್ಣು ಮಕ್ಕಳ ಜಾತಕದಲ್ಲಿ ಇರುವ ವಿವಾಹ ದೋಷಗಳು ಹಾಗೂ ಅಡೆತಡೆಗಳು ನಿವಾರಣೆಯಾಗುತ್ತವೆ. ಹುಡುಗಿಯರು ಬಾಲ್ಕಂದ್ ಭಾಗ ಎರಡನೇ ಪುಸ್ತಕ "ರಾಮ ಚರಿತ ಮಾನಸ" ವನ್ನು ಓದಬೇಕು. ಇದರಲ್ಲಿ ಶಿವ ಪಾರ್ವತಿಯ ವಿವಾಹದ ಬಗ್ಗೆ ಬರೆಯಲಾಗಿದೆ.

Marriage

ಪ್ರತಿ ಸೋಮವಾರ ಬಾಲಕಿಯರು ಹಾಗೂ ಬಾಲಕರು ಶಿವಲಿಂಗಕ್ಕೆ ನೀರನ್ನು ಹಾಕಿ ಅಭಿಷೇಕಮಾಡಿ. ಪ್ರತಿದಿನ ಬೆಳಗ್ಗೆ 21 ಬಿಲ್ವ ಪತ್ರೆಯನ್ನು ಶಿವನಿಗೆ ನೀಡಬೇಕು. ಆಗ ವಿಳಂಬಿತ ವಿವಾಹವು ಬಹು ಬೇಗ ಆಗುವುದು.

ದುರ್ಗಾ ಸಪ್ತಸತಿ ಮಂತ್ರ

ದುರ್ಗಾ ಸಪ್ತಸತಿ ಮಂತ್ರವು ವಿವಾಹದ ಪ್ರಸ್ತಾಪ ಪಡೆಯಲು ಅದ್ಭುತ ಮಂತ್ರವಾಗಿದೆ. ಮಗಳ ಮದುವೆಗೆ ಪಾಲಕರು ಸಹ ಈ ಮಂತ್ರವನ್ನು ಹೇಳಬಹುದು.

"ಪತ್ನಿಮನೋರಮಂದೆಹೀ ಮನೋವೃತಾನುಸಾರಿಣಿಯ,

ತಾರಿಣಿಂದುರ್ಗಾ ಸಂಸಾರ ಸಾಗರ ಸ್ತಕುಲೊದ್ಭಣಾಮಃ"

ಪ್ರತಿದಿನ ದೇವರ ಮನೆಯಲ್ಲಿ ಅಥವಾ ದೇವರ ಚಿತ್ರದ ಎದುರು ಕುಳಿತು ಹೇಳಬೇಕು. ಹೇಳುವ ಮೊದಲು ದೀಪ-ದೂಪ ಹಚ್ಚುವುದು, ಹೂವನ್ನು ಹಾಕುವುದು ಮತ್ತು ಸಿಹಿ ತಿಂಡಿಯ ನೈವೇದ್ಯ ಮಾಡಿ ಮಂತ್ರಗಳನ್ನು ಹೇಳಬೇಕು. ಮಂತ್ರ ಹೇಳಲು ಪ್ರಾರಂಭಿಸಿದ ಸ್ವಲ್ಪ ದಿನಗಳಲ್ಲೇ ಪ್ರಸ್ತಾಪಗಳು ಬರುತ್ತವೆ. ಶುದ್ಧ ಮನಸ್ಸಿನಿಂದ ಹೇಳಬೇಕು. ಆಗ ದೇವರು ಆಶೀರ್ವದಿಸುತ್ತಾನೆ ಎನ್ನುವ ನಂಬಿಕೆಯಿದೆ.

ದುರ್ಗಾ ಸಪ್ತಸತಿ ಮಾರ್ಗದರ್ಶನ

- ತ್ವರಿತ ಫಲಿತಾಂಶಕ್ಕೆ ಅಭ್ಯರ್ಥಿಯೇ ಓದಬೇಕು.

- ಒಮ್ಮೆ ಮಂತ್ರ ಹೇಳಲು ಪ್ರಾರಂಭಿಸಿದ ಮೇಲೆ 108 ಬಾರಿ ಹೇಳಬೇಕು.

- ಪಠಣ ಮಾಡುವ ಮೊದಲು ಪದಗಳ ಉಚ್ಛಾರಣೆಯನ್ನು ಸರಿಯಾಗಿ ತಿಳಿದುಕೊಳ್ಳಿ.

- ಮದುವೆ ಪ್ರಸ್ತಾಪಗಳನ್ನು ಸ್ವೀಕರಿಸುವಾಗ ಗಮನಿಸಿ

- ಪಠಣ ಮಾಡುವ ಉದ್ದೇಶದ ಬಗ್ಗೆಯೂ ನಿಮಗೆ ಗಮನವಿರಲಿ.

Marriage

ಮಹಾದೇವ ಮಂತ್ರ

ಅದ್ಭುತ ಪ್ರಸ್ತಾಪಗಳು ಪಡೆಯಬೇಕೆಂದುಕೊಂಡಿದ್ದರೆ ಮಹಾದೇವ ಮಂತ್ರವನ್ನು ಹೇಳಿ.

"ಓಂ ಗೌರಿಪತಿ ಮಹಾದೇವಾಯ ಮಾಮ ಇಶಿತ್ ವಾರ್ ಶೀಘ್ರಾತಿ ಶೀಘ್ರಃ ಪ್ರಾಪ್ತ್ಯಾರ್ಥ ಹಾಮ್ ಗೌರಾಯೀ ನಮಾಹ"

ಮಂತ್ರ ಮಠಣೆಯ ನಿಯಮಗಳು

- ಮಂತ್ರವನ್ನು ಪ್ರತಿಪಾದ ತಿಥಿಯಿಂದ ಹೇಳಲು ಪ್ರಾರಂಭಿಸಬೇಕು.

-ರುದ್ರಾಕ್ಷಿ ಮಣಿಯನ್ನು ಪಠಿಸಲು ಹೇಳಬೇಕು.

- ಪ್ರತಿ ದಿನ ಮಂತ್ರವನ್ನು 11 ಸಾರಿ ಹೇಳಬೇಕು.

- 21 ದಿನಗಳ ಕಾಲ ಹೇಳಬೇಕು.

- ಮಂತ್ರ ಪಠಣ ಮಾಡುವ ಮೊದಲು ಶಿವನಿಗೆ ಹೂವು ಮತ್ತು ಸಿಹಿಯ ನೈವೇದ್ಯ ನೀಡಿ.

ಮದುವೆ ಪ್ರಸ್ತಾಪಕ್ಕೆ ಮಂತ್ರದ ಪರಿಹಾರಗಳು

ಮದುವೆಯ ವಿಳಂಬಕ್ಕೆ ಶಕ್ತಿಶಾಲಿ ಮಂತ್ರ ಪಠಿಸುವುದರ ಮೂಲಕ ಮದುವೆಯ ಪ್ರಸ್ತಾಪವನ್ನು ಪಡೆಯಬಹುದು. ಅದಕ್ಕೆ ಈ ಕೆಳಗಿನ ಮಂತ್ರ ಸಹಾಯ ಮಾಡುವುದು. 

"ಹೇ ಗೌರಿ ಶಂಕರಾರ್ಧಾಂಗಿಣಿಯತತ್ವಾಂ ಶಂಕರಪ್ರಿಯ

ತಥಾ ಮಾ ಕುರುಕಲ್ಯಾಣಿಕಾಂಥಾಂ ಸುಂದರ್ಲಾಭಂ

ಓಂ ಕಾತ್ಯಾಯಿನಿ ಮಹಾಭಾಗೇ ಮಹಾಯೋಗಿನಿ ಆದೀಶ್ವರಿಮ್

ನಂದಗೋಪ್ಸುತಂ ದೇವಿ ಪಾತ್ಯಂ ಮೇ ಕುರುಹೆನಮಹ"

ಮಂತ್ರ ಪಠಣೆಯ ನಿಯಮ

- ಪ್ರತಿದಿನ ಸ್ನಾನ ಮಾಡಿ ಈ ಮಂತ್ರವನ್ನು ಹೇಳಬೇಕು.

- ಮಂತ್ರ ಹೇಳುವ ಮೊದಲು ಶಿವ-ಪಾರ್ವತಿ ವಿಗ್ರಹಕ್ಕೆ ಪೂಜೆ ಅಥವಾ ಪ್ರತಿದೀಪವನ್ನು ಹಚ್ಚಿ ಹೇಳಬೇಕು.

- ಮಂತ್ರ ಹೇಳಿದ ನಂತರ ಪಾರ್ವತಿ ದೇವಿಯ ಪಾದಕ್ಕೆ ನಮಸ್ಕರಿಸಬೇಕು.

- ಶ್ರಾವಣ ಮಾಸದಲ್ಲಿ ಶಿವಲಿಂಗದ ಎದುರು 108 ಬಾರಿ ಮಂತ್ರವನ್ನು ಪಠಿಸಿ.

- ಮುಟ್ಟಿನ ಸಮಯದಲ್ಲಿ ಮಂತ್ರವನ್ನು ಹೇಳಬಾರದು.

Marriage

ಉತ್ತಮ ಪ್ರಸ್ತಾಪಕ್ಕೆ ಗಣೇಶ ಮಂತ್ರ

ವಿಘ್ನಗಳನ್ನು ನಿವಾರಿಸುವ ಗಣೇಶನನ ಆರಾಧನೆ ಹಾಗೂ ಮಂತ್ರವನ್ನು ಹೇಳುವುದರ ಮೂಲಕ ವಿಳಂಬ ವಿವಾಹಕ್ಕೆ ಶೀಘ್ರ ವಿವಾಹವನ್ನು ಆಶೀರ್ವದಿಸುತ್ತಾನೆ.

"ಓಂ ಗಮ್ ಗಣಪಥಯೇ ನಮಃ"

ಮದುವೆ ವಿಳಂಬ ಎದುರಿಸುತ್ತಿರುವವರು ಈ ಮಂತ್ರ ಪಠಿಸುವುದರಿಂದ ಬಹುಬೇಗ ವಿವಾಹವನ್ನು ಆಗಬಹುದು. 

ರಾಮ ಸೀತೆಯ ಚರಿತೆ ಓದಿ

ಸುಂದರಕಾಂಡದಲ್ಲಿ ಬರೆಯಲಾದ ಶ್ರೀರಾಮ ಹಾಗೂ ಸೀತೆಯ ಕಲ್ಯಾಣ ಚರಿತವನ್ನು ಓದಬೇಕು. ಸುಂದರಕಾಂಡ ಓದಬಹುದು ಅಥವಾ ಆಡಿಯೋವನ್ನು ಕೇಳಬಹುದು. ಇದರಿಂದ ಉತ್ತಮ ಫಲಿತಾಂಶ ದೊರೆಯುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಉತ್ತಮ ಫಲಿತಾಂಶಗಳಿಗೆ ಮಾರ್ಗದರ್ಶನ:

-ಪ್ರತಿ ಮಂಗಳವಾರ ಮಂತ್ರವನ್ನು ಓದಬೇಕು.

- ಕೋಣೆಯ ಪಶ್ಚಿಮ ದಿಕ್ಕಿನಲ್ಲಿ ಕುಳಿತು ಓದಬೇಕು.

- ಉಣ್ಣೆಯ ಚಾಪೆಯ ಮೇಲೆ ಕುಳಿತುಕೊಳ್ಳಿ.

- ರಾಮ ಸೀತೆಯ ಚಿತ್ರವನ್ನು ಇಟ್ಟು ಪೂಜಿಸಿ.

- ಮಣ್ಣಿನ ಹಣತೆಯಲ್ಲಿ ದೀಪವನ್ನು ಬೆಳಗಬೇಕು.

- ಸಿಹಿ ತಿಂಡಿಯನ್ನು ಅರ್ಪಿಸಿ.

- ಪವಿತ್ರ ಪುಸ್ತ ಓದುವುದರಿಂದ ತೊಂದರೆಗಳು ಹೋಗಿ ಯಶಸ್ಸು ಲಭಿಸುವುದು.

kathyani

ಕಾತ್ಯಾಯಿನಿ ಮಂತ್ರ

ಕಾತ್ಯಾಯಿನಿ ಮಂತ್ರದ ಪಠಣೆಯು ಮದುವೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ. ಜೊತೆಗೆ ಉತ್ತಮ ಮದುವೆಯ ಪ್ರಸ್ತಾಪವನ್ನು ತರುತ್ತದೆ. ಮದುವೆಯ ವಿಳಂಬವನ್ನು ಕಡಿಮೆಮಾಡುತ್ತದೆ.

"ಕಾತ್ಯಾಯಿನಿ ಮಹಾಮಾಯೇ ಮಹಾಯೋಗಿ ತ್ಯಾಗೀಶ್ವರಿ ನಂದಗೋಪಸುತಂ ದೇವಿ ಪತಿಂಮೇಕೃ ರುತೇನಮಃ" ಮಂತ್ರ ಪಠಣೆಯ ಮಾರ್ಗದರ್ಶನ:

-ಕೆಂಪು ಕುಂಕುಮವನ್ನು ಹಚ್ಚಬೇಕು.

-ಕೆಂಪು ಹೂವು, ಕೆಂಪು ಬಟ್ಟೆ, ಕೆಂಪು ಆಸನ ಆಗಿರಬೇಕು.

-ಮಂತ್ರವನ್ನು 108 ಬಾರಿ ಹೇಳಬೇಕು.

ಮದುವೆಯ ಪ್ರಸ್ತಾಪಕ್ಕೆ ಸೂರ್ಯ ಮಂತ್ರ:

"ಓಂ ದೇವೇಂದ್ರನಿ ನಮಸ್ತುಭ್ಯಂ ದೇವೇಂದ್ರಪ್ರಯಾಭಮಿಣಿ, ವಿವಾಹಮ್ ಭಾಗ್ಯಮಾರೋಗ್ಯಂ ಶೀಘ್ರಲಾಭಂ ಚದೇಹಿಮೇ"

For Quick Alerts
ALLOW NOTIFICATIONS
For Daily Alerts

    English summary

    Mantra To Get Good Marriage Proposal

    Mantra To Get Good Marriage Proposal, Marriage is an important event in a girl’s life. Girls facing obstacles in marriage should chant the following “mantra to get good marriage proposal”. This unique mantra is suitable for getting a dream like husband. Girls get married at the right age by the effects of this mantra.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more