For Quick Alerts
ALLOW NOTIFICATIONS  
For Daily Alerts

ನಾರದ ಮುನಿಗಳ ವೀಣೆಯ ನಾದಕ್ಕೆ ಮನಸೋತ ಹನುಮಂತ!

|

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಪುರಾಣ ಕಥೆಗಳು ಒಂದಕ್ಕೊಂದು ನಂಟು ಹೊಂದಿದೆ. ರಾಮಾಯಣ ಹಾಗೂ ಮಹಾಭಾರತದಲ್ಲಿ ಹಲವಾರು ಕಥೆಗಳು, ಉಪಕಥೆಗಳು ಇವೆ. ರಾಮಾಯಣದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣನಿಗೆ ಬೆಂಗಾವಲಿ ನಿಂತ ಹನುಮಂತ ದೇವರು ಕೂಡ ಇಂದು ಜಗತ್ತಿನೆಲ್ಲೆಡೆಯಲ್ಲಿ ಪೂಜಿಸಲ್ಪಡುವರು. ವಾನರ ರೂಪಿಯಾಗಿರುವ ಆಂಜನೇಯ ದೇವರ ಬಗ್ಗೆ ಹಲವಾರು ಕಥೆಗಳು ಇವೆ. ಈ ಲೇಖನದಲ್ಲಿ ನಾವು ನಿಮಗೆ ಹನುಮಂತ ದೇವರ ನಾರದ ಮುನಿಗಳನ್ನು ಭೇಟಿಯಾಗಿರುವ ಕಥೆಯ ಬಗ್ಗೆ ವಿವರವಾಗಿ ಹೇಳಲಿದ್ದೇವೆ. ಒಂದು ಸಲ ತಮ್ಮ ಅರಮನೆಯಲ್ಲಿ ಹನುಮಂತ ದೇವರು ಮತ್ತು ಅವರ ತಾಯಿ ಅಂಜನಾ ದೇವಿ ಜತೆಯಾಗಿ ಕುಳಿತುಕೊಂಡು ಏನೋ ತುಂಬಾ ಪ್ರಮುಖ್ಯವಾದ ವಿಚಾರದ ಬಗ್ಗೆ ಮಾತನಾಡಿ ಕೊಳ್ಳುತ್ತಿದ್ದರು. ಈ ವೇಳೆ ಅವರಿಗೆ ಸುಮಧುರವಾದ ಹಾಡು ವೀಣೆಯು ಮಿಡಿಯುವುದರ ಜತೆಗೆ ಕೇಳಿಸಿತು. ಇದನ್ನು ಅವರಿಗೆ ಮತ್ತೆ ಮತ್ತೆ ಕೇಳಬೇಕು ಅನಿಸಿತು. ಇದರಿಂದಾಗಿ ಹನಮಮಂತ ಮತ್ತು ಅವರ ತಾಯಿಯು ಕೆಲವು ಸಮಯ ಒಂದು ಶಬ್ಧವನ್ನು ಮಾತನಾಡದೆ ಈ ಹಾಡನ್ನು ಕೇಳುತ್ತಲೇ ಇದ್ದರು. ಈ ಹಾಡನ್ನು ಯಾರು ಹಾಡುತ್ತಿದ್ದಾರೆ ಮತ್ತು ಅದು ಎಲ್ಲಿಂದ ಬರುತ್ತಿದೆ ಎಂದು ತಿಳಿಯಲು ಹನುಮಂತ ದೇವರು ತುಂಬಾ ಕಾತರಿಸಿದ್ದರು. ಇದರಿಂದಾಗಿ ಹನುಮಂತ ದೇವರು ಅರಮನೆಯಿಂದ ಹೊರಗಡೆ ಹೋಗಿ ಹುಡುಕಾಡಿದರು.

ಹನುಮಂತ ದೇವರು ದೈವಸ್ವರೂಪಿ ಸನ್ಯಾಸಿಯ ಭೇಟಿಯಾದರು

ಹನುಮಂತ ದೇವರು ದೈವಸ್ವರೂಪಿ ಸನ್ಯಾಸಿಯ ಭೇಟಿಯಾದರು

ಅರಮನೆಯಿಂದ ಹೊರಗೆ ಬರುತ್ತಿರುವಂತಹ ಹಾಡನ್ನು ಹಾಡುತ್ತಿರುವುದು ನಾರದ ಮುನಿಗಳು ಎಂದು ಹನುಮಂತ ದೇವರಿಗೆ ಸ್ಪಷ್ಟವಾಯಿತು. ಹನುಮಂತ ದೇವರು ತಕ್ಷಣ ಓಡಿ ಹೋಗಿ ಅವರ ಕಾಲುಗಳಿಗೆ ಅಡ್ಡಬಿದ್ದು ನಮಸ್ಕರಿಸುವರು. ಈ ರೀತಿಯಾಗಿ ಹನುಮಂತ ದೇವರು ನಾರದ ಮುನಿಗಳನ್ನು ತಡೆಯುವರು. ವಂದನೆ ಸ್ವೀಕರಿಸಿದ ಬಳಿಕ ನಾರದ ಮುನಿಗಳು ಹೀಗೆ ಹೇಳುವರು, ``ಪ್ರೀತಿಯ ಹನುಮಂತ, ನಾನು ಈಗ ತುಂಬಾ ಅವಸರದಲ್ಲಿದ್ದೇನೆ. ನನ್ನನ್ನು ನಿಲ್ಲಿಸಿರುವ ಕಾರಣವಾದರೂ ಏನು ಎಂದು ತಿಳಿಸು.''

ಹನುಮಂತ ದೇವರಿಗೆ ಆಶೀರ್ವಾದ ಬೇಕಿರುವುದು

ಹನುಮಂತ ದೇವರಿಗೆ ಆಶೀರ್ವಾದ ಬೇಕಿರುವುದು

ಇದಕ್ಕೆ ಹನುಮಂತ ದೇವರು ಹೀಗೆ ಹೇಳುವರು, ಪ್ರಿಯ ಸನ್ಯಾಸಿ, ನೀವು ತುಂಬಾ ಸುಮಧುರವಾಗಿ ಹಾಡುತ್ತೀರಿ. ನಾನು ಮತ್ತು ನನ್ನ ತಾಯಿ ಇದನ್ನು ಕೇಳಿ ಈ ಹಾಡು ಎಲ್ಲಿಂದ ಬರುತ್ತಿದೆ ಎಂದು ತಿಳಿಯದೆ ಇರಲಾರದೆ ಹೊರಗೆ ಬಂದೆ. ನಾವು ನಿಮ್ಮ ಸ್ವರವನ್ನು ತುಂಬಾ ಇಷ್ಟಪಟ್ಟಿದ್ದೇವೆ. ನಿಮ್ಮ ಆಶೀರ್ವಾದವು ಎಷ್ಟು ಪ್ರಭಾವಶಾಲಿ ಆಗಿರಬಹುದು ಎನ್ನುವ ಬಗ್ಗೆ ನಾನು ಅಚ್ಚರಿಗೊಂಡಿದ್ದೇನೆ. ನೀವು ಮುಂದೆ ಸಾಗುವ ಮೊದಲು ನನಗೆ ಒಮ್ಮೆ ಆಶೀರ್ವಾದ ಮಾಡಿ ಹೋಗಿ ಎನ್ನುವರು ಹನುಮಮಂತ ದೇವರು. ನಾರದ ಮುನಿಗಳು ಇದಕ್ಕೆ ಒಪ್ಪಿಕೊಂಡು ನಿಮಗೆ ಯಾವ ಆಶೀರ್ವಾದ ಬೇಕು ಎಂದು ಕೇಳುವರು. ಇತರ ಹಲವಾರು ದೇವರಿಂದ ವಿವಿಧ ರೀತಿಯ ಆಶೀರ್ವಾದವನ್ನು ಈಗಾಗಲೇ ಪಡೆದಿರುವ ಕಾರಣದಿಂದ ನನಗೆ ಇದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ ಎಂದು ಹನುಮಂತ ದೇವರು ಹೇಳುವರು. ಇದರಿಂದ ನಾರದ ಮುನಿಗಳೇ ಇದರ ಬಗ್ಗೆ ನಿರ್ಧರಿಸಿ, ಆಶೀರ್ವದಿಸಿ ಎಂದು ಹನುಮಂತ ಹೇಳುವರು.

ಹನುಮಂತ ದೇವರಿಗೆ ಸಂಗೀತವು ವರವಾಗಿ ಸಿಕ್ಕಿತು

ಹನುಮಂತ ದೇವರಿಗೆ ಸಂಗೀತವು ವರವಾಗಿ ಸಿಕ್ಕಿತು

ನಾರದ ಮುನಿಗಳು ವರವಾಗಿ ಹನುಮಂತ ದೇವರಿಗೆ ಸಂಗೀತದ ಜ್ಞಾನ ಮತ್ತು ಒಳ್ಳೆಯ ಕಂಠ ನೀಡಿದರು. ಈ ವರವನ್ನು ಪಡೆದ ಹನುಮಂತ ದೇವರು ತುಂಬಾ ಸಂತಸಗೊಂಡರು. ನಾರದ ಮುನಿಗಳು ಅಲ್ಲಿಂದ ತೆರಳಬೇಕು ಎನ್ನುವಷ್ಟರಲ್ಲಿ ಹನುಮಂತ ದೇವರು ಅವರನ್ನು ಮತ್ತೆ ತಡೆದು ನಿಲ್ಲಿಸುವರು. ನಾರದ ಮುನಿಗಳಿಂದ ಪ್ರೇರಣೆ ಪಡೆದಿರುವ ಕಾರಣ ಮತ್ತು ತನ್ನ ತಾಯಿಯು ನಾರದ ಮುನಿಗಳ ಒಳ್ಳೆಯ ಕಂಠಕ್ಕೆ ಸಾಕ್ಷಿಯಾಗಿರುವ ಕಾರಣದಿಂದಾಗಿ ತನ್ನ ಸ್ವರದ ಬಗ್ಗೆ ಕೂಡ ಯಾರಾದರೂ ಹೊಗಳಬೇಕು, ಹೀಗಾಗಿ ನಾನು ನಿಮ್ಮನ್ನು ನಿಲ್ಲಿಸಿದ್ದೇನೆ ಎಂದು ನಾರದ ಮುನಿಗಳಿಗೆ ಹನುಮಂತ ದೇವರು ತಿಳಿಸುವರು. ತಾನು ಹಾಡುವ ಹಾಡನ್ನು ನೀವು ಕೇಳಬೇಕು ಎಂದು ಹನುಮಂತ ದೇವರು ಹೇಳುವರು. ಇದನ್ನು ತುಂಬಾ ತಾಳ್ಮೆಯಿಂದಲೇ ಕೇಳಿಸಿಕೊಂಡ ನಾರದ ಮುನಿಗಳು ಇದಕ್ಕೆ ಒಪ್ಪಿಗೆ ಸೂಚಿಸುವರು.

Most Read: ಭಗವಾನ್ ವಿಷ್ಣು, ನಾರದ ಮುನಿ ಹಾಗೂ ಶ್ರೀಮಂತ ವ್ಯಾಪಾರಿ ನಡುವಿನ ರೋಚಕ ಕಥೆ

ಹನುಮಂತ ದೇವರ ಪ್ರತಿಭೆಯ ಪರೀಕ್ಷೆಯಾಗಲಿತ್ತು

ಹನುಮಂತ ದೇವರ ಪ್ರತಿಭೆಯ ಪರೀಕ್ಷೆಯಾಗಲಿತ್ತು

ಹನುಮಂತ ದೇವರು ಮತ್ತು ನಾರದ ಮುನಿಗಳು ಅಲ್ಲಿಂದ ತೆರಳಿ, ಒಂದು ಅರಣ್ಯವನ್ನು ತಲುಪಿದರು. ಅಲ್ಲಿ ಅವರು ಒಂದು ಮರದ ಕೆಳಗಡೆ ಕುಳಿತುಕೊಂಡರು. ಮರದ ಕೆಳಗಡೆ ಇದ್ದ ದೊಡ್ಡ ಕಲ್ಲಿನ ಮೇಲೆ ನಾರದ ಮುನಿಗಳು ತಮ್ಮ ವೀಣೆಯನ್ನು ಇಟ್ಟುಬಿಟ್ಟರು. ಹನುಮಂತ ದೇವರು ಹಾಡಲು ಆರಂಭಿಸಿದರು ಮತ್ತು ಈ ಸ್ವರವು ನಿಸ್ಸಂಶಯವಾಗಿ ಎಷ್ಟು ಮಧುರವಾಗಿತ್ತೆಂದರೆ ನಾರದ ಮುನಿಗಳು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಹನುಮಂತ ದೇವರು ಹಾಡುತ್ತಿದ್ದ ಹಾಡಿನ ರಾಗದಲ್ಲಿ ಮುಳುಗಿ ಹೋದರು. ಹನುಮಂತ ದೇವರು ಮಲ್ಕಯುನ ರಾಗವನ್ನು ಹಾಡಿದರು. ಇದಕ್ಕೆ ಕಲ್ಲನ್ನು ಕೂಡ ಕರಗಿಸುವಂತಹ ಶಕ್ತಿ ಇರುತ್ತದೆ. ಇದರಿಂದ ನಾರದ ಮುನಿಗಳು ವೀಣೆ ಇಟ್ಟಿದ್ದಂತಹ ಕಲ್ಲು ಕೂಡ ಕರಗಲು ಆರಂಭವಾಯಿತು. ಕೆಲವೇ ಸಮಯದಲ್ಲಿ ಈ ಕಲ್ಲು ನೀರಾಗಿ ಹರಿದುಹೋಯಿತು ಮತ್ತು ವೀಣೆಯು ನೀರಿನಲ್ಲಿ ತೇಲಿ ಹೋಯಿತು.

ಕಲ್ಲಿನೊಳಗಡೆ ಸಿಲುಕಿಕೊಂಡ ವೀಣೆ

ಕಲ್ಲಿನೊಳಗಡೆ ಸಿಲುಕಿಕೊಂಡ ವೀಣೆ

ಹಾಡನ್ನು ಕೇಳುತ್ತಿದ್ದಂತೆ ನಾರದ ಮುನಿಗಳಿಗೆ ಬೇರೊಂದು ಅಗತ್ಯ ಕೆಲಸ ಮಾಡಬೇಕಾಗಿದೆ ಎಂದು ನೆನಪಾಯಿತು. ಈ ವೇಳೆ ಅವರು ಹನುಮಂತ ದೇವರನ್ನು ಹಾಡುವುದನ್ನು ನಿಲ್ಲಿಸಿಬಿಡು ಎಂದು ಹೇಳುವರು. ಈ ಆದೇಶವನ್ನು ಸ್ವೀಕರಿಸಿದ ಹನುಮಂತ ದೇವರು, ಹಾಡುವುದನ್ನು ನಿಲ್ಲಿಸಿದರು ಮತ್ತು ಕಲ್ಲು ತನ್ನ ಮೊದಲ ಸ್ಥಿತಿಗೆ ಬಂತು. ಇದರಿಂದಾಗಿ ಕಲ್ಲಿನ ಒಳಗಡೆ ವೀಣೆಯು ಸಿಲುಕಿ ಹಾಕಿಕೊಂಡಿತು. ನಾರದ ಮುನಿಗಳು ಇದನ್ನು ನೋಡಿ, ಹನುಮಂತ ದೇವರಿಗೆ ಮತ್ತೆ ಹಾಡುವಂತೆ ಹೇಳಿದರು. ಈ ವೇಳೆ ಕುಟಿಲತನದಿಂದ ಹನುಮಂತ ದೇವರು ಹಾಡುವುದಿಲ್ಲವೆಂದು ಹೇಳಿ ಮುಂದೆ ನಡೆಯುತ್ತಾ ಹೋದರು. ನಾರದ ಮುನಿಗಳು ಹಿಂದಿನಿಂದಲೇ ಹೋದರು ಮತ್ತು ಹನುಮಂತ ದೇವರು ಅರಮನೆ ಪ್ರವೇಶ ಮಾಡಿದರು.

Most Read: ಈ ಎಂಟು ಹೂವುಗಳು ಹಿಂದೂ ದೇವತೆಗಳಿಗೆ ತುಂಬಾನೇ ಅಚ್ಚುಮೆಚ್ಚಂತೆ

ಹನುಮಂತ ದೇವರ ಈ ಕುಟಿಲತನದ ಹಿಂದೆ ಒಂದು ಸದ್ದುದ್ದೇಶವಿತ್ತು

ಹನುಮಂತ ದೇವರ ಈ ಕುಟಿಲತನದ ಹಿಂದೆ ಒಂದು ಸದ್ದುದ್ದೇಶವಿತ್ತು

ಹನುಮಂತ ದೇವರ ತಾಯಿ ಮಾತೆ ಅಂಜನಾ ದೇವಿ ನಾರದ ಮುನಿಗಳು ಒಳಗೆ ಓಡುತ್ತಾ ಬರುವುದನ್ನು ನೋಡಿದರು ಮತ್ತು ಅವರನ್ನು ತುಂಬಾ ಅಚ್ಚರಿಯಿಂದಲೇ ಸ್ವಾಗತ ಮಾಡಿದರು. ಅಂಜನಾ ದೇವಿ ಅವರು ನೀಡಿದ ಸತ್ಕಾರವನ್ನು ಸ್ವೀಕರಿಸಿದ ಬಳಿಕ ನಾರದ ಮುನಿಗಳು, ಹನುಮಂತ ದೇವರ ಕುಟಿಲತೆ ಬಗ್ಗೆ ವಿವರ ನೀಡುವರು. ನಾರದ ಮುನಿಗಳು ದೈವಿ ಸ್ವರೂಪಿ ಸನ್ಯಾಸಿಯಾಗಿರುವ ಕಾರಣದಿಂದಾಗಿ ಅವರು ತಮ್ಮ ಮನೆಗೆ ಬರಬೇಕೆಂದು ನಾನು ಬಯಸಿದ್ದೆ ಎಂದು ಹನುಮಂತ ದೇವರು ಹೇಳುವರು. ನಾರದ ಮುನಿಗಳ ಪಾದಗಳು ಪ್ರತಿಯೊಂದು ಕೋಣೆ ಮತ್ತು ಎಲ್ಲಾ ಕಡೆಗೂ ಸ್ಪರ್ಶಿಸಲಿ ಮತ್ತು ಅವರು ಈ ಅರಮನೆಗೆ ಆಶೀರ್ವಾದ ನೀಡಲಿ ಎಂದು ಹನುಮಂತ ದೇವರು ಹೇಳುವರು. ಹನುಮಂತ ದೇವರ ಈ ಉತ್ತರದಿಂದ ತಂಬಾ ಸಂತುಷ್ಟಗೊಂಡ ನಾರದ ಮುನಿಗಳು ಹನುಮಂತ ದೇವರು ಮಾಡಿರುವಂತಹ ಕುಟಿಲತೆಯನ್ನು ಮರೆತುಬಿಟ್ಟರು. ಆದರೆ ನಾರದ ಮುನಿಗಳಿಗೆ ಎಲ್ಲಿ ಹೋಗಬೇಕಿದ್ದರೂ ತನ್ನ ವೀಣೆ ಮಾತ್ರ ಬೇಕಾಗಿತ್ತು. ಇದಕ್ಕಾಗಿ ಅವರು ಹನುಮಂತ ದೇವರು ಮತ್ತೆ ಹಾಡುವಂತೆ ಕೇಳಿಕೊಂಡರು. ಹನುಮಂತ ದೇವರು ಮತ್ತೆ ಹಾಡಿದಾಗ ಕಲ್ಲು ಕರಗಿ, ವೀಣೆ ಮರಳಿ ನಾರದ ಮುನಿಗಳ ಕೈಸೇರಿತು.

English summary

Lord Hanuman, Narad Muni & The Veena

Lord Hanuman and his mother were impressed with the melodious voice of Narad Muni. Believing that only a divine being could have such a voice, he asked for a blessing when he met this wandering sage. Narad Muni blessed him with the knowledge of music. Lord Hanuman played a mischief, making Narad Muni visit his home and bless the place as well.
X
Desktop Bottom Promotion