For Quick Alerts
ALLOW NOTIFICATIONS  
For Daily Alerts

ಪಿತೃ ಪಕ್ಷ 2020: ಮನೆಯಲ್ಲಿ ಶ್ರಾದ್ಧ ಕಾರ್ಯ ಮಾಡುವುದು ಹೇಗೆ?

|

ಪಿತೃ ಋಣ ನಿವಾರಣೆ ಮಾಡಲು ಶ್ರಾದ್ಧ ಕಾರ್ಯ ಮಾಡಲಾಗುವುದು. ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಪಿತೃಪಕ್ಷದ 15 ದಿನಗಳ ಕಾಲಾವಧಿಯಲ್ಲಿ ಪಿತೃ ಋಣ ತೀರಿಸಿನ ಅವರ ಆಶೀರ್ವಾದ ಪಡೆಯಲು ಶ್ರಾದ್ಧ ಮಾಡಲಾಗುವುದು.

How to Perform Shraddha Puja at Home in Kannada

ಪೂರ್ವಜರು ಮರಣ ಹೊಂದಿದ ದಿನ, ತಿಥಿ, ನಕ್ಷತ್ರ ನಮಗೆ ಗೊತ್ತಿಲ್ಲದಿದ್ದರೆ ಮಹಾಲಯ ಅಮಾವಾಸ್ಯೆ ಮತ್ತು ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡಿ ಪುಣ್ಯ ಪಡೆಯಬಹುದು. ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡುವುದು ಪುಣ್ಯ ಕಾರ್ಯ, ಇದರಿಂದ ಧರ್ಮ ನೆಲೆಸುತ್ತದೆ ಹಾಗೂ ದೋಷಗಳಿಂದ ಮುಕ್ತರಾಗಬಹುದು ಎಂದು ಹೇಳಲಾಗುತ್ತದೆ. 2020ರಲ್ಲಿ ಶ್ರಾದ್ಧ ಕಾರ್ಯವನ್ನು ಸೆಪ್ಟೆಂಬರ್ 1ರಿಂದ 17ವರೆಗೆ ಪಿತೃ ಪಕ್ಷವಾಗಿದ್ದು ಈ ದಿನದಲ್ಲಿ ಮಾಡಬಹುದು. ಈ ದಿನ ಪಿತೃಗಳಿಗೆಪೂಜೆ ಸಲ್ಲಿಸಲಾಗುವುದು, ಇದರಿಂದ ಪಿತೃದೋಷ ಹಾಗೂ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದಾಗಿದೆ. ಪಿತೃಗಳಿಗೆ ಶ್ರಾದ್ಧ ಮಾಡಿದರೆ ನಮಗೆ ಒಳಿತಾಗುವುದು ಹಾಗೂ ಅವರ ಆಶೀರ್ವಾದ ನಮ್ಮ ಜೊತೆಗಿದ್ದರೆ ಮನೆಯಲ್ಲಿ ಖುಷಿ, ಶಾಂತಿ ನೆಲೆಸುವುದು ಎಂಬ ನಂಬಿಕೆ ಇದೆ. ಶ್ರಾದ್ಧವನ್ನು ಕೆಲವರು ದೇವಸ್ಥಾನಕ್ಕೆ ಹೋಗಿ ಮಾಡಿದರೆ ಇನ್ನು ಕೆಲವರು ಮನೆಯಲ್ಲಿಯೇ ಮಾಡುತ್ತಾರೆ. ಮನೆಯಲ್ಲಿಯೇ ಶ್ರಾದ್ಧ ಕಾರ್ಯ ಮಾಡುವುದಾದರೆ ಪೂಜಾ ವಿಧಿಗಳೇನು, ಪಾಲಿಸಬೇಕಾದ ನಿಯಮಗಳೇನು ಎಂದು ನೋಡೋಣ:

ಶ್ರಾದ್ಧ ಮಾಡುವಾಗ ಅದರ ರೀತಿ-ನಿಯಮಗಳನ್ನು ಪಾಲಿಸಬೇಕು, ಆಗ ಪಾತ್ರ ಗತಿಸಿದ ಹಿರಿಯರಿಗೆ ತೃಪ್ತಿ ಉಂಟಾಗುವುದು. ಬದುಕಿನಲ್ಲಿ ಎಲ್ಲದಕ್ಕೂ ವೈಜ್ಞಾನಿಕ ಕಾರಣಗಳನ್ನು ಹುಡುಕಲು ಸಾಧ್ಯವಿಲ್ಲ. ಕೆಲವೊಂದು ನಂಬಿಕೆಗಳ ಮೇಲೆ ನಡೆಯುತ್ತದೆ, ಅಲ್ಲದೆ ವೈಜ್ಞಾನಿಕ ಕಾರಣಗಳಿಗಿಂತ ಕೆಲವೊಮ್ಮೆ ನಮ್ಮ ನಂಬಿಕೆಗಳೇ ತುಂಬಾ ಪ್ರಭಾವಶಾಲಿ ಎಂದು ನಮಗನಿಸುವುದು ಅಲ್ಲವೇ?

ಮನೆಯಲ್ಲಿ ಶ್ರಾದ್ಧ ಮಾಡುವಾಗ ಈ ನಿಯಮಗಳನ್ನು ಪಾಲಿಸಿ

ಮನೆಯಲ್ಲಿ ಶ್ರಾದ್ಧ ಮಾಡುವಾಗ ಈ ನಿಯಮಗಳನ್ನು ಪಾಲಿಸಿ

ಪಿತೃಪಕ್ಷದಲ್ಲಿ ಶ್ರಾದ್ಧ ಮಾಡುವವರು ಆ ದಿನದಂದು ಕ್ಷೌರ, ದ್ವಭೋಜನ, ಅಭ್ಯಂಜನ ಸ್ನಾನ, ಪರಾನ್ನ ಭೋಜನ, ತಾಂಬೂಲ ಸೇವನೆ ಇವುಗಳನ್ನು ಮಾಡುವಂತಿಲ್ಲ. ಶ್ರಾದ್ಧದ ಹಿಂದಿನ ದಿನದಿಂದಲೇ ಬ್ರಹ್ಮಚರ್ಯ ವ್ರತ ಪಾಲಿಸಬೇಕು. ದೈವ ಕಾರ್ಯಕ್ಕಿಂತ ಮಿಗಿಲಾಗಿ ಭಕ್ತಿ ಶ್ರದ್ಧೆಯಿಂದ ಶ್ರಾದ್ಧ ಮಾಡಬೇಕು.

ಶ್ರಾದ್ಧ ಕಾರ್ಯ ಮಧ್ಯಾಹ್ನವೇ ಮಾಡಬೇಕು

ಶ್ರಾದ್ಧ ಕಾರ್ಯ ಮಧ್ಯಾಹ್ನವೇ ಮಾಡಬೇಕು

ಶ್ರಾದ್ಧ ಕಾರ್ಯ ಮಾಡಲು ಬ್ರಾಹ್ಮಣರನ್ನು ಕರೆದು ಅವರಿಗೆ ಅರ್ಘ್ರ್ಯ, ಪಾದ್ಯ, ವಸ್ತ್ರಗಳನ್ನು ಕಾಣಿಕೆಯಾಗಿ ನೀಡಬೇಕು. ಒಂದು ಬ್ರಾಹ್ಮಣರು ಸಿಗದಿದ್ದರೆ ದರ್ಭೆಯ ಮುಖಾಂತರ ಬ್ರಾಹ್ಮಣರನ್ನು ಆಹ್ವಾನಿಸಬೇಕು ಎನ್ನುತ್ತದೆ ಶಾಸ್ತ್ರ.

  • ಬೆಳಗ್ಗೆ ಸ್ನಾನ ಮಾಡಿದ ಬಳಿಕ ಶ್ರಾದ್ಧ ಪೂಜೆ ಮಾಡುವ ಜಾಗವನ್ನು ಸೆಗಣಿಯಿಂದ ಸಾರಿಸಬೇಕು. ಆ ಜಾಗದಲ್ಲಿ ಸೆಗಣಿ ಹಾಕಲು ಸಾಧ್ಯವಾಗದಿದ್ದರೆ ಗೋ ಮೂತ್ರ ಅಥವಾ ಗಂಗಾ ಜಲ ಹಾಕಿ ಜಾಗವನ್ನು ಶುದ್ಧ ಮಾಡಬೇಕು.
  • ಮನೆ ಮುಂದೆ ರಂಗೋಲಿ ಹಾಕಬೇಕು.
  • ಇನ್ನು ಹಿರಿಯರಿಗೆ ಶ್ರಾದ್ಧ ಮಾಡುವಾಗ ಇಡಲು ಮಾಡುವ ಆಹಾರವನ್ನು ಕೂಡ ಮಡಿಯಿಂದ ಮಾಡಬೇಕು. ಅದರ ರುಚಿ ನೋಡಬಾರದು.
  • ಬ್ರಾಹ್ಮಣರನ್ನು ಬರಲು ಹೇಳಬೇಕು.
  • ಪಿತೃಗಳಿಗೆ ಹಾಲು, ಮೊಸರು, ತುಪ್ಪ, ಪಾಯಸ ಹಾಗೂ ಅವರಿಗೆ ಇಷ್ಟವಾದ ಭಕ್ಷ್ಯ ಅರ್ಪಿಸಬೇಕು. ಅವರಿಗೆ ತರ್ಪಣ ಅರ್ಪಿಸುವವರಿಗೆ ಮನೆಯವರು ಏನೂ ತಿನ್ನಬಾರದು.
  • ಮನೆಗೆ ಬಂದ ಬ್ರಾಹ್ಮಣನಿಗೆ ಗೌರವಪೂರ್ವವಾಗಿ ಆಹಾರ, ಹಣ್ಣು, ದಕ್ಷಿಣೆ ಕೊಟ್ಟು ಕಳುಹಿಸಬೇಕು.
  • ಶ್ರಾದ್ಧ ಕಾರ್ಯದಲ್ಲಿ ಮಾಡುವ ಅಡುಗೆ

    ಶ್ರಾದ್ಧ ಕಾರ್ಯದಲ್ಲಿ ಮಾಡುವ ಅಡುಗೆ

    ಶ್ರಾದ್ಧದಲ್ಲಿ ಅಡುಗೆಯನ್ನು ಹೆಸರುಬೇಳೆ, ಬಾಳೆಕಾಯಿ, ಹಾಗಲಕಾಯಿ, ಬೆಂಡೇಕಾಯಿ, ಗೆಣಸು, ಗೋರಿಕಾಯಿ, ಬೂದುಕುಂಬಳಕಾಯಿ ಮತ್ತಿತರ ತರಕಾರಿಗಳನ್ನು ಬಳಸ ಮಾಡಬೇಕು. ಅಡುಗೆಗೆ ಅರಿಶಿಣ ಬಳಸುವಂತಿಲ್ಲ. ಇನ್ನು ಎಡೆ ಇಡಲು ಉದ್ದಿನಬೇಳೆಯ ವಡೆ, ಮುತ್ತೈದೆಯಾದರೆ ಅಂಬೋಡೆ, ಹೂರ್ಣದಿಂದ ಮಾಡಿದ ಕಾಯಿಪೂರಿ, ರವೆ ಉಂಡೆ ಈ ರೀತಿಯ ಆಹಾರ ವಸ್ತುಗಳನ್ನು ಇಡಲಾಗುವುದು.

    ಶ್ರಾದ್ಧದಲ್ಲಿ ಯಾವ ಎಳ್ಳು ಬಳಸಿಬೇಕು

    ಶ್ರಾದ್ಧದಲ್ಲಿ ಯಾವ ಎಳ್ಳು ಬಳಸಿಬೇಕು

    ಶ್ರಾದ್ಧಕರ್ಮದಲ್ಲಿ ಸಿಪ್ಪೆ ತೆಗೆದ ಕರಿ ಎಳ್ಳನ್ನೇ ಬಳಸಬೇಕು. ಈ ಎಳ್ಳು ಬಳಸುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ. ಎಳ್ಳಿನ ಮಹತ್ವ ತಿಳಿಸುವ ಶ್ಲೋಕವೊಂದಿದೆ

    ತಿಲೈಃ ಆಜ್ಯೇನ ಹೋತವ್ಯಂ ಸರ್ವಪಾಪಹರಾಸ್ತಿಲಾಃ|

    ತಿಲಾಃ ರಕ್ಷಂತ್ವಸುರಾಣಾಂ ದರ್ಭಾ ರಕ್ಷಂತು ರಕ್ಷಸಾಂ|

    ತಿಲಸ್ನಾಯೀ ತಿಲೋದ್ವರ್ತೀ ತಿಲಹೋಮೀ ತಿಲೋದಕೀ|

    ತಿಲಭೋಕ್ತಾ ಚ ದಾತಾ ಚ ಷಟ್‌ ತಿಲಾಃ ಪಾಪನಾಶನಾಃ||

    ಎಳ್ಳು ಬಳಸಿದರೆ ಭೂತ, ಪ್ರೇತಗಳಿಂದ ಬರುವ ಬಾಧಕಗಳು ಇಲ್ಲವಾಗುವುದು, ಅಲ್ಲದೆ ಸುತ್ತಿಕೊಂಡಿದ್ದ ಪಾಪ ದೂರವಾಗುವುದು ಎಂದು ಹೇಳಲಾಗುತ್ತದೆ.

    ಪಿಂಡ ಮಾಡುವುದು ಹೇಗೆ?

    ಪಿಂಡ ಮಾಡುವುದು ಹೇಗೆ?

    ಶ್ರಾದ್ಧದಲ್ಲಿ ಪಿತೃಗಳಿಗೆ ಪಿಂಡ ಇಡಲಾಗುವುದು. ಈ ಪಿಂಡವನ್ನು ಅಷ್ಟದ್ರವ್ಯದಿಂದ ಮಾಡಬೇಕು. ಎಳ್ಳು, ಹಾಲು, ಮೊಸರು, ಬೆಲ್ಲ, ಜೇನುತುಪ್ಪ ಮತ್ತು ತುಪ್ಪ ಬಳಸಿ ಪಿಂಡ ಮಾಡಲಾಗುವುದು. ಇದನ್ನು ನೀರಿನಲ್ಲಿ ಬಿಡಬೇಕು, ನೆಲದಲ್ಲಿ ಹೂಳ ಬೇಕು ಹಾಗೂ ಪ್ರಾಣಿಗಳಿಗೆ ನೀಡಬೇಕು.

    ಪಿಂಡ ಅರ್ಪಿಸುವಾಗ ಗಮನಿಸಬೇಕಾದ ಸೂಚನೆ:

    ಪಿಂಡ ಅರ್ಪಿಸುವಾಗ ಗಮನಿಸಬೇಕಾದ ಸೂಚನೆ:

    ಪಿಂಡವನ್ನು ನೀರಿನಲ್ಲಿ ತೇಲಿ ಬಿಟ್ಟಾಗ ಅಥವಾ ಕಾಗೆ, ಹಸುಗಳಿಗೆ ನೀಡಿದಾಗ ಅದನ್ನು ಒಡೆಯುವುದನ್ನು ನೋಡಬಾರದು. ಅಲ್ಲದೆ ಪಿತೃ ತರ್ಪಣವನ್ನು ದಕ್ಷಿಣ ದಿಕ್ಕಿಗೆ ತಿರುಗಿ ನೀಡಬೇಕು.

English summary

How to Perform Shraddha Puja at Home in Kannada

The Shraddha should be done with law and order for the satisfaction of the ancestors. Here are how to perform Shraddha puja at home, read on,
X
Desktop Bottom Promotion