For Quick Alerts
ALLOW NOTIFICATIONS  
For Daily Alerts

ವಿಷು ಹಬ್ಬದ ಮಹತ್ವ, ಹಾಗೂ ಐತಿಹಾಸಿಕ ಹಿನ್ನೆಲೆ

By Jaya subramanya
|

ಹಿಂದೂ ಹಬ್ಬವಾಗಿರುವ ವಿಷುವನ್ನು ಕೇರಳದಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ. ತುಳುನಾಡು ಪ್ರಾಂತ್ಯಗಳಲ್ಲಿ ಇದೇ ಹಬ್ಬವನ್ನು ಬಿಸು ಎಂದೂ ಕೂಡ ಆಚರಿಸುತ್ತಾರೆ. ಹಿಂದೂ ಹೊಸ ವರ್ಷವನ್ನು ವಿಷು ಕೇಂದ್ರೀಕರಿಸುತ್ತಿದ್ದು ಮಲಯಾಳಮ್ ಕ್ಯಾಲೆಂಡರ್‌ನಲ್ಲಿ ಮೇಡಮ್ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಏಪ್ರಿಲ್ ತಿಂಗಳ ಎರಡನೇ ವಾರದಂದು ಈ ಹಬ್ಬವನ್ನು ಆಚರಿಸುತ್ತಾರೆ.

ಬೆಳಕಿನ ಹಬ್ಬವಾಗಿ ಕೇರಳದಲ್ಲಿ ಜನಜನಿತವಾಗಿರುವ ವಿಷು ಹಬ್ಬವನ್ನು ವಿಷು ಕೈನೀಟಮ್‌ನಿಂದ ಆಚರಿಸುತ್ತಾರೆ. ಹೊಸ ಬಟ್ಟೆಯನ್ನು ಧರಿಸಿ ಪಟಾಕಿ ಹಚ್ಚಿ ಸಂಭ್ರಮಿಸುತ್ತಾ ಹಿರಿಯರ ಆಶೀರ್ವಾದ ಮತ್ತು ಅವರಿಂದ ನಗದು ರೂಪದಲ್ಲಿ ಕಾಣಿಕೆಯನ್ನು ಪಡೆದುಕೊಳ್ಳುವುದುನ್ನು ವಿಷು ಕೈನೀಟಮ್ ಎಂದು ಕರೆಯುತ್ತಾರೆ. ವಿಷು ದಿನದಂದು ಸೂರ್ಯನು ಸಮಭಾಜಕ ರೇಖೆಯ ಮೇಲೆ ಬರುತ್ತಾನೆ ಎಂಬ ನಂಬಿಕೆ ಕೂಡ ಇದೆ.

ವರ್ಷದಲ್ಲಿ ಎರಡು ಮಜಲುಗಳಿದ್ದು ಇದನ್ನು ದಕ್ಷಿಣಾಯಣ ಮತ್ತು ಉತ್ತರಾಯಣ ಎಂದು ಕರೆಯುತ್ತಾರೆ. ಹಿಂದೆ ಸಮಭಾಜಕದ ದಕ್ಷಿಣ ಭಾಗದಲ್ಲಿದ್ದ ಸೂರ್ಯನು ನಂತರ ಉತ್ತರ ಭಾಗಕ್ಕೆ ಬರುತ್ತಾನೆ ಇದರಿಂದ ದಿನವು ದೀರ್ಘವಾಗಿರುತ್ತದೆ ಮತ್ತು ರಾತ್ರಿ ಕಡಿಮೆ ಇರುತ್ತದೆ. ಇನ್ನೊಂದು ಭಾಗದಲ್ಲಿ ಇದರ ವಿಲೋಮ ಕ್ರಿಯೆ ನಡೆಯುತ್ತದೆ. ಸಮಭಾಜಕದ ಸಾಲಿನಲ್ಲಿ ಸೂರ್ಯನು ಏರಿಕೆಯಾಗುವ ಕೇವಲ ಎರಡು ದಿನಗಳು ತುಲ ವಿಷು ಮತ್ತು ಮೇಡ ವಿಷುವಾಗಿದೆ. ವಿಷು ಹಬ್ಬಕ್ಕೆ ಕೇರಳ ಶೈಲಿಯ ತೋರನ್

ವಿಷು ದಿನದಂದು ಹೆಚ್ಚು ಮುಖ್ಯವಾಗಿರುವುದು ವಿಷು ಕ್ಕಣಿಯಾಗಿದೆ. ಬೆಳಗ್ಗೆ ಎದ್ದೊಡನೆ ಕಾಣುವ ಕಣಿ ಎಂದೂ ಕೂಡ ಇದನ್ನು ಕರೆಯುತ್ತಾರೆ. ಅಕ್ಕಿ, ಹಣ್ಣುಹಂಪಲು, ತರಕಾರಿ, ವೀಳ್ಯದೆಲೆ, ಅಡಿಕೆ, ಕನ್ನಡಿ, ಹಳದಿ ಹೂವುಗಳು (ಕೊನ್ನೆ) ಪವಿತ್ರ ಗ್ರಂಥಗಳು ಮತ್ತು ನಾಣ್ಯಗಳನ್ನು ಸುತ್ತಲೂ ಕೃಷ್ಣ ದೇವನ ಸಮೀಪವಿಟ್ಟು ದೇವರಿಗೆ ದೀಪವನ್ನು ಹಚ್ಚಿಡುತ್ತಾರೆ. ವಿಷುವಿನ ಹಿಂದಿನ ದಿನ ಈ ಸಿದ್ಧತೆಯನ್ನು ಮಾಡಿ ಮರುದಿನ ಪ್ರಾತಃ ಕಾಲದಲ್ಲಿ ಕಣ್ಣುಗಳನ್ನು ಮುಚ್ಚಿಕೊಂಡು ವಿಷು ಕಣಿಯನ್ನು ನೋಡಿ ನಂತರವಷ್ಟೇ ಕಣ್ಣು ಬಿಡುವುದು ವಾಡಿಕೆ.

History, Mythology and more connected to Vishu

ವಿಷು ದಿನದಂದು ಶ್ರೀಕೃಷ್ಣ ದೇವರು ನರಕಾಸುರನನ್ನು ವಧಿಸಿದರು ಎಂಬ ಪ್ರತೀತಿ ಇದೆ. ಇನ್ನು ಇನ್ನೊಂದು ಪುರಾಣ ಕಥೆ ಹೇಳುವಂತೆ ಸೂರ್ಯನನ್ನು ಪೂರ್ವದಿಂದ ಉದಯಿಸಲು ರಾವಣ ಬಿಡುತ್ತಿರಲಿಲ್ಲವಂತೆ ಅಂತೆಯೇ ರಾವಣನ ಮರಣದ ದಿನ ಅದುವೇ ವಿಷು ದಿನವಾಗಿದೆ ಈ ದಿನ ಸೂರ್ಯನು ಪೂರ್ವದಿಂದ ಉದಯಿಸಲು ಆರಂಭಿಸಿದ ಎಂಬುದಾಗಿ ಪುರಾಣಗಳು ಹೇಳುತ್ತಿವೆ. ಸೂರ್ಯನು ಪುನರ್ ಉದಯಿಸಲು ಆರಂಭಿಸಿದ ಕಾಲವೆಂದೇ ಈ ದಿನವನ್ನು ಕೊಂಡಾಡಲಾಗುತ್ತದೆ. ಇಂದಿನ ಲೇಖನದಲ್ಲಿ ವಿಷು ದಿನದ ಇನ್ನಷ್ಟು ಮಹತ್ವ ಅಂಶಗಳನ್ನು ನಾವು ತಿಳಿದುಕೊಳ್ಳೋಣ.

ವಿಷು ಆಚರಣೆ
ಈ ಶುಭದಿನದಂದು ಜನರು ಪ್ರಾತಃ ಕಾಲದಲ್ಲಿ ಪೂಜೆ ಪುನಸ್ಕಾರಗಳಲ್ಲಿ ತೊಡಗುತ್ತಾರೆ. ಮನೆಯ ಹಿರಿಯ ತಾಯಿ ವಿಷು ಕ್ಕಣಿಯನ್ನು ಶ್ರೀಕೃಷ್ಣನ ಸುತ್ತ ಇಟ್ಟು ಅಲಂಕಾರ ಮಾಡುತ್ತಾರೆ. ಈ ಕಣಿಯು ಸೌತೆಕಾಯಿ, ಅಕ್ಕಿ, ಅಡಿಕೆ, ವೀಳ್ಯದೆಲೆ, ಚಿನ್ನದ ಆಭರಣಗಳು, ಹೊಸ ಬಟ್ಟೆ, ಪವಿತ್ರ ಗ್ರಂಥ, ಬೆಳ್ಳಿಯ ಬಟ್ಟಲಿನಲ್ಲಿ ನಾಣ್ಯ, ಮಾವಿನ ಹಣ್ಣು, ಹಲಸಿನ ಹಣ್ಣು, ಲೋಹದ ಕನ್ನಡಿ, ತಾಜಾ ಲಿಂಬೆ ಮತ್ತು ಲೋಹದ ಉದ್ದನೆಯ ದೀಪ (ನಿಲವಿಳಕ್ಕು) ದಿಂದ ಒಳಗೊಂಡಿರುತ್ತದೆ. ಮನೆಯ ಸದಸ್ಯರು ಪ್ರಾತಃ ಕಾಲದಲ್ಲಿ ಎದ್ದು ವಿಷು ಕ್ಕಣಿಯನ್ನು ವೀಕ್ಷಿಸಬೇಕು.

ಕಣಿಯಲ್ಲಿ ಅತಿ ವಿಶೇಷವಾಗಿರುವ ಹೂವು ಕೊನ್ನೆ ಹಳದಿ ಹೂವು
ರಾಮಾಯಣ ಗ್ರಂಥವನ್ನು ಕಣಿಯ ಸಂದರ್ಭದಲ್ಲಿ ಇರಿಸುತ್ತಾರೆ ಮತ್ತು ಕುಟುಂಬದ ಸದಸ್ಯರಿಗೆ ಇದರ ಪವಿತ್ರ ಪರಿಣಾಮಗಳು ಉಂಟಾಗುತ್ತದೆ ಎಂಬುದು ಮಲೆಯಾಳಿಗಳ ನಂಬಿಕೆಯಾಗಿದೆ. ವಿಶೇಷ ಭೋಜನವಾದ ಸದ್ಯವನ್ನು ಈ ದಿನದಂದು ಸಿದ್ಧಪಡಿಸುತ್ತಾರೆ. ಎಲ್ಲಾ ರೀತಿಯ ವ್ಯಂಜನಗಳು ಈ ಸದ್ಯದಲ್ಲಿ ಇರುತ್ತದೆ. ಅನ್ನ, ಸಾಂಬಾರು, ಚಿಪ್ಸ್, ಉಪ್ಪಿನಕಾಯಿ, ಅವಿಯಲ್, ರಸಮ್ ಮತ್ತು ಬೇರೆ ಬೇರೆ ಸಿಹಿ ಹಾಗೂ ಪಾಯಸ ಈ ಸದ್ಯದಲ್ಲಿರುತ್ತದೆ.

ಈ ದಿನದಂದು ವಿಶೇಷ ಅನ್ನವನ್ನು ಸಿದ್ಧಪಡಿಸಲಾಗುತ್ತದೆ. ಇದನ್ನು ಕಂಞಿ ಎಂದು ಕರೆಯುತ್ತಾರೆ. ಉತ್ತಮ ಗುಣಮಟ್ಟದ ಅಕ್ಕಿಯಿಂದ ಇದನ್ನು ತಯಾರಿಸಲಾಗುತ್ತಿದ್ದು ಇದಕ್ಕೆ ತೆಂಗಿನ ಹಾಲು ಮತ್ತು ಮಸಾಲೆ ಮೆಣಸನ್ನು ಹಾಕುತ್ತಾರೆ. ಸದ್ಯವನ್ನು ಸವಿದ ನಂತರ ಮಕ್ಕಳು ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ ಅಂತೆಯೇ ಹೊಸ ಬಟ್ಟೆ ಧರಿಸಿ ಸ್ನೇಹಿತರಿಗೆ ಮತ್ತು ಬಂಧು ಬಾಂಧವರಿಗೆ ಉಡುಗೊರೆಗಳನ್ನು ನೀಡಲಾಗುತ್ತದೆ ಅಂತೆಯೇ ಮನೆಯ ಹಿರಿಯರಿಂದ ಆಶಿರ್ವಾದವನ್ನು ಈ ದಿನದಂದು ಪಡೆದುಕೊಳ್ಳುತ್ತಾರೆ.

ದೇವಸ್ಥಾನಗಳಿಗೆ ಹೋಗಿ ಪೂಜೆ ಪುನಸ್ಕಾರಗಳನ್ನು ಈ ದಿನದಂದು ಜನರು ಕೈಗೊಳ್ಳುತ್ತಾರೆ ಅಂತೆಯೇ ನಾಣ್ಯಗಳ ವಿತರಣೆಗಳನ್ನು ಬಡವರಿಗೆ ಮಾಡುತ್ತಾರೆ. ಒಳ್ಳೆಯ ಬಟ್ಟೆಗಳನ್ನು ಧರಿಸಿ ಒಡವೆಗಳನ್ನು ಧರಿಸಿ ವಿಷು ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ ಪುರುಷರು ಮುಂಡು ಧರಿಸಿ ಖಾದಿ ಶರ್ಟ್ ಧರಿಸುತ್ತಾರೆ.

English summary

History, Mythology and more connected to Vishu

Vishu conveys the message of auspiciousness and prosperity. The advent of this festival is marked by the widespread blooming of Kanikonna (Laburnum) flower. Once, this was the New Year festival of Kerala; much before the Kollavarsham calendar began. In the nearby State of Tamil Nadu, Vishu is celebrated as the New Year day. Kalivarsham and Sakavarsham also begin with Meda Vishu. Vishu is considered as the New Year according to Mathematical science also.
X
Desktop Bottom Promotion