Just In
Don't Miss
- News
‘ನಕಲಿ ವ್ಯಾಕ್ಸಿನೇಷನ್’ ವಿಡಿಯೋ ವೈರಲ್: ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಸುಧಾಕರ್
- Education
Karnataka SSLC Exam 2021: ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾತಿ ಕಡ್ಡಾಯ ಇಲ್ಲ
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Movies
ಶಾರುಖ್ ಖಾನ್ ಬಂಗಲೆಯಲ್ಲಿ ವರುಣ್ ಧವನ್ ಮದುವೆ ಸಂಭ್ರಮ
- Sports
ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!
- Automobiles
ಕೋವಿಡ್ ವ್ಯಾಕ್ಸಿನ್ ಸಾಗಾಣಿಕೆಗಾಗಿ ಹೊಸ ಮಾದರಿಯ ಟ್ರಕ್ ಸಿದ್ದಪಡಿಸಿದ ಭಾರತ್ ಬೆಂಝ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಏಳಿಗೆಗಾಗಿ ಪ್ರಾತಃಕಾಲದಲ್ಲಿ ಪಠಿಸಬೇಕಾದ ಶ್ರೀ ಗಣೇಶನ ಸ್ತೋತ್ರಗಳು
ಹಿಂದೂ ಸಂಪ್ರದಾಯದಲ್ಲಿ ಯಾವ ಆಚರಣೆಗಳೇ ಇರಲಿ, ಪೂಜೆ ಪುನಸ್ಕಾರಗಳೇ ಇರಲಿ, ಮೊದಲು ವಂದಿಸಲ್ಪಡುವನು, ಮೊದಲು ಪೂಜಿಸಲ್ಪಡುವನು ಮಹಾಗಣಪ. ಗಣೇಶನನ್ನು ವಿಘ್ನನಿವಾರಕ ಎಂದು ಕರೆಯಲಾಗುತ್ತದೆ. ಹಾಗಾಗಿ ಏನೇ ಹೊಸ ಕೆಲಸ ಕಾರ್ಯ ಮಾಡುವಾಗಲೂ ಹೊಸದೇನನ್ನಾದರೂ ಕೊಂಡುಕೊಳ್ಳುವಾಗಲೂ ಅಂದರೆ ಮನೆ, ಉದ್ಯೋಗ ಮೊದಲಾದವುಗಳನ್ನು ಆರಂಭಿಸುವುದಕ್ಕಿಂತ ಮೊದಲು ಮಹಾಗಣಪತಿಯನ್ನೇ ಸ್ತುತಿಸಲಾಗುತ್ತದೆ.
ಆದರೆ ಗಣೇಶನನ್ನು ಕೇವಲ ಕೆಲಸದ ಆರಂಭದಲ್ಲಿ ಮಾತ್ರವಲ್ಲ, ದಿನವೂ ಪಠಿಸುವುದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಗಣೇಶಸ್ತೋತ್ರ ಪಠಿಸುವುದರಿಂದ ಸ್ಮರಣಶಕ್ತಿ ಹೆಚ್ಚಾಗುತ್ತದೆ. ಶ್ರದ್ಧೆಯಿಂದ ಗಣಪನನ್ನು ಪಠಿಸಿದರೆ, ಶರೀರದಲ್ಲಿ ಸೂಕ್ಷ್ಮ ರಕ್ಷಾಕವಚ ನಿರ್ಮಾಣವಾಗುತ್ತದೆ. ಸ್ತೋತ್ರದಲ್ಲಿನ ಸಂಸ್ಕೃತ ಭಾಷೆಯಿಂದ ನಲಿಗೆಯೂ ಶುದ್ಧವಾಗಿ ಅಕ್ಷರಗಳ ಉಚ್ಚಾರಣೆಗಳೂ ಸುಧಾರಿಸುತ್ತವೆ. ಆದುದರಿಂದ ಪ್ರತಿದಿನ ಗಣೇಶಸ್ತೋತ್ರವನ್ನು ಪಠಿಸಿ ಮತ್ತು ಮಕ್ಕಳಿಂದಲೂ ಸ್ತೋತ್ರಪಠಣ ಮಾಡಿಸುವುದು ಅತ್ಯಂತ ಒಳ್ಳೆಯದು. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಕೂಡ ಮೂಡುತ್ತದೆ.
ನಾವಿಲ್ಲಿ ಪ್ರಾತಃಕಾಲದಲ್ಲಿ ಸ್ತುತಿಸಬಹುದಾದ ಗಣೇಶನ ಕೆಲವು ಸ್ತೋತ್ರಗಳನ್ನು ಭಾವಾರ್ಥ ಸಮೇತ ಹೇಳುತ್ತಿದ್ದೇವೆ ನೋಡಿ:

|| ಶ್ರೀಗಣೇಶ ಪ್ರಾತ:ಸ್ಮರಣ ಸ್ತೋತ್ರಮ್ ||
ಪ್ರಾತ:ಸ್ಮರಾಮಿ ಗಣನಾಥಮನಾಥಬಂಧುಂ |
ಸಿಂದೂರಪೂರ ಪರಿಶೋಭಿತ ಗಂಡಯುಗ್ಮಮ್ ||
ಉದ್ದಂಡ ವಿಘ್ನ ಪರಿಖಂಡನ ಚಂಡದಂಡಮ್ |
ಆಖಂಡಲಾದಿ ಸುರನಾಯಕವೃಂದ ವಂದ್ಯಮ್ |1|
ಭಾವಾರ್ಥ:-ಸಿಂಧೂರ ಲೇಪನದಿಂದ ಹೊಳೆಯುತ್ತಲಿರುವ ಎರಡು ಕೆನ್ನೆಗಳುಳ್ಳವನಾದ, ಯಾವುದೇ ಅಡಚಣೆಗಳನ್ನು ನಿವಾರಿಸುವ ಬೃಹತ್ ದಂಡವನ್ನು ಹೊಂದಿರುವವನಾದ,ಇಂದ್ರಾದಿ ದೇವತೆಗಳ ನಾಯಕರ ಸಮೂಹವೇ ನಮಸ್ಕರಿಸುವಂಥ ಸಕಲರ ಬಂಧುವಾದ, ಗಣಗಳ ಅಧಿನಾಯಕನಾದ ಗಣಪತಿಯನ್ನು ನಾನು ಪ್ರಾತಃಕಾಲದಲ್ಲಿ ಸ್ಮರಿಸುತ್ತೇನೆ.

|| ಶ್ರೀಗಣೇಶ ಪ್ರಾತ:ಸ್ಮರಣ ಸ್ತೋತ್ರಮ್ |೧|
ಪ್ರಾತರ್ನಮಾಮಿ ಚತುರಾನನ ವಂದ್ಯಮಾನಂ |
ಇಚ್ಛಾನುಕೂಲಮಖಿಲಂ ಚ ವರಂ ದದಾನಮ್ ||
ತಂ ತುಂದಿಲಂ ದ್ವಿರಸನಾಧಿಪ ಯಜ್ಞಸೂತ್ರಂ |
ಪುತ್ರಂ ವಿಲಾಸ ಚತುರಂ ಶಿವಯೋ: ಶಿವಾಯ |೨|
ಭಾವಾರ್ಥ:-ಚತುರ್ಮುಖ ಬ್ರಹ್ಮನಿಂದ ನಮಸ್ಕರಿಸಲ್ಪಡುತ್ತಿರುವ, ಇಚ್ಛಾನುಕೂಲಿಯಾದ, ಬೇಡಿದ್ದನ್ನು ಕರುಣಿಸುವ, ಲಂಬೋದರನಾಗಿರುವ, ಹಾವನ್ನೇ ಉಪವೀತವನ್ನಾಗಿ ಧರಿಸಿದವನಾದ ಶಿವಪಾರ್ವತೀ ಸುತನಾದ ಲೀಲಾಜಾಣನಾದ ಶ್ರೀಮಹಾಗಣಪತಿಗೆ ಮಂಗಲದಾಯಕ ಶುಭಫಲಕ್ಕಾಗಿ ಪ್ರಾತ:ಕಾಲದಲ್ಲಿ ನಾನು ನಮಿಸುವೆನು.

|| ಶ್ರೀಗಣೇಶ ಪ್ರಾತ:ಸ್ಮರಣ ಸ್ತೋತ್ರಮ್ |೨|
ಪ್ರಾತರ್ಭಜಾಮ್ಯಭಯದಂ ಖಲು ಭಕ್ತ ಶೋಕ- |
ದಾವಾನಲಂ ಗಣವಿಭುಂ ವರಕುಂಜರಾಸ್ಯಮ್ ||
ಅಜ್ಞಾನಕಾನನವಿನಾಶನ ಹವ್ಯವಾಹಂ |
ಉತ್ಸಾಹವರ್ಧನಮಹಂ ಸುತಮೀಶ್ವರಸ್ಯ |೩|
ಭಾವಾರ್ಥ:-ಅಭಯಪ್ರದಾಯಕನಾದ, ಭಕ್ತರ ಕಷ್ಟಗಳ ನಿವಾರಕನಾದ, ಗಣಾದಿಗಳ ನಾಯಕವಾದ, ಶ್ರೇಷ್ಠವಾದ ಆನೆಯ ಮೊಗವುಳ್ಳ, ಅಜ್ಞಾನವನ್ನು ನಾಶಮಾಡುವ ಜ್ಞಾನಾಗ್ನಿಯಾಗಿರುವ, ಉತ್ಸಾಹವನ್ನು ಹೆಚ್ಚಿಸಬಲ್ಲ ಈಶ್ವರಸುತನಾದ ಶ್ರೀಮಹಾಗಣಪತಿಯನ್ನು ಉಷ:ಕಾಲದಲ್ಲಿ ನಾನು ಭಜಿಸುತ್ತೇನೆ.

|| ಶ್ರೀಗಣೇಶ ಪ್ರಾತ:ಸ್ಮರಣ ಸ್ತೋತ್ರಮ್ |೪|
ಶ್ಲೋಕತ್ರಯಮಿದಂ ಪುಣ್ಯಂ ಸದಾ ಸಾಮ್ರಾಜ್ಯದಾಯಕಮ್ |
ಪ್ರಾತರುತ್ಥಾಯ ಸತತಂ ಯ: ಪಠೇತ್ ಪ್ರಯತ: ಪುಮಾನ್ |
ಭಾವಾರ್ಥ:-ಪುಣ್ಯಪ್ರದಾಯಕವಾಗಿರುವ ಈ ಮೂರು ಶ್ಲೋಕಗಳನ್ನು ಬೆಳಗ್ಗೆ ಪ್ರಾತಃಕಾಲದಲ್ಲಿ ಎದ್ದು, ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ಯಾವನು ಪಠಿಸುವನೋ ಅವನು ನೆಮ್ಮದಿಯ ಸಾಮ್ರಾಜ್ಯವನ್ನೇ ತನ್ನದಾಗಿಸಿಕೊಳ್ಳುವನು.
|| ಇತಿ ಶ್ರೀ ಗಣೇಶ ಪ್ರಾತ:ಸ್ಮರಣ ಸ್ತೋತ್ರಮ್ ||
|ಈ ರೀತಿಯಾಗಿ ಶ್ರೀ ಗಣೇಶ ಪ್ರಾತ:ಸ್ಮರಣ ಸ್ತೋತ್ರಗಳಿವೆ|
ಈ ಮೇಲಿನ ಶ್ಲೋಕಗಳನ್ನು ದಿನವೂ ಪಠಿಸುವುದರಿಂದ ಸಕಲ ಕಾರ್ಯಗಳಲ್ಲಿ ಸಿದ್ಧಿಯಾಗುತ್ತದೆ. ಅಲ್ಲದೇ ದಿನದ ಆರಂಭವೂ ಯಾವುದೇ ವಿಘ್ನಗಳಿಲ್ಲದೇ ಶುರುವಾಗುತ್ತದೆ. ಹಾಗಾಗಿ ತಪ್ಪದೇ ಶ್ರೀ ಮಹಾಗಣಪನ ಈ ಸ್ತೋತ್ರಗಳನ್ನು ತಪ್ಪದೇ ಪಠಿಸಿ.