ಇಂದಿಗೂ ಮೈನವಿರೇಳಿಸುವ ಹಿಂದೂ ಧರ್ಮದ ಪ್ರಸಿದ್ಧ ಶಾಪಗಳು

By: Jaya subramanya
Subscribe to Boldsky
Tuesday Fast and Rituals, Mangalwar Vrat | ऐसे रखें हनुमान जी, मंगलवार का व्रत | Boldsky

ಹಿಂದೂ ಧರ್ಮದಲ್ಲಿ ಒಬ್ಬರಿಗೊಬ್ಬರು ಶಾಪವನ್ನು ನೀಡುವಂತಹ ಕಟ್ಟುಪಾಡು ಅನಾದಿ ಕಾಲದಿಂದಲೇ ಜೀವ ತಳೆದಿತ್ತು. ಗ್ರೀಕ್ ಮತ್ತು ಪಾಗನ್‌ಗಳು ಈ ರೀತಿ ಒಬ್ಬರಿಗೊಬ್ಬರು ಶಾಪ ಕೊಟ್ಟುಕೊಳ್ಳುತ್ತಿದ್ದರಂತೆ. ಅಂತೆಯೇ ನಮ್ಮ ಹಿಂದೂ ಧರ್ಮದಲ್ಲೂ ಈ ಕ್ರಮ ಜಾರಿಯಲ್ಲಿತ್ತು. ಈ ಶಾಪಗಳ ಹಿಂದೆ ಕೂಡ ಅದ್ಭುತ ಕಥೆಗಳಿದ್ದು ಇಂದಿನ ಲೇಖನದಲ್ಲಿ ಈ ಕಥೆಗಳನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಪುರಾತನ ಕಾಲದಲ್ಲಿ ಶಾಪಗಳನ್ನು ಏಕೆ ನೀಡಲಾಗುತ್ತಿದ್ದು ಮತ್ತು ಆ ಶಾಪವನ್ನು ನೀಡಲು ಅವರಿಗೆ ಶಕ್ತಿ ಹೇಗೆ ಬರುತ್ತಿದ್ದವು ಎಂಬುದೇ ಕುತೂಹಲಕರವಾಗಿರುವ ವಿಷಯವಾಗಿದೆ.

ಧ್ಯಾನ, ಪೂಜೆ ಪುನಸ್ಕಾರಗಳಲ್ಲಿ ಹೆಚ್ಚಿನ ಸಾಧು ಸಂತರು ಇರುತ್ತಿದ್ದರು ಮತ್ತು ಅವರ ಭಕ್ತಿಯ ಮಹಿಮೆಯಿಂದ ಅವರಿಗೆ ಈ ಶಕ್ತಿ ದೊರಕಿದೆ ಎಂಬುದಾಗಿ ಹೇಳಬಹುದು. ಈ ಶಾಪಗಳಲ್ಲಿ ಕೆಲವೊಂದು ಮಹತ್ವತೆಗಳಿದ್ದು ಇವುಗಳು ಇಂದಿಗೂ ಪುರಾಣಗಳಲ್ಲಿ ಶಾಶ್ವತ ಎಂದೆನಿಸಿವೆ. ಬನ್ನಿ ಹಾಗಿದ್ದರೆ ಇಂದಿಲ್ಲಿ ಆ ಶಾಪಗಳೇನು ಎಂಬುದನ್ನು ತಿಳಿದುಕೊಳ್ಳೋಣ...

Lord Krishna

ಕುಂತಿಯ ಮೇಲಿನ ಶಾಪ

ಕರ್ಣನು ತಮ್ಮ ಸಹೋದರ ಎಂಬುದಾಗಿ ಪಾಂಡವರಿಗೆ ತಿಳಿದ ಸಂದರ್ಭದಲ್ಲಿ ತಾವು ತಪ್ಪಾಗಿ ಕರ್ಣನನ್ನು ಕೊಂದುಬಿಟ್ಟೆವು ಎಂಬ ಪಾಪಪ್ರಜ್ಞೆಯಿಂದ ಬಳಲುತ್ತಾರೆ. ಹಿರಿಯ ಸಹೋದರ ಯುಧಿಷ್ಟಿರನು ತನ್ನ ತಾಯಿಯನ್ನು ಶಪಿಸುತ್ತಾನೆ. ಅದೇನೆಂದರೆ ಯಾವ ಹೆಣ್ಣು ಕೂಡ ತನ್ನ ಗರ್ಭವನ್ನು ಮರೆ ಮಾಡಲು ಸಾಧ್ಯವಾಗದೇ ಇರಲಿ ಎಂದಾಗಿದೆ. ಹೀಗಾಗಿ ಮಹಿಳೆ ಗರ್ಭಿಣಿಯಾಗಿರುವುದು ಎಲ್ಲರ ಗಮನಕ್ಕೂ ಬರುತ್ತದೆ.

ಮಹಾಭಾರತದಲ್ಲಿ ವರ್ಣಿಸಲಾದ ಸುರಸುಂದರಿಯರ ಕಥೆ

ಕೃಷ್ಣನಿಗೆ ಶಾಪ ಕೊಟ್ಟ ಗಾಂಧಾರಿ

ಮಹಾಭಾರತ ಯುದ್ಧದಲ್ಲಿ ಪಾಂಡವರ ಗೆಲುವಿನ ನಂತರ ಕೌರವರು ನಾಶಗೊಂಡ ನಂತರ ಕೃಷ್ಣನು ಕೌರವರ ತಾಯಿ ಗಾಂಧಾರಿಯನ್ನು ನೋಡಲು ಹೋಗುತ್ತಾರೆ. ಆಕೆ ನೋವಿನಿಂದ ದಹಿಸಿರುತ್ತಾಳೆ. ಇದರಿಂದ ನೊಂದ ಆ ಮಾತೃ ಹೃದಯ ಕೃಷ್ಣನ ಅವನತಿಯ ಶಾಪವನ್ನು ನೀಡುತ್ತಾರೆ. ಆಕೆಯ ಶಾಪ ಫಲಿಸಿ ಕೃಷ್ಣನ ಯದುವಂಶವೇ ಕಲಹದಿಂದ ಅಂತ್ಯಗೊಳ್ಳುತ್ತದೆ.

Krishna

ತನ್ನ ನೂರು ಮಕ್ಕಳ ಸಾವಿನಿಂದ ದುಃಖಿತಳಾಗಿ ಗಾಂಧಾರಿಯು ಸಂಪೂರ್ಣ ರಕ್ತಪಾತಕ್ಕೆ ಶ್ರೀ ಕೃಷ್ಣನನ್ನು ಆರೋಪಿಸಿದಳು. ಶ್ರೀ ಕೃಷ್ಣನು ಸ್ವತಃ ದೇವರಾಗಿದ್ದರಿಂದ ಕುರು ಕ್ಷೇತ್ರಯುದ್ಧವನ್ನು ಸುಲಭವಾಗಿ ತಪ್ಪಿಸಬಹುದಾಗಿತ್ತೆಂದು ಗಾಂಧಾರಿಯು ಹೇಳಿದಳು. ಆದರೆ ಅವನು ಸಹೋದರರು ಒಬ್ಬರೊನ್ನೊಬ್ಬರು ಪರಸ್ಪರ ಕೊಲ್ಲಲು ಅವಕಾಶ ಮಾಡಿದನು. ಹಾಗಾಗಿ, ಗಾಂಧಾರಿಯು ಕೃಷ್ಣನಿಗೆ ಯಾದವ ಕುಲವೂ ಕೂಡ ಕುರುವಂಶವು ನಾಶವಾದ ರೀತಿಯಲ್ಲಿ ನಾಶವಾಗಿಹೋಗಲಿ ಎಂದು ಶಪಿಸಿದಳು. ಯಾದವ ಕುಲದಲ್ಲಿಯೂ ಸಹೋದರರು ಪರಸ್ಪರ ಕೊಂದು ಕೃಷ್ಣನ ರಾಜ್ಯವು ಅಂತ್ಯವಾಗಲಿಯೆಂದು ಹೇಳಿದಳು. ಹಾಗೆಯೇ ಶ್ರೀ ಕೃಷ್ಣನು ಏಕಾಂಗಿಯಾಗಿ ಸಾಯುವನೆಂದು ಮತ್ತು ದ್ವಾರಕಾ ಪಟ್ಟಣವನ್ನು ಸಮುದ್ರವು ನುಂಗಿ ಹಾಕಲಿಯೆಂದೂ ಸಹ ಶಾಪ ಕೊಟ್ಟಳು. ಶ್ರೀ ಕೃಷ್ಣನು ಎಷ್ಟಾದರೂ ಗಾಂಧಾರಿಯು ತನ್ನ ಉತ್ಕಟ ಭಕ್ತಳೆಂದು ಮುಗುಳ್ನಗೆಯಿಂದ ಶಾಪವನ್ನು ಸ್ವೀಕರಿಸಿದನು. 

ಬ್ರಹ್ಮನ ಮೇಲಿನ ಶಾಪ 

brahma

ಒಮ್ಮೆ ಬ್ರಹ್ಮ ಮತ್ತು ವಿಷ್ಣುವಿಗೆ ಶಿವಲಿಂಗದ ಆದಿ ಮತ್ತು ಅಂತ್ಯದ ಕುರಿತಾಗಿ ಚರ್ಚೆವುಂಟಾಗುತ್ತದೆ. ಒಬ್ಬರು ಆರಂಭವನ್ನು ಇನ್ನೊಬ್ಬರು ತುದಿಯನ್ನು ಕಂಡುಬರುವಂತೆ ಸಂಧಾನಕ್ಕೆ ಬರುತ್ತಾರೆ. ಶಿವನ ಕೋಪದ ಅರಿವಿದ್ದ ವಿಷ್ಣು ಸುಮ್ಮನಾಗುತ್ತಾರೆ. ಆದರೆ ಬ್ರಹ್ಮನು ಶಿವನ ಮೆಚ್ಚಿನ ಪುಷ್ಪವಾದ ಕೇತಕಿಯನ್ನು ಮರುಳು ಮಾಡಿ ಬ್ರಹ್ಮನು ಶಿವ ಲಿಂಗದ ಕೊನೆಯ ಭಾಗವನ್ನು ಕಂಡಿದ್ದಾರೆ ಎಂಬುದಾಗಿ ಸುಳ್ಳು ಹೇಳಿಸುತ್ತಾರೆ. ಸತ್ಯದ ಅರಿವಿದ್ದ ಶಿವನು ಕೇತಕಿಯನ್ನು ಶಪಿಸುತ್ತಾರೆ ಮತ್ತು ಈ ಪುಷ್ಪ ಶಿವನ ಪೂಜೆಗೆ ಬಳಸದಂತಾಗುತ್ತದೆ. ಅಂತೆಯೇ ಬ್ರಹ್ಮನನ್ನು ಯಾರೂ ಪೂಜಿಸಬಾರದು ಎಂಬ ಶಾಪವನ್ನು ಶಿವನು ನೀಡುತ್ತಾರೆ. ಇದರಿಂದಾಗಿಯೇ ಬ್ರಹ್ಮನಿಗೆ ಭಾರತದಲ್ಲಿ ಎರಡು ದೇವಸ್ಥಾನಗಳಿದ್ದರೂ ಅಲ್ಲಿ ಪೂಜೆ ನಡೆಯುವುದಿಲ್ಲ.

ಶಿವ-ಸರಸ್ವತಿ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು!

ಗಯಾಕ್ಕೆ ಸೀತೆಯ ಶಾಪ

ಶ್ರೀರಾಮನು ತನ್ನ ತಂದೆ ದಶರಥನ ಅಸ್ಥಿಯನ್ನು ನದಿಯಲ್ಲಿ ಬಿಡುವುದಕ್ಕಾಗಿ ಸಹೋದರ ಲಕ್ಷ್ಮಣ ಮತ್ತು ಸೀತೆಯೊಂದಿಗೆ ಗಯಾದ ದಂಡೆಗೆ ಬರುತ್ತಾರೆ. ರಾಮ ಲಕ್ಷ್ಮಣರು ಫಲ್ಗುಣಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ದಶರಥನ ಆತ್ಮವು ಸೀತೆಯಲ್ಲಿ ಪಿಂಡವನ್ನು ಕೇಳುತ್ತದೆ. (ಮೃತದೇಹಕ್ಕೆ ಅಕ್ಕಿಯನ್ನು ಸಮರ್ಪಿಸುವ ಪದ್ಧತಿ) ಸೀತೆಯ ಬಳಿ ಏನೂ ಇರಲಿಲ್ಲ, ಸೀತೆಯು ಮರಳನ್ನು ಸಮರ್ಪಿಸುತ್ತಾರೆ. ಈ ಕ್ರಿಯೆಗಾಗಿ ಐದು ಜನ ಸಾಕ್ಷಿಯಾಗಿದ್ದರು. ದನ, ತುಳಸಿ, ವಿಷ್ಣುವಿನ ಹೆಜ್ಜೆ, ಬ್ರಾಹ್ಮಣ ಮತ್ತು ಫಲ್ಗುಣಿ ನದಿ. ರಾಮನು ಮರುಳಿ ಬಂದಾಗ ವಿಷ್ಣುವಿನ ಹೆಜ್ಜೆ ಗುರುತು ಮಾತ್ರವೇ ಸಾಕ್ಷಿಯಾಗಿ ನಿಂತಿದ್ದು ಮತ್ತೆಲ್ಲವೂ ಸಾಕ್ಷಿಯಿಂದ ಹೊರಗುಳಿದರು.

rama seetha laxman

ಇದರಿಂದ ಕೋಪಗೊಂಡ ಸೀತೆ ಮಾತೆ ನದಿಯ ನೀರು ಒಣಗುವಂತೆ ಶಾಪವನ್ನು ನೀಡುತ್ತಾರೆ. ಗಯಾದಿಂದ ತುಳಸಿ ಸಸ್ಯವನ್ನು ಗಡೀಪಾರು ಮಾಡಿದರು. ಗಯಾದ ಬ್ರಾಹ್ಮಣರನ್ನು ಶಾಶ್ವತವಾಗಿ ಹಸಿವಿನಿಂದ ಶಪಿಸುವಂತೆ ಮಾಡಿದರು ಮತ್ತು ಆ ದನದ ಸೆಗಣಿಯನ್ನು ಎಂದಿಗೂ ಮುಂದಕ್ಕೆ ಪೂಜಿಸಬಾರದು ಎಂದು ಆದೇಶಿಸಿದರು. ಇವು ಹಿಂದೂ ಪುರಾಣಗಳಲ್ಲಿ ಅತ್ಯಂತ ಪ್ರಸಿದ್ಧವಾದ ಶಾಪಗಳಾಗಿವೆ. ಬೇರೆ ಯಾವುದೇ ಪ್ರಸಿದ್ಧ ಶಾಪಗಳು ನಿಮಗೆ ತಿಳಿದಿದೆಯೇ?

English summary

Famous Curses In Hindu Mythology

Most of the ancient people like Greeks and pagans are famous for cursing each other. The same is the case with Hindu mythology; one of the oldest surviving religions in the world. In fact, curses in Hindu mythical stories give rise to some very interesting facts. They explain some natural phenomenons and tell us why things are the way they are.
Story first published: Tuesday, October 31, 2017, 12:03 [IST]
Subscribe Newsletter