For Quick Alerts
ALLOW NOTIFICATIONS  
For Daily Alerts

ಹಣೆಗೆ ಅಂಟುವ ಬಿಂದಿ ಇಟ್ಟುಕೊಳ್ಳಬಾರದಂತೆ, ಇದರಿಂದ ಸಮಸ್ಯೆಗಳೇ ಜಾಸ್ತಿಯಂತೆ!

|

ಹಿಂದೂ ಧರ್ಮದಲ್ಲಿನ ಹೆಚ್ಚಿನ ಆಚರಣೆಗಳು ಹಾಗೂ ಕೆಲವೊಂದು ಸಂಪ್ರದಾಯಗಳಿಗೆ ವೈಜ್ಞಾನಿಕವಾದ ಕಾರಣಗಳು ಇವೆ ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಭಾರತೀಯ ಹಿಂದೂಗಳು ವಿದೇಶಿ ಸಂಪ್ರದಾಯ ಹಾಗೂ ಅಲ್ಲಿನ ಫ್ಯಾಷನ್ ಗೆ ಮೊರೆ ಹೋಗುತ್ತಿದ್ದಾರೆ. ಆದರೆ ಅದೇ ವಿದೇಶಿಯರು ಮಾತ್ರ ಭಾರತದ ಸಂಪ್ರದಾಯವನ್ನು ಪಾಲಿಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿಗೆ ಬರುವಂತಹ ವಿದೇಶಿಯರು ರುದ್ರಾಕ್ಷಿ, ಬಳೆಗಳು, ಕುಂಕುಮ ಮತ್ತು ಭಾರತೀಯ ಸಾಂಪ್ರದಾಯಿಕ ಉಡುಗೆಯನ್ನು ಧರಿಸುವರು.

Disadvantages of wearing stick-on bindis during puja

ಇದರಿಂದ ಅವರು ಹಿಂದೂ ಧರ್ಮಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಆದರೆ ತಿಲಕವಿಡುವುದರಿಂದ ನಮ್ಮ ದೇಹಕ್ಕೆ ಕೆಲವೊಂದು ಲಾಭಗಳು ಕೂಡ ಇದೆ ಎಂದು ಹೇಳಲಾಗುತ್ತದೆ. ಬಿಂದಿ ಎನ್ನುವ ಪದವು ಸಂಸ್ಕೃತದಿಂದ ಬಂದಿದೆ ಮತ್ತು ಇದನ್ನು ಹಿಂದೂ ಧರ್ಮದ ಸೊಲಹ ಸಿಂಗಾರ್ ಎಂದು ಕರೆಯಲಾಗುತ್ತದೆ. ಇದನ್ನು ಕಣ್ಣಿನ ಮೂರನೇ ಕೇಂದ್ರದಲ್ಲಿ ಧರಿಸಲಾಗುತ್ತದೆ. ಈ ಲೇಖನದಲ್ಲಿ ನಿಮಗೆ ಬಿಂದಿಯ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡಲಿದ್ದೇವೆ.

ಬಿಂದಿಯ ಪ್ರಾಮುಖ್ಯತೆ

ಬಿಂದಿಯ ಪ್ರಾಮುಖ್ಯತೆ

ಪುರುಷರು ಇಡುವಂತಹ ತಿಲಕ ಮತ್ತು ಮಹಿಳೆಯರು ಇಡುವಂತಹ ಬಿಂದಿಯು ಮೂರನೇ ಕಣ್ಣಿನ ಚಕ್ರವನ್ನು ಜಾಗೃತಗೊಳಿಸಿ ಒಳ್ಳೆಯ ಶಕ್ತಿ ನೀಡುವುದು ಎಂದು ನಂಬಲಾಗಿದೆ. ಹಿಂದೂ ಮಹಿಳೆಯರು ಬಿಂದಿಯನ್ನು ಸೊಲಹ ಸಿಂಗಾರ್ ಆಗಿ ಧರಿಸುವರು. ಇದು ಶಕ್ತಿಯನ್ನು ನೀಡುವುದು.

ಸೊಲಹ ಸಿಂಗಾರ್ ನಲ್ಲಿ ಇದನ್ನು ಸೇರ್ಪಡಿಸಲು ಕಾರಣವೇನು?

ಸೊಲಹ ಸಿಂಗಾರ್ ನಲ್ಲಿ ಇದನ್ನು ಸೇರ್ಪಡಿಸಲು ಕಾರಣವೇನು?

ಪುರಾತನ ಸಂಸ್ಕೃತಿ ಪ್ರಕಾರ ಬಿಂದಿ ಧರಿಸುವುರಿಂದ ಕೇವಲ ಅಲಂಕಾರ ಮಾತ್ರವಲ್ಲದೆ ತುಂಬಾ ಲಾಭಗಳು ಇವೆ. ಸೊಲಹ ಸಿಂಗಾರ್ ಮಹಿಳೆಯ ದೇಹದಲ್ಲಿನ ವಿವಿಧ ಚಕ್ರಗಳನ್ನು ಹಾಗೂ ಅದರ ಸುತ್ತಲಿನ ಶಕ್ತಿಯನ್ನು ಸಮತೋಲನದಲ್ಲಿಡಲು ನೆರವಾಗುವುದು.

Most Read: ಹಣೆಯ ಸ್ಟಿಕ್ಕರ್‌ನಿಂದಾಗುವ ಬಿಳಿ ಕಲೆಗಳಿಗೆ ಸೂಕ್ತ ಪರಿಹಾರ

ಬಿಂದಿಯ ಪುರಾತನ ಸಂಪ್ರದಾಯ

ಬಿಂದಿಯ ಪುರಾತನ ಸಂಪ್ರದಾಯ

ಮೂರನೇ ಕಣ್ಣಿನ ಭಾಗ ಹಾಗೂ ಹುಬ್ಬುಗಳೆರಡರ ಮಧ್ಯೆ ಸಂಪ್ರದಾಯಿಕವಾಗಿ ಬಿಂದಿ(ಕುಂಕುಮ) ಇಡಲಾಗುತ್ತದೆ. ಇದು ಮೂರನೇ ಕಣ್ಣಿನ ಚಕ್ರ ಮತ್ತು ಅಗ್ಯ ಚಕ್ರ(ಯೋಗದಲ್ಲಿ)ವನ್ನು ಪ್ರತಿನಿಧಿಸುವುದು. ಇದು ದೇಹದಲ್ಲಿನ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಈ ಕೇಂದ್ರವು ಮೂರು ನಾಡಿಗಳಾಗಿರುವಂತಹ ಇಡಾ, ಪಿಂಗ್ಲಾ ಮತ್ತು ಸುಶುಮ್ನಾದ ಛೇದಕವಾಗಿದೆ.

ಮೂರನೇ ಕಣ್ಣಿನ ಚಕ್ರ

ಮೂರನೇ ಕಣ್ಣಿನ ಚಕ್ರ

ಯೋಗ ವಿಜ್ಞಾನದ ಪ್ರಕಾರ ಮೂರನೇ ಕಣ್ಣಿನ ಚಕ್ರವು ದೇಹದ ಅತೀ ಪ್ರಾಮುಖ್ಯ ಕೇಂದ್ರವಾಗಿದೆ. ಈ ಮೂಲಕ ಮೆದುಳು ದೇಹದಲ್ಲಿ ಆರು ಇಂದ್ರಿಯಗಳು ಕಾಸ್ಮಿಕ್ ಶಕ್ತಿಗೆ ಸಂಪರ್ಕ ಹೊಂದಿದಾಗ ದೇಹದ ಸ್ಥಿತಿಯನ್ನು ನಿಯಂತ್ರಿಸುವುದು. ಇದರಿಂದ ಈ ಕೇಂದ್ರವನ್ನು ಯಾವಾಗಲೂ ಮುಕ್ತ ಹಾಗೂ ಯಾವುದೇ ಅಡೆತಡೆಯಿಲ್ಲದೆ ಇಡಬೇಕು.

ಹಿಂದೂ ಧರ್ಮದಲ್ಲಿ ಪೂಜೆ

ಹಿಂದೂ ಧರ್ಮದಲ್ಲಿ ಪೂಜೆ

ಈ ಕೇಂದ್ರವನ್ನು ತಡೆಯುವುದರಿಂದ ಕಾಸ್ಮಿಕ್ ಶಕ್ತಿ ಅಥವಾ ಅತೀಂದ್ರ ಶಕ್ತಿಯ ಭಾವನೆ ನೀಡುವಂತಹ ಭೂಮಂಡಲದ ಶಕ್ತಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ.

Most Read: ಈಗೆಲ್ಲಾ ಸಮಸ್ಯೆಗಳು ಕಾಡಿದರೆ, 'ಶನಿ ದೇವರು' ನಿಮ್ಮ ಮೇಲೆ ಮುನಿದಿರ ಬಹುದು!

ಕಾಸ್ಮಿಕ್ ಶಕ್ತಿಗೆ ಸಂಪರ್ಕ

ಕಾಸ್ಮಿಕ್ ಶಕ್ತಿಗೆ ಸಂಪರ್ಕ

ವಾಸ್ತವದಲ್ಲಿ ಆ ಶಕ್ತಿಯು ನಿಮ್ಮ ಮೆದುಳನ್ನು ಅಗೋಚರವಾಗಿ ಅಥವಾ ಭವಿಷ್ಯದಲ್ಲಿ ಸಂಭವಿಸುವ ವಿಷಯಗಳನ್ನು ಸಂಪರ್ಕಿಸುತ್ತದೆ. ಇದು ನಿಮ್ಮನ್ನು ವಿಚಿತ್ರವಾಗಿಸುವುದು. ಇದುವೇ ಕಾಸ್ಮಿಕ್ ಶಕ್ತಿ.

ಯಜ್ಞದ ವೇಳೆ ಏನಾಗುತ್ತದೆ?

ಯಜ್ಞದ ವೇಳೆ ಏನಾಗುತ್ತದೆ?

ಯಾವುದೇ ವ್ಯಕ್ತಿಯು ಯಜ್ಞ, ಹೋಮ ಅಥವಾ ಹವನದ ವೇಳೆ ಉಪಸ್ಥಿತನಿದ್ದರೆ ಆಗ ಅವರ ಚಕ್ರಗಳು ಜಾಗೃತಗೊಳ್ಳುತ್ತದೆ(ಇದು ದೀರ್ಘಕಾಲದ ತನಕ ಇರುವುದು) ಮತ್ತು ಮೂರನೇ ಕಣ್ಣಿನ ಕೇಂದ್ರವು ಜಾಗೃತಗೊಳ್ಳುವುದು. ಇದು ಹೆಚ್ಚಿನವರಿಗೆ ನಿದ್ರೆಯ ಸ್ಥಿತಿಯಲ್ಲಿ ಗೋಚರಕ್ಕೆ ಬರುವುದು.

ಕುಂಕುಮ

ಕುಂಕುಮ

ಕುಂಕುಮದ ಬಿಂದಿಯು ಈ ಚಕ್ರವನ್ನು ಜಾಗೃತಗೊಳಿಸುವುದು. ಅದೇ ಅಂಟಿನಿಂದ ಕೂಡಿರುವಂತಹ ಬಿಂದಿಯು ಈ ಚಕ್ರದಿಂದ ಬರುವ ಶಕ್ತಿಯನ್ನು ಅಲ್ಲೇ ತಡೆಯುವುದು.

ಅಂಟುವ ಬಿಂದಿ

ಅಂಟುವ ಬಿಂದಿ

ಅಂಟುವ ಬಿಂದಿಯು ಈ ಚಕ್ರವನ್ನು ತಡೆಯುವುದು ಮತ್ತು ನಿಮ್ಮ ಸುತ್ತಲು ಇರುವಂತಹ ಕಾಸ್ಮಿಕ್ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದು. ಇದೇ ಕಾರಣದಿಂದಾಗಿ ಜನರಿಗೆ ನಿದ್ರೆಯ ಸ್ಥಿತಿ ಮತ್ತು ಮನಸ್ಸಿಗೆ ಶಾಂತಿಯು ಸಿಗದು.

ಪುರಾತನ ಸಂಪ್ರದಾಯ

ಪುರಾತನ ಸಂಪ್ರದಾಯ

ಪುರಾತನ ಕಾಲದಿಂದಲೂ ಕುಂಕುಮದ ಬಿಂದಿಯನ್ನು ಇಡಲಾಗುತ್ತಿತ್ತು. ಪುರುಷರು ಮತ್ತು ಮಹಿಳೆಯರು ಸಿಂಧೂರ, ಅರಿಶಿನ, ಶ್ರೀಗಂಧ ಅಥವಾ ಭಸ್ಮವನ್ನು ಹಣೆಗೆ ಇಡುತ್ತಿದ್ದರು. ಇದರಿಂದ ಮೂರನೇ ಕಣ್ಣಿನ ಚಕ್ರವು ಜಾಗೃತವಾಗುತ್ತಿತ್ತು.

ಹಾನಿಯೇನು?

ಹಾನಿಯೇನು?

ಆಧುನಿಕ ಯುಗದಲ್ಲಿ ಅಂಟುವ ಬಿಂದಿಯ ಸಂಪ್ರದಾಯವು ಕಾಡ್ಗಿಚ್ಚಿನಂತೆ ಹಬ್ಬಲು ಆರಂಭವಾಯಿತು. ಹಿಂದೂ ಮಹಿಳೆಯರು ಬಣ್ಣಬಣ್ಣದ ಬಿಂದಿಗಳು ಹಾಗೂ ತಮ್ಮ ಬಟ್ಟೆಬರೆಗೆ ಹೊಂದಿಕೊಳ್ಳುವಂತಹ ಬಿಂದಿಗಳನ್ನು ಧರಿಸಲು ಆರಂಭಿಸಿದರು. ಆದರೆ ಕುಂಕುಮದ ಬಿಂದಿಗಿಂತ ಅಂಟುವ ಬಿಂದಿಗಳು ಹೆಚ್ಚಿನ ಹಾನಿಯನ್ನು ಉಂಟು ಮಾಡುವುದು.

English summary

Dangers of Wearing 'stick-on'on forehead

Tilak or Bindi is one embellishment, which you’ll often find them wearing. Bindi, which is derived from Sanskrit word ‘bindu’ and is considered a sacred part of the ‘solah sringar’ in Hinduism; and is worn over the third-eye point.It is believed that tilak for men and bindi for women, surrounds them with good energy by activating their Third- Eye chakra. In addition to this, Hindu women adorn bindis as part of their solah sringar, which also embodies their power.
X
Desktop Bottom Promotion