For Quick Alerts
ALLOW NOTIFICATIONS  
For Daily Alerts

ಸುಬ್ರಹ್ಮಣ್ಯ ಷಷ್ಠಿ: ದಿನಾಂಕ, ಪೂಜೆ ಸಮಯ ಹಾಗೂ ಈ ಆಚರಣೆಯ ಮಹತ್ವ

|

ಹಿಂದೂಗಳಿಗೆ ಮಾರ್ಗಶಿರ ಮಾಸದಲ್ಲಿ ಬರುವ ಚಂಪ ಷಷ್ಠಿ ತುಂಬಾ ವಿಶೇಷವಾದದ್ದು. ಇದನ್ನು ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಎಂದೂ ಕೂಡ ಕರೆಯಲಾಗುವುದು. ಶುಕ್ಲ ಪಕ್ಷದ ಆರನೇ ದಿನ ಅಂದರೆ ಈ ತಿಂಗಳ 20ನೇ ದಿನಾಂಕದಂದು ಚಂಪ ಷಷ್ಠಿ ಆಚರಿಸಲಾಗುವುದು.

Champa Shashthi 2020

ಚಂಪಾ ಷಷ್ಠಿಯನ್ನು ಕರ್ನಾಟಕ, ಮಹಾರಾಷ್ಟ್ರದಲ್ಲಿ ದೊಡ್ಡ ಹಬ್ಬವಾಗಿ ಆಚರಿಸುತ್ತಾರೆ. ಕಾರ್ತಿಕೇಯ, ಸ್ಕಂದ, ಮುರುಗನ್, ವೇಲನ್ ಕುಮಾರ್ ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಸುಬ್ರಹ್ಮಣ್ಯನ ಆರಾಧಿಸುವ ದಿನವೇ ಚಂಪಾ ಷಷ್ಠಿ.

ಚಂಪಾ ಷಷ್ಠಿಯಂದು ಸುಬ್ರಹ್ಮಣ್ಯನ ಭಕ್ತರು ಆತನ ಜಪ ಮಾಡುತ್ತಾ ಹೋಮ, ವ್ರತೋಪವಾಸಾದಿ ಆಚರಣೆಗಳೊಡನೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಧನ್ಯರಾಗುತ್ತಾರೆ. ಸುಬ್ರಹ್ಮಣ್ಯ ಸ್ವಾಮಿ ಒಲಿದರೆ ಎಲ್ಲವೂ ಒಳಿತಾಗುತ್ತದೆ, ಇನ್ನು ಶರ್ಪ ದೋಷ, ಮುಂತಾದ ಸಮಸ್ಯೆಯಿದ್ದರೆ ಸುಬ್ರಹ್ಮಣ್ಯನನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟವೂ ದೂರವಾಗುವುದು.

ಚಂಪಾ ಷಷ್ಠಿ

ಚಂಪಾ ಷಷ್ಠಿ

ಚಂಪಾ ಷಷ್ಠಿಯ ಪೂಜೆ ಸಮಯ

ಡಿಸೆಂಬರ್ 20 ಭಾನುವಾರದಂದು ಚಂಪಾ ಷಷ್ಠಿ

ಷಷ್ಠಿ ಪ್ರಾರಂಭ: ಡಿಸೆಂಬರ್ 19, 2:15ಕ್ಕೆ

ಷಷ್ಠಿ ಮುಕ್ತಾಯ: ಡಿಸೆಂಬರ್ 20, 2:50ಕ್ಕೆ

ಸುಬ್ರಹ್ಮಣ್ಯನ ದೇಗುಲಗಳಲ್ಲಿ ವಿಶೇಷ ಪೂಜೆಗಳು

ಸುಬ್ರಹ್ಮಣ್ಯನ ದೇಗುಲಗಳಲ್ಲಿ ವಿಶೇಷ ಪೂಜೆಗಳು

ಎಲ್ಲಿ ಸುಬ್ರಹ್ಮಣ್ಯನ ದೇಗುಲಗಳಿರುತ್ತೋ ಅಲ್ಲಿ ಚಂಪಾ ಷಷ್ಠಿಯಂದು ವಿಶೇಷ ಪೂಜೆಗಳನ್ನು ನಡೆಸಲಾಗುವುದು. ಆ ದಿನ ಭಕ್ತರು ಉಪವಾಸ ವ್ರತವಿದ್ದು ಅಶ್ವತ್ಥ ಕಟ್ಟೆ ಮೇಲೆ ಸರ್ಪ ವಿಗ್ರಹವಿಟ್ಟು ಸುಗ್ರಹ್ಮಣ್ಯ ಸ್ವಾಮಿಯ ಆವಾಹನೆ ಮಾಡಿ ಹಾಲೆರೆದು, ಅಭಿಷೇಕ ಮಾಡಿ, ನೈವೇದ್ಯವನ್ನು ಅರ್ಪಿಸಿ ಆಚರಣೆ ಮಾಡಲಾಗುವುದು.

ಕರ್ನಾಟಕದಲ್ಲಿ ನಾಗಪೂಜೆಗೆ ಪ್ರಸಿದ್ಧವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

ಕರ್ನಾಟಕದಲ್ಲಿ ನಾಗಪೂಜೆಗೆ ಪ್ರಸಿದ್ಧವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ನಾಗಪೂಜೆಗೆ ಹೆಸರುವಾಸಿಯಾಗಿದೆ. ಹುತ್ತವನ್ನು ಇಲ್ಲಿ ಆರಾಧಿಸಲಾಗುವುದು. ಆ ಹುತ್ತದ ಮಣ್ಣನ್ನು ಪ್ರಸಾದವಾಗಿ ನೀಡಲಾಗುವುದು. ಸರ್ಪದೋಷಕ್ಕೊಳಗಾದವರು, ಕಂಕಣ ಭಾಗ್ಯಕ್ಕಾಗಿ ಕಾಯುತ್ತಿರುವವರು ಈ ದೇವಾಲಯಕ್ಕೆ ಬಂದು ಪ್ರಾರ್ಥಿಸಿ ಹೋಗುತ್ತಾರೆ.

ಚಂಪ ಷಷ್ಠಿಯ ಪೂಜೆಯ ಮಹತ್ವ

ಚಂಪ ಷಷ್ಠಿಯ ಪೂಜೆಯ ಮಹತ್ವ

ಸುಂದರ ವಿವಾಹ ಜೀವನಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಆಶೀರ್ವಾದ

ಎಷ್ಟೋ ಜನರಿಗೆ ವಯಸ್ಸು ಮೀರಿದರೂ ಕಂಕಣ ಭಾಗ್ಯ ಕೂಡಿ ಬಂದಿರುವುದಿಲ್ಲ. ಸುಬ್ರಹ್ಮಣ್ಯನ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿ ಹೋದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ, ಅಲ್ಲದೆ ವೈವಾಹಿಕ ಜೀವನದಲ್ಲಿರುವ ಸಮಸ್ಯೆಗಳ ನಿವಾರಣೆಗೆ ಸುಬ್ರಹ್ಮಣ್ಯ ಆರಾಧಿಸಿದರೆ ಒಳ್ಳೆಯದು ಎಂಬುವುದು ಅನುಭವಸ್ಥರ ನಂಬಿಕೆಯಾಗಿದೆ.

ಯಾವುದೇ ಜಾತಕ ನೋಡಿದಾಗ ಪರಿಶೀಲಿಸಿದಾಗ ಮೊದಲು ನೋಡುವುದೇ ಕುಜದೋಷ. ಜ್ಯೋತಿಷಶಾಸ್ತ್ರದ ಪ್ರಕಾರ ಸುಬ್ರಮಣ್ಯನು ಕುಜನಿಗೆ ಅಧಿದೇವತೆ. ಆದ್ದರಿಂದ ಸುಬ್ರಹ್ಮಣ್ಯ ಕೃಪೆಯಿಂದ ಕುಜದೋಷ ದೂರವಾಗುವುದು.

ಸರ್ಪ ದೋಷ ನಿವಾರಣೆ

ಸರ್ಪ ದೋಷ ನಿವಾರಣೆ

ಕಾರಣವಿಲ್ಲದೆ ಮದುವೆ ವಿಳಂಬವಾಗುತ್ತಿದೆ, ಉದ್ಯೋಗದಲ್ಲಿ ಪ್ರಗತಿಯಿಲ್ಲ, ಮಕ್ಕಳಾಗಿಲ್ಲ, ವ್ಯಾಪಾರ ಸರಿಹೋಗುತ್ತಿಲ್ಲ ಹೀಗೆ ಒಟ್ಟಿನಲ್ಲಿ ಬದುಕಿನಲ್ಲಿ ಪ್ರತಿಯೊಂದು ಹೆಜ್ಜೆಗೂ ಕಷ್ಟಗಳು ಎದುರಾಗುತ್ತಿದ್ದರೆ ಜ್ಯೋತಿಷ್ಯದಲ್ಲಿ ಸರ್ಪದೋಷವಿದೆ ಎನ್ನಲಾಗುವುದು. ಸುಬ್ರಹ್ಮಣ್ಯ ಸ್ವಾಮಿ ಈ ಸರ್ಪ ದೋಷ ನಿವಾರಿಸುತ್ತೇನೆ. ಸುಬ್ರಹ್ಮಣ್ಯಕ್ಕೆ ಕ್ಷೇತ್ರಕ್ಕೆ ಹೋಗಿ ಆಶ್ಲೇಷ ಬಲಿ ಪೂಜೆ ಮಾಡಿದರೆ ಸರ್ಪದೋಷ ನಿವಾರಣೆಯಾಗುವುದು. ಚಂಪಾಷಷ್ಠಿಯಂದು ಭಕ್ತರು ಬಂದು ತಮ್ಮ ಹರಿಕೆಗಳನ್ನು ಅರ್ಪಿಸುತ್ತಾರೆ.

ಚಂಪಾ ಷಷ್ಠಿ ಆಚರಣೆಯಿಂದ ಮಕ್ಕಳ ಭಾಗ್ಯ

ಚಂಪಾ ಷಷ್ಠಿ ಆಚರಣೆಯಿಂದ ಮಕ್ಕಳ ಭಾಗ್ಯ

ಮಕ್ಕಳಿಲ್ಲದ ದಂಪತಿ ಚಂಪಾ ಷಷ್ಠಿಯ ದಿನದಂದು ಉಪವಾಸ ವ್ರತ ಮಾಡಿ ಪೂಜೆಯನ್ನು ಸಲ್ಲಿಸುವುದರಿಂದ ಸಂತಾನ ಭಾಗ್ಯ ಲಭಿಸುವುದು. ಅಲ್ಲದೆ ಜಾತಕ ದೋಷ, ಶತ್ರು ಸಂಬಂಧಿತ ಸಮಸ್ಯೆಗಳಿಂದ ಮುಕ್ತರಾಗಲು ಚಂಪಾ ಷಷ್ಠಿಯ ಆಚರಣೆ ಮಹತ್ವವಾಗಿದೆ,

English summary

Champa Shashthi 2020 Date, Time, Importance And Significance

Here is Champa Shashthi 2020 date and time, importance and significance, Read on.
X
Desktop Bottom Promotion