For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ಐತಿಹಾಸಿಕ ಪ್ರಸಿದ್ಧ ಕರಗ: ಮುಸ್ಲಿಂ ದರ್ಗಾಕ್ಕೆ ಭೇಟಿ, ಕರಗ ಬಳಿಕ ಪತ್ನಿಗೆ ಮತ್ತೆ ತಾಳಿಕಟ್ಟುವ ಪೂಜಾರಿ ಹೀಗೆ ಹಲವ

|

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವ ಪ್ರಾರಂಭವಾಗಿದೆ. ಏಪ್ರಿಲ್‌ 9ರಂದು ಶ್ರೀ ಧರ್ಮರಾಯ ಸ್ವಾಮಿಗೆ ಪೂಜೆ ಸಲ್ಲಿಸಿ ಬೆಳಗ್ಗೆ 5 ಗಂಟೆಗೆ ದೇವಸ್ಥಾನದ ಮುಂದೆ ಧ್ವಜಾರೋಹಣ ಮಾಡುವ ಮೂಲಕ ಕರಗ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಇಂದು ಪ್ರಾರಂಭವಾದ ಕರಗ ಉತ್ಸವ ಏಪ್ರಿಲ್‌ 16ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುವುದು.

ಬೆಂಗಳೂರು ಕರಗ ಇತಿಹಾಸ

ಬೆಂಗಳೂರು ಕರಗ ಇತಿಹಾಸ

9 ದಿನಗಳ ಕರಗ ಉತ್ಸವದಲ್ಲಿ ತಮಿಳು ಮಾತನಾಡುವ ತಿಗಳರು ಸಮುದಾಯದ ಪಾತ್ರ ತುಂಬಾನೇ ಮುಖ್ಯವಾದದ್ದು. ಇವರು ಪ್ರಾರಂಭಿಸಿ-ಉಳಿಸಿಕೊಂಡು ಬಂದಿರುವ ಸಂಪ್ರದಾಯವಿದು. ಇದಕ್ಕೂ 300ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ಈ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಈ ಕರಗ ಉತ್ಸವ ಹಿಂದೂ-ಮುಸ್ಲಿಂರ ಐಕ್ಯತೆಯ ಸಂಕೇತವಾಗಿದೆ.

ಕರಗದ ದಿನದಂದು ಮುಸ್ಸಂಜೆಯ ನಂತರ ಸ್ತ್ರೀ ಉಡುಪನ್ನು ಧರಿಸಿದ ಪೂಜಾರಿಯೊಬ್ಬರು ಹಲವಾರು ಧೋತಿಯುಟ್ಟು, ಮಾಂಗಲ್ಯ ತೊಟ್ಟು, ಹಣೆಗೆ ಅರಿಶಿಣ ಹಚ್ಚಿ. ಬರಿಯ ಎದೆ, ತಿಗರುಗಳಿಂದ ಬೆರಗುಗೊಳಿಸುವ ಕತ್ತಿ ಆಟ, ಪಕ್ಕ ವಾದ್ಯದಲ್ಲಿ ಅದ್ಭುತವಾದ ಮೆರವಣಿಗೆಯನ್ನು ಮಾಡುತ್ತಾರೆ. ತಲೆಯ ಮೇಲೆ ಇಟ್ಟಿರುವ ಮೂರ್ತಿಗೆ ಸಂಪೂರ್ಣ ಹೂವಿನ ಅಲಂಕಾರ ಮಾಡಿರುವುದನ್ನು ಹೊತ್ತುಕೊಂಡು ಸಾಗಲಾಗುವುದು.

ಈ ಆಚರಣೆಯಲ್ಲಿ ಭಕ್ತರು ತಲೆಯ ಮೇಲೆ ಮಡಕೆಗಳನ್ನು ಹೊತ್ತುಕೊಂಡು ಮೆರವಣಿಗೆ ಮಾಡುತ್ತಾರೆ. ಕರಗ ಉತ್ಸವ ಚೈತ್ರ ಮಾಸದ ಹುಣ್ಣಿಮೆಯಂದು ಪ್ರಾರಂಭವಾಗುವುದು.

ಮುಸ್ಲಿಂ ದರ್ಗಾಕ್ಕೆ ಭೇಟಿ ನೀಡುವುದು ಕರಗದ ಪ್ರಮುಖ ಆಚರಣೆಯಾಗಿದೆ

ಮುಸ್ಲಿಂ ದರ್ಗಾಕ್ಕೆ ಭೇಟಿ ನೀಡುವುದು ಕರಗದ ಪ್ರಮುಖ ಆಚರಣೆಯಾಗಿದೆ

ಕರಗವು ಪ್ರತೀಬಾರಿ ಮಸ್ತಾನ್‌ ಸಾಬ್‌ ದರ್ಗಾಕ್ಕೆ ಭೇಟಿ ನೀಡಿ ಆಶೀರ್ವದಿಸಿ ಬರುತ್ತದೆ. ಈ ಸಂಪ್ರದಾಯ ಹಲವು ವರ್ಷಗಳಿಂದ ಪಾಲಿಸುತ್ತಾ ಬರುತ್ತಿದ್ದ ಈ ವರ್ಷವು ದರ್ಗಾಗೆ ಕರಗ ಬರಲಿದೆ.

ಕರಗುವ ಸಾಗುವ ಹಾದಿ

ಕರಗುವ ಸಾಗುವ ಹಾದಿ

ನಟ್ಟ ನಡುರಾತ್ರಿಯಲ್ಲಿ ಹೊರಡುವ ರಥದಲ್ಲಿ ಹೂವಿನ ಅಲಂಕಾರ ಮಾಡಲಾದ ಅರ್ಜುನ ಹಾಗೂ ದ್ರೌಪದಿ ಮೂರ್ತಿಗಳಿರುತ್ತದೆ. ಮೊದಲು ಈ ದೇವಾಲಯದ ಆವರಣದಲ್ಲೇ ಇರುವ ಮುತ್ಯಾಲಮ್ಮನ ರಥ ಸಾಗುತ್ತದೆ. ಬಳಿಕ ಕಂಚಿನ ಉತ್ಸವ ಮೂರ್ತಿಗಳನ್ನು ನೀಲಸಂದ್ರ ಗ್ರಾಮಸ್ಥರು ತಲೆಯ ಮೇಲೆ ಹೊತ್ತು ಬರುತ್ತಾರೆ. ಅದಾದ ಬಳಿಕ ಕರಗವನ್ನು ಹೊತ್ತ ಪೂಜಾರಿ ಗರ್ಭಗುಡಿಯಿಂದ ಹೊರಬಂದು ಹಲಸೂರು ಗೇಟ್‌ನಲ್ಲಿರುವ ಆಂಜನೇಯಸ್ವಾಮಿ ಮತ್ತು ಜಲಕಂಠೇಶ್ವರ ದೇವಾಲಯದಲ್ಲಿ ಪೂಜೆಯನ್ನು ಸ್ವೀಕರಿಸುತ್ತಾರೆ.

ಅದಾದ ಬಳಿಕ ಧರ್ಮರಾಯಸ್ವಾಮಿ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀಕೃಷ್ಣನ ದೇವಾಲಯದಲ್ಲೂ ಪೂಜೆಯನ್ನು ಸ್ವೀಕರಿಸಲಾಗುವುದು. ಅದಾದ ಬಳಿಕ ಗಾಣಿಗರ ಪೇಟೆ, ನಗರ್ತಕೆ ಪೇಟೆ, ನಾರಾಯಣಶೆಟ್ಟಿ ಪೇಟೆ, ಮಕ್ಕಳ ಬಸವಣ್ಣನ ಗುಡಿ ಬೀದಿ, ಕಾಳಕಾಂಬ ದೇವಾಲಯ, ಅವೆನ್ಯೂ ರಸ್ತೆ, ಕೆಆರ್ ಮಾರುಕಟ್ಟೆ, ಉಪ್ಪಾರಪೇಟೆ, ಅಕ್ಕಿಪೇಟೆ, ಮನೆವಾರ್ತೆ ಪೇಟೆ, ಮಾಮೂಲ್‌ ಪೇಟೆಯ ಮೂಲ ಹಾದು ನಂತರ ದರ್ಗಾಕ್ಕೆ ಬರುವುದು. ಅಲ್ಲಿಂದ ನಿಮಿಷಾಂಬ ದೇವಾಲಯ, ಬಳೆ ಪೇಟೆ, ಕಿಲಾರಿ ರಸ್ತೆ, ಯಲಹಂಕ ಗೇಟ್‌,ಕುಂಬಾರ ಪೇಟೆ, ಗೊಲ್ಲರ ಪೇಟೆ, ತಿಗಳರ ಪೇಟೆ, ಸುಣ್ಣಕಲ್‌ ಪೇಟೆ, ಕಬ್ಬನ್‌ ಪೇಟೆಗಳ ಮೂಲಕ ಸಾಗಿ ಸೂರ್ಯೋದಯದ ಹೊತ್ತಿಗೆ ಮರಳಿ ಧರ್ಮರಾಯನ ದೇಗುಲವನ್ನು ಸೇರುತ್ತದೆ.

ಪೌರಾಣಿಕ ಕತೆ

ಪೌರಾಣಿಕ ಕತೆ

ಪೌರಾಣಿಕ ಕತೆಯ ಪ್ರಕಾರ ಇಲೈಪುರ್ ಅಂದರೆ ಇಂದಿನ ಬೆಂಗಳೂರನ್ನು ಪೋತಾರಾಜ ಎಂಬ ಅರಸನು ಆಳುತ್ತಿದ್ದನು. ಆಗ ಪಾಂಡವರು ಅಜ್ಞಾತವಾಸದಲ್ಲಿದ್ದರು. ನಗರದ ನಾಲ್ಕನೇ ಕಂಬ ಬೀಳಿಸಿದ ಕಾರಣಕ್ಕೆ ಭೀಮನನ್ನು ಬಂಧಿಸಿ ಜೈಲಿನಲ್ಲಿ ಇಡುತ್ತಾನೆ. ಪೋತಾರಾಜ ಶಿವನ ಭಕ್ತನಾಗಿದ್ದು ದೇವರ ಮತ್ತಷ್ಟು ಶಕ್ತಿ ಸಿಗಲು ಭೀಮನನ್ನು ಬಲಿ ನೀಡಲು ಯೋಜನೆ ರೂಪಿಸುತ್ತಾನೆ. ಇದನ್ನರಿತ ಶ್ರೀಕೃಷ್ಣ ಭೀಮನನ್ನು ರಕ್ಷಿಸಲು ಅರ್ಜುನನ ಜೊತೆಗೆ ಮಾರುವೇಷದಲ್ಲಿ ಬರುತ್ತಾನೆ. ಅರ್ಜುನ ಸ್ತ್ರೀ ವೇಷದಲ್ಲಿರುತ್ತಾನೆ. ಅರ್ಜುನನ ರೂಪ ನೋಡಿ ಮೋಹಿತನಾದ ಪೋತರಾಜ ಸ್ತ್ರೀ ವೇಷದಲ್ಲಿದ್ದ ಅರ್ಜುನನ ಮದುವೆಯಾಗ ಬಯಸುತ್ತಾನೆ.ಆಗ ಶ್ರೀಕೃಷ್ಣ ಎರಡು ಷರತ್ತು ವಿಧಿಸಿ, ಭೀಮನ ಸಹೋದರಿಯನ್ನ ಮದುವೆಯಾಗಲು ಅನ್ನು ಪಾಲಿಸಿದರೆ ಮಾತ್ರ ಮದುವೆಗೆ ಒಪ್ಪುದಾಗಿ ಹೇಳುತ್ತಾನೆ. ಅದರಲ್ಲೊಂದು ಹಸಿ ಮಾಂಸ ತಿನ್ನಬೇಕು ಎಂದು ಹೇಳುತ್ತಾನೆ ಅಲ್ಲದೆ ಎಲ್ಲಾ ಖೈದಿಗಳನ್ನು ಬಿಡುಗಡೆ ಮಾಡುವಂತೆ ಹೇಳುತ್ತಾನೆ. ಅದಕ್ಕೊಪ್ಪುವ ಪೋತರಾಜ ಹಸಿ ಮಾಂಸ ತಿನ್ನುತ್ತಾನೆ. ಅವನು ಹಸಿ ಮಾಂಸ ತಿಂದ ಕಾರಣಕ್ಕೆ ಶಿವ ಕೃಪೆಗೆ ಅರ್ಹನಾಗುವುದಿಲ್ಲ. ಶ್ರೀಕೃಷ್ಣ ಕೊಟ್ಟ ಮಾತಿನಂತೆ ಪಾಂಡು ಹಾಗೂ ಮದ್ರಿಯ ಮಗಳಾದ ಶಂಕವಲ್ಲಿಯನ್ನು ಕೊಟ್ಟು ಮದುವೆ ಮಾಡಿಸುತ್ತಾನೆ. ಯುಧಿಷ್ಠಿರ ಪೋತರಾಜನ ಸಹೋರಿಯನ್ನು ಮದುವೆಯಾಗುತ್ತಾನೆ.

ಮತ್ತೊಂದು ಕತೆಯ ಪ್ರಕಾರ

ಮಹಾಭಾರತದ ಸಮಯದಲ್ಲಿ, ಪಂಚ ಪಾಂಡವರ ಪತ್ನಿ ದ್ರೌಪದಿ ಕಿರು ಸೈನ್ಯವನ್ನು ರಚಿಸಲು ಮತ್ತು ರಾಕ್ಷಸ ತಿಮಿರಾಸುರನನ್ನು ಸೋಲಿಸಲು ಹಲವಾರು ವೀರ ಕುಮಾರರನ್ನು ಸೃಷ್ಟಿಸಿದಳು. ಹೋರಾಟದ ಸಮಯದಲ್ಲಿ ಈ ವೀರ ಕುಮಾರರು ದ್ರೌಪದಿಗೆ ಅವರನ್ನು ಬಿಟ್ಟು ಹೋಗದಂತೆ ಬೇಡಿಕೊಂಡರು. ದ್ರೌಪದಿ ಬದಲಿಗೆ ಪ್ರತಿ ವರ್ಷ ಚೈತ್ರ ಮಾಸ (ತಿಂಗಳು) ಹುಣ್ಣಿಮೆಯ ದಿನದಂದು ಹಿಂದಿರುಗುವ ಭರವಸೆ ನೀಡಿದಳು. ಆದಿಶಕ್ತಿ ರೂಪದಲ್ಲಿ ದ್ರೌಪದಿ ಮರಳಿದ್ದನ್ನು ಗುರುತಿಸಲು ಪ್ರತಿ ವರ್ಷ ಕರಗ ಹಬ್ಬವನ್ನು ಆಚರಿಸಲಾಗುತ್ತದೆ.

ಕರಗ ಉತ್ಸವದ ಕೊನೆಯ ದಿನ ತಿಳಗ ಸಮುದಾಯವರು ವಸಂತೋತ್ಸವದಲ್ಲಿ ಭಾಗಿಯಾಗುತ್ತಾರೆ. ಈ ದಿನ ಪುರುಷರಿಗೆ ಮರದ ಫ್ರೇಮ್‌ನಲ್ಲಿ ಕಟ್ಟಿದ ತೆಂಗಿನಕಾಯಿಯನ್ನು ಒಡೆಯುವ ಸವಾಲು ಇರುತ್ತದೆ, ತೆಂಗಿನಕಾಯಿಯನ್ನು ಒಡೆಯುವಾಗ ಅವರ ಮೇಲೆ ಅರಿಶಿನ ನೀರನ್ನು ಚೆಲ್ಲಲಾಗುವುದು. ಹಾರಿಸಿದ ಭಾವುಟವನ್ನು ಇಳಿಸದಾಗ ಕರಗ ಉತ್ಸವ ಮುಕ್ತಾಯವಾಗುವುದು. ನಂತರ ಕರಗದ ಪೂಜಾರಿ ತನ್ನ ಮನೆಗೆ ಹಿಂತಿರುಗಿ ಮತ್ತೆ ಪತ್ನಿಗೆ ಮತ್ತೆ ತಾಳಿ ಕಟ್ಟುತ್ತಾರೆ.

English summary

Bengaluru Karaga Festival 2022 dates, history, origin, tradition, rituals and significance

Bengaluru Karaga 2022: Read on to know Bengaluru Karaga Festival dates, history, origin, tradition, rituals and significance in kannada.
X
Desktop Bottom Promotion