For Quick Alerts
ALLOW NOTIFICATIONS  
For Daily Alerts

ಅಮವಾಸ್ಯೆ-ಸೂರ್ಯ ಗ್ರಹಣದಿಂದ ಉಂಟಾಗುವ ಕೆಟ್ಟ ಪರಿಣಾಮವನ್ನು ತಡೆಯಲು ಬಿಲ್ವಪತ್ರೆಯ ಗಿಡ ನೆಡಿ...

|

ಸೂರ್ಯ ಗ್ರಹಣ ಮತ್ತು ಅಮಾವಾಸ್ಯೆ ಎರಡು ಆಗಸ್ಟ್ 11 ಶನಿವಾರದಂದೇ ಬಂದಿದೆ. ಈ ಎರಡು ನಕಾರಾತ್ಮಕ ಶಕ್ತಿಯ ಸಂಯೋಗವು ತುಲನಾತ್ಮಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಂತಹ ಎರಡು ಮಹಾ ನಕಾರಾತ್ಮಕ ಶಕ್ತಿಯ ಸಂಯೋಗಕ್ಕೆ ಸನ್ಯಾಗ ಎಂದು ಕರೆಯಲಾಗುತ್ತದೆ. ಸನ್ಯಾಗ ಎನ್ನುವುದು ಸಂಸ್ಕೃತದ ಪದ. ಈ ಪದವು ಎರಡು ಅಥವಾ ಅದಕ್ಕಿಂತ ಹೆಚ್ಚು ದೊಡ್ಡ ಘಟನೆಗಳ ಸಂಯೋಗ ಎನ್ನುವ ಅರ್ಥವನ್ನು ನೀಡುತ್ತದೆ.

ಅಮಾವಾಸ್ಯೆ ಮತ್ತು ಸೂರ್ಯಗ್ರಹಣ ಎರಡು ಶನಿವಾರ ಬಂದಿರುವುದು ಕೆಟ್ಟ ಪರಿಣಾಮವನ್ನು ಬೀರುತ್ತದೆ ಎನ್ನುವ ಅರ್ಥವನ್ನು ನೀಡುತ್ತದೆ. ಇಂತಹ ಒಂದು ಕೆಟ್ಟ ಶಕ್ತಿಗಳಿಂದ ಉಂಟಾಗುವ ಪರಿಣಾಮದಿಂದ ದೂರ ಇರಬೇಕು ಎಂದು ನೀವು ಬಯಸುತ್ತೀರಾ ಎಂದಾದರೆ ಕೆಲವು ಮುನ್ನೆಚ್ಚರಿಕೆ ಕ್ರಮ ಅಥವಾ ವಿಧಿ-ವಿಧಾನಗಳನ್ನು ಅನುಸರಿಸಬೇಕು. ಅಂತಹ ವಿಚಾರದ ಬಗ್ಗೆ ನೀವು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಹೊಂದಿದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ.

ಋಣಾತ್ಮಕ ಶಕ್ತಿಯ ಪ್ರಭಾವ

ಗ್ರಹಣವು ಕೆಲವು ಋಣಾತ್ಮಕ ಶಕ್ತಿಯನ್ನು ಒಳಗೊಂಡಿರುತ್ತದೆ. ಅಮಾವಾಸ್ಯೆಯ ದಿನ ಪೂರ್ವಜರ ಕಾಲದಿಂದಲೂ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ ಎನ್ನುವುದಾದರೂ ಅಂದು ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ ಎಂದು ಹೇಳಲಾಗುವುದು. ಮಾಂತ್ರಿಕ ಪೂಜೆ ಮಾಡಲು ಸತ್ತ ವ್ಯಕ್ತಿಯ ಆತ್ಮವನ್ನು ಆಕರ್ಷಿಸಲು ಅಥವಾ ನಿಯಂತ್ರಿಸಲು ಕಪ್ಪು ಜಾದುಗಾರರು ಶನಿವಾರದ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ. ಹಾಗಾಗಿಯೇ ದುಷ್ಟಶಕ್ತಿಗಳು ಶನಿವಾರ ಹೆಚ್ಚು ಪ್ರಭಾವಿತವಾಗಿರುತ್ತವೆ ಎಂದು ಹೇಳಲಾಗುತ್ತದೆ.

ಮರವನ್ನು ನೆಡಬೇಕು

ಅಮವಾಸ್ಯೆ, ಶನಿವಾರ ಹಾಗೂ ಗ್ರಹಣ ಮೂರು ಸಂಗತಿಯು ಒಂದೇ ದಿನ ಬಂದಿರುವುದರಿಂದ ಋಣಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಿಸುತ್ತಾರೆ. ಈ ನಕಾರಾತ್ಮಕ ಶಕ್ತಿ ಅಥವಾ ದುಷ್ಟ ಶಕ್ತಿಯ ಪ್ರಭಾವ ನಮ್ಮ ಮೇಲೆ ಬಿದ್ದಾಗ ಅಧಿಕ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ಇಂತಹ ತೊಂದರೆಗಳಿಂದ ಪಾರಾಗ ಬೇಕು ಎಂದಾದರೆ ಅಮವಾಸ್ಯೆಯ ದಿನ ಅಥವಾ ಅದರ ಹಿಂದಿನ ದಿನ ಮನೆಯಲ್ಲಿ ಒಂದು ಬಿಲ್ವಪತ್ರೆಯ ಗಿಡವನ್ನು ನೆಡಬೇಕು. ಆಗ ಎಲ್ಲಾ ನಕಾರಾತ್ಮಕ ಶಕ್ತಿಯು ನಮ್ಮಿಂದ ದೂರವಾಗುವುದು ಎಂದು ಹೇಳಲಾಗುತ್ತದೆ.

ಬಿಲ್ವಪತ್ರೆಯ ಮರ ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ

ಶ್ರಾವಣ ಮಾಸವು ಶಿವನಿಗೆ ಅರ್ಪಿತವಾದ ಮಾಸ. ಈ ತಿಂಗಳಲ್ಲಿ ಬಿಲ್ವ ಪತ್ರೆಯ ಗಿಡ ನೆಡುವುದರಿಂದ ಶಿವನ ಆಶೀರ್ವಾದ ಲಭಿಸುವುದು. ಜೊತೆಗೆ ನಕಾರಾತ್ಮಕ ಶಕ್ತಿಯನ್ನು ಈ ಪವಿತ್ರ ಮರವು ದೂರ ತಳ್ಳುವುದು ಎಂದು ಹೇಳಲಾಗುತ್ತದೆ. ಗ್ರಹಣದ ಕೆಟ್ಟ ಪರಿಣಾಮವು ನಿಮ್ಮ ಮೇಲೆ ಉಂಟಾಗದು ಎಂದು ಹೇಳಲಾಗುವುದು.

solar-eclipse

ಶಿವ ಪುರಾಣದಲ್ಲಿ ಬಿಲ್ವ ಗಿಡ

ಶಿವ ಪುರಾಣದ ಪ್ರಕಾರ ಶಿವನಿಗೆ ಬಿಲ್ವ ಪತ್ರೆಯು ಬಹಳ ಶ್ರೇಷ್ಠವಾದದ್ದು. ಈ ಪವಿತ್ರವಾದ ಮರವು ನಕಾರಾತ್ಮಕ ಶಕ್ತಿಗಳನ್ನು ತಡೆಯುತ್ತದೆ. ಅಲ್ಲದೆ ಸುತ್ತಲಿನ ಪರಿಸರವನ್ನು ಧನಾತ್ಮಕ ಶಕ್ತಿಯಿಂದ ಕೂಡಿರುವಂತೆ ಮಾಡುವುದು. ಬಿಲ್ವ ಪತ್ರೆಯನೆಡುವುದು ಹಾಗೂ ಅದರ ಕೆಳಗೆ ಸಮಯ ಕಳೆಯುವುದರಿಂದ ಮೂರು ಜನ್ಮದಲ್ಲಿ ಮಾಡಿದ ಪಾಪಗಳು ತೊಳೆದುಹೋಗುತ್ತವೆ ಎಂದು ಹೇಳಲಾಗುವುದು. ಇನ್ನು ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾದ ಎಲೆಯೆಂದು ಪರಿಗಣಿಸಲ್ಪಟ್ಟಿದೆ. ಶಿವನಿಗೆ ಒಂದು ಬಿಲ್ವಪತ್ರೆಯನ್ನು ಅರ್ಪಿಸಿ ನಾವು ಏನು ಕೇಳುತ್ತೇವೆಯೋ, ಅದನ್ನು ನೆರವೇರಿಸುತ್ತಾನೆ ಎಂಬ ಮಾತಿದೆ. ಬಿಲ್ವ ಪತ್ರೆಯು ಮೂರು ಎಲೆಗಳನ್ನು ಹೊಂದಿರುವ ಒಂದು ಗೊಂಚಲಿನಂತೆ ಕಾಣಿಸುತ್ತದೆ. ಇದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತದೆ ಎಂಬ ಮಾತಿದೆ. ಜೊತೆಗೆ ಇದು ಶಿವನಿಗೆ ಇರುವ ಮೂರು ಕಣ್ಣುಗಳನ್ನು ಸಹ ತೋರಿಸುತ್ತದೆ.

ಈ ಗಿಡವನ್ನು ಮನೆಯ ಮಧ್ಯ ಭಾಗದಲ್ಲಿ ನೆಟ್ಟು, ನಿತ್ಯವೂ ನೀರನ್ನು ಎರೆಯುತ್ತಿದ್ದರೆ ಸದ್ಗುಣಗಳು ಪ್ರಾಪ್ತಿಯಾಗುವುದು. ಜೊತೆಗೆ ಕುಟುಂಬದ ಯೋಗಕ್ಷೇಮವು ಹೆಚ್ಚುವುದು ಎಂದು ಹೇಳಲಾಗುವುದು. ಜಾತಕದಲ್ಲಿ ಚಂದ್ರನ ಪ್ರತಿಕೂಲವಿದ್ದಾಗ ಮನೆಯ ಮೇಲೆ ಹಾನಿಯನ್ನುಂಟುಮಾಡುವುದು. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಒಂದು ಬಿಲ್ವ ಪತ್ರೆಯ ಮರವಿದ್ದರೆ ಯಾವುದೇ ಹಾನಿ ಉಂಟಾಗದು ಎಂದು ಹೇಳಲಾಗುವುದು. ಚಂದ್ರ ಮತ್ತು ಬಿಲ್ವ ಪತ್ರೆಯು ಶಿವನೊಂದಿಗೆ ಸಂಬಂಧವನ್ನು ಪಡೆದುಕೊಂಡಿವೆ.

ಜಾತಕದಲ್ಲಿ ಚಂದ್ರನ ಪ್ರಭಾವ ಉತ್ತಮ ರೀತಿಯಲ್ಲಿ ಇರದೆ ಇದ್ದಾಗ ವ್ಯಕ್ತಿಯ ಮಾನಸಿಕ ಆರೋಗ್ಯವು ಕುಂದುವುದು. ಕೆಲಸದಲ್ಲಿ ಹಿನ್ನೆಡೆ ಉಂಟಾಗುವುದು. ಬಿಲ್ವ ಪತ್ರೆಯ ಗಿಡವನ್ನು ನೆಟ್ಟರೆ ಕುಟುಂಬದ ಸದಸ್ಯರಿಗೆ ಗೌರವ ಹಾಗೂ ಖ್ಯಾತಿಯು ದೊರೆಯುವುದು. ಕುಟುಂಬದಲ್ಲಿ ವಿವಾದ ಉಂಟಾದರೆ ತಡೆಯುವುದು. ಜೊತೆಗೆ ಸದಸ್ಯರ ನಡುವೆ ಸಾಮರಸ್ಯ ಉಂಟಾಗುವುದು.

ಬಿಲ್ವ ಪತ್ರೆಯ ವಿಚಾರ

ಸೋಮವಾರ, ಅಮವಾಸ್ಯೆಯ ದಿನ ಮತ್ತು ಪೂರ್ಣಿಮೆಯ ದಿನ ಬಿಲ್ವ ಪತ್ರೆಯನ್ನು ಗಿಡ/ಮರದಿಂದ ಕೀಳಬಾರದು. ಒಮ್ಮೆ ಬಳಕೆ ಮಾಡಿದ ಎಲೆಯನ್ನು ಮರು ಬಳಕೆ ಮಾಡಬಾರದು. ಬಳಕೆ ಮಾಡುವ ಬಿಲ್ವ ಪತ್ರೆಯು ಒಣಗಿರ ಬಾರದು. ಪ್ರತಿ ದ್ವಾದಶಿಯ ಭಾನುವಾರ ಈ ಮರದ ಕೆಳಗೆ ದೀಪವನ್ನು ಬೆಳಗಿಸಬೇಕು. ಇದರಿಂದ ಮನೆಗೆ ಸಮೃದ್ಧಿ ಉಂಟಾಗುವುದು. ಶಿವನಿಗೆ ಅರ್ಪಿಸುವ ಬಿಲ್ವ ಪತ್ರೆಯ ಮೇಲೆ ಚಕ್ರ, ತ್ರಿಶೂಲದಂತಹ ಯಾವುದೇ ಚಿಹ್ನೆಗಳಿಲ್ಲವೆನ್ನುವುದನ್ನು ಖಚಿತಪಡಿಸಿಕೊಳ್ಳಿ. ಇನ್ನುಆಯುರ್ವೇದದ ಪ್ರಕಾರ ಬಿಲ್ವ ಪತ್ರೆಯಲ್ಲಿ ಹಲವಾರು ಔಷಧೀಯ ಗುಣಗಳು ಇವೆಯಂತೆ. ಆ ಮೂರು ಎಲೆಗಳ ಗುಚ್ಛವು ಸತ್ವ, ರಜಸ್ ಮತ್ತು ತಮಸ್ಸು ಎಂಬ ಗುಣಗಳನ್ನು ಸೂಚಿಸುತ್ತದೆಯಂತೆ. ಸತ್ವ ಗುಣವೆಂದರೆ ಧನಾತ್ಮಕ ಗುಣಗಳು ಮತ್ತು ತಮಸ್ಸು ಎಂದರೆ ನಕಾರಾತ್ಮಕ ಗುಣಗಳನ್ನು ಸೂಚಿಸುತ್ತದೆ. ಯಾರು ಈ ಎಲೆಗಳನ್ನು ಸ್ಪರ್ಶಿಸುತ್ತಾರೋ ಅವರಿಗೆ ಈ ಎಲೆಗಳಲ್ಲಿರುವ ಧನಾತ್ಮಕ ಶಕ್ತಿಯು ಸಂಚಯವಾಗುತ್ತದೆಯಂತೆ. ಆದ್ದರಿಂದಲೇ ಇದನ್ನು ಸ್ಪರ್ಶಿಸಿದರೆ ಪಾಪ ಕರ್ಮಗಳಿಂದ ಮುಕ್ತಿಯನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ಶ್ರಾವಣ ಅಮವಾಸ್ಯೆ/ಹರಿಯಾಲಿ ಅಮಾವಾಸ್ಯೆ

ಶ್ರಾವಣ ಮಾಸದ ಅಮವಾಸ್ಯೆಗೆ ಹರಿಯಾಲಿ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ಶ್ರಾವಣ ಅಮಾವಾಸ್ಯೆದಿನ ಅಶ್ವತ್ಥ ಮರದ ಕೆಳಗೆ ದೀಪವನ್ನು ಬೆಳಗಿಸಿ. ಅಂದು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಈ ಮರದ ಸುತ್ತ ಇರುತ್ತಾರೆ. ಅಂದು ದೀಪ ಹಚ್ಚುವುದು ಹಾಗೂ ಸಿಹಿ ನೈವೇದ್ಯವನ್ನು ಇಟ್ಟು ಪೂಜೆ ಮಾಡುವುದರಿಂದ ಹೊಸ ಜೀವನವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಅನೇಕರು ಉಪವಾಸವನ್ನು ಕೈಗೊಳ್ಳುವುದರ ಮೂಲಕ ದೇವರ ಕೃಪೆಗೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿಯೇ ಸಾಧ್ಯವಾದಷ್ಟು ಬಿಲ್ವಪತ್ರೆಯ ಗಿಡ ಹಾಗೂ ಅಶ್ವತ್ಥ ಗಿಡವನ್ನು ನೆಡಬೇಕು ಎಂದು ಹೇಳಲಾಗುತ್ತದೆ.

English summary

amavasya-on-solar-eclipse-saturday

Solar eclipse, Amavasya and a Saturday, all falling together on August 11, make it a highly important event this time because negative energies are believed to be comparatively more prominent on all these days. When a Muhurta (astrological time) occurs like that, it is called a Maha Sanyoga. Maha Sanyoga is a Sanskrit term which means - great occurrence of two or more events. While there are a number of precautions that you need to take in order to protect yourself from the ill effects that generally might be caused due to an eclipse, the occurrence of Amavasya and the Saturday are making it even more fearful.
X
Desktop Bottom Promotion