Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ನಿಮ್ಮ ಮುದ್ದಿನ ನಾಯಿ ಸರಿಯಾಗಿ ಆಹಾರ ತಿನ್ನುತ್ತಿಲ್ಲವೇ?
ಸಾಕು ಪ್ರಾಣಿಗಳನ್ನು ಸಾಕುವಾಗ ನಮಗೆ ಹೆಚ್ಚಿನ ಖುಷಿ ಸಿಗುತ್ತದೆ. ಅದೇ ಅವುಗಳನ್ನು ಸಾಕುವಾಗ ಹೆಚ್ಚಿನ ಕಾಳಜಿ ತುಂಬಾ ಮುಖ್ಯವಾಗುತ್ತದೆ. ಕೇವಲ ಅವುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಮಾತ್ರ ನಮ್ಮ ಕರ್ತವ್ಯ ಮುಗಿಯುತ್ತದೆ ಎಂದು ನಾವು ಅಂದುಕೊಳ್ಳಬಹುದು. ಆದರೆ ನಿಜವಾಗಿಯೂ ಸಾಕುಪ್ರಾಣಿಗಳನ್ನು ಸಾಕಲು ಸಮಯ ಕೂಡ ಬೇಕಾಗುತ್ತದೆ. ಅವುಗಳ ಲಾಲನೆಪಾಲನೆಯಲ್ಲಿ ಸಮಯ ಕಳೆಯಬೇಕಾಗುತ್ತದೆ.

ಇವುಗಳಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಆಗ ಅವುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಕೆಲವೊಂದು ಸಲ ಸಾಕುಪ್ರಾಣಿಗಳು ತಿನ್ನುವುದನ್ನೇ ಬಿಟ್ಟುಬಿಡುತ್ತದೆ. ಇದು 24 ಗಂಟೆಗಳಿಗಿಂತ ಹೆಚ್ಚು ಸಮಯ ಮುಂದುವರೆದರೆ ಆಗ ನೀವು ಖಂಡಿತವಾಗಿಯೂ ಅದರ ಬಗ್ಗೆ ಗಮನಹರಿಸಲೇಬೇಕು. ಅವುಗಳು ಹೇಗೆ ತಿನ್ನುತ್ತದೆ ಎನ್ನುವುದನ್ನು ಸರಿಯಾಗಿ ನೋಡಿ ಮತ್ತು ಇದಕ್ಕೆ ಕಾರಣಗಳು ಸಿಗುತ್ತದೆಯಾ ಎಂದು ನೋಡಿಕೊಳ್ಳಿ. ಸಾಕು ಪ್ರಾಣಿಗಳು ಆಹಾರ ತಿನ್ನದೆ ಇರಲು ಕಾರಣಗಳೇನು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳಿ.
ನಾಯಿಗಳಿಗೆ ಮನುಷ್ಯರ ಆಹಾರ ನೀಡುವಾಗ ಎಚ್ಚರಿಕೆ
ನಾಯಿಗಳಿಗೆ ಆಹಾರ ನೀಡುವಾಗ ತುಂಬಾ ಎಚ್ಚರಿಕೆ ವಹಿಸಿಕೊಳ್ಳಿ. ನಾಯಿಗಳ ಆಹಾರದಲ್ಲಿ ಶೇ.20ರಷ್ಟು ಮಾತ್ರ ಮಾನುಷ್ಯರು ತಿನ್ನುವ ಆಹಾರ ನೀಡಬೇಕು. ತಿಂದು ಉಳಿದ ಆಹಾರ ಮತ್ತು ಇತರ ಮನುಷ್ಯರ ಆಹಾರವನ್ನು ನಾಯಿಗಳಿಗೆ ನೀಡುವ ಮೊದಲು ಯೋಚಿಸಬೇಕಾಗಿದೆ. ಮುದ್ದಿನ ನಾಯಿಮರಿಗಳ ಆಹಾರ ಕ್ರಮ ಹೀಗಿರಲಿ
ದೈನಂದಿನ ಬದಲಾವಣೆ
ದೈನಂದಿನ ಬದಲಾವಣೆಯಿಂದ ಪ್ರಾಣಿಗಳಿಗೆ ಕಿರಿಕಿರಿ ಉಂಟಾಗಿ ಅವುಗಳ ಒತ್ತಡಕ್ಕೆ ಒಳಗಾಗಿ ಆಹಾರ ಬಿಡಬಹುದು. ಇದರಿಂದ ಯಾವುದೇ ಬದಲಾವಣೆ ಮಾಡಲಿಕ್ಕಿದರೂ ಅದನ್ನು ನಿಧಾನವಾಗಿ ಮಾಡಿ.
ವಯಸ್ಸಾಗಿರುವುದು
ವಯಸ್ಸಾದ ನಾಯಿಯಾಗಿದ್ದರೆ ಆಗ ಅದು ಆಹಾರ ತಿನ್ನಲು ನಿರಾಕರಿಸಿದರೆ ನೀವು ಅಚ್ಚರಿಪಡಬೇಕೆಂದಿಲ್ಲ. ವಯಸ್ಸಾದ ಕಾರಣದಿಂದ ಬರುವ ಕೆಲವೊಂದು ರೋಗಗಳಿಗೆ ಅವುಗಳಿಗೆ ಔಷಧಿ ಬೇಕಾಗುತ್ತದೆ. ಈ ಸಮಯದಲ್ಲಿ ನೀವು ಪ್ರಾಣಿಗಳ ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆದು ಅದರಂತೆ ಆಹಾರ ನೀಡಿ. ಸಾಕುಪ್ರಾಣಿಗಳ ಆಹಾರ-ಎಚ್ಚರ ತಪ್ಪಿದರೆ ಪ್ರಾಣಕ್ಕೆ ಕಂಟಕ..!
ಮಾನಸಿಕ ಬದಲಾವಣೆ
ಮನೆಯಲ್ಲಿ ಯಾವುದೇ ಇತರ ಸಾಕು ಪ್ರಾಣಿಯನ್ನು ತಂದರೆ ಆಗ ನಿಮ್ಮ ನಾಯಿ ತಿನ್ನದೆ ಇರಬಹುದು. ಇದು ಮನಸ್ಸಿನ ಸಮಸ್ಯೆಯಾಗಿರಬಹುದು. ಅದಕ್ಕೆ ಏಕಾಂತದಲ್ಲಿ ಆಹಾರವನ್ನು ನೀಡಿ. ನಿಮ್ಮ ಮುದ್ದಿನ ನಾಯಿಯ ಕಾಳಜಿಗಾಗಿ ಸರಳ ಸಲಹೆಗಳು



Click it and Unblock the Notifications


