Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ತಳ ಹಿಡಿದ ಪಾತ್ರೆಯನ್ನು ಸ್ವಚ್ಛಗೊಳಿಸಲು ಒಂದಿಷ್ಟು ಸರಳ ಟಿಪ್ಸ್
ನೀವು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಪಾತ್ರೆ ತಳ ಹತ್ತುವುದು ಮೊದಲಾದ ಅಂಶಗಳು ದಿನ ನಿತ್ಯ ನಿಮ್ಮ ಜೀವನದಲ್ಲಿ ನಡೆಯುತ್ತಲೇ ಇರುತ್ತದೆ. ಒಮ್ಮೆ ಪಾತ್ರೆ ತಳ ಹತ್ತಿದು ಅಂತಾದಲ್ಲಿ ಅದನ್ನು ಹೋಗಲಾಡಿಸಲು ಹರಸಾಹಸ ಪಡಬೇಕಾಗುತ್ತದೆ. ಅದು ಹಾಲು ಇಲ್ಲವೇ ಇತರ ತಿನಿಸಿನ ರೂಪದಲ್ಲಾದರೂ ಆಗಬಹುದು ಈ ಕಲೆಯನ್ನು ನಿವಾರಿಸಲು ನೀವು ಎಷ್ಟೇ ಡಿಟರ್ಜೆಂಟ್‌ಗಳ ಬಳಕೆ ಮಾಡಿದರೂ ಅದು ಸಂಪೂರ್ಣವಾಗಿ ಹೋಗಿರುವುದಿಲ್ಲ.
ಅದಕ್ಕೆಂದೇ ಇಂದಿನ ಲೇಖನದಲ್ಲಿ ಪಾತ್ರೆಗಳ ತಳ ಹತ್ತುವಿಕೆಯನ್ನು ನಿವಾರಿಸುವ ಕೆಲವೊಂದು ಸಾಮಾಗ್ರಿಗಳನ್ನು ಪಟ್ಟಿ ನೀಡುತ್ತಿದ್ದು ಇವುಗಳನ್ನು ಬಳಸಿ ನೀವು ಹೆಚ್ಚು ಕಷ್ಟಪಡದೆಯೇ ತಳ ಹತ್ತಿದ ಪಾತ್ರೆಗಳನ್ನು ತೊಳೆಯಬಹುದು. ಕೆಲವೊಂದು ಅಡುಗೆ ಮನೆಯ ಸಾಮಾಗ್ರಿಗಳಲ್ಲೇ ಆಸಿಡ್ ಅಂಶಗಳಿದ್ದು ಇದು ಸಕಾಲ ಸಮಯದಲ್ಲಿ ಪಾತ್ರೆಯ ಅಡಿಹೊತ್ತುವಿಕೆಯನ್ನು ನಿವಾರಿಸುತ್ತದೆ. ಇಂದಿನ ಲೇಖನದಲ್ಲಿ ಕೆಲವೊಂದು ಸಾಮಾಗ್ರಿಗಳ ವಿವರಗಳನ್ನು ನಾವು ನೀಡುತ್ತಿದ್ದು ಅದೇನು ಎಂಬುದನ್ನು ನೋಡೋಣ...
ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡ
ಸೋಡಾವನ್ನು 15 ನಿಮಿಷಗಳ ಕಾಲ ಪಾತ್ರೆಯಲ್ಲಿಡಿ. ಸಮಯದ ಬಳಿಕ ಸೋಡಾದಲ್ಲಿರುವ ಆಸಿಡ್ ಅಂಶವು ಪಾತ್ರೆಯ ಕಲೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಪಾತ್ರ ಫಳಫಳ ಹೊಳೆಯಬೇಕೆಂದಿದ್ದರೆ, ಬೇಕಿಂಗ್ ಸೋಡಾವನ್ನು ಹಾಕಿಟ್ಟ ನೀರಿನಲ್ಲಿ ಆ ಪಾತ್ರೆಯನ್ನು ಮುಳುಗಿಸಿ ಹಾಗೂ ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ. ಇದರ ನಂತರ ಸಾಮಾನ್ಯ ನೀರಿನಲ್ಲಿ ಈ ಪಾತ್ರೆಯನ್ನು ತೊಳೆಯಿರಿ. ಹೀಗೆ ಮಾಡಿದಾಗ ಪಾತ್ರೆಯ ಹೊಳಪು ಇನ್ನಷ್ಟು ಹೆಚ್ಚುತ್ತದೆ.
ಪಾನೀಯಗಳು
ಅಲ್ಯುಮಿನಿಯಂನ ತಳ ಹತ್ತಿದ ಅಂಶವನ್ನು ನಿವಾರಿಸಲು ಕೆಲವೊಂದು ಪಾನೀಯಗಳು ಸಹಾಯ ಮಾಡುತ್ತವೆ. ತಳ ಹಿಡಿದ ಪಾತ್ರೆಗೆ ಸ್ವಲ್ಪ ಪ್ರಮಾಣದಲ್ಲಿ ಕೋಲಾವನ್ನು ಹಾಕಿ ಮತ್ತು ಅದನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ತಳ ಹತ್ತಿದ ಅಂಶ ನಿವಾರಣೆಯಾಗುವುದನ್ನು ನೀವು ನೋಡಬಹುದು.
ಲಿಂಬೆ ರಸ
ತಳ ಹತ್ತಿದ ಪಾತ್ರೆಯಲ್ಲಿರುವ ಅಂಶವನ್ನು ನಿವಾರಿಸಲು ಲಿಂಬೆ ರಸವನ್ನು ಬಳಸಬಹುದಾಗಿದೆ. ಲಿಂಬೆಯಲ್ಲಿರುವ ಆಸಿಡ್ ಅಂಶವು ಕಲೆಯನ್ನು ಶೀಘ್ರದಲ್ಲೇ ನಿವಾರಿಸುತ್ತದೆ. ಅಷ್ಟೇ ಅಲ್ಲ ಒಂದು ವೇಳೆ ಮೊಟ್ಟೆ ಬೇಯಿಸಿ ನಂತರ ಪಾತ್ರೆ ವಾಸನೆ ಬರುತ್ತಿದ್ದರೆ, ನೀವು ಲಿಂಬೆ ಹಣ್ಣನ್ನು ಬಳಸಬಹುದು!, ಹೌದು ಲಿಂಬೆ ರಸವನ್ನು ನೇರವಾಗಿ ಹಾಕುವ ಬದಲು ಒಂದು ಬಟ್ಟೆಯ ಮೇಲೆ ಲಿಂಬೆ ರಸವನ್ನು ಹಾಕಿ ಅದನ್ನು ಪಾತ್ರೆಯ ಮೇಲೆ ತಿಕ್ಕಬಹುದು. ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ಪಾತ್ರೆಯನ್ನು ಸ್ವಚ್ಛಗೊಳಿಸಿ. ಲಿಂಬೆ ರಸವನ್ನು ಬಳಸುವ ಬದಲಿಗೆ ಲಿಂಬೆ ಸತ್ವ ಉಳ್ಳ ಸಾಬೂನು ಇದ್ದರೂ ಇದೇ ರೀತಿಯ ಕೆಲಸ ಮಾಡುತ್ತದೆ.
ಉಪ್ಪು
ಪಾತ್ರೆಯಲ್ಲಿರುವ ತಳ ಹತ್ತಿದ ಅಂಶವನ್ನು ನಿವಾರಿಸಲು ಉಪ್ಪು ಬಳಸಿಕೊಳ್ಳಬಹುದಾಗಿದೆ. ಉಪ್ಪು ಸವರಿಕೊಂಡು ಪಾತ್ರೆಗೆ ಹಚ್ಚಿ ನಂತರ ಪಾತ್ರೆ ತೊಳೆಯುವ ಸ್ಕ್ರಬ್ಬರ್‌ನಿಂದ ಪಾತ್ರೆಯ ತಳ ಅಂಶವನ್ನು ನಿವಾರಿಸಿಕೊಳ್ಳಿ.
ಟೊಮೇಟೊ ಸಾಸ್
ಟೊಮೇಟೊ ಸಾಸ್ ಬಳಸಿಕೊಂಡು ಪಾತ್ರೆಯ ತಳ ಊರಿದ ಅಂಶವನ್ನು ತೊಡೆದು ಹಾಕಬಹುದು. ಟೊಮೇಟೊ ಸಾಸ್ ಅನ್ನು ಪಾತ್ರೆಯಲ್ಲಿ ಹಾಗೆಯೇ ಬಿಟ್ಟು ಬಿಡಿ ನಂತರ ಪಾತ್ರೆ ತೊಳೆಯುವ ಬ್ರಶ್‌ನಿಂದ ಪಾತ್ರೆಯನ್ನು ಉಜ್ಜಿ. ಇದರ ಇನ್ನೊಂದು ಉಪಯೋಗ ಇಲ್ಲಿದೆ ನೋಡಿ.. ಹಾಲು ಇಲ್ಲವೇ ಇತರ ಪದಾರ್ಥಗಳನ್ನು ಒಮ್ಮೆಮ್ಮೊ ನಾವು ಪಾತ್ರೆಯಲ್ಲಿ ಹಾಗೆಯೇ ಬಿಟ್ಟು ಹೋಗುತ್ತೇವೆ. ಇವುಗಳು ತಳ ಹತ್ತಿದ ನಂತರ ಶುದ್ಧಮಾಡುವುದು ಪ್ರಯಾಸದ ಕೆಲಸವಾಗುತ್ತದೆ. ಕೆಚಪ್ ಬಳಸಿಕೊಂಡು ನೀವು ಈ ಕಲೆಯನ್ನು ಸುಲಭವಾಗಿ ತೊಡೆಯಬಹುದಾಗಿದೆ. ಪ್ಯಾನ್‌ನಲ್ಲಿ ಕೆಚಪ್ ಅನ್ನು ಹಾಕಿ ರಾತ್ರಿ ಪೂರ್ತಿ ಹಾಗೆಯೆ ಬಿಡಿ. ಮರುದಿನ ಸುಲಭವಾಗಿ ನಿಮಗೆ ತೊಳೆಯಬಹುದು.
ವಿನೇಗರ್
ವಿನೇಗರ್ ಆಕ್ಟಿಕ್ ಆಸಿಡ್ ಅನ್ನು ಒಳಗೊಂಡಿದ್ದು ಪಾತ್ರೆಯಲ್ಲಿ ಕಠಿಣವಾಗಿರುವ ಅಂಶವನ್ನು ನಿವಾರಿಸುತ್ತದೆ. ವಿನೇಗರ್ ಅನ್ನು ಪಾತ್ರೆಗೆ ಹಚ್ಚಿ ಹದಿನೈದು ನಿಮಿಷ ಹಾಗೆಯೇ ಬಿಡಿ ನಂತರ ಬ್ರಶ್ ಬಳಸಿ ಚೆನ್ನಾಗಿ ತಿಕ್ಕಿಕೊಳ್ಳಿ. ಇದರ ಇನ್ನೊಂದು ಉಪಯೋಗ ಇಲ್ಲಿದೆ ನೋಡಿ...
ಸಾಮಾನ್ಯವಾಗಿ ಮನೆಯಲ್ಲಿ ಮೀನು ಅಥವಾ ಮೊಟ್ಟೆಯ ಪದಾರ್ಥ ಮಾಡಿದಾಗ ಮರುದಿನ ಅದರ ವಾಸನೆ ಮನೆಯಲ್ಲೆಲ್ಲಾ ತುಂಬುವುದು. ಹೀಗಾಗಿ ಆ ಪಾತ್ರೆಗಳ ಮೇಲೆ ವಿನೆಗರ್ ಅನ್ನು ಸಿಂಪಡನೆ ಮಾಡಿ. ಸ್ವಲ್ಪ ಹೊತ್ತಿನ ನಂತರ ಸಾಬೂನಿನ ಸಹಾಯದೊಂದಿಗೆ ಸ್ವಚ್ಛಗೊಳಿಸಿ. ಅಥವಾ ಮೊದಲು ಪಾತ್ರೆಯನ್ನು ಸಾಮಾನ್ಯವಾಗಿ ತೊಳೆಯುವಂತೆ ತೊಳೆಯಿರಿ ಹಾಗೂ ನಂತರ ಅದಕ್ಕೆ ವಿನೇಗರ್ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ ನಂತರ ಕೇವಲ ನೀರಿನಲ್ಲಿ ಸ್ವಚ್ಛವಾಗಿ ತೊಳೆಯಿರಿ.
ಮೊಸರು
ನಿಮ್ಮ ಪಾತ್ರೆಗೆ ಅಂಟಿಕೊಂಡಿರುವ ಜಿಡ್ಡು ಇಲ್ಲವೇ ತಳ ಹತ್ತಿದ ಅಂಶವನ್ನು ನಿವಾರಿಸಲು ಮೊಸರು ಸಹಕಾರಿಯಾಗಿದೆ.
ಬಿಸಿ ನೀರು
ಆಹಾರ ತಳ ಹತ್ತಿದಾಗ ಕೂಡಲೇ ಬಿಸಿ ನೀರನ್ನು ಪಾತ್ರೆಗೆ ಸುರಿಯಿರಿ. ಮತ್ತು ಹಾಗೆಯೇ ಅರ್ಧ ಗಂಟೆ ಬಿಡಿ ಈ ಅಂಶ ಪಾತ್ರೆಯಿಂದ ಬಿಡುಗಡೆಯಾಗುತ್ತದೆ.
ವೆಜಿಟೇಬಲ್ ಆಯಿಲ್
ಪಾತ್ರೆಯನ್ನು ಸ್ವಚ್ಛವಾಗಿ ತೊಳೆಯುವುದು ವೆಜಿಟೇಬಲ್ ಆಯಿಲ್‌ನಿಂದ ಸಾಧ್ಯ. ಇದು ಕಠಿಣವಾಗಿರುವ ಅಂಶವನ್ನು ಪಾತ್ರೆಯಿಂದ ಸುಲಭವಾಗಿ ನಿವಾರಿಸುತ್ತದೆ.
ವೈನ್
ತಳ ಹತ್ತಿದ ಪಾತ್ರೆಯನ್ನು ನೀವು ತೊಳೆಯಲು ಬಯಸುತ್ತೀರಿ ಎಂದಾದಲ್ಲಿ ವೈನ್ ಬಳಸಿ ಇದನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದಾಗಿದೆ. ಇದು ತಳ ಹತ್ತಿದ ಅಂಶವನ್ನು ಮೃದುವಾಗಿಸಿ ಪಾತ್ರೆಯನ್ನು ಸುಂದರಗೊಳಿಸುತ್ತದೆ.
ಪಾತ್ರೆಯಲ್ಲಿರುವ ಎಣ್ಣೆ ಕಲೆ ಹೋಗಲಾಡಿಸಲು ಟಿಪ್ಸ್
ಪಾತ್ರೆಯಲ್ಲಿ ಎಣ್ಣೆ ಸೀದು ಹೋದರೆ ಅಂತ ಪಾತ್ರೆಯನ್ನು ತೊಳೆಯುವುದು ಸುಲಭದ ಕೆಲಸವಲ್ಲ. ಎಷ್ಟು ಉಜ್ಜಿದರೂ ತಳ ಕಪ್ಪು ಹಿಡಿದಿದ್ದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಯಾವುದೇ ಡಿಟರ್ಜೆಂಟ್ ಗಳು ಹಾಗೂ ಬಾರ್ ಸೋಪುಗಳಿಂದ ಕಪ್ಪು ಕಲೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಇಲ್ಲಿ ಕೆಲವು ಸರಳ ಟಿಪ್ಸ್ ಇವೆ. ಅವುಗಳನ್ನು ಪಾಲಿಸಿದರೆ ಎಣ್ಣೆ ಸೀದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು:
ಟಿಪ್ಸ್
1. ಆ ಪಾತ್ರೆಗೆ ಕುದಿಯುವ ಬಿಸಿ ನೀರು ಹಾಕಿ ಅದಕ್ಕೆ ಎಣ್ಣೆ ಹೋಗಲಾಡಿಸುವ ಡಿಟರ್ಜೆಂಟ್ ಪುಡಿ ಸ್ವಲ್ಪ ಹಾಕಿ 30 ನಿಮಿಷ ಬಿಡಿ.
2. ನಂತರ ನೀರನ್ನು ಬಿಸಾಡಿ, ನಂತರ ಡಿಟರ್ಜೆಂಟ್ ಅನ್ನು ಸೀದ ಭಾಗಕ್ಕೆ ಹಾಕಿ.
3. ನಂತರ ಸ್ಪಾಂಜ್ ನಿಂದ ಚೆನ್ನಾಗಿ ತಿಕ್ಕಿದರೆ ಸಾಕು ಪಾತ್ರೆ ಹಿಂದಿನ ಹೊಳಪನ್ನು ಪಡೆಯುತ್ತದೆ.
ಪಾತ್ರೆಯಲ್ಲಿರುವ ಎಣ್ಣೆ ಕಲೆ ಹೋಗಲಾಡಿಸಲು ಟಿಪ್ಸ್
* ಬಿಸಿ ನೀರಿನಲ್ಲಿ ಮುಳುಗಿಸಿಡಲು ಸಾಧ್ಯವಾಗದ ಪಾತ್ರೆಗೆ ಡಿಟರ್ಜೆಂಟ್ ಹಾಕಿ ಸ್ಪಾಂಜ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ಪಾತ್ರೆಯನ್ನು ಉಜ್ಜಿ.
*ಈ ರೀತಿ ಮಾಡಿದರೆ ಪಾತ್ರೆಯಲ್ಲಿರುವ ಎಣ್ಣೆ ಕಲೆಯನ್ನು ತೆಗೆಯಬಹುದು. ಒಂದು ವೇಳೆ ಆಗಲೂ ಹೋಗದಿದ್ದರೆ ಕ್ಲೋರಿನ್ ಬ್ಲೀಚ್ ಅಥವಾ ಕಲರ್ ಸೇಫ್ ಬ್ಲೀಚ್ ಬಳಸಿ ತಿಕ್ಕಿದರೆ ಸಾಕು.
* ನಾನ್ ಸ್ಟಿಕ್ ಪಾತ್ರೆಯಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸಲು ಸ್ಪೂನ್, ನೈಫ್‌ನಿಂದ ಕೆರೆಯಬೇಡಿ, ಪಾತ್ರೆ ಹಾಳಾಗುವುದು.