ಜೀನ್ಸ್ ಪ್ಯಾಂಟ್ ತೊಳೆಯುವ ಮೊದಲು ಈ ಟಿಪ್ಸ್ ತಪ್ಪದೇ ಪಾಲಿಸಿ

By: Jaya Subramanya
Subscribe to Boldsky

ಇಂದಿನ ಆಧುನಿಕ ಯುಗದಲ್ಲಿ ಜೀನ್ಸ್ ಒಂದು ಫ್ಯಾಷನ್ ದಿರಿಸಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ಈ ದಿರಿಸು ನಿಮ್ಮ ಯಾವುದೇ ಬಗೆಯ ಉಡುಪುಗಳಿಗೂ ಒಂದು ರೀತಿಯ ಸ್ಟೈಲಿಶ್ ನೋಟವನ್ನು ಜೀನ್ಸ್ ನೀಡುತ್ತದೆ. ನೀವು ಧರಿಸುವ ಉಡುಗೆ ಕುರ್ತಾ ಆಗಿರಲಿ, ಟಿ ಶರ್ಟ್, ಶರ್ಟ್, ಕ್ರಾಪ್ ಟಾಪ್ ಹೀಗೆ ಆಧುನಿಕ ಬಗೆಯ ಯಾವುದೇ ದಿರಿಸಾಗಲಿ ಜೀನ್ಸ್ ಆ ಬಟ್ಟೆಯ ಲುಕ್ ಅನ್ನೇ ಬದಲಾಯಿಸಿ ಬಿಡುತ್ತದೆ. ನಿಮ್ಮ ಇತರ ಬಟ್ಟೆಗಳಿಗೆ ಹೋಲಿಸಿದಾಗ ಜೀನ್ಸ್ ಅನ್ನು ಆಗಾಗ್ಗೆ ತೊಳೆಯಬೇಕಾದ ತಲೆನೋವಿಲ್ಲ. ಅಂತೆಯೇ ವಾರಕ್ಕೊಮ್ಮೆ ತೊಳೆದರೂ ಸಾಕು ಇದು ತನ್ನ ಕಳೆಯನ್ನು ಕಳೆದುಕೊಳ್ಳುವುದಿಲ್ಲ. ಜೀನ್ಸ್ ಪ್ಯಾಂಟ್‌ನ್ನು ಬೇಕಾಬಿಟ್ಟಿಯಾಗಿ ತೊಳೆದು ಹಾಕುವಂತಿಲ್ಲ!

ಆದರೆ ಇತರ ಬಟ್ಟೆಗಳನ್ನು ತೊಳೆದಂತೆ (ವಾಶ್ ಮಾಡಿದಂತೆ) ನೀವು ಜೀನ್ಸ್ ಅನ್ನು ತೊಳೆಯುವ ಹಾಗಿಲ್ಲ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ಮನದಟ್ಟು ಮಾಡಿಕೊಡುತ್ತಿದ್ದೇವೆ. ಏಕೆಂದರೆ ಜೀನ್ಸ್ ಬಟ್ಟೆಯೇ ಬೇರೆಯಾಗಿದ್ದು ಇದನ್ನು ತೊಳೆಯಲು ನೀವು ಕೆಲವೊಂದು ಅಂಶಗಳನ್ನು ರೀತಿಗಳನ್ನು ಅನುಸರಿಬೇಕಾಗುತ್ತದೆ. ರಫ್ ಅಂಡ್ ಟಫ್‌ನಂತಿರುವ ಜೀನ್ಸ್ ಪ್ಯಾಂಟ್‌ಗಳನ್ನು ಒಗೆಯುವುದು ಹೇಗೆ?

ಅದೇನು ಎಂಬುದನ್ನೇ ಇಂದಿಲ್ಲಿ ತಿಳಿಸುತ್ತಿದ್ದೇವೆ. ಜೀನ್ಸ್ ಒಗೆಯುವಾಗ ಈ ಅಂಶಗಳನ್ನು ನೀವು ಮನದಟ್ಟು ಮಾಡಿಕೊಂಡರೆ ಸಾಕು ನಿಮ್ಮ ಕೆಲಸ ಸಲೀಸಾದಂತೆಯೇ... 

ತೊಳೆಯುವ ವಿಧಾನ

ತೊಳೆಯುವ ವಿಧಾನ

ನಿಮ್ಮ ಜೀನ್ಸ್ ಯಾವಾಗಲೂ ಹೊಸದರಂತೆ ಹೊಳೆಯುತ್ತಿರಬೇಕು ಎಂದಾದಲ್ಲಿ ಅದನ್ನು ಒಗೆಯುವಾಗ ಒಳಕ್ಕೆ ಹೊರಕ್ಕೆ ಮಾಡಿ ಒಗೆಯಿರಿ. ಹೊರಭಾಗವನ್ನು ಒಳಕ್ಕೆ ಮಾಡಿಕೊಂಡು ನಂತರವಷ್ಟೇ ಅದನ್ನು ಒಗೆಯಿರಿ. ಇದರಿಂದ ನಿಮ್ಮ ಜೀನ್ಸ್ ದೀರ್ಘಕಾಲ ಹಾಳಾಗದಂತೆ ಬಾಳಿಕೆ ಬರುತ್ತದೆ.

ಜೀನ್ಸ್ ಆಕಾರ ಕಳೆದುಕೊಳ್ಳುವುದು

ಜೀನ್ಸ್ ಆಕಾರ ಕಳೆದುಕೊಳ್ಳುವುದು

ಕೆಲವೊಂದು ಜೀನ್ಸ್‌ಗಳು ಒಗೆದ ನಂತರ ಆಕಾರವನ್ನು ಕಳೆದುಕೊಳ್ಳುತ್ತವೆ. ಇದರಿಂದ ಜೀನ್ಸ್ ತನ್ನ ವಿನ್ಯಾಸವನ್ನು ಕಳೆದುಕೊಂಡು ಗುಣಮಟ್ಟವನ್ನು ನಷ್ಟಮಾಡಿಕೊಳ್ಳುತ್ತದೆ. ಇದನ್ನು ತಡೆಯಲು ಜಿಪ್ ಅನ್ನು ಕ್ಲೋಸ್ ಮಾಡಿ ಮತ್ತು ಬಟನ್‌ಗಳನ್ನು ಮೇಲಕ್ಕೆ ಮಾಡಿಕೊಂಡು ನಂತರ ಒಗೆಯಿರಿ.

ಪಾಕೆಟ್‌ಗಳನ್ನು ತಪ್ಪದೆ ಪರಿಶೀಲಿಸಿ

ಪಾಕೆಟ್‌ಗಳನ್ನು ತಪ್ಪದೆ ಪರಿಶೀಲಿಸಿ

ನಿಮ್ಮ ಜೀನ್ಸ್ ಒಗೆಯುವ ಮುನ್ನ ಪಾಕೆಟ್ ಪರಿಶೀಲನೆಯನ್ನು ಮರೆಯದೆ ಮಾಡಿ. ಎಲ್ಲಿಯಾದರೂ ಪಾಕೆಟ್‌ನಲ್ಲಿ ಕಾಗದದ ತುಣುಕು ಅಥವಾ ನೋಟು ಇದ್ದಲ್ಲಿ ಒಗೆಯುವ ಸಂದರ್ಭದಲ್ಲಿ ಅದು ಒದ್ದೆಯಾಗುತ್ತದೆ ಮತ್ತು ಜೀನ್ಸ್‌ನಲ್ಲಿ ಇದು ಅಂಟಿ ಹೋಗುತ್ತದೆ. ಇದರಿಂದ ನಿಮ್ಮ ಬಟ್ಟೆ ಹಾಳಾಗುವ ಸಾಧ್ಯತೆ ಇರುತ್ತದೆ.

ಬ್ಲೀಚ್ ಎಂದಿಗೂ ಮಾಡದಿರಿ

ಬ್ಲೀಚ್ ಎಂದಿಗೂ ಮಾಡದಿರಿ

ನಿಮ್ಮ ಡೆನೀಮ್‌ಗಳನ್ನು ಎಂದಿಗೂ ಬ್ಲೀಚ್ ಮಾಡದಿರಿ. ಬ್ಲೀಚ್‌ನಿಂದ ನಿಮ್ಮ ಜೀನ್ಸ್ ಹಾಳಾಗುವುದು ಖಂಡಿತ ಮತ್ತು ಬಟ್ಟೆಯ ಗುಣಮಟ್ಟ ನಷ್ಟವಾಗುತ್ತದೆ. ನಿಮ್ಮ ಜೀನ್ಸ್ ಹಳತರಂತೆ ಕಾಣುತ್ತದೆ.

ಸೂರ್ಯನ ಬಿಸಿಲು

ಸೂರ್ಯನ ಬಿಸಿಲು

ಜೀನ್ಸ್ ಅನ್ನು ಎಂದಿಗೂ ಬಿಸಿಲಿನಡಿಯಲ್ಲಿ ಒಣಗಿಸದಿರಿ. ಸೂರ್ಯನ ಕಿರಣಗಳು ಜೀನ್ಸ್ ಬಟ್ಟೆಯನ್ನು ಹಾಳುಮಾಡಿ ಬಿಡುತ್ತದೆ ಮತ್ತು ವೇಗವಾಗಿ ಫೇಡ್ ಆಗಿಬಿಡುತ್ತದೆ. ಆದ್ದರಿಂದ ಜೀನ್ಸ್ ಒಣಗಿಸುವಾಗ ಹೊರಭಾಗವನ್ನು ಒಳಕ್ಕೆ ಮಾಡಿಕೊಂಡು ಒಣಗಿಸಿ.

 
English summary

Ways To Prevent Your Jeans From Turning Old

Using these kinds of methods to wash your jeans will only make them look old and worn out. Today, we give you a list of hacks and ways to prevent your jeans from turning old. By following these simple tips, you will be able to keep those branded pairs of jeans with you for a very long time. So, take a look at these tips and steal them right away:
Please Wait while comments are loading...
Subscribe Newsletter