For Quick Alerts
ALLOW NOTIFICATIONS  
For Daily Alerts

ಗ್ಯಾಸ್ ಸಿಲಿಂಡರ್ ಸುರಕ್ಷತಾ ಕ್ರಮ ಹೀಗಿರಲಿ

By Super
|
Gas cylinder safety tips
ಗ್ಯಾಸ್ ಇಲ್ಲದಿದ್ದರೆ ಅಡುಗೆ ಕೆಲಸ ಸಾಗೋದೆ ಇಲ್ಲ. ಅಡುಗೆ ಅನಿಲ ದಿನನಿತ್ಯದ ಅವಶ್ಯಕತೆ. ಆದರೆ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚಿಗೆ ಅಡುಗೆ ಅನಿಲ ಸ್ಫೋಟ ಪ್ರಕರಣಗಳು ಹೆಚ್ಚುತ್ತಿರುವುದಕ್ಕೂ ಸೂಕ್ತ ಸುರಕ್ಷತಾ ಕ್ರಮ ತೆಗೆದುಕೊಳ್ಳದಿರುವುದೇ ಕಾರಣ.

ಅಡುಗೆ ಅನಿಲದ ಬಗ್ಗೆ ನಿಮ್ಮ ಮುಂಜಾಗ್ರತೆ ಕ್ರಮ ಹೀಗಿರಲಿ:

ಸಿಲಿಂಡರ್ ಬಳಸುವ ಮುನ್ನ
* ಗ್ಯಾಸ್ ಕೊಂಡಾಗ ಅದನ್ನು ಬಳಸಲು ನೀಡುವ ಬಳಕೆದಾರರ ನಿರ್ದೇಶನವನ್ನು ಪೂರ್ಣ ಓದಿಕೊಂಡಿರಬೇಕು.
* ಐಎಸ್ಐ ಸಂಕೇತವಿರುವ ಸಿಲಿಂಡರ್ ನಷ್ಟೇ ಬಳಸಬೇಕು.
* ಗ್ಯಾಸ್ ಸಿಲಿಂಡರ್ ಸಹ expiry ದಿನಾಂಕ ಹೊಂದಿರುತ್ತೆ. ಸಿಲೆಂಡರ್ ನ ಮೇಲ್ಭಾಗದ ಮೂರು ಕಬ್ಬಿಣದ ಪಟ್ಟಿಗಳಲ್ಲಿ ಒಂದರಲ್ಲಿ A,B,C,D. ಹೀಗೆ ಯಾವುದಾದರು ಅಕ್ಷರ ಇರುತ್ತದೆ (ಉದಾ- D06, ಅಂದ್ರೆ ಡಿಸೆಂಬರ್ ನಲ್ಲಿ ಇದರ ಉತ್ಪಾದನೆ ಆದದ್ದು ಎಂದು ಅರ್ಥ). A-ಮಾರ್ಚ್ 1 ಕ್ವಾರ್ಟರ್ ,B -ಜೂನ್ ಎರಡನೇ ಕ್ವಾರ್ಟರ್ ,C -ಸೆಪ್ಟಂಬರ್ ಮೂರನೇ ಕ್ವಾರ್ಟರ್ ,D -ನಾಲ್ಕನೇ ಕ್ವಾರ್ಟರ್. ಇದನ್ನು ಚೆಕ್ ಮಾಡಿ ಬಳಸಬೇಕು.

ಸಿಲಿಂಡರ್ ಇಡುವ ಸೂಕ್ತ ಜಾಗ:
* ಸಿಲಿಂಡರ್ ಗಳನ್ನು ಹೊರಗೆ ಅಡುಗೆ ಮನೆಗೆ ಹೊಂದಿಕೊಂಡಂತೆ ಇಡಬೇಕು. ಅದಕ್ಕೆ ನೀರು ತಾಗದಂತೆ ಎಚ್ಚರ ವಹಿಸಬೇಕು
* ಸಿಲಿಂಡರ್ ಅನ್ನು ಚೆನ್ನಾಗಿ ಗಾಳಿಯಾಡುವ ಜಾಗದಲ್ಲಿ ಇಡಬೇಕು
* ತುಂಬಾ ಇಕ್ಕಟ್ಟಾದ ಪ್ರದೇಶದಲ್ಲಿ ಸಿಲಿಂಡರ್ ಇಡಬಾರದು
* ಸಿಲಿಂಡರ್ ಅನ್ನು ಮೇಲ್ಮುಖವಾಗಿಯೇ ಇಡಬೇಕು. ಅದನ್ನು ಮಲಗಿಸಿ ಇಡಬಾರದು

ಸಿಲಿಂಡರ್ ಸುರಕ್ಷತೆ ಹೇಗೆ?
* ಗ್ಯಾಸ್ ಬಳಸದಿದ್ದ ಸಮಯ ರೆಗ್ಯುಲೇಟರ್ ಆಫ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ
* ಸಿಲಿಂಡರ್ ಬಳಿ ಪೆಟ್ರೋಲ್ ಮತ್ತು ಅಗ್ನಿ ಪ್ರಚೋದಕ ಲಿಕ್ವಿಡ್ ಅಥವಾ ಇನ್ನಿತರ ವಸ್ತುಗಳನ್ನು ಸಹ ಇಡಬೇಡಿ
* ಸಿಲಿಂಡರ್ ಪೈಪ್ ಗಳನ್ನು ಆಗಾಗ್ಗೆ ಪರೀಕ್ಷಿಸುತ್ತಿರಬೇಕು. ಜಿರಲೆ, ಇನ್ನಿತರ ಕ್ರಿಮಿಕೀಟಗಳು ಪೈಪನ್ನು ಹಾಳುಮಾಡದಂತೆ ನೋಡಿಕೊಳ್ಳಬೇಕು.

ಗ್ಯಾಸ್ ಲೀಕ್ ಆದರೆ ಏನು ಮಾಡಬೇಕು?

* ಗ್ಯಾಸ್ ಸ್ಟೌವ್ ಮತ್ತು ರೆಗ್ಯುಲೇಟರನ್ನು ತಕ್ಷಣವೇ ಆಫ್ ಮಾಡಿ
* ವಾಸನೆ ಬಂದ ತಕ್ಷಣವೇ ಎಲ್ಲ ಕಿಟಕಿ, ಬಾಗಿಲನ್ನು ತೆರೆಯಬೇಕು.
* ಯಾವುದೇ ಎಲೆಕ್ಟ್ರಿಕ್ ಸ್ವಿಚ್ ಗಳನ್ನು ಆನ್ ಮಾಡಬಾರದು.

English summary

LPG Cylinder safety Tips| Precautions to Avoid Explosion | Cooking Gas | ಎಲ್ ಪಿ ಜಿ ಸಿಲಿಂಡರ್ ಸುರಕ್ಷತಾ ಕ್ರಮ | ಸಿಲಿಂಡರ್ ಸ್ಫೋಟ ತಡೆಯಲು ಮುಂಜಾಗ್ರತಾ ಕ್ರಮ | ಅಡುಗೆ ಅನಿಲ

Cooking gas is necessary element in all houses and hotels. So it is must for each and every one to have some knowledge of how to handle gas cylinders.So,here we would like to share some simple safety tips to avoid gas explosion. Take a look.
X
Desktop Bottom Promotion