For Quick Alerts
ALLOW NOTIFICATIONS  
For Daily Alerts

ಕಾರಿನ ಬಟ್ಟೆ ಸೀಟನ್ನು ಸ್ವಚ್ಛಗೊಳಿಸುವುದು ಹೇಗೆ?

|

ಕೇವಲ ಶ್ರೀಮಂತರ ಹಾಗೂ ಐಷಾರಾಮಿಯ ಸಂಕೇತವಾಗಿದ್ದ ಕಾರು ಇದೀಗ ಪ್ರತಿ ಮನೆಯಲ್ಲೂ ಒಂದು ಅಥವಾ ಎರಡು ಕಾರುಗಳನ್ನು ಹೊಂದುವಂತಾಗಿದೆ. ಆದರೆ ಕಾರನ್ನು ಹೊಂದುವಷ್ಟು ಸುಲಭವಲ್ಲ ಕಾರಿನ ಸ್ವಚ್ಚತೆ ಕಾಪಾಡುವುದು.

Effetive Ways to Clean Cloth Car Seats

ಸಾಮಾನ್ಯವಾಗಿ ಕಾರುಗಳ ಆಸನಗಳ ಮೇಲೆ ಏನೇನೋ ಚೆಲ್ಲಿಯೇ ಇರುತ್ತದೆ, ಇವನ್ನು ಸ್ವಚ್ಛಗೊಳಿಸುವುದು ಅಷ್ಟು ತ್ರಾಸದ ಕೆಲಸವೇ ಹೌದ. ಆದರೆ ಇದೇ ಕಾರಣಕ್ಕೆ ವೃತ್ತಿಪರ ಸೇವೆಯನ್ನು ಪಡೆಯುವುದು ದುಬಾರಿಯಾಗಬಹುದು. ಕೊಂಚ ಶ್ರಮವಹಿಸಿದರೆ ನೀವೇ ಇವನ್ನು ಸ್ವಚ್ಛಗೊಳಿಸಬಹುದು. ಇದಕ್ಕಾಗಿ ನಿಮಗೆ ಬೇಕಿರುವುದು ಒಂದು ವ್ಯಾಕ್ಯೂಮ್ ಕ್ಲೀನರ್, ಸ್ವಚ್ಛಗೊಳಿಸುವ ದ್ರಾವಣದ ತೆಳುವಾದ ಪದರ, ಕಲೆಯನ್ನು ಕೆರೆದು ತೆಗೆಯಲು ಸೂಕ್ತ ಬ್ರಶ್ ಹಾಗೂ ಹೆಚ್ಚುವರಿ ನೀರನ್ನು ಹೀರಿ ತೆಗೆಯಲು ಹಳೆಯ ಟವೆಲ್, ಇಷ್ಟೇ!.

ವ್ಯಾಕ್ಯೂಮ್ ಕ್ಲೀನರ್

ವ್ಯಾಕ್ಯೂಮ್ ಕ್ಲೀನರ್

ಮೊದಲು ವ್ಯಾಕ್ಯೂಮ್ ಕ್ಲೀನರ್ ನಿಂದ ಆಸನಗಳ ಮೇಲೆಲ್ಲಾ ಆಡಿಸಿ ಕಣ್ಣಿಗೆ ಕಾಣುವ ಸಡಿಲವಾದ ಕಣಗಳನ್ನು ನಿವಾರಿಸಿ. ಧೂಳು, ಚಿಕ್ಕ ಕಣಗಳು, ಬಿಸ್ಕತ್ತಿನ ತುಣುಕುಗಳು ಮೊದಲಾದವೆಲ್ಲಾ ಇದರಿಂದ ಸ್ವಚ್ಛಗೊಳ್ಳುತ್ತವೆ. ಬೆರಳುಗಳಿಂದ ಆಸನಗಳ ಮಡಿಕೆಗಳನ್ನು ಹಾಗೂ ಸಂದುಗಳನ್ನು ಅಗಲಿಸಿ ಇದರೊಳಗೆ ಸಿಲುಕಿಕೊಂಡಿದ್ದ ಕಸವನ್ನೂ ವ್ಯಾಕ್ಯೂಮ್ ಮಾಡಿ.

ದ್ರಾವಣವನ್ನು ಸಿಂಪಡಿಸಿ

ದ್ರಾವಣವನ್ನು ಸಿಂಪಡಿಸಿ

ಸ್ವಚ್ಛಗೊಳಿಸುವ ದ್ರಾವಣವನ್ನು ಸಿಂಪಡಿಸಿ ಆಸನದ ಮೇಲೆ ತೆಳುವಾದ ಪದರ ನಿರ್ಮಿಸಿ. ಇದಕ್ಕಾಗಿ ಆಲ್ ಪರ್ಪಸ್ ಕ್ಲೀನರ್ ಗಿಂತ ಬಟ್ಟೆಯನ್ನು ಸ್ವಚ್ಛಗೊಳಿಸುವ ದ್ರಾವಣ ಹೆಚ್ಚು ಸೂಕ್ತ. ಸ್ವಚ್ಛಗೊಳಿಸಬೇಕಾದ ಎಲ್ಲಾ ಭಾಗಗಳ ಮೇಲೆ ಈ ದ್ರಾವಣವನ್ನು ಸಿಂಪಡಿಸಿ. ಒಂದು ಪದರವಾದ ಬಳಿಕ ಕೊಂಚ ಒಣಗುತ್ತಿದ್ದಂತೆಯೇ ಎರಡನೆಯ ಪದರ, ಹೀಗೆ ಸುಮಾರು ನಾಲ್ಕರಿಂದ ಐದು ಪದರಗಳನ್ನು ಸಿಂಪಡಿಸಿ.

ಟವಲ್ ನಿಂದ ಧೂಳು ತೆಗೆಯಿರಿ

ಟವಲ್ ನಿಂದ ಧೂಳು ತೆಗೆಯಿರಿ

ಮೈಕ್ರೋಫೈಬರ್ ಟವೆಲ್ ಬಳಸಿ ಉಳಿದ ಧೂಳು ಮತ್ತು ಇತರ ಕಣಗಳನ್ನು ನಿವಾರಿಸಿ. ಅಲ್ಲದೇ ಈ ಟವೆಲ್ ನಿಂದ ಮಸಾಜ್ ಮಾಡುವ ಮೂಲಕ ಬಟ್ಟೆಯ ಒಳಭಾಗಕ್ಕೆ ಸಾಗಿದ್ದ ಕಣಗಳೂ ಹೊರಬರಲು ಸಾಧ್ಯವಾಗುತ್ತದೆ. ಯಾವಾಗೆಲ್ಲಾ ಬಟ್ಟೆಗಳ ನಡುವಣ ತೂತುಗಳಲ್ಲಿ ಧೂಳು ಇರುವ ಅನುಮಾನವಾಯಿತೋ, ತಕ್ಷಣವೇ ಮೈಕ್ರೋಫೈಬರ್ ಟವೆಲ್ ನಿಂದ ಒರೆಸಿಬಿಡಿ. ಉತ್ತಮವೆಂದರೆ ಈ ಟವೆಲ್ಲನ್ನು ಸದಾ ಕಾರಿನೊಳಗೇ ಇರಿಸಿ ಯಾವಾಗ ಆಸನಗಳ ಮೇಲೆ ಕಸ ಬಿತ್ತೋ ಆಗಲೇ ಸ್ವಚ್ಛಗೊಳಿಸಿಬಿಡಿ.

ಪುನರಾವರ್ತಿಸಿ

ಪುನರಾವರ್ತಿಸಿ

ಈ ವಿಧಾನವನ್ನು ಪೂರ್ಣ ಸ್ವಚ್ಛವಾಗುವವರೆಗೆ ಪುನರಾವರ್ತಿಸಿ. ಅಂದರೆ, ಸಿಂಪಡಿಸುವುದು ಮಸಾಜ್ ಮಾಡುವುದು ಮತ್ತು ಒರೆಸುವುದು. ನೆನಪಿಡಿ, ಬಟ್ಟೆಯನ್ನು ದ್ರಾವಣದೊಂದಿಗೆ ತೋಯಿಸುವ ಬದಲು ನೀವು ಬ್ರಷ್ ಮಾಡುವ ಮೊದಲು ತೆಳುವಾದ ಪದರಗಳನ್ನು ಸಿಂಪಡಿಸುವುದು ಮುಖ್ಯ. ಕೆಲವೊಮ್ಮೆ ಕಲೆಗಳು ಗಟ್ಟಿಯಾಗಿದ್ದರೆ ಇವನ್ನು ತೆಗೆದುಹಾಕಲು ಮೂರರಿಂದ ಆರು ಪದರಗಳನ್ನು ಬಳಸಬೇಕಾಗಿ ಬರಬಹುದು.

ವ್ಯಾಕ್ಯೂಮ್ ಬಳಸಿ ಸ್ವಚ್ಛಗೊಳಿಸಿ

ವ್ಯಾಕ್ಯೂಮ್ ಬಳಸಿ ಸ್ವಚ್ಛಗೊಳಿಸಿ

ಎಲ್ಲಾ ಮುಗಿದ ನಂತರ ಮತ್ತೊಮ್ಮೆ ವ್ಯಾಕ್ಯೂಮ್ ಬಳಸಿ ಸ್ವಚ್ಛಗೊಳಿಸಿ. ಕಲೆ ತೆಗೆಯುವುದನ್ನು ಪೂರ್ಣಗೊಳಿಸಿದ ಬಳಿಕ, ಆ ಸ್ಥಳದಲ್ಲಿ ವ್ಯಾಕ್ಯೂಮ್ ಕ್ಲೀನರ್ ಅನ್ನು ಕೆಲವಾರು ಬಳಿ ಬಳಸಿ. ಕೊಂಚ ಹೊತ್ತು ಕಿಟಕಿಗಳನ್ನು ತೆರೆದೇ ಇರಿಸಿ ಪೂರ್ಣವಾಗಿ ಒಣಗಲು ಬಿಡಿ. ಪೂರ್ಣವಾಗಿ ಒಣಗಿದ ಬಳಿಕವೇ ಕಾರಿನಲ್ಲಿ ಆಸೀನರಾಗಿ.

ಒಳಭಾಗದ ಸ್ವಚ್ಚತೆಗೆ ರೂಮ್ ಫ್ರೆಶ್ನರ್

ಒಳಭಾಗದ ಸ್ವಚ್ಚತೆಗೆ ರೂಮ್ ಫ್ರೆಶ್ನರ್

ಕಾರಿನ ಒಳಭಾಗ ಸ್ವಚ್ಛಗೊಳಿಸಲು ಮನೆಯ ಒಳಭಾಗವನ್ನು ಸ್ವಚ್ಛಗೊಳಿಸುವ ಹೆಚ್ಚು ಬಿರುಸಲ್ಲದ ರೋಮಗಳ ಬ್ರಶ್ ಬಳಸಿ. ಒಂದು ವೇಳೆ ಮೊದಲ ಬಾರಿಗೆ ಬಳಸುತ್ತಿದ್ದರೆ ಸಿಂಪಡಿಸಿದ ಭಾಗದಲ್ಲಿ ಕೊಂಚವೇ ಭಾಗವನ್ನು ಸ್ವಚ್ಛಗೊಳಿಸಿ ಪ್ರಯತ್ನಿಸಿ. ತೊಂದರೆಯಿಲ್ಲ ಎಂದೆನಿಸಿದರೆ ಉಳಿದೆಲ್ಲಾ ಭಾಗಗಳನ್ನು ಸ್ವಚ್ಛಗೊಳಿಸಿ. ಇನ್ನೂ ಉತ್ತಮವೆಂದರೆ ಸಿಂಪಡಿಸಿದ ತಕ್ಷಣವೇ ಬ್ರಶ್ ಮಾಡಿ ಬಿಡಿ. ಈ ಬ್ರಶ್ ನೆಲಗಂಬಳಿ ಸ್ವಚ್ಛಗೊಳಿಸಲು ಬಳಸುವ ಗಡಸು ಬ್ರಶ್ ಆಗಿರಬಾರದು. ಇದು ಆಸನದ ಬಟ್ಟೆಯ ನೂಲುಗಳಿಗೆ ಹಾನಿ ಎಸಗಬಹುದು.

Read more about: how to
English summary

Effetive Ways to Clean Cloth Car Seats

You don’t have to take your car to get detailed to get clean cloth seats. You can easily clean cloth seats yourself. To clean the seats, vacuum the seats, use a light layer of cleaning solution, use a brush to scrub the stain, and then wipe away the excess water and suds with a towel.
X
Desktop Bottom Promotion