ಟೆರೇಸ್ ಗಾರ್ಡನ್: ಅಂದದ ಮನೆಗಾಗಿ ಚಂದದ ಗಾರ್ಡನ್

By: Jaya subramanya
Subscribe to Boldsky

ಇಂದು ಪಟ್ಟಣ ಮತ್ತು ನಗರಗಳಲ್ಲಿ ವಾಸ ಮಾಡುತ್ತಿರುವವರು ಫ್ಲ್ಯಾಟ್‌ಗಳಲ್ಲಿ ತಮ್ಮ ನಿವಾಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸ್ಥಳಾವಕಾಶ ಕೊರತೆಯಿಂದಾಗಿ ಇಂತಹ ಬಹುಮಹಡಿ ಕಟ್ಟಡಗಳಲ್ಲೇ ಪುಟ್ಟದಾದ ಗೂಡು ಕಟ್ಟಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.

ಹಿಂದೆಲ್ಲಾ ಹಳ್ಳಿ ಮತ್ತು ಊರುಗಳಲ್ಲಿ ದೊರೆಯುತ್ತಿದ್ದ ಸೌಕರ್ಯ ಮತ್ತು ಹೆಚ್ಚುವರಿ ಸ್ಥಳಾವಕಾಶ ಇಂತಹ ಸ್ಥಳಗಳಲ್ಲಿ ದೊರೆಯುವುದು ಅಸಂಭವ ಎಂದೆನಿಸಿದೆ. ಅದಾಗ್ಯೂ ಮನೆಯಲ್ಲಿ ಸುಂದರವಾದ ಗಾರ್ಡನ್ ಅಥವಾ ಹೂದೋಟ ಇರಬೇಕು ಎಂಬುದು ನಿಮ್ಮ ಮನೆಯೊಡತಿಯ ಇಲ್ಲವೇ ನಿಮ್ಮ ಅಸೆಯಾಗಿದ್ದಲ್ಲಿ ನಿಮ್ಮ ಮನೆಯ ಟೆರೇಸ್ ಇದಕ್ಕೆ ಸೂಕ್ತ ಸ್ಥಳವಾಗಿದೆ. ಕನಸಿನ ಕೈ ತೋಟದಲ್ಲಿ ಹೂವಿನ ಅರಮನೆ....

ಅದಾಗ್ಯೂ ಟೆರೇಸ್ ಗಾರ್ಡನ್ ಅನ್ನು ನೀವು ರೂಪಿಸಲು ಹೊರಟಿದ್ದೀರಿ ಎಂದಾದಲ್ಲಿ ಅದಕ್ಕಾಗಿ ಕೆಲವೊಂದು ನಿಯಮಗಳಿವೆ. ಅದನ್ನು ನೀವು ಖುದ್ದು ಪಾಲಿಸಲೇಬೇಕಾಗಿದೆ. ನಿಮ್ಮ ಮನೆಯ ಅಚ್ಚುಕಟ್ಟನ್ನು ಈ ಗಾರ್ಡನ್ ಎತ್ತಿತೋರಿಸುವಂತಿರಬೇಕಾಗಿದ್ದು ನಿಮ್ಮ ಮನೆಗೆ ಕಲಶದಂತೆ ಈ ಗಾರ್ಡನ್ ಕಾಣಬೇಕು ಅಂತೆಯೇ ಮನೆಗೂ ಯಾವುದೇ ಹಾನಿಯನ್ನುಂಟು ಮಾಡದಂತೆ ನೀವು ಇದನ್ನು ನಿರ್ಮಿಸಬೇಕು. ಗಾರ್ಡನ್ ಸೊಬಗು ಹೆಚ್ಚಿಸುವ 10 ಬಗೆಯ ದಾಸವಾಳಗಳು

ಅದಕ್ಕಾಗಿ ಇಂದಿನ ಲೇಖನದಲ್ಲಿ ಕೆಲವೊಂದು ಟೆರೇಸ್ ಗಾರ್ಡನ್ ಟಿಪ್ಸ್‌ಗಳನ್ನು ನಿಮ್ಮೊಂದಿಗೆ ನಾವು ಹಂಚಿಕೊಳ್ಳುತ್ತಿದ್ದು ಅದನ್ನು ನೀವು ಪಾಲಿಸಬೇಕಾಗುತ್ತದೆ. ಈ ಟಿಪ್ಸ್‌ಗಳು ಹೆಚ್ಚು ಸರಳ ಎಂದೆನಿಸಿದ್ದು ನಿಮ್ಮ ಕಡಿಮೆ ಬಜೆಟ್‌ನ ಟೆರೇಸ್‌ ಗಾರ್ಡನ್‌ಗಾಗಿ ಸೂಕ್ತವಾಗಿವೆ. ಹಾಗಿದ್ದರೆ ಬನ್ನಿ ಆ ಟಿಪ್ಸ್‌ಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.... 

ಸೂಕ್ತ ಸ್ಥಳವನ್ನು ಆಯ್ಕೆಮಾಡಿ

ಸೂಕ್ತ ಸ್ಥಳವನ್ನು ಆಯ್ಕೆಮಾಡಿ

ನಿಮ್ಮ ಮನೆಯ ಅಡಿಪಾಯ ಭದ್ರವಾಗಿದೆ ಎಂದಾದಲ್ಲಿ ಮಹಡಿಯಲ್ಲಿ ನಿಮಗೆ ಆರಾಮವಾಗಿ ಗಾರ್ಡನ್ ಅನ್ನು ಮಾಡಬಹುದಾಗಿದೆ. ಅದೂ ದೊಡ್ಡ ಮರಗಳನ್ನು ಇದಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಸಂಪೂರ್ಣ ಜಾಗವನ್ನು ಮಣ್ಣಿನಿಂದ ಮುಚ್ಚಿ ಮತ್ತು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಪಾಟ್‌ಗಳನ್ನು ಬಳಸಿಕೊಂಡು ನಿಮ್ಮ ಗಾರ್ಡನ್ ಅನ್ನು ಅಭಿವೃದ್ಧಿಗೊಳಿಸಿಕೊಳ್ಳಬಹುದಾಗಿದೆ.

ನೀರು ಹಾಯಿಸುವುದು

ನೀರು ಹಾಯಿಸುವುದು

ಟೆರೇಸ್ ಗಾರ್ಡನಿಂಗ್ ಅನ್ನು ನೀವು ಮಾಡುತ್ತೀರಿ ಎಂದಾದಲ್ಲಿ ಟೆರೇಸ್‌ಗೆ ಚೆನ್ನಾಗಿ ನೀರುಣಿಸಿ. ಸಂಪೂರ್ಣ ಟೆರೇಸ್ ಅನ್ನು ಮಣ್ಣಿನಿಂದ ಮುಚ್ಚುತ್ತಿದ್ದೀರಿ ಎಂದಾದಲ್ಲಿ ಸಾಕಷ್ಟು ನೀರುಣಿಸಿ. ಇದರಿಂದ ಯಾವುದೇ ಸೋರುವಿಕೆ ಉಂಟಾಗದಂತೆ ಮನೆಯನ್ನು ಕಾಪಾಡಿಕೊಳ್ಳಬಹುದಾಗಿದೆ.

ಮಣ್ಣಿನ ವಿಧವನ್ನು ಆಯ್ಕೆಮಾಡಿಕೊಳ್ಳಿ

ಮಣ್ಣಿನ ವಿಧವನ್ನು ಆಯ್ಕೆಮಾಡಿಕೊಳ್ಳಿ

ಟೆರೇಸ್ ಗಾರ್ಡನ್‌ಗಾಗಿ ಉತ್ತಮ ರೀತಿಯ ಮಣ್ಣಿನ ಆಯ್ಕೆಯನ್ನು ಮಾಡಿಕೊಳ್ಳಿ. ಉತ್ತಮ ಗೊಬ್ಬರ, ಮಣ್ಣಿನಿಂದ ಅಧಿಕ ಇಳುವರಿಯನ್ನು ನಿಮಗೆ ಪಡೆದುಕೊಳ್ಳಬಹುದು. ಅಂತೆಯೇ ಭಾರಿ ಮಳೆಯಿಂದ ಮಣ್ಣಿನ ಗುಣಮಟ್ಟಕ್ಕೆ ಹಾನಿಯುಂಟಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಪಾಟ್‌ಗಳು

ಪಾಟ್‌ಗಳು

ನೀವು ಗಾರ್ಡನಿಂಗ್ ಅನ್ನು ಆರಂಭಿಸುತ್ತಿದ್ದೀರಿ ಎಂದಾದಲ್ಲಿ, ನೀವು ಸರಳ ಹಂತಗಳನ್ನು ಇದಕ್ಕಾಗಿ ಅನುಸರಿಸಿ. ಸಣ್ಣ ಮಟ್ಟಿನ ಗಾರ್ಡನಿಂಗ್ ವಿಧಾನವನ್ನು ಆಯ್ದುಕೊಳ್ಳಿ. ಸಣ್ಣ ಜಾಗದಲ್ಲಿ ಗಾರ್ಡನಿಂಗ್ ಆರಂಭಿಸಿ ನಂತರ ಸಾಕಷ್ಟು ಸ್ಥಳವನ್ನು ಇದಕ್ಕಾಗಿ ಬಳಸಿಕೊಳ್ಳಿ. ಟೊಮೇಟೊ, ಮೆಣಸು, ಓಕ್ರಾ, ಮೊದಲಾದವನ್ನು ಬೆಳೆಸಿಕೊಳ್ಳಿ. ಇವುಗಳ ಕೃಷಿಗೆ ಹೆಚ್ಚುವರಿ ಸ್ಥಳಾವಕಾಶ ಬೇಕಾಗಿಲ್ಲ.

ನೀರುಣಿಸಿ

ನೀರುಣಿಸಿ

ಇದು ಸಾಮಾನ್ಯ ವಿಧಾನವಾಗಿದೆ. ಸೀಸನ್‌ಗೆ ಅನುಗುಣವಾಗಿ ಗಿಡಗಳಿಗೆ ನೀರುಣಿಸುವ ಕ್ರಮವನ್ನು ಅಳವಡಿಸಿಕೊಳ್ಳಿ. ಮಣ್ಣನ್ನು ತೇವಾಂಶದಿಂದ ಇರಿಸಿಕೊಳ್ಳಲು ದಿನಕ್ಕೆರಡು ಬಾರಿ ನೀರುಣಿಸಿ. ನಿಮ್ಮ ಕೈಯಿಂದ ಮಣ್ಣನ್ನು ಒತ್ತಿ ಮತ್ತು ತೇವಾಂಶ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. ನಂತರ ನೀರು ಹಾಯಿಸಿ.

 
English summary

Best Tips For Having A Terrace Garden

Terrace gardening is that way where you can fulfill your hobby and dream of living within a small piece of nature. Little bit of greenery in your house will make your house look pleasant, peaceful and calming. Now, there are certain rules for terrace gardening. As you get limited space, you need to be very careful while installing a terrace garden. According to experts, you can have flower as well as veggies growing in your terrace.
Please Wait while comments are loading...
Subscribe Newsletter