For Quick Alerts
ALLOW NOTIFICATIONS  
For Daily Alerts

ಮನಸ್ಸಿಗೆ ಉಲ್ಲಾಸ ನೀಡುವ ಗಿಡಗಳ ಆರೈಕೆ ಹೇಗಿರಬೇಕು?

|

ದಿನವಿಡೀ ಮೈಮುರಿಯುವಷ್ಟು ಕೆಲಸ ಮಾಡಿ ದಣಿದು ಮನೆಗೆ ಬರುತ್ತೀರಿ, ಆಗ ನಿಮ್ಮ ಮನೆಯಲ್ಲಿ ಬೆಳೆದ ಮಲ್ಲಿಗೆ ಹೂವುಗಳ ಸುಗಂಧವು ನಿಮ್ಮ ಮೂಗಿಗೆ ಬಂದು ಬಡಿಯುತ್ತದೆ. ಅತ್ತ ನೋಡಿದಾಗ ಮುದ್ದಾಗಿ ಅರಳಿ ನಿಂತ ಆ ಹೂವುಗಳು, ನಿಮ್ಮತ್ತ ನಗು ಬೀರುತ್ತಿರುತ್ತವೆ. ಆಗ ಏನನಿಸುತ್ತದೆ ನಿಮಗೆ? ಅಥವಾ ತುಳಸಿ, ರೋಸ್‌ಮೇರಿ ಅಥವಾ ಒರೆಗಾನೊ ಮುಂತಾದ ಗಿಡ ಮೂಲಿಕೆಗಳ ಕಾರಣವಾಗಿ ನಿಮ್ಮ ಅಡುಗೆಗೆ ಅಮೋಘವಾದ ಸ್ವಾದ ದೊರೆತರೆ ಆಗ ಏನು ಅನಿಸುತ್ತದೆ ನಿಮಗೆ? ಇದನ್ನು ಒಂದೇ ಮಾತಿನಲ್ಲಿ ಹೇಳಬಹುದು ಅದೇನೆಂದರೆ, ನಮ್ಮ ಜೀವನ ಶೈಲಿಯ ಮೇಲೆ ಗಿಡ-ಮರಗಳು ಸಹ ಪ್ರಭಾವ ಬೀರುತ್ತವೆ.

ನಗರದ ಕಾಂಕ್ರೀಟ್ ಕಾಡುಗಳು ನಿಮಗೆ ಏಕಾತಾನತೆಯನ್ನು ನೀಡಿದರೆ, ನಿಮ್ಮ ಮನೆಯಲ್ಲಿ ಬೆಳೆಯುವ ಗಿಡಗಳು ಆ ಏಕಾತಾನತೆಯ ನಡುವೆ ನಿಮಗೆ ಒಂದು ಬಗೆಯ ಮುದವನ್ನು ನೀಡುತ್ತವೆ. ನಿಮ್ಮ ಮನೆಯ ಮೂಲೆಯಲ್ಲಿರುವ ಒಂದು ಸ್ವಲ್ಪ ಗಿಡಗಳು, ನಿಮ್ಮ ಕಣ್ಣಿಗೆ-ಮನಸ್ಸಿಗೆ ಆಹ್ಲಾದಕತೆಯನ್ನು ನೀಡುತ್ತದೆ.

Tips to Care for House Plants

ಆದ್ದರಿಂದ ಒಂದು ವೇಳೆ ನೀವು ಮನೆಯಲ್ಲಿ ಗಿಡಗಳನ್ನು ಇರಿಸಿಕೊಂಡಲ್ಲಿ, ಅದನ್ನು ಆರೈಕೆ ಮಾಡಲು ಸಲಹೆಗಳಿಗಾಗಿ ನಿರೀಕ್ಷಿಸುತ್ತಿರುವಿರಿ ಎಂದು ಭಾವಿಸುತ್ತೇವೆ. ಎಷ್ಟಾದರು ಗಿಡಗಳಿಗು ಸಹ ಜೀವವಿದೆ ಅಲ್ಲವೇ? ಅದಕ್ಕಾಗಿ ಅವುಗಳ ಲಾಲನೆ ಪಾಲನೆ ಸಹ ಮುಖ್ಯವಾಗುತ್ತದೆ. ಬನ್ನಿ ಅವುಗಳ ಕುರಿತು ತಿಳಿದುಕೊಂಡು ಬರೋಣ. ಕೆಲವೊಂದು ಗಿಡಗಳಿಗೆ ಪ್ರಖರವಾದ ಬೆಳಕು ಬೇಕು, ಇನ್ನೂ ಕೆಲವು ಗಿಡಗಳಿಗೆ ನೆರಳು ಬೇಕು. ಏನೇ ಆದರು ಗಿಡಗಳನ್ನು ಸರಿಯಾಗಿ, ಜೀವಂತವಾಗಿ ಮತ್ತು ಹಸಿರಿನಿಂದ ಕೂಡಿರುವಂತೆ ಕಾಪಾಡುವುದು ಮುಖ್ಯ.

ಅದಕ್ಕಾಗಿ ಸರಿಯಾದ ಕ್ರಮದಲ್ಲಿ ಅವುಗಳನ್ನು ಕಾಪಾಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಇದಕ್ಕಾಗಿ ಗಿಡಗಳನ್ನು ಆರೈಕೆ ಮಾಡಲು ಹಲವು ಬಗೆಯ ಮಾರ್ಗಗಳು ಇರುತ್ತವೆ. ಈ ನಿಟ್ಟಿನಲ್ಲಿ ನಿಮಗೆ ಸಹಾಯಾ ಮಾಡಲು, ನಾವು ನಿಮಗೆ ಕೆಲವೊಂದು ಸಲಹೆಗಳನ್ನು ಒದಗಿಸುತ್ತಿದ್ದೇವೆ. ಮುಂದೆ ಓದಿ.

Tips to Care for House Plants

ನೀರು ಹಾಕುವ ಬಗೆಯನ್ನು ತಿಳಿದುಕೊಳ್ಳಿ

ಪ್ರತಿ ಗಿಡಕ್ಕೆ ಆಗತ್ಯ ಪ್ರಮಾಣದ ನೀರೇ ಆಹಾರ. ಆದರೆ ಇದನ್ನು ಕಡಿಮೆ ನೀಡಿದರು, ಹೆಚ್ಚು ನೀಡಿದರು ಅವುಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಗಿಡಗಳಿಗೆ ನೀರು ಹಾಕುವಾಗ ಸರಿಯಾದ ಪ್ರಮಾಣದಲ್ಲಿ ನೀರನ್ನು ಹಾಕಿ. ಯಾವುದೇ ಕಾರಣಕ್ಕು ಅಧಿಕ ಪ್ರಮಾಣದ ನೀರನ್ನು ಹಾಕಿ, ನಿಮ್ಮ ಗಿಡಗಳನ್ನು ಕೊಳೆಯುವಂತೆ ಮಾಡಬೇಡಿ. ಕೈ ತೋಟದ ಆರೈಕೆಯ 12 ಮಹಾನ್ ಸೂತ್ರಗಳು

ಆರ್ದ್ರತೆಯನ್ನು ಸೇರಿಸಿ

ನಿಮ್ಮ ಗಿಡಗಳಿಗೆ ಆರ್ದ್ರತೆ ಎಷ್ಟು ಬೇಕು ಎಂದು ತಿಳಿಯುವುದು ಹೇಗೆ? ಎಲೆಗಳ ಮೇಲೆ ನಿಮಗೆ ಕಂದು ಬಣ್ಣದ ಕಲೆಗಳು ಕಂಡು ಬಂದಲ್ಲಿ, ನಿಮ್ಮ ಗಿಡಕ್ಕೆ ಆರ್ದ್ರತೆ ಅತ್ಯಾವಶ್ಯಕ ಎಂದು ಭಾವಿಸಿ. ಒಣ ಹವೆಯು ಗಿಡಗಳಿಗೆ ಇಂತಹ ಕಲೆಯನ್ನು ಉಂಟು ಮಾಡುತ್ತದೆ. ಇದಕ್ಕಾಗಿ ಗಿಡಗಳನ್ನು ಸ್ವಲ್ಪ ಒತ್ತಾಗಿ ತಂದು ಇಡಿ.

ನಿಮ್ಮ ಗಿಡಗಳನ್ನು ಸ್ವಚ್ಛವಾಗಿಡಿ

ನೀವು ಕೊಳಕಾಗಿರಲು ಇಷ್ಟಪಡುತ್ತೀರಾ? ಹಾಗೆಯೇ ನಿಮ್ಮ ಗಿಡಗಳಿಗು ಕೊಳೆಯೆಂದರೆ ಆಗುವುದಿಲ್ಲ. ಇದಕ್ಕಿಂತ ಮಿಗಿಲಾಗಿ, ಧೂಳಿನ ಪದರವು ಸೂರ್ಯನ ಬೆಳಕನ್ನು ತಡೆಯುತ್ತದೆ. ಆದ್ದರಿಂದ ಅವುಗಳ ಮೇಲೆ ಒಂದೊಮ್ಮೆ ನೀವು ಧೂಳನ್ನು ನೋಡಿದರೆ ಉಗುರು ಬೆಚ್ಚಗಿನ ನೀರಿನ ಶವರ್ ನೀಡಿ. ಒಂದು ವೇಳೆ ನಿಮ್ಮ ಬಳಿ ಹೆಚ್ಚು ಗಿಡಗಳು ಇದ್ದಲ್ಲಿ, ಅದರ ಮೇಲೆ ಸ್ಪ್ರೇ ಬಾಟಲ್‌ನಲ್ಲಿ ಅವುಗಳ ಮೇಲೆ ನೀರು ಹಾಕಿ ಅಥವಾ ಸ್ಪಾಂಜ್ ಅಥವಾ ಮೃದುವಾದ ಬಟ್ಟೆಯಿಂದ ಒರೆಸಿ.

Tips to Care for House Plants

ಮಣ್ಣನ್ನು ಬದಲಿಸಿ

ಕೆಲವೊಮ್ಮೆ ನೀರು ಮತ್ತು ಬೆಳಕು ಸಮಸ್ಯೆಗಳನ್ನು ಪೂರ್ಣಗೊಳಿಸುವುದಿಲ್ಲ. ಅದಕ್ಕಾಗಿ ನೀವು ಮಣ್ಣಿನಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು. ಬಹುಶಃ ನಿಮ್ಮ ಕುಂಡದಲ್ಲಿರುವ ಮಣ್ಣಿನಲ್ಲಿರುವ ಪೋಷಕಾಂಶಗಳು ಹಳೆಯದಾಗಿ, ಖಾಲಿಯಾಗಿರಬಹುದು. ಆದ್ದರಿಂದ ಮಣ್ನನ್ನು ಬದಲಿಸಿ. ಕಾಲ ಕಾಲಕ್ಕೆ ಮಣ್ಣನ್ನು ಬದಲಿಸುವುದರಿಂದ ಗಿಡಗಳಿಗೆ ಪೋಷಕಾಂಶಗಳನ್ನು ಒದಗಿಸಬಹುದು.

ಕುಂಡವನ್ನು ಬದಲಿಸಿ

ಬಹುಶಃ ನೀವು ನರ್ಸರಿಗಳಿಂದ ಗಿಡಗಳನ್ನು ಕೊಂಡುಕೊಂಡಿರುತ್ತೀರಿ. ಅವರು ಅವುಗಳನ್ನು ಸಣ್ಣ ಕುಂಡಗಳಲ್ಲಿ ಮಾಡಿರುತ್ತಾರೆ. ಗಿಡಗಳ ಗಾತ್ರಕ್ಕೆ ತಕ್ಕಂತೆ ಕುಂಡಗಳನ್ನು ಬದಲಿಸಿ. ಇದರಿಂದ ನಿಮ್ಮ ಗಿಡಗಳಿಗೆ ಸ್ಥಳಾವಕಾಶದ ಜೊತೆಗೆ ಆರೋಗ್ಯವು ಸಹ ಒದಗುತ್ತದೆ.

Tips to Care for House Plants

ಕೊಂಬೆಗಳನ್ನು ಕತ್ತರಿಸಿ

ಒಂದು ವೇಳೆ ನಿಮ್ಮ ಗಿಡಗಳಿಗೆ ಉತ್ತಮ ಬೆಳವಣಿಗೆ ಬೇಕಾದರೆ, ಅದರ ಕೊಂಬೆಗಳನು ಕತ್ತರಿಸಿ. ಹೆಚ್ಚಿನ ಕೊಂಬೆಗಳನ್ನು ಕತ್ತರಿಸುವುದರಿಂದ ಅವುಗಳಿಗೆ ಒಂದು ಉತ್ತಮ ಆಕಾರ ದೊರೆಯುತ್ತದೆ ಮತ್ತು ಅವುಗಳ ಆರೋಗ್ಯವು ಸಹ ದೊರೆಯುತ್ತದೆ.

English summary

Tips to Care for House Plants

The urban grayness makes you feel monotonous and melancholic. So a little lively green corner in your house soothes your eyes, refresh your mind and cheer you up for the next. Therefore, if you keep house plants in your room, you need to know about the tips to care for house plants
Story first published: Friday, April 3, 2015, 17:13 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X