For Quick Alerts
ALLOW NOTIFICATIONS  
For Daily Alerts

ಆರೋಗ್ಯಕಾರಿ ತರಕಾರಿಗಳನ್ನು ಕೈತೋಟದಲ್ಲೇ ಬೆಳೆಸಬಹುದಲ್ಲವೇ?

|

ಮನೆಯ ಕೈತೋಟದಲ್ಲೇ ಚಿಕ್ಕ ಪುಟ್ಟ ತರಕಾರಿ ಗಿಡಗಳನ್ನು ಬೆಳೆದರೆ ತೋಟವೂ ಸುಂದರವಾಗಿರುತ್ತೆ, ತಿಂದರೆ ಆರೋಗ್ಯವೂ ಚೆನ್ನಾಗಿರುತ್ತೆ. ಗಗನದೆತ್ತರಕ್ಕೆ ಏರಿರುವ ತರಕಾರಿ ಬೆಲೆ ನೋಡಿದರೆ ತಮ್ಮ ಪುಟ್ಟ ತೋಟದಲ್ಲೇ ತರಕಾರಿ ಬೆಳೆಯುವ ಮನಸ್ಸನ್ನು ಎಷ್ಟೋ ಮಂದಿ ಮಾಡಿರುತ್ತಾರೆ. ಆದರೆ ಹೇಗೆ ಬೆಳೆಯಬೇಕು ಎಂಬುದರ ಬಗ್ಗೆ ಮಾಹಿತಿ ಇರೋದಿಲ್ಲ. ಬನ್ನಿ ನಿಮ್ಮ ಕೈ ತೋಟದಲ್ಲಿ ಸುಲಭವಾಗಿ ಬೆಳೆಸಬಹುದಾದ ತರಕಾರಿಗಳನ್ನು ಪರಿಚಯಿಸಿದ್ದೇವೆ ನೋಡೋಣ ಬನ್ನಿ........

ಟೊಮೇಟೊ ಗಿಡವನ್ನು ಬೆಳೆಸಲು

Easiest Vegetables to Grow in your Garden

ಸಾಮಾನ್ಯವಾಗಿ ಟೊಮೇಟೊ ಗಿಡಕ್ಕೆ ಬೆಳೆಗೆ ತುಸು ಹೆಚ್ಚಾಗಿಯೇ ಸೂರ್ಯನ ಬೆಳಕು ಅಗತ್ಯ. ಚಳಿಗಾಲದಲ್ಲಿ ಸೂರ್ಯನ ಬೆಳಕು ಟೊಮೇಟೊಗೆ ಸಾಕಾಗುವುದಿಲ್ಲ ಹಾಗಾಗಿ ಕನಿಷ್ಠ ಪ್ರಾರಂಭಿಕ ಹಂತದಲ್ಲಿ ಬೆಳಕು ಸಾಕಷ್ಟು ಅಗತ್ಯವಿದೆ. ಈ ಸಮಯದಲ್ಲಿ ನೀವು ಪ್ರತಿ ದಿನ 10-12 ಬಾರಿ ಸಸಿಗಳಿಗೆ ಕೃತಕ ಬೆಳಕನ್ನು ನೀಡಬಹುದು. ಸಾಕಷ್ಟು ಬೆಳಕಿನ ಪ್ರಮಾಣ ಈ ಸಸ್ಯದ ಮೇಲೆ ಬಿದ್ದರೆ ಇದರ ಬೆಳವಣಿಗೆ ಹೆಚ್ಚುತ್ತದೆ. ಸಸ್ಯ, ಸಸಿ ಹಂತದಿಂದ ಬೆಳೆಯುತ್ತಿದ್ದಂತೆ ಒಮ್ಮೆ ಸೂರ್ಯನ ಉತ್ತಮ ಬೆಳಕು ಈ ಸಸಿಯ ಮೇಲೆ ಬೀಳುವಂತೆ ಮನೆಯ ವರಾಂಡಕ್ಕೆ ಸ್ಥಳಾಂತರಿಸಬೇಕು. ಬೇವಿನ ಎಲೆಯ 7 ಹೂದೋಟ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳಿ!
ಮುನ್ನೆಚ್ಚರಿಕೆ ಕ್ರಮಗಳು:
*ತುಂಬಾ ಬೀಜಗಳು ಒಂದೆಡೆಯೇ ಇರುವಂತೆ ಹಾಕಬೇಡಿ.
*ಜಾಗದ ಕೊರತೆಯಿಂದ ಚಿಗುರೊಡೆಯದೆ ಇರಬಹುದು.
* 4-5 ಮಿ.ಮೀ ಒಳಗೆ ಮಾತ್ರ ಬೀಜಗಳನ್ನು ಹಾಕಬೇಕು. ತುಂಬಾ ಆಳದಲ್ಲಿದ್ದರೆ ಅದು ಮೊಳಕೆ ಒಡೆಯುವುದಿಲ್ಲ.
* ಬೀಜ ಹಾಕಿದ ನಂತರ ತುಂಬಾ ನೀರನ್ನು ಸುರಿಯಬಾರದು. ಚಿಗುರೊಡೆದ ನಂತರವೂ ಕೆಲ ದಿನಗಳ ಕಾಲ ಸ್ವಲ್ಪ ನೀರು ಮಾತ್ರ ಸಿಂಪಡಿಸಬೇಕು.

ಕ್ಯಾರೆಟ್ ತೋಟಗಾರಿಕೆ ಸಲಹೆಗಳು


ಕ್ಯಾರೆಟ್ ಬೆಳೆಸುವ ಮೊದಲು ಮಾಡಬೇಕಾದ ಸಿದ್ಧತೆಗಳ ಬಗ್ಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ, ಮೊದಲು ನಿಮ್ಮ ಬೆಳೆಯನ್ನು ಬೆಳೆಸಲು ಹೊರಟಿರುವ ಪ್ರದೇಶ ಉತ್ತಮ ಇಳುವರಿಯನ್ನು ಕೊಡುವಂತಿರಬೇಕು. ಕಲ್ಲುಗಳಿಲ್ಲದ ನುಣುಪಾದ ಮಣ್ಣಿನ ಪ್ರದೇಶವು ಕ್ಯಾರೆಟ್ ಬೆಳವಣಿಗೆಗೆ ಅನುಕೂಲವಾಗಿರುತ್ತದೆ.
ಮುನ್ನೆಚ್ಚರಿಕೆ ಕ್ರಮಗಳು:

*ಮಣ್ಣು ಸಡಿಲವಾಗಿದ್ದರೆ ಕ್ಯಾರೆಟ್ ತೋಟಗಾರಿಕೆಗೆ ಸಹಾಯಕವಾಗುತ್ತದೆ. ಇದು ಪರಿಪೂರ್ಣ ಕ್ಯಾರೆಟ್ ಬೆಳೆಯಲು ಸಹಾಯ ಮಾಡುತ್ತದೆ. ಬೇರುಗಳು ಸಲೀಸಾಗಿ ಮಣ್ಣಿನೊಳಗೆ ತಳವೂರಲು ಮಣ್ಣು ಗಟ್ಟಿಯಾಗಿದ್ದರೆ ಸಾಧ್ಯವಿಲ್ಲ. ಆದ್ದರಿಂದ ಸಡಿಲವಾದ ಮಣ್ಣಿರುವ ಸ್ಥಳವನ್ನು ಕ್ಯಾರೆಟ್ ಬೆಳೆಗೆ ಆಯ್ದುಕೊಳ್ಳಿ.
*ಆಳವಾದ ಸಾಲುಗಳಲ್ಲಿ 12-20mm ಬೀಜಗಳನ್ನು ಬಿತ್ತಿದರೆ ಅವು ತ್ವರಿತವಾಗಿ ಬೆಳೆಯಲು ಸಹಾಯಕವಾಗುತ್ತದೆ.
*ನೀರನ್ನು ನಿಯಮಿತವಾಗಿ ಕೊಡುವುದು ಕ್ಯಾರೆಟ್ ಬೆಳವಣಿಗೆಗೆ ಉತ್ತಮ.

ಪಪ್ಪಾಯಿಯ ಗಿಡವನ್ನು ಬೆಳೆಸಲು


ಪಪ್ಪಾಯಿಯ ಸಸಿಯನ್ನು ನೆಡುವ ಮೊದಲ ಹೆಜ್ಜೆಯೆ೦ದರೆ ಹವಾಗುಣ, ಮಣ್ಣಿನ ಗುಣ, ಹಾಗೂ ನೀರಿನ ಲಭ್ಯತೆ ಇವುಗಳನ್ನು ಪರಿಶೀಲಿಸಿಕೊಳ್ಳುವುದು. ಪಪ್ಪಾಯಿ ಹಣ್ಣುಗಳ ಉತ್ತಮ ಇಳುವರಿಯನ್ನು ಪಡೆಯುವ೦ತಾಗಲು, ಹವಾಮಾನವು ಬೆಚ್ಚಗಿದ್ದು, ಧಾರಾಳವಾಗಿ ಸೂರ್ಯನ ಬೆಳಕು, ಸಾಕಷ್ಟು ನೀರಿನ ಲಭ್ಯತೆ, ಹಾಗೂ ಫಲವತ್ತಾದ ಮಣ್ಣಿನ ಅವಶ್ಯಕತೆ ಇರುತ್ತದೆ. ಸಾವಯವ ಅ೦ಶಗಳು ಅಥವಾ ಧಾತುಗಳು ಮತ್ತು ಪೋಷಕಾ೦ಶಗಳು ಸಮೃದ್ಧವಾಗಿರುವ ಮಣ್ಣಿನಲ್ಲಿ ಪಪ್ಪಾಯಿಗಳು ಹುಲುಸಾಗಿ ಬೆಳೆಯುತ್ತವೆ.
ಮುನ್ನೆಚ್ಚರಿಕೆ ಕ್ರಮಗಳು:

*ಪಪ್ಪಾಯಿಯ ಗಿಡವನ್ನು ಮಣ್ಣಿನ ಮಡಕೆಯಲ್ಲಿ ನೆಡುವುದು ಸೂಕ್ತವಲ್ಲ. ಏಕೆ೦ದರೆ, ಮಡಕೆಯು ಅದರ ಬೇರುಗಳ ಬೆಳವಣಿಗೆಗೆ ಅಡಚಣೆಯನ್ನು೦ಟು ಮಾಡುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಪಾತಿಗಳನ್ನು ಅಣಿಗೊಳಿಸಿ ಅವುಗಳಲ್ಲಿ ಬೀಜಗಳನ್ನು ಎರಚಬೇಕು. ಅವು ಮೊಳಕೆಯೊಡೆಯಲು ಆರ೦ಭಿಸಿದ ನ೦ತರ ಅವು ನೆಡಲ್ಪಡಲು ಸಿದ್ಧವಾಗುತ್ತವೆ. ನೆಟ್ಟ ನ೦ತರ ಅವು ಬೇಗನೇ ಸಾವರಿಸಿಕೊಳ್ಳುವ೦ತಾಗಲು, ಅವುಗಳಿಗೆ ನಿಯಮಿತವಾಗಿ ನೀರುಣಿಸುತ್ತಿರಬೇಕು.
*ಅತಿಯಾಗಿ ನೀರುಣಿಸುವುದು, ತ೦ಪಾದ ಹವಾಗುಣ, ಮತ್ತು ಪ್ರಬಲವಾದ ಮಾರುತಗಳು ಪಪ್ಪಾಯಿಯ ಬೆಳವಣಿಗೆಯನ್ನು ಹಾಳುಗೆಡವಬಲ್ಲವು. ಆದಷ್ಟು ಹೊಸ ಗಿಡಗಳನ್ನೇ ನೆಡಬೇಕು. ಏಕೆ೦ದರೆ, ಸಣ್ಣ ವಯಸ್ಸಿನ ಗಿಡಗಳು ಕ್ರಿಮಿಗಳು ಹಾಗೂ ವೈರಾಣುಗಳ ಬಾಧೆಗೆ ತುತ್ತಾಗುವುದು ಕಡಿಮೆ. ವೈರಾಣುಗಳಿ೦ದ ಬಾಧಿತವಾದ ಸಸಿಗಳನ್ನು ಕೂಡಲೇ ತೆಗೆದುಬಿಡಬೇಕು
English summary

Easiest Vegetables to Grow in your Garden

If you too want to grow your own food then start with these two easy to grow vegetables tomoto, carrot and pappaya with the help of these gardening tips. Take a look
Story first published: Tuesday, February 17, 2015, 17:05 [IST]
X
Desktop Bottom Promotion