Latest Updates
-
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ?
ಈ ಕೆಂಪು ಹೂಗಳು ನಿಮ್ಮ ಗಾರ್ಡನ್ ನಲ್ಲಿ ಇದೆಯೇ?
ಸುಂದರವಾದ ಗಾರ್ಡನ್ ಮನೆಯ ಸೊಗನ್ನು ಹೆಚ್ಚಿಸುವುದು ಮಾತ್ರವಲ್ಲ, ಬಣ್ಣ-ಬಣ್ಣದ ಹೂಗಳನ್ನು ನೋಡುತ್ತಿದ್ದರೆ ಒತ್ತಡ, ಆತಂಕಗಳನ್ನು ಮರೆತು ಹೂವಿನ ಚೆಲುವನ್ನು ನೋಡುತ್ತಾ ಮೈ ಮರೆಯುತ್ತೇವೆ. ಗಾರ್ಡನ್ ಮಾಡುವುದು ಹೆಚ್ಚಿನವರ ಹವ್ಯಾಸವಾಗಿರುತ್ತದೆ. ಹವ್ಯಾಸದ ಜೊತೆ ಕಲೆ ಅಥವಾ ಸ್ಕಿಲ್ ನಮ್ಮ ಜೊತೆ ಇದ್ದರೆ ಚಿಕ್ಕ ಗಾರ್ಡನ್ ಆದರೂ ಕೂಡ ತುಂಬಾ ಸುಂದರವಾಗಿ ಕಾಣುವಂತೆ ಮಾಡಬಹುದು.
ಗಾರ್ಡನ್ ನಲ್ಲಿ ಅನೇಕ ಬಣ್ಣದ ಹೂಗಳಿದ್ದರೆ ಚೆನ್ನ, ಆದರೆ ಒಂದೇ ಬಣ್ಣದಲ್ಲಿ ಅನೇಕ ಬಗೆಯ ಹೂಗಳಿದ್ದರೆ ನೋಡಲು ಮತ್ತಷ್ಟು ಆಕರ್ಷಕವಲ್ಲವೇ? ಅದರಲ್ಲೂ ಕೆಂಪು ಬಣ್ಣದ ಹೂಗಳಂತೂ ತುಂಬಾ ಗಮನವನ್ನು ಸೆಳೆಯುತ್ತದೆ. ಇಲ್ಲಿ ನಾವು ಸುಲಭದಲ್ಲಿ ಬೆಳೆಯಬಹುದಾದ ವಿವಿಧ ಬಗೆಯ ಕೆಂಪು ಬಣ್ಣದ ಹೂಗಳ ಬಗ್ಗೆ ಹೇಳಿದ್ದೇವೆ ನೋಡಿ:

ರೆಡ್ ಟ್ಯೂಲಿಪ್
ಇದನ್ನು ನೆಟ್ಟು ಬೆಳೆಸುವುದು ಸುಲಭ. ತುಂಬಾ ಆರೈಕೆ ಮಾಡುವ ಅಗತ್ಯವಿಲ್ಲ. ನೀರು ಬೆಳಕು ಚೆನ್ನಾಗಿ ಸಿಕ್ಕಿದರೆ ಸಾಕು, ಸೊಗಸಾಗಿ ಬೆಳೆಯುತ್ತದೆ ಈ ಗಿಡ.

ಗ್ಲೋರಿಯಾ ಲಿಲ್ಲಿ
ಇದು ಅಪರೂಪದ ಹೂ ಆಗಿದ್ದು ಸಿಕ್ಕಿದ್ದರೆ ನಿಮ್ಮ ಗಾರ್ಡನ್ ನಲ್ಲಿ ನೆಡಿ. ಈ ಹೂ ಬೇಸಿಗೆಯಲ್ಲಿ ಬಿಡುತ್ತದೆ. ನೀರು ಸ್ವಲ್ಪ ಹೆಚ್ಚಾಗಿಯೇ ಬೇಕು, ಈ ಗಿಡದ ಆರೈಕೆಗೆ.

ಡೈಲಿಯಾ
ಡೈಲಿಯಾ ಗಿಡದ ಗಟ್ಟೆಯನ್ನು ತಂದು ನೆಟ್ಟರೆ ಸಾಕು ಪ್ರತೀವರ್ಷ ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ಹೂ ಬಿಡುತ್ತದೆ. ನಂತರ ಗಿಡ ಮಾಯವಾಗುವುದು, ನಂತರ ಮಾರನೆಯ ವರ್ಷ ಅದೇ ಜಾಗದಲ್ಲಿ ಗಿಡ ಮೊಳೆತು ಡೈಲಿಯಾ ಹೂ ಬಿಡಲಾರಂಭಿಸುತ್ತದೆ. ಇದಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿಲ್ಲ.

ಚಿಟ್ಟೆ ರೋಸ್
ಗೊಂಚಲು-ಗೊಂಚಲುವಾಗಿ ಬೆಳೆಯುವ ಚಿಟ್ಟೆ ರೋಸ್ ನೆಟ್ಟರೆ ವರ್ಷ ಪೂರ್ತಿ ಗಿಡದಲ್ಲಿ ಹೂವಿರುತ್ತದೆ.

ಕೆಂಪು ಗುಲಾಬಿ
ಪ್ರೇಮದ ಸಂಕೇತವಾದ ಕೆಂಪು ಗುಲಾಬಿ ಹೂವನ್ನು ಕೂಡ ಸುಲಭವಾಗಿ ಬೆಳೆಸಬಹುದು, ಆದರೆ ಹೂ ಬಿಡುವ ಸಮಯದಲ್ಲಿ ಕ್ರಿಮಿಗಳು ಆಕ್ರಮಣ ಮಾಡದಿರಲು ಮದ್ದು ಸಿಂಪಡಿಸುವುದು ಒಳ್ಳೆಯದು.

ರೆಡ್ ಫ್ಲವರ್
ತುಂಬಾ ತಂಪಾದ ಪ್ರದೇಶದಲ್ಲೂ ಈ ಹೂ ಚೆನ್ನಾಗಿ ಬರುತ್ತದೆ. ಇದನ್ನು ಚಿಕ್ಕ ಹೂ ಕುಂಡದಲ್ಲೂ ಕೂಡ ಬೆಳೆಸಬಹುದು.

ಕಾರ್ನೇಷನ್
ಮಾರ್ಕೆಟ್ ನಲ್ಲಿ ಈ ಹೂವಿನ ಬೆಲೆ ದುಬಾರಿ. ಆಕರ್ಷಕವಾಗಿರುವ ಈ ಕಾರ್ನೇಷನ್ ಹೂಗಳು ಅನೇಕ ಬಣ್ಣದಲ್ಲಿ ದೊರೆಯುವುದಾದರೂ ಕೆಂಪು ಬಣ್ಣದ ಕಾರ್ನೇಷನ್ ಅತ್ಯಾಕರ್ಷಕವಾಗಿರುತ್ತದೆ.

ರೆಡ್ ಪೋಪ್ಪೀಸ್
ಈ ಹೂವನ್ನು ಹೂ ಕುಂಡದಲ್ಲಿ ನೆಡಬಾರದು, ನೆಲದಲ್ಲಿ ನೆಟ್ಟರೆ ಅನೇಕ ಗಿಡಗಳು ಹುಟ್ಟಿಕೊಂಡು ಸೊಗಸಾಗಿ ಬೆಳೆಯುತ್ತದೆ.



Click it and Unblock the Notifications
