Latest Updates
-
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು?
ದಸರಾ ವಿಶೇಷ-ಗೊಂಬೆ ಹಬ್ಬದ ಮೆರುಗನ್ನು ಕಣ್ತುಂಬಿಕೊಳ್ಳಿ....
ಅಕ್ಟೋಬರ್ ಮಾಸ ಬಂದಿತೆಂದರೆ ಸಾಕು ಹಬ್ಬಗಳ ಸಾಲೇ ಆರಂಭವಾಗುತ್ತದೆ. ದೀಪಾವಳಿಗೂ ಮುನ್ನವೇ ದಸರಾ ಹಬ್ಬದ ಸಂಭ್ರಮ ದೇಶಾದ್ಯಂತ ಸಂಭ್ರಮದಿಂದಲೇ ಆರಂಭಗೊಳ್ಳುತ್ತಿದ್ದು ಒಂಭತ್ತು ದಿನಗಳ ಕಾಲ ದುರ್ಗೆಯ ಆರಾಧನೆಯೇ ಇದರಲ್ಲಿ ಮುಖ್ಯವಾಗಿರುತ್ತದೆ. ಕೆಟ್ಟದ್ದರ ಮೇಲೆ ಒಳ್ಳೆಯದ್ದರ ವಿಜಯ ಎಂಬುದರ ಸಂಕೇತವಾಗಿ ವಿಜಯ ದಶಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದೇಶದಲ್ಲೇ ಪ್ರಮುಖ ಹಬ್ಬವಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ನಾಡ ಹಬ್ಬ ದಸರಾಕ್ಕೆ ಗೊಂಬೆಗಳ ತೇರು....

ಕರ್ನಾಟಕದಲ್ಲಿ ದಸರಾ ಸಂಭ್ರಮಕ್ಕೆ ಹೆಚ್ಚಿನ ಮೆರುಗನ್ನು ನೀಡುವುದು ಗೊಂಬೆ ಪ್ರದರ್ಶನವಾಗಿದೆ. ಆಚರಣೆಗೆ ಅನುಸಾರವಾಗಿ ಗೊಂಬೆಗಳನ್ನು ಮನೆಗಳಲ್ಲಿ ವಿದ್ಯುಕ್ತವಾಗಿ ಕೂರಿಸುತ್ತಾರೆ. ರಾಜ, ರಾಣಿ, ದೇವತೆಗಳು, ಪ್ರಾಣಿಗಳು, ಪಕ್ಷಿಗಳು ಹೀಗೆ ಪ್ರಕೃತಿಯ ಒಂದೊಂದು ವಿಸ್ಮಯವನ್ನು ಗೊಂಬೆಯ ರೂಪದಲ್ಲಿ ಸಾಲಾಗಿ ಜೋಡಿಸುತ್ತಾರೆ. ಇಂದಿನ ಲೇಖನದಲ್ಲಿ ಮನೆಯಲ್ಲಿ ಜೋಡಿಸುವ ಗೊಂಬೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ.....
ಹಬ್ಬದ ಗೊಂಬೆಗಳು
ಸಾಂಪ್ರದಾಯಿಕವಾಗಿ, ಹಬ್ಬದ ಗೊಂಬೆಗಳು ಅಥವಾ ದಸರಾ ಗೊಂಬೆಗಳನ್ನು ಮರದಿಂದ ತಯಾರಿಸಲಾಗುತ್ತದೆ ಅಂತೆಯೇ ಅವುಗಳನ್ನು ಬಣ್ಣದ ಕಾಗದಗಳಿಂದ ಮತ್ತು ರೇಷ್ಮೆಯಿಂದ ಅಲಂಕರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ರಾಜ್ಯ ಬಣ್ಣಗಳಿಂದ ಕಂಗೊಳಿಸುವಂತೆ ಕಾಣುತ್ತದೆ ಮತ್ತು ಆಕರ್ಷಕ ಮಾದರಿಯಲ್ಲಿ ಸಿಂಗರಿಸಲಾದ ದೇವತೆಗಳ ಗೊಂಬೆಗಳನ್ನು ನಿಮಗೆ ಕಾಣಬಹುದಾಗಿದೆ.
ಪಟ್ಟದ ಬೊಂಬೆ
ಕರ್ನಾಟಕದಲ್ಲಿ ಹಬ್ಬದ ಸಮಯದಲ್ಲಿ ಮುಖ್ಯವಾಗಿ ಈ ಬೊಂಬೆಯನ್ನು ಇರಿಸಲಾಗುತ್ತದೆ. ಪಟ್ಟದ ಬೊಂಬೆ ಎಂದರೆ ಜೋಡಿ ಬೊಂಬೆಗಳು. ಗಂಡ ಹೆಂಡತಿಯ ಪ್ರತೀಕವಾಗಿ ಇವನ್ನು ಇರಿಸಲಾಗುತ್ತದೆ. ಹೊಸ ವಧುವು ತನ್ನ ತವರು ಮನೆಯಿಂದ ಪಟ್ಟದ ಬೊಂಬೆಯನ್ನು ತರುತ್ತಾಳೆ.
ಸಿದ್ಧತೆ ಹೇಗಿರುತ್ತದೆ
ತಮ್ಮ ಆಚರಣೆ ಮತ್ತು ಸಂಪ್ರದಾಯಕ್ಕೆ ಅನುಸಾರವಾಗಿ ದಸರಾ ಹಬ್ಬದಂದು ಗೊಂಬೆಗಳನ್ನು ಇರಿಸಲಾಗುತ್ತದೆ. ಮೆಟ್ಟಿಲುಗಳು ಮತ್ತು ಶ್ರೇಣಿ ಮಾದರಿಯಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ. ಒಂಬತ್ತು ಸಾಲು ಅಥವಾ ಶ್ರೇಣಿಗಳನ್ನು ನಿರ್ಮಿಸಿ ಅಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ.
ಒಂಬತ್ತು ಮೆಟ್ಟಿಲು ಅಥವಾ ಶ್ರೇಣಿ
ದಸರಾ ಆಚರಣೆಯಲ್ಲಿ ಗೊಂಬೆಗಳನ್ನು ಕೂರಿಸಲು ಒಂಭತ್ತು ಶ್ರೇಣಿ ಅಥವಾ ಮೆಟ್ಟಿಲುಗಳನ್ನು ನಿರ್ಮಿಸುತ್ತಾರೆ. ಮೊದಲ ಮೂರು ಮೆಟ್ಟಿಲುಗಳನ್ನು ದೇವತೆಗಳಿಗಾಗಿ ಮೀಸಲಾಗಿರಿಸಲಾಗಿರುತ್ತದೆ. ಅಂತೆಯೇ 4 ರಿಂದ 6 ಸಾಲುಗಳನ್ನು ರಾಜ, ರಾಣಿ, ಅರೆ ದೇವತೆ, ಸಾಧು ಸಂತರಿಗಾಗಿ ಮೀಸಲಾಗಿರಿಸಲಾಗುತ್ತದೆ. ಏಳನೆಯ ಮೆಟ್ಟಿಲನ್ನು ಹಿಂದೂ ಸಂಪ್ರದಾಯ ಮತ್ತು ಆಚರಣೆಗಾಗಿ ಇರಿಸಲಾಗಿರುತ್ತದೆ. ಎಂಟನೆಯ ಮೆಟ್ಟಿಲನ್ನು ಮನೆಗಳು, ಅಂಗಡಿಗಳು, ಪಾರ್ಕ್ ಮತ್ತು ಇತರ ಅಲಂಕಾರಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಒಂಭತ್ತನೆಯ ಹಂತವು ಜೀವಿಸಿರುವ ಅಂಶಗಳಿಗಾಗಿ ಇರಿಸಲಾಗಿರುತ್ತದೆ.
ಥೀಮ್
ದಸರಾ ಸಂಭ್ರಮದಲ್ಲಿ ಗೊಂಬೆಗಳನ್ನು ಇರಿಸುವಾಗ ಜನರು ಹಲವಾರು ಆಚರಣೆಗಳನ್ನು ಪಾಲಿಸುತ್ತಾರೆ. ಕೆಲವಾರು ಜನರು ಹಳೆಯ ಸಂಪ್ರದಾಯವನ್ನು ಪಾಲಿಸಿದರೆ ಇನ್ನು ಹಲವರು ಹೆಚ್ಚಿನ ಗೊಂಬೆಗಳನ್ನು ಬಳಸಿಕೊಳ್ಳುತ್ತಾರೆ. ರಾಮಾಯಣ ಮತ್ತು ಮಹಾಭಾರತದ ಗೊಂಬೆಗಳನ್ನು ಬಳಸಿಕೊಳ್ಳುತ್ತಾರೆ. ಮೈಸೂರಿನ ಇತಿಹಾಸ, ಭೂಮಿಯನ್ನು ಉಳಿಸಿ, ನೀರು ಉಳಿಸಿ ಅಂತೆಯೇ ವಾಯು ಮಾಲಿನ್ಯ ನಿಲ್ಲಿಸಿ ಮೊದಲಾದ ಥೀಮ್‌ಗಳನ್ನು ಬಳಸಿಕೊಂಡು ಜನರು ಗೊಂಬೆಗಳನ್ನು ಕೂರಿಸುತ್ತಾರೆ.
ಸಂಗ್ರಹಣೆಗೆ ಹೆಚ್ಚಿನ ಗೊಂಬೆಗಳನ್ನು ಸೇರಿಸಿಕೊಳ್ಳಿ
ಪ್ರತೀ ವರ್ಷವೂ ಸಂಗ್ರಹಣೆಗೆ ಹೊಸ ಹೊಸ ಗೊಂಬೆಗಳನ್ನು ಸೇರಿಸಲಾಗುತ್ತದೆ. ಕುಟುಂಬದ ನಂತರದ ತಲೆಮಾರಿಗೆ ಗೊಂಬೆಗಳ ರವಾನೆಯಾಗುವುದು ವಾಡಿಕೆ. ಕರ್ನಾಟಕದಲ್ಲಿಯೇ, ನೂರು ವರ್ಷಗಳಿಗಿಂತಲೂ ಹಳೆಯದಾಗಿರುವ ಗೊಂಬೆಗಳನ್ನು ಹೊಂದಿರುವ ಕುಟುಂಬಗಳಿವೆ. ನವರಾತ್ರಿ ವಿಶೇಷ: ನವದುರ್ಗೆಯರಿಗೆ 'ನವ ನೈವೇದ್ಯ'



Click it and Unblock the Notifications


