For Quick Alerts
ALLOW NOTIFICATIONS  
For Daily Alerts

ಪಕ್ಕದ ಮನೆಯವರಿಗೆ ಕೊರೊನಾ ಬಂದ್ರೆ ನೀವೇನು ಮಾಡಬೇಕು?

|

ಡಿಸೆಂಬರ್ ಕೊನೆಯಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿದ ಕೊರೊನವೈರಸ್ ಎಂಬ ಭೀಕರ ಕಾಯಿಲೆ ಇದೀಗ ವಿಶ್ವವ್ಯಾಪಿ ಆಗಿದ್ದು ಸುಮಾರು 23 ಮಿಲಿಯನ್ ಜನರು ಕೊರೊನಾವೈರಸ್‌ಗೆ ತುತ್ತಾಗಿದ್ದಾರೆ. ಈ ವೈರಸ್‌ ಕಾಟದಿಂದ ಯಾವಾಗ ಮುಕ್ತಿ ಎಂದು ಇಡೀ ವಿಶ್ವವೇ ಎದುರು ನೋಡುತ್ತಿದೆ, ಇನ್ನೇನು ಸೆಪ್ಟೆಂಬರ್‌ನಲ್ಲಿ ಕೊರೊನಾವೈರಸ್‌ಗೆ ಚುಚ್ಚುಮದ್ದು ಬರಲಿದೆ ಎಂದು ಕೂಡ ಹೇಳಲಾಗುತ್ತಿದೆ.

ಆದರೆ ನಾವೆಲ್ಲಾ ಪ್ರತಿದಿನ ಕೊರೊನಾ ಆತಂಕದಲ್ಲಿ ದಿನ ದೂಡಬೇಕಾಗಿದೆ. ಮೊದಲಿನಂತೆ ಹೊರಗಡೆ ಇಷ್ಟಬಂದಂತೆ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಅಗ್ಯತ ವಸ್ತುಗಳಿಗಷ್ಟೇ ಜನರು ಮನೆಯಿಂದ ಹೊರಬರಬೇಕಾಗಿದೆ. ಮದುವೆ, ಫಂಕ್ಷನ್‌ಗಳೆಲ್ಲಾ ನಡೆಯುತ್ತಿದ್ದರೂ ಮೊದಲಿನ ಸಂಭ್ರಮವಿಲ್ಲ, ಯಾರನ್ನೂ ಮುಟ್ಟಿ ಮಾತನಾಡಿಸಲು ಭಯ, ಅಷ್ಟೇ ಏಕೆ ನಮಗೆ ಬೇರೆ ಯಾವುದೋ ಆರೋಗ್ಯ ಸಮಸ್ಯೆ ಕಾಡಿದಾಗ ವೈದ್ಯರನ್ನು ಭೇಟಿಯಾಗಲೂ ಹಿಂದೇಟು ಹಾಕುತ್ತೇವೆ, ನಮ್ಮನ್ನು ಪರೀಕ್ಷಿಸಿದ ವೈದ್ಯರಿಗೆ ಕೊರೊನಾ ಇದ್ದರೆ ಎಂಬ ಭಯ.... ಇನ್ನು ಪಕ್ಕದ ಮನೆಯವರ ಜೊತೆ ಕೂತು ಹರಡುವುದೆಲ್ಲಾ ಬಹುತೇಕ ನಿಂತೇ ಹೋಗಿದೆ ಎಂದು ಹೇಳಬಹುದು. ನಮಗೆ ಎಷ್ಟೇ ಆಪ್ತರಾದರೂ ದೂರದಿಂದಲೇ ಒಂದು ಹಾಯ್‌ ಹೇಳಿ ಸುಮ್ಮನಾಗುತ್ತಿದ್ದೇವೆ.

ಹೀಗಿರುವಾಗ ಪಕ್ಕದ ಮನೆಯಲ್ಲಿ ಯಾರಿಗಾದರೂ ಕೊರೊನಾ ಬಂದರೆ? ನೀವು ಭಯಪಡಬೇಡಿ, ಕೊರೊನಾವೈರಸ್‌ ಹರಡದಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹಾಗೂ ಇಲ್ಲಿ ಹೇಳಿರುವ ಮುನ್ನೆಚ್ಚರಿಕೆಕ್ರಮಗಳನ್ನು ಪಾಲಿಸಿ:

ಮಾಸ್ಕ್ ಹಾಕದೆ ಮನೆಯಿಂದ ಹೊರಗಡೆ ಹೋಗಬೇಡಿ:

ಮಾಸ್ಕ್ ಹಾಕದೆ ಮನೆಯಿಂದ ಹೊರಗಡೆ ಹೋಗಬೇಡಿ:

ನಗರ ಪ್ರದೇಶಗಳಲ್ಲಿ ಒಂದು ಮನೆಯಿಂದ ಮತ್ತೊಂದು ಮನೆಗೆ ಹೆಚ್ಚಿನ ಅಂತರವಿರಲ್ಲ, ಅಲ್ಲದೆ ಫ್ಲ್ಯಾಟ್‌ಗಳಲ್ಲಿ ವಾಸಿಸುವವರು ಒಂದೇ ಲಿಫ್ಟ್‌ ಕೂಡ ಬಳಸುತ್ತಿರುತ್ತಾರೆ. ಇತ್ತೀಚೆಗೆ ಬಂದ ವರದಿ ಪ್ರಕಾರ ಕೊರೊನಾವೈರಸ್‌ ಗಾಳಿಯಿಂದಲೂ ಹರಡುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಮನೆಯಿಂದ ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇನ್ನು ಸ್ಟೆಪ್‌ಗಳನ್ನು ಹತ್ತುವಾಗ ಸ್ಟೇರ್‌ಕೇಸ್‌ ಕೈಯಿಂದ ಮುಟ್ಟಬೇಡಿ.

ಸ್ಯಾನಿಟೈಸರ್ ಬಾಟಲಿ ಜೊತೆಗೆ ಇರಲಿ

ಸ್ಯಾನಿಟೈಸರ್ ಬಾಟಲಿ ಜೊತೆಗೆ ಇರಲಿ

ಮನೆಯಿಂದ ಹೊರಗಡೆ ಹೋಗುವಾಗ ಮುನ್ನ ಕೈಗೆ ಸ್ಯಾನಿಟೈಸರ್ ಹಚ್ಚಿ, ನಂತರ ಬಾಟಲಿ ಜೊತೆಗೆ ಕೊಂಡೊಯ್ಯಿರಿ. ಅಲ್ಲದೆ ಆಗಾಗ ಕೈಗೆ ಸ್ಯಾನಿಟೈಸರ್ ಹಚ್ಚಿ ತೊಳೆಯಿರಿ. ಮನೆಗೆ ಬಂದ ತಕ್ಷಣ ಕೈಗಳಿಗೆ ಸೋಪ್ ಹಚ್ಚಿ ತೊಳೆಯಿರಿ.

ಲಿಫ್ಟ್ ಬಳಸಬೇಡಿ

ಲಿಫ್ಟ್ ಬಳಸಬೇಡಿ

ಸಾಧ್ಯವಾದಷ್ಟು ಲಿಫ್ಟ್ ಬಳಸಲು ಹೋಗಬೇಡಿ. ಇನ್ನು 14ನೇ ಮಹಡಿ, 15ನೇ ಮಹಡಿಯಲ್ಲಿ ವಾಸಿಸುವುದಾದರೆ ಅಷ್ಟು ಮೆಟ್ಟಿಲು ಹತ್ತಿ, ಇಳಿಯುವುದು ಸುಲಭದ ಮಾತಲ್ಲ. ನೀವು ಲಿಫ್ಟ್ ಬಳಸುವುದಾದರೆ ಟಿಶ್ಯೂ ಒಂದು ಕೈಯಲ್ಲಿ ಇರಲಿ. ಲಿಫ್ಟ್ ಬಟನ್‌ ಕೈಯಿಂದ ನೇರವಾಗಿ ಮುಟ್ಟಬೇಡಿ, ಬದಲಿಗೆ ಟಿಶ್ಯೂ ಪೇಪರ್‌ ಬಳಸಿ ಮುಟ್ಟಿ, ನಂತರ ಲಿಫ್ಟ್‌ನಿಂದ ಹೊರಬಂದ ತಕ್ಷಣ ಆ ಪೇಪರ್‌ ಕಸದ ಬುಟ್ಟಿಗೆ ಹಾಕಿ ಕೈಗೆ ಸ್ಯಾನಿಟೈಸರ್ ಹಚ್ಚುವುದು ಅಥವಾ ಸೋಪ್ ಹಚ್ಚಿ ತೊಳೆಯುವುದು ಮಾಡಿ.

ಮನೆಯ ಬಾಗಿಲು, ಹೀಗೆ ಆಗಾಗ ಮುಟ್ಟುವ ಸ್ಥಳಗಳನ್ನು ಸ್ವಚ್ಛಗೊಳಿಸಿ

ಮನೆಯ ಬಾಗಿಲು, ಹೀಗೆ ಆಗಾಗ ಮುಟ್ಟುವ ಸ್ಥಳಗಳನ್ನು ಸ್ವಚ್ಛಗೊಳಿಸಿ

ಬಾಗಿಲಿನ ಹ್ಯಾಂಡಲ್, ಲೈಟ್ ಸ್ವಿಚ್‌, ರಿಮೂಟ್ ಹೀಗೆ ಮನೆ ಮಂದಿಯೆಲ್ಲಾ ಆಗಾಗ ಮುಟ್ಟುವ ಹಾಗೂ ಬಳಸುವ ವಸ್ತುಗಳನ್ನು ಪ್ರತಿದಿನ ಸ್ವಚ್ಛಗೊಳಿಸಿ.

ಚಪ್ಪಲಿಯನ್ನು ಮನೆಯ ಹೊರಗಡೆಯೇ ಬಿಡಿ

ಚಪ್ಪಲಿಯನ್ನು ಮನೆಯ ಹೊರಗಡೆಯೇ ಬಿಡಿ

ಹೊರಗಡೆ ಹಾಕಿಕೊಂಡು ಹೋದ ಚಪ್ಪಲಿಯನ್ನು ಹೊರಗೆಯೇ ಬಿಡಿ, ಮನೆಯೊಳಗೆ ಅದನ್ನು ತರಬೇಡಿ. ತೊಳೆಯಬಹುದಾದ ಚಪ್ಪಲಿಯಾದರೆ ತೊಳೆದು ಇಡಿ, ಇನ್ನು ಲೆದರ್‌ ಚಪ್ಪಲಿಯಾದರೆ ಚೆನ್ನಾಗಿ ಒರೆಸಿ ತೆಗೆದಿಡಿ.

ಆಗಾಗ ಮಾಸ್ಕ್‌ ಮುಟ್ಟುವುದು ಮಾಡಬೇಡಿ

ಆಗಾಗ ಮಾಸ್ಕ್‌ ಮುಟ್ಟುವುದು ಮಾಡಬೇಡಿ

ಹೆಚ್ಚಿನವರು ಮಾಸ್ಕ್ ಹಾಕಿಕೊಳ್ಳುತ್ತಾರೆ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದಿಲ್ಲ. ಆಗಾಗ ಮಾಸ್ಕ್‌ ತೆಗೆಯುವುದು, ಮಾಸ್ಕ್‌ ಅನ್ನು ಕೈಯಿಂದ ಮುಟ್ಟುವುದು, ಮಾಸ್ಕ್‌ ಅನ್ನು ಮುಖಕ್ಕೆ ಹಾಕುವ ಬದಲು ಗಲ್ಲಕ್ಕೆ ಹಾಕಿ ನಡೆಯುವುದು ಈ ರೀತಿಯೆಲ್ಲಾ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಮಾಸ್ಕ್‌ ಹಾಕಿಯೂ ಪ್ರಯೋಜನವಿಲ್ಲ. ಮಾಸ್ಕ್‌ ಧರಿಸಿದ ಮೇಲೆ ಅದನ್ನು ಮುಟ್ಟಬಾರದು. ಇನ್ನು ಮಾಸ್ಕ್‌ ತೆಗೆಯುವಾಗಲೂ ಹಿಂಬದಿಯಿಂದ ತೆಗೆಯಬೇಕು.

 ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಕುಡಿಯಿರಿ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಕುಡಿಯಿರಿ

ದೇಹದಲ್ಲಿ ರೋಗನಿರೋಧಕ ಶಕ್ತಿ ಚೆನ್ನಾಗಿದ್ದರೆ ಕೊರೊನಾ ಭಯಬೇಕಾಗಿಲ್ಲ ಎಂದು ಸಂಶೋಧನೆಗಳು ಹೇಳುತ್ತಿವೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಕಷಾಯ ಸಹಕಾರಿ. ದಿನದಲ್ಲಿ ಒಂದು ಬಾರಿ ಕಷಾಯ ತೆಗೆದುಕೊಳ್ಳಿ.

 ತಾಜಾ ಆಹಾರ ಸೇವಿಸಿ

ತಾಜಾ ಆಹಾರ ಸೇವಿಸಿ

ಮನೆಯಲ್ಲಿಯೇ ಮಾಡಿದ ಆಹಾರ ಸೇವಿಸಿ, ಹೊರಗಿನಿಂದ ಯಾವ ಆಹಾರ ತಂದು ಸೇವಿಸದಿರುವುದು ಒಳ್ಳೆಯದು. ತಂಗಳನ್ನ ಸೇವಿಸಬೇಡಿ, ಬಿಸಿ ಬಿಸಿ ಆಹಾರ ಸೇವಿಸಿ, ಹಣ್ಣುಗಳನ್ನು ತಿನ್ನಿ.

ಬಿಸಿ ಬಿಸಿ ನೀರು ಕುಡಿಯಿರಿ

ಬಿಸಿ ಬಿಸಿ ನೀರು ಕುಡಿಯಿರಿ

ಇನ್ನು ಆಗಾಗ ಬಿಸಿಬಿಸಿ ನೀರು ಕುಡಿಯಿರಿ. ಈ ಅಭ್ಯಾಸ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇನ್ನು ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದು, ಅಶ್ವಗಂಧದ ಪುಡಿ ಹಾಕಿ ಕುಡಿಯುವುದು ಮಾಡಬಹುದು.

ಸಲಹೆ: ನೆರೆಮನೆಯವರಿಗೆ ಆಗಲಿ, ನಿಮ್ಮ ಮನೆಯಲ್ಲಿಯೇ ಆಗಲಿ ಯಾರಿಗಾದರೂ ಕೊರೊನಾ ಬಂದರೆ ಭಯಪಡಬೇಡಿ. ಅಗ್ಯತ ಮುನ್ನೆಚ್ಚರಿಕೆ ಕ್ರಮಗಳಿಂದ ಕೊರೊನಾ ಹರಡುವುದನ್ನು ತಡೆಗಟ್ಟಬಹುದು. ಬ್ರೇಕ್‌ ದಿ ಚೈನ್, ಸ್ಟೇ ಹೆಲ್ತಿ...

English summary

What To Do If Your Neighbour Tests Positive For Coronavirus In Kannada

What to do if your neighbour tests positive for Coronavirus, read on this article
X
Desktop Bottom Promotion