For Quick Alerts
ALLOW NOTIFICATIONS  
For Daily Alerts

ಚೀನಾದಲ್ಲಿ ಹೊಸ ಬಗೆಯ ಹಂದಿ ಜ್ವರ: ಕಾದಿದೆಯೇ ಮತ್ತೊಂದು ಸಾಂಕ್ರಾಮಿಕ ಪಿಡುಗಿನ ಅಪಾಯ?

|

ಕೋವಿಡ್ 19 ಎಂಬ ಸಾಂಕ್ರಾಮಿಕ ಪಿಡುಗಿ ಆರ್ಭಟ ಜೋರಾಗಿ ಇರುವಾಗಲೇ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಚೀನಾದಿಂದ ಹೊರಬಿದ್ದಿದೆ. ಹಂದಿಗಳಲ್ಲಿ ಒಂದು ಹೊಸ ಬಗೆಯ ಜ್ವರ ಕಾಣಿಸಿಕೊಂಡಿದ್ದು ಅದು ಕೂಡ ಒಂದು ಸಾಂಕ್ರಾಮಿಕ ಪಿಡುಗು ಆಗುವ ಗುಣ ಲಕ್ಷಣಗಳನ್ನು ಹೊಂದಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ.

ಹಂದಿಗಳಿಗೆ ಈ ರೀತಿಯ ಜ್ವರ ಇತ್ತೀಚೆಗೆ ಕಂಡು ಬಂದಿದ್ದು, ಇದು ಹಂದಿಯಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ, ಅಲ್ಲದೆ ಇದು ಮನುಷ್ಯರಿಂದ ಮನುಷ್ಯರಿಗೆ ಸುಲಭವಾಗಿ ಹರಡುತ್ತದೆ.

ಆದರೆ ಸದ್ಯಕ್ಕೆ ಇದರ ಬಗ್ಗೆ ಆತಂಕ ಪಡುವ ಅಗ್ಯತವಿಲ್ಲ, ಆದರೆ ಸೋಂಕು ತಗುಲಿದರೆ ಅಂಥ ವ್ಯಕ್ತಿಗಳನ್ನು ಸೂಕ್ತವಾಗಿ ಪರಿಶೀಲಿಸಿ, ಸೋಂಕು ಹರಡದಂತೆ ತಡೆಗಟ್ಟಬೇಕಾಗಿದೆ.

ಹೊಸ ವೈರಸ್ ಬಗ್ಗೆ ವಿಜ್ಞಾನಿಗಳು ಏನು ಹೇಳಿದ್ದಾರೆ?

ಹೊಸ ವೈರಸ್ ಬಗ್ಗೆ ವಿಜ್ಞಾನಿಗಳು ಏನು ಹೇಳಿದ್ದಾರೆ?

Proceedings of the National Academy of Sciences ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಈ ರೋಗದ ಗುಣ ಲಕ್ಷಣಗಳ ಬಗ್ಗೆ ತಿಳಿಯಲು ಹಾಗೂ ಇದು ಹರಡುವುದನ್ನು ತಡೆಗಟ್ಟಲು ಹಂದಿ ಫಾರ್ಮ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯದ ಕಡೆಗೆ ತೀವ್ರ ನಿಗಾ ಇಡಬೇಕಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

 ಸಾಂಕ್ರಾಮಿಕ ಪಿಡುಗು ಆಗುವ ಸಾಧ್ಯತೆ

ಸಾಂಕ್ರಾಮಿಕ ಪಿಡುಗು ಆಗುವ ಸಾಧ್ಯತೆ

ವಿಶ್ವದಲ್ಲಿ ಕೊರೊನಾ ಸಾಂಕ್ರಾಮಿಕ ಪಿಡುಗು ಇಲ್ಲವಾಗಿಸಲು ಸತತ ಪ್ರಯತ್ನ ನಡೆಯುತ್ತಿದೆ. ಅದರ ಜೊತೆಗೆ ಇದೀಗ ಈ ಹೊಸ ಕೆಟ್ಟ ಇನ್‌ಫ್ಲುಂಜಾ ಹರಡುವುದನ್ನು ತಡೆಯುವ ಅಗ್ಯತವಿದ್ದು ತಜ್ಞರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಹಿಂದೆ ಹಂದಿಯಿಂದ ಸ್ವೈನ್ ಫ್ಲೂ/ ಹಂದಿ ಜ್ವರ ಎಂಬ ಸಾಂಕ್ರಾಮಿಕ ಪಿಡುಗು ಹಬ್ಬಿತು. ಈ ಜ್ವರ ವರ್ಷಗಳ ಕಾಲ ಅಟ್ಟಹಾಸ ಮೆರೆದಿತ್ತು, ಮೊದಲಿಗೆ ಮೆಕ್ಸಿಕೋದಲ್ಲಿ ಸ್ಟೈನ್‌ ಫ್ಲೂ ಕಂಡು ಬಂದಿತ್ತು.

 ಸ್ವೈನ್ ಫ್ಲೂ ಅಥವಾ H1N1 ನಿಯಂತ್ರಣಕ್ಕೆ ಔಷಧಿ

ಸ್ವೈನ್ ಫ್ಲೂ ಅಥವಾ H1N1 ನಿಯಂತ್ರಣಕ್ಕೆ ಔಷಧಿ

ಹಂದಿ ಜ್ವರಕ್ಕೆ ಕಾರಣವಾದ A/H1N1pdm09 ನಿಯಂತ್ರಣಕ್ಕೆ ಲಸಿಕೆ ಲಭ್ಯವಿದ್ದು ವರ್ಷಕ್ಕೊಮ್ಮೆ ಈ ಲಸಿಕೆ ತೆಗೆದುಕೊಳ್ಳುವುದರಿಂದ H1N1 ತಡೆಗಟ್ಟಬಹುದಾಗಿದೆ.

ಈಗ ಕಂಡು ಬಂದಿರುವ ಹಂದಿ ಜ್ವರಕ್ಕೆ ಕೂಡ 2009ರ ಸ್ವೈನ್ ಫ್ಲೂ ಹೋಲಿಕೆಯಿದ್ದು, ಆದರೆ ಕೆಲವೊಂದು ವ್ಯತ್ಯಾಸಗಳಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದೀಗ ಸದ್ಯಕ್ಕೆ ದೊಡ್ಡ ಅಪಾಯ ಸೃಷ್ಟಿಸಿಲ್ಲ, ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದ್ದು, ಈ ಹೊಸ ವೈರಸ್ ಅನ್ನು ವಿಜ್ಞಾನಿಗಳು G4 EA H1N1 ಎಂದು ಕರೆದಿದ್ದಾರೆ.

 ನಿರ್ಲಕ್ಷ್ಯ ಮಾಡಲೇಬಾರದು

ನಿರ್ಲಕ್ಷ್ಯ ಮಾಡಲೇಬಾರದು

ಈ ಹಂದಿ ಜ್ವರ ಇತ್ತೀಚೆಗೆ ಚೀನಾದ ಹಂದಿ ಫಾರ್ಮ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಕಂಡು ಬಂದಿತ್ತು, ಈಗಾಗಲೇ ಹಂದಿ ಜ್ವರಕ್ಕೆ ಇರುವ ಲಸಿಕೆಯಿಂದ ಈ ಹೊಸ ಬಗೆಯ ಹಂದಿ ಜ್ವರ ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ಹೊಸ ಬಗೆಯ ಹಂದಿ ಜ್ವರ ಮಟ್ಟ ಹಾಕಲು ಮತ್ತಷ್ಟು ಅಧ್ಯಯನ ನಡೆಯಬೇಕಾಗಿದೆ.

ಯುಕೆಯ ನಾಟಿಂಗ್ಹ್ಯಾಮ್ ಯೂನಿರ್ವಸಿಟಿಯ ಪ್ರೊ. ಕಿನ್‌ ಚೋ ಚಾಂಗ್ ಬಿಬಿಸಿ ಜೊತೆ ಮಾತನಾಡುತ್ತಾ' ಈಗ ನಾವು ಕೊರೊನಾವೈರಸ್‌ನಿಂದ ಬಳಲಿದ್ದೇವೆ, ಆದರೆ ಹೊಸ ವೈರಸ್ ಕಡೆ ಸ್ವಲ್ಪವೂ ನಿರ್ಲಕ್ಷ್ಯ ಸಲ್ಲದು' ಎಂದು ಹೇಳಿದ್ದಾರೆ.

ಮನುಷ್ಯರು ಕಾಡು ಪ್ರಾಣಿಗಳು ಹಾಗೂ ಇತರ ಪ್ರಾಣಿಗಳ ಸಂಪರ್ಕಕಕ್ಕೆ ಬಂದಾಗ ಅವುಗಳಲ್ಲಿ ವೈರಸ್‌ ಇದ್ದರೆ ಅದು ಮನುಷ್ಯನ ದೇಹಕ್ಕೆ ಹರಡಿ, ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಸಾಂಕ್ರಾಮಿಕ ರೋಗವಾಗುತ್ತದೆ. ಇದೀಗ ಕೊರೊನಾವೈರಸ್‌ ಜೊತೆ ಜೊತೆಗೆ ಈ ಹೊಸ ಬಗೆಯ ಹಂದಿ ಜ್ವರದ ಬಗ್ಗೆ ಎಚ್ಚರಿಕೆಯಿಂದ ಇರದಿದ್ದರೆ ಅಪಾಯ ತಪ್ಪಿದ್ದಲ್ಲ.

Read more about: h1n1 flu coronavirus
English summary

New Swine Flu Virus With Pandemic Potential Found in China

A new strain of flu that has the potential to become a pandemic has been identified in China by scientists.
Story first published: Tuesday, June 30, 2020, 14:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X