Latest Updates
-
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ!
ಕೊರೊನಾ ವೈರಸ್ ಬಗ್ಗೆ ಇರುವ ಅವೈಜ್ಞಾನಿಕ ಮೂಢನಂಬಿಕೆಗಳು
ಕೊರೊನ ವೈರಸ್ ಇಂದು ಹಬ್ಬುತ್ತಿರುವ ವೇಗ ನೋಡಿದರೆ ನಿಜಕ್ಕೂ ಭಯವಾಗುತ್ತದೆ. ಇಷ್ಟು ದಿನ ರಾಜಾರೋಷವಾಗಿ ಎಲ್ಲೆಂದರಲ್ಲಿ ಅಡ್ಡಾಡಿ ಅರ್ಧರಾತ್ರಿಯಲ್ಲಿ ಮನೆಗೆ ಬರುತ್ತಿದ್ದ ಪ್ರತಿಯೊಬ್ಬರಿಗೂ ಇಂದು ಹಗಲು ಹೊತ್ತಿನಲ್ಲೇ ಮನೆಯಿಂದ ಹೊರಹೋಗಲು ಭಯ ಕಾಡುತ್ತಿದೆ. ಎಲ್ಲಿ, ಯಾರಿಂದ, ಯಾವಾಗ, ಹೇಗೆ ಕೊರೊನ ವೈರಸ್ ನಮಗೆ ತಗಲುತ್ತದೆಯೋ ಏನೋ ಎಂಬ ಆತಂಕದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಮನೆಯಿಂದ ಹೊರ ಹೋಗಬೇಕಾಗಿದೆ.
ಆದರೆ ಕೊರೊನ ವೈರಸ್ ಹಬ್ಬಲು ಸಾಕಷ್ಟು ಮೂಲಗಳಿವೆ. ಹಾಗಾಗಿ ಮನೆಯಿಂದ ಹೊರ ಹೋದ ಸಂದರ್ಭದಲ್ಲಿ ಎಷ್ಟು ಜಾಗರೂಕರಾಗಿ ನಡೆದುಕೊಂಡರೂ ಅದು ಕಡಿಮೆಯೇ. ಕೊರೋನಾಗೆ ಇನ್ನೂ ಸರಿಯಾದ ಒಂದು ಲಸಿಕೆ ಬಂದಿಲ್ಲದ ಕಾರಣ ಜನರು ತಮಗೆ ತೋಚಿದ ಹಾಗೆ ಮನೆ ಮದ್ದುಗಳನ್ನು ಬಳಸಿಕೊಂಡು ಇತರ ಕಾಯಿಲೆಗಳನ್ನು ಹೋಗಲಾಡಿಸಿಕೊಳ್ಳುವ ಹಾಗೆ ಕೊರೋನಾವನ್ನು ಹೋಗಲಾಡಿಸಿಕೊಳ್ಳಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದರ ಜೊತೆಗೆ ಕೊರೊನಾದ ವಿಚಾರವಾಗಿ ಸಾಕಷ್ಟು ಮೂಢನಂಬಿಕೆಗಳನ್ನು ತಮ್ಮಲ್ಲೂ ಬೆಳೆಸಿಕೊಂಡು ಇತರರಿಗೂ ಅದನ್ನು ಹಬ್ಬಿಸಿ ದಾರಿ ತಪ್ಪಿಸಲು ಬಯಸುತ್ತಿದ್ದಾರೆ.
ಈ ಲೇಖನದಲ್ಲಿ ಕೊರೊನ ವಿಚಾರವಾಗಿ ಜನರಲ್ಲಿರುವ ಮೂಢನಂಬಿಕೆಗಳನ್ನು ತೆಗೆದುಹಾಕುವ ಪ್ರಯತ್ನ ಮಾಡಲಾಗಿದೆ.

1. ಕೊರೊನ ವೈರಸ್ ಇತರ ಸೋಂಕುಗಳಿಗಿಂತ ಅಪಾಯಕಾರಿ ಏನಲ್ಲ
ಇದು ಒಂದು ಸುಳ್ಳು ಸುದ್ದಿ ಎಂದು ಯಾರು ಬೇಕಾದರೂ ಹೇಳಬಹುದು. ಏಕೆಂದರೆ ವಿಶ್ವ ಆರೋಗ್ಯ ಸಂಸ್ಥೆ ಕೊರೊನ ವಿಚಾರವಾಗಿ ಇತ್ತೀಚಿಗಷ್ಟೇ ಬಿಡುಗಡೆ ಮಾಡಿದ ತನ್ನ ಅಧ್ಯಯನದ ಒಂದು ವರದಿಯಲ್ಲಿ ತುಂಬಾ ಸ್ಪಷ್ಟವಾಗಿ ಉಲ್ಲೇಖಿಸಿದೆ. ಏನಂದರೆ ವರ್ಷದ 365 ದಿನಗಳಲ್ಲಿ ಕಾಲಕಾಲಕ್ಕೆ ಎದುರಾಗುವ ಬೇರೆ ಬಗೆಯ ಸೋಂಕುಗಳು ಜಗತ್ತಿನ ಒಟ್ಟು ಜನ ಸಂಖ್ಯೆಯ ಶೇಕಡ 1 % ರಷ್ಟನ್ನು ಮಾತ್ರ ಸಾವಿಗೀಡು ಮಾಡಿವೆ.
ಆದರೆ ಕೊರೋನಾ ಎಂಬ ಮಹಾಮಾರಿ ಬಂದು ಇನ್ನೂ ಒಂದು ವರ್ಷವೇ ಕಳೆದಿಲ್ಲ. ಅದಾಗಲೇ ಜಗತ್ತಿನ ಒಟ್ಟು ಜನ ಸಂಖ್ಯೆಯ ಶೇಕಡ 3.4%ರಷ್ಟು ಜನರು ತಮ್ಮ ಪ್ರಾಣ ಬಿಟ್ಟಿದ್ದಾರೆ. ಹಾಗಾಗಿ ಕೊರೊನ ವೈರಸ್ ನಿಂದ ಉಂಟಾಗುವ ಕೋವಿಡ್ - 19 ಗೆ ತುಂಬಾ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕಾಗಿದೆ. ಇದುವರೆಗೂ ಕಂಡು ಬಂದ ಬೇರೆ ಯಾವುದೇ ಬಗೆಯ ಸೋಂಕುಗಳಿಗೆ ಈಗಾಗಲೇ ಲಸಿಕೆ ಲಭ್ಯವಿದೆ. ಹಾಗಾಗಿ ಅವುಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಕೊರೊನ ವೈರಸ್ ಸಂತತಿಯನ್ನು ಕಡಿಮೆ ಮಾಡುವ ಯಾವುದೇ ಪರಿಣಾಮಕಾರಿಯಾದ ಲಸಿಕೆ ಮಾರುಕಟ್ಟೆಗೆ ಇನ್ನೂ ಬಿಡುಗಡೆಯಾಗಿಲ್ಲ. ಹಾಗಾಗಿ ಇದೊಂದು ಯೋಚನೆ ಮಾಡಬೇಕಾದ ವಿಷಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ಪಟ್ಟಿದೆ.

2. ಕೊರೊನ ವೈರಸ್ ಕೇವಲ ವಯಸ್ಸಾದವರನ್ನು ಮಾತ್ರ ಹುಡುಕಿ ಕೊಲ್ಲುತ್ತಿದೆ, ಆದರೆ ಮಕ್ಕಳನ್ನು ಮತ್ತು ವಯಸ್ಕರನ್ನಲ್ಲ !!!
ಪ್ರತಿ ದಿನ ನಾವು ದೂರದರ್ಶನದಲ್ಲಿ, ದಿನ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸುತ್ತಿರುವ ಹಾಗೆ ಕೊರೋನಾ ಮಹಾಮಾರಿಗೆ ಕೇವಲ ವಯಸ್ಸಾದವರು ಮಾತ್ರ ಬಲಿಯಾಗುತ್ತಿಲ್ಲ. ತುಂಬಾ ಚಿಕ್ಕ ವಯಸ್ಸಿನವರು ಅದರಲ್ಲೂ ಹತ್ತು ವರ್ಷದ ಒಳಗಿನ ಬಹುತೇಕ ಮಕ್ಕಳು ಭಾರತದಾದ್ಯಂತ ಕೊರೋನಾ ಉಪಟಳವನ್ನು ತಾಳಲಾರದೆ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ. ಇನ್ನು 30 ವರ್ಷದ ಆಸುಪಾಸಿನ ಕಟ್ಟುಮಸ್ತಾದ ದೇಹ ಹೊಂದಿದ ಬಹಳಷ್ಟು ಮಂದಿ ಯುವಕರು ಕೂಡ ಇದೇ ಹಾದಿಯನ್ನು ಹಿಡಿದಿದ್ದಾರೆ. ವಯಸ್ಸಲ್ಲದ ವಯಸ್ಸಿನಲ್ಲಿ ಸಾವಿಗೀಡಾಗುತ್ತಿರುವ ತಮ್ಮ ಮಕ್ಕಳನ್ನು ನೋಡಿ ಪೋಷಕರು ಕೊರಗುವಂತಾಗಿದೆ.
ಕೊರೊನಾದ ವಿಚಾರದಲ್ಲಿ ಒಂದು ಸತ್ಯ ಏನೆಂದರೆ, ಯಾರಿಗೆ ದೀರ್ಘ ಕಾಲದಿಂದ ಕಾಡುತ್ತಿರುವ ಅಧಿಕ ರಕ್ತದ ಒತ್ತಡ ಮತ್ತು ಮಧುಮೇಹ ಸಮಸ್ಯೆ ಅಥವಾ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ ಇರುತ್ತದೆ ಅವರು ತಮ್ಮ ಆರೋಗ್ಯವನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳಬೇಕು. ಇದರ ಜೊತೆಗೆ ಕೊರೋನ ರೋಗಿಗಳ ಒಡನಾಟದಲ್ಲಿರುವ ಆರೋಗ್ಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿ ಕೇವಲ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವುದು ಮಾತ್ರವಲ್ಲದೆ ತಮ್ಮ ಹಾಗೂ ತಮ್ಮ ಮನೆಯವರ ಆರೋಗ್ಯ ರಕ್ಷಣೆಗೂ ಕೂಡ ಹೋರಾಟ ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅಂತಹವರ ವಯಸ್ಸನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೊರೊನ ಅಟ್ಟಹಾಸ ಮೆರೆಯುತ್ತಿದೆ. ಅದು ದೊಡ್ಡವರಿರಲಿ ಅಥವಾ ಚಿಕ್ಕವರಿರಲಿ, ವಯಸ್ಸಾದವರಿರಲಿ, ರೋಗ - ನಿರೋಧಕ ಶಕ್ತಿ ದುರ್ಬಲವಾಗಿರುವ ಯಾರನ್ನೇ ಆದರೂ ಕೊರೊನ ಬಲಿ ಪಡೆಯದೇ ಬಿಡುವುದಿಲ್ಲ.

3. ಎಲ್ಲರೂ ಯಾವಾಗಲೂ ಫೇಸ್ ಮಾಸ್ಕ್ ಧರಿಸಲೇಬೇಕು
ಈ ಒಂದು ವಿಚಾರ ವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಅರ್ಧ ಸತ್ಯ ಅರ್ಧ ಮಿತ್ಯ ಎಂದು ತೋರುತ್ತದೆ. ಏಕೆಂದರೆ ವೈರಸ್ ಕಣ ತುಂಬಾ ಚಿಕ್ಕದಿದ್ದು, ಇದು ಯಾವುದೇ ಬಗೆಯಲ್ಲಿ ನಮ್ಮ ದೇಹ ಸೇರಬಹುದು. ಇತ್ತೀಚಿಗಷ್ಟೇ ದೂರದರ್ಶನ ವಾಹಿನಿಯಲ್ಲಿ ಕಣ್ಣುಗಳ ಮೂಲಕ ಕೊರೋನಾ ವೈರಸ್ ದೇಹ ಸೇರುವ ಸಾಧ್ಯತೆ ಇರುತ್ತದೆ ಎಂದು ಹೇಳುತ್ತಿದ್ದರು.
ಹಾಗಾಗಿ ನೀವು ಧರಿಸುವ ಫೇಸ್ ಮಾಸ್ಕ್ ಕೇವಲ ಒಬ್ಬ ವ್ಯಕ್ತಿ ಕೆಮ್ಮಿದರೆ ಅಥವಾ ಸೀನಿದರೆ ಆತನ ಮೂಗಿನಿಂದ ಅಥವಾ ಬಾಯಿಯಿಂದ ಸಿಡಿಯುವ ನೀರಿನ ಕಣಗಳನ್ನು ನಿಮ್ಮ ಬಾಯಿ ಹಾಗೂ ಮೂಗಿಗೆ ತಾಗದಂತೆ ಕಾಪಾಡುತ್ತದೆ. ಆದರೆ ಕೆಮ್ಮುವ ಕ್ಷಣದಲ್ಲಿ ಆತನಿಂದ ಸಿಡಿದ ನೀರಿನ ಕಣ ನಿಮ್ಮ ಮುಖದ ಇತರ ಭಾಗದಲ್ಲಿ ಬಂದು ಕುಳಿತುಕೊಳ್ಳಬಹುದು ಅಥವಾ ನೇರವಾಗಿ ನಿಮ್ಮ ಕಣ್ಣುಗಳ ಒಳಗೆ ಹೋಗಿ ಬೀಳಬಹುದು. ಹೀಗಿರುವಾಗ ನೀವು ಮುಖಕ್ಕೆ ಮಾಸ್ಕ ಧರಿಸಿದ್ದರೂ ಕೂಡ ವೈರಸ್ ಕಣಗಳು ನಿಮ್ಮೆದುರಿಗೇ ನಿಮ್ಮ ದೇಹ ಸೇರುತ್ತವೆ.
ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ತಮ್ಮ ಮಾರ್ಗಸೂಚಿಯಲ್ಲಿ ಸಮಾಜದ ಎರಡು ಗುಂಪುಗಳನ್ನು ಮಾಸ್ಕ್ ಧರಿಸುವಂತೆ ಹೆಚ್ಚು ಒತ್ತಾಯ ಮಾಡಿದೆ. ಅವರುಗಳೆಂದರೆ ರೋಗಿಗಳು ಮತ್ತು ರೋಗಿಗಳಿಗೆ ಆರೈಕೆ ಮಾಡುವವರು. ರೋಗಿಗಳು ತಮ್ಮಿಂದ ಇತರರಿಗೆ ರೋಗ ಹಬ್ಬದಂತೆ ತಡೆಯಲು ಮಾಸ್ಕ್ ಧರಿಸಬೇಕು. ರೋಗಿಗಳ ಜೊತೆ ಸದಾ ಒಡನಾಟದಲ್ಲಿರುವವರು ಅವರಿಂದ ತಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮಾಸ್ಕ್ ಧರಿಸಬೇಕು. ಪ್ರತಿಯೊಬ್ಬರು ಮಾಸ್ಕ್ ಖರೀದಿಗೆ ಮುಂದಾದರೆ ಖಂಡಿತವಾಗಿ ಮಾಸ್ಕ್ ಬೆಲೆ ಗಗನಕ್ಕೇರುತ್ತದೆ ಮತ್ತು ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗೆ ಮಾಸ್ಕ್ ಇಲ್ಲದಂತೆ ಆಗುತ್ತದೆ.

4. ಹತ್ತು ನಿಮಿಷ ಕರೋನ ವೈರಸ್ ಸೋಂಕಿತರ ಜೊತೆ ಇದ್ದರೆ ಸಾಕು, ಕಾಯಿಲೆ ಬಂತೆಂದೇ ಅರ್ಥ!
ಕರೋನ ವೈರಸ್ ಗುಣ ಲಕ್ಷಣಗಳನ್ನು ಕಂಡುಹಿಡಿಯಲು ಮತ್ತು ಇದು ಹಬ್ಬುವ ಬಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಲು ವಿಜ್ಞಾನಿಗಳಿಂದ ನಿರಂತರವಾಗಿ ಇಂದಿಗೂ ಅಧ್ಯಯನ ನಡೆಯುತ್ತಲೇ ಇದೆ. ಗಾಳಿಯಲ್ಲಿ ಸುಮಾರು 20 ಮೀಟರ್ ದೂರದವರೆಗೆ ಕೊರೊನ ವೈರಸ್ ಕಣ ಚಲಿಸಬಲ್ಲದು ಎಂದು ಇತ್ತೀಚಿಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳ ತಂಡ ಹೇಳಿತ್ತು.
ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಯೊಂದು ದೇಶದ ಸರ್ಕಾರಗಳಿಗೆ ತಮ್ಮ ತಮ್ಮ ಜನರು ಒಬ್ಬೊಬ್ಬರಿಂದ ಸುಮಾರು ಆರು ಮೀಟರ್ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೈಗಳನ್ನು ಆಗಾಗ ಸ್ವಚ್ಛ ಮಾಡಿಕೊಳ್ಳುತ್ತಿರಬೇಕು ಎಂದು ಸೂಚಿಸಿದೆ. ಆದರೆ ಕೊರೊನ ವೈರಸ್ ಸೋಂಕು ತಗುಲಲು ಒಬ್ಬ ಆರೋಗ್ಯವಂತ ವ್ಯಕ್ತಿ 10 ನಿಮಿಷ ಸೋಂಕಿತ ವ್ಯಕ್ತಿಯ ನೇರ ಒಡನಾಟದಲ್ಲಿ ಇರಬೇಕು ಎಂದೇನಿಲ್ಲ. ಅದಕ್ಕಿಂತಲೂ ಕಡಿಮೆ ಅವಧಿಯಲ್ಲಿ ಆತನಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಬೇರೆ ಬೇರೆ ಮೇಲ್ಮೈ ಪ್ರದೇಶಗಳನ್ನು ಮುಟ್ಟುವುದರಿಂದ ಸಹ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಆಗಾಗ ನಿಮ್ಮ ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್ ಬಳಸಿ ಸ್ವಚ್ಛ ಮಾಡಿಕೊಳ್ಳುತ್ತಿರುವುದು ಒಳ್ಳೆಯದು.

5. ಕೆಲವೇ ತಿಂಗಳಲ್ಲಿ ಲಸಿಕೆ ತಯಾರಾಗಿ ಬಿಡುತ್ತದೆ
ಯಾವುದೇ ಒಂದು ಹೊಸ ವೈರಸ್ ಜಗತ್ತಿಗೆ ಪರಿಚಯವಾದರೆ, ಅದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಬೇಕಾಗುತ್ತದೆ. ಲಸಿಕೆ ತಯಾರು ಮಾಡಿದ ಮೇಲೂ ಕೂಡ ನೇರವಾಗಿ ಮನುಷ್ಯರ ಮೇಲೆ ಪ್ರಯೋಗ ಮಾಡಲು ಬರುವುದಿಲ್ಲ. ಮೊದಲು ಪ್ರಾಣಿಗಳ ಮೇಲೆ ಎರಡು ಮೂರು ಹಂತಗಳಲ್ಲಿ ಪ್ರಯೋಗ ಮಾಡಿ ಯಶಸ್ವಿಯಾದ ನಂತರ ಮನುಷ್ಯರ ಮೇಲೂ ಸುಮಾರು ಮೂರರಿಂದ ನಾಲ್ಕು ಹಂತಗಳಲ್ಲಿ ಪ್ರಯೋಗ ಮಾಡಿ ಯಶಸ್ವಿ ಸಿಕ್ಕಿದರೆ ಮಾತ್ರ ಅದನ್ನು ಅಧಿಕೃತವಾಗಿ ರೋಗಕ್ಕೆ ಲಸಿಕೆ ಎಂದು ಘೋಷಿಸಲಾಗುತ್ತದೆ.
ಆದರೆ ಇದುವರೆಗೂ ಕಂಡುಬಂದ ವೈರಸ್ ಅಥವಾ ಬ್ಯಾಕ್ಟೀರಿಯಾಗಳಿಗೆ ಹೋಲಿಸಿದರೆ ಕೊರೋನಾ ತುಂಬಾ ವಿಚಿತ್ರವಾದ ಮತ್ತು ಕ್ಷಣ ಕ್ಷಣಕ್ಕೂ ತನ್ನ ರೂಪವನ್ನು ಮತ್ತು ತಳಿಯನ್ನು, ತನ್ನ ರೋಗ ಲಕ್ಷಣಗಳನ್ನು ಅದಲು ಬದಲು ಮಾಡಿಕೊಂಡು ಮತ್ತು ಕೆಲವೊಮ್ಮೆ ರೋಗ ಲಕ್ಷಣಗಳೇ ಇಲ್ಲದೇ ಜನರಿಗೆ ಹರಡುವ ಮೂಲಕ ವಿಜ್ಞಾನಿಗಳಿಗೆ ಹಾಗೂ ಸಂಶೋಧಕರಿಗೆ ದೊಡ್ಡ ತಲೆ ನೋವು ತಂದಿಟ್ಟಿದೆ. ಇದೇ ಕಾರಣದಿಂದ ಲಸಿಕೆ ತಯಾರಿ ಇಂದು ತೀವ್ರ ಮಂದಗತಿಯಲ್ಲಿ ಸಾಗುತ್ತಿದೆ. ಒಂದು ವೇಳೆ ಈ ವರ್ಷದ ಅಂತ್ಯಕ್ಕೆ ಲಸಿಕೆ ಸಿಕ್ಕರೆ ತುಂಬಾ ಒಳ್ಳೆಯದು. ಆದರೂ ಕೆಲವು ವಿಜ್ಞಾನಿಗಳು ಹೇಳುತ್ತಿರುವ ಹಾಗೆ ಸೋಂಕಿತ ವ್ಯಕ್ತಿಗೆ ಒಮ್ಮೆ ನೀಡುವ ಕೊರೋನಾ ವಿರುದ್ಧದ ಲಸಿಕೆ ಹಲವು ದಿನಗಳ ಕಾಲ ಕೆಲಸ ಮಾಡಲು ಅಸಾಧ್ಯ. ಹಾಗಾಗಿ ಆಗಾಗ ಲಸಿಕೆಯನ್ನು ಮತ್ತೊಮ್ಮೆ ನೀಡಬೇಕಾಗಿ ಬರುತ್ತದೆ ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ.

6. ಮನೆ ಮದ್ದುಗಳಿಂದ ಕೊರೊನ ವೈರಸ್ ಗೆ ಪರಿಹಾರ ಸಿಗುತ್ತದೆ
ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ದಿಕ್ಕು ತಪ್ಪಿಸುವ ಹಾಗೆ ಇಂತಹ ಹಲವಾರು ಸಂದೇಶಗಳು ಹರಿದಾಡುತ್ತಿವೆ. ಕೊರೊನ ಅಟ್ಟಹಾಸವನ್ನು ಮಟ್ಟ ಹಾಕಲು ಬೆಳ್ಳುಳ್ಳಿ, ಎಳ್ಳು, ಆಲ್ಕೋಹಾಲ್, ತಂಬಾಕು ಸೇವನೆ ಮಾಡುವುದು ತುಂಬಾ ಒಳ್ಳೆಯದು ಎಂಬ ಸುದ್ದಿಗಳಲ್ಲಿ ಎಳ್ಳಷ್ಟೂ ಸತ್ಯವಿಲ್ಲ. ಹಾಗಿದ್ದಿದ್ದರೆ ಇಂದು ಜಗತ್ತು ಇಷ್ಟೊಂದು ಕಷ್ಟ ಪಡಬೇಕಾಗಿರಲಿಲ್ಲ.
ಸಂಶೋಧನೆಯ ಪ್ರಕಾರ ಶೇಕಡ 70 % ಕಿಂತ ಹೆಚ್ಚಿನ ಆಲ್ಕೋಹಾಲ್ ಅಂಶವನ್ನು ಹೊಂದಿದ ಸ್ಯಾನಿಟೈಸರ್ ಕೊರೊನ ವೈರಸ್ ಅನ್ನು ಕೊಲ್ಲುತ್ತದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ನಿಮ್ಮ ಮನೆಯ ಬಾಗಿಲು, ಕಿಟಕಿ, ಸೋಫಾ, ಮೆಟ್ಟಿಲಿನ ಅಕ್ಕಪಕ್ಕ ಇರುವ ಕಬ್ಬಿಣದ ಕಂಬಿಗಳು ಇತ್ಯಾದಿಗಳನ್ನು ಸ್ವಚ್ಛ ಮಾಡಲು ಕ್ಲೋರೋಫಾರ್ಮ್, ಬ್ಲೀಚಿಂಗ್ ಮತ್ತು ಇತರ ದ್ರಾವಣಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು. ಆದರೆ ಸ್ಯಾನಿಟೈಸರ್ ಕುಡಿಯುವುದು ಅಥವಾ ಇತರ ದ್ರಾವಣಗಳನ್ನು ಸೇವನೆ ಮಾಡುವುದರಿಂದ ಖಂಡಿತ ನಿಮ್ಮ ಜೀವಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಇಂತಹ ಟೊಳ್ಳು ಸುದ್ದಿಗಳಿಂದ ದೂರವಿರಿ.

7. ಕೊರೊನ ಬಂದರೆ ಸಾಕು ಸತ್ತು ಹೋಗುತ್ತಾರೆ
ಈ ವಿಚಾರ ಕೂಡ ಸುಳ್ಳು. ಏಕೆಂದರೆ ಕೊರೊನ ಬಂದು ಆಸ್ಪತ್ರೆಗೆ ದಾಖಲಾಗಿ ಹುಷಾರಾಗಿ ಮನೆಗೆ ಮರಳುತ್ತಿರುವವರ ಸಂಖ್ಯೆ ಈಗ ಹೆಚ್ಚಾಗಿದೆ. ಹಾಗಾಗಿ ಕೊರೊನ ಬಂದವರೆಲ್ಲಾ ಸಾಯುತ್ತಾರೆ ಎಂಬ ಸುದ್ದಿ ಹಸಿ ಹಸಿ ಸುಳ್ಳು. ಕೆಲವರಿಗೆ ಕೊರೊನ ರೋಗಿಗಳ ಜೊತೆ ಇದ್ದರೂ ಕೂಡ ಯಾವುದೇ ಸೋಂಕು ತಗುಲುವುದಿಲ್ಲ. ಏಕೆಂದರೆ ಅವರಿಗೆ ಅವರ ದೇಹದ ರೋಗ ನಿರೋಧಕ ಶಕ್ತಿ ತುಂಬಾ ಹೆಚ್ಚಾಗಿರುತ್ತದೆ.
ಕೊರೊನ ವೈರಸ್ ತಗುಲಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳಿಗೂ ಕೂಡ ಅವರ ದೇಹದ ರೋಗ - ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರಗಳನ್ನು ಮತ್ತು ಔಷಧಿಗಳ ಪೂರಕಗಳನ್ನು ನಿರಂತರವಾಗಿ ಕೊಡಲಾಗುತ್ತದೆ. ಒಮ್ಮೆ ದೇಹದ ರೋಗ - ನಿರೋಧಕ ಶಕ್ತಿ ಹೆಚ್ಚಿದ ತಕ್ಷಣ ಕೊರೊನ ವೈರಸ್ ಸೋಂಕಿತ ವ್ಯಕ್ತಿಯ ದೇಹದಲ್ಲಿ ತನ್ನ ಪ್ರಭಾವ ಕಳೆದುಕೊಳ್ಳುತ್ತದೆ. ಹೀಗಾಗಿ ವ್ಯಕ್ತಿ ಹುಷಾರಾಗಿ ಮನೆಗೆ ಮರಳುತ್ತಾನೆ. ಮುಖ್ಯವಾಗಿ ವೈರಸ್ ನಿಂದ ಸೋಂಕು ಎದುರಾದ ಕ್ಷಣದಲ್ಲಿ ವ್ಯಕ್ತಿಗೆ ಉಸಿರಾಟದ ತೊಂದರೆ ಎದುರಾಗುತ್ತದೆ. ರೋಗನಿರೋಧಕ ಶಕ್ತಿ ಆತನ ದೇಹದಲ್ಲಿ ತುಂಬಾ ದುರ್ಬಲವಾಗಿದ್ದರೆ ಆ ಸಂದರ್ಭದಲ್ಲಿ ಮಾತ್ರ ವ್ಯಕ್ತಿ ಬಲಿಯಾಗುತ್ತಾನೆ ಎಂದು ಊಹಿಸಬಹುದು.

8. ಹೆಚ್ಚು ಬಿಸಿಯ ವಾತಾವರಣ ಕೊರೊನ ನಿರ್ಮೂಲನೆ ಮಾಡುತ್ತದೆ
ವಿಜ್ಞಾನಿಗಳ ಹಾಗೂ ಸಂಶೋಧಕರ ಪ್ರಕಾರ ಕೊರೊನ ವೈರಸ್ 25 ಡಿಗ್ರಿ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ಜೀವಿಸಲಾರದು ಎಂದು ತಿಳಿದುಬಂದಿದೆ. ಹಾಗೆಂದು ಕೊರೋನಾ ಸೋಂಕಿನಿಂದ ಬಳಲುತ್ತಿರುವವರು ಬಿಸಿಲಿನಲ್ಲಿ ಹೋಗಿ ನಿಂತರೆ ಅಥವಾ ಬೇಸಿಗೆಗಾಲದಲ್ಲಿ ಕೊರೊನ ವೈರಸ್ ಪ್ರಲಾಪ ಕಡಿಮೆಯಾಗುತ್ತದೆ ಎಂಬ ವಿಚಾರಕ್ಕೆ ಯಾವುದೇ ಸತ್ಯಾಂಶ ಇಲ್ಲ. ಏಕೆಂದರೆ ಕೆಲವು ದೇಶಗಳಲ್ಲಿ ಬೇಸಿಗೆ ಕಾಲದಲ್ಲೂ ಕೂಡ ವೈರಸ್ ಸೋಂಕು ಅತ್ಯಂತ ಕೆಟ್ಟ ಪರಿಣಾಮವನ್ನು ಬೀರಿ ಲಕ್ಷಾಂತರ ಜನರ ಪ್ರಾಣವನ್ನು ಬಲಿ ಪಡೆದಿದೆ. ಆ ದೇಶಗಳು ಇಂದಿಗೂ ಕೂಡ ಆ ನೋವಿನಿಂದ ಮತ್ತು ಆಘಾತದಿಂದ ಹೊರಬರಲು ಸಾಧ್ಯವಾಗಿಲ್ಲ. ಹಾಗಾಗಿ ಬಿಸಿಯ ತಾಪಮಾನಕ್ಕೆ ಕೊರೊನಾಗೂ ಯಾವುದೇ ಸಂಬಂಧವಿಲ್ಲ. ಜನರು ಇಂತಹ ಸುದ್ದಿಗಳನ್ನು ನಂಬಬಾರದು.

9. ನ್ಯೂಮೋನಿಯಾ ಔಷಧಿ ಕೊರೋನಾಗೂ ಹಿಡಿಯುತ್ತದಂತೆ
ನ್ಯೂಮೋನಿಯ ತುಂಬಾ ಹಳೆಯ ಕಾಯಿಲೆ. ಆದರೆ ಕೊರೊನ ಇತ್ತೀಚೆಗೆ ಬಂದಿರುವ ಮತ್ತು ನ್ಯೂಮೋನಿಯ ವೈರಸ್ ಗಿಂತ ತುಂಬಾ ಭಿನ್ನವಾಗಿರುವ ಗುಣ ಲಕ್ಷಣಗಳನ್ನು ಒಳಗೊಂಡ ಕಾಯಿಲೆ ಹಾಗಾಗಿ ನ್ಯುಮೋನಿಯಾ ಗೆ ಸಂಬಂಧಪಟ್ಟ ಔಷಧಿ ಉಸಿರಾಟದ ವ್ಯವಸ್ಥೆಯಲ್ಲಿ ತೀರಾ ಕಡಿಮೆ ಪ್ರಭಾವವನ್ನು ಬೀರುತ್ತದೆ. ಸಂಪೂರ್ಣವಾಗಿ ಕೊರೊನವನ್ನು ಹೋಗಲಾಡಿಸುವ ಶಕ್ತಿ ನ್ಯೂಮೋನಿಯಾ ಔಷಧಿಗೆ ಇಲ್ಲ. ಅಪ್ಪಿತಪ್ಪಿಯೂ ಜನರು ಒಂದು ವೇಳೆ ತಮ್ಮ ಮನೆಯಲ್ಲಿ ನ್ಯೂಮೋನಿಯ ಪೇಷಂಟ್ ಯಾರಾದರೂ ಇದ್ದರೆ ಅವರ ಔಷಧಿಗಳನ್ನು ತೆಗೆದು ಸೇವಿಸಬಾರದು.

10. ಮೂಗನ್ನು ಉಪ್ಪಿನ ದ್ರಾವಣದಿಂದ ಆಗಾಗ ಸ್ವಚ್ಛಗೊಳಿಸುತ್ತಿದ್ದರೆ ಕೊರೊನ ಬರುವುದಿಲ್ಲ
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಕಣ್ಣು, ಮೂಗು, ಬಾಯಿ ಮೂಲಕ ಕೊರೊನ ವೈರಸ್ ನಮ್ಮ ದೇಹಕ್ಕೆ ಪ್ರವೇಶ ಮಾಡಬಹುದು ಎಂಬ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿ ಮನೆಯಿಂದ ಹೊರಗಡೆ ಹೋದ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಹೊರಡುತ್ತಾರೆ. ಆದರೆ ಧರಿಸಿದ ಮಾಸ್ಕ್ ಕೈಯಿಂದ ತೆಗೆದ ನಂತರ ಕೈಗಳನ್ನು ಚೆನ್ನಾಗಿ ಸೋಪು ಅಥವಾ ಸ್ಯಾನಿಟೈಸರ್ ಬಳಸಿ ಸ್ವಚ್ಛ ಮಾಡಿಕೊಳ್ಳಬೇಕು. ಕಣ್ಣು, ಮೂಗು, ಬಾಯಿ ಮುಟ್ಟಿಕೊಳ್ಳುವ ಮುಂಚೆಯೂ ಕೂಡ ಕೈಗಳನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಂಡ ನಂತರವೇ ಮುಟ್ಟಲು ಮುಂದಾಗಬೇಕು. ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಯಾವುದೇ ವಸ್ತುವನ್ನು ಮುಟ್ಟಿ ಮತ್ತೆ ಅದರಿಂದ ಕಣ್ಣುಗಳನ್ನು ಉಜ್ಜಿಕೊಳ್ಳುವುದರಿಂದ ಮೂಗಿನ ತುದಿಯನ್ನು ಸವರಿಕೊಳ್ಳುವುದು ಮಾಡಬಾರದು. ಇದು ವೈರಸ್ ಅನ್ನು ನೀವಾಗಿಯೇ ತಂದುಕೊಳ್ಳುವ ಹಾಗಾಗುತ್ತದೆ.

11. ಆಂಟಿ - ಬಯೋಟಿಕ್ಸ್ ಔಷಧಿಗಳು ಕೊರೋನಾ ವೈರಸ್ ಸೋಂಕನ್ನು ಕಡಿಮೆ ಮಾಡುತ್ತವೆ
ಹೆಸರೇ ಹೇಳುವಂತೆ ಯಾವುದೇ ಆಂಟಿ ಬಯೋಟಿಕ್ ಔಷಧಿಗಳು ಕೇವಲ ಬ್ಯಾಕ್ಟೀರಿಯಾಗಳ ಪ್ರಭಾವವನ್ನು ಮನುಷ್ಯನ ದೇಹದಲ್ಲಿ ತಗ್ಗಿಸುತ್ತವೆ. ಆದರೆ ಕೊರೊನ ವೈರಸ್ ಅಥವಾ ಇತರ ಯಾವುದೇ ವೈರಸ್ ಗಳಿಗೂ ಆಂಟಿಬಯೋಟಿಕ್ ಔಷಧಗಳಿಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಕೊರನಾ ಸೋಂಕಿತರಿಗೆ ಆಂಟಿಬಯೋಟಿಕ್ ಔಷಧಿಗಳನ್ನು ಕೊಡುವುದೇ ಇಲ್ಲ.

12. ಕೊರೊನಾ ವೈರಸ್ ಮಾನವ ನಿರ್ಮಿತ
ಈ ವಿಚಾರದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟೀಕರಣ ಸಿಕ್ಕಿಲ್ಲ. ಜಗತ್ತಿನ ಎಲ್ಲಾ ದೇಶಗಳು ಚೀನಾ ತಮ್ಮ ಬೆಳವಣಿಗೆಯನ್ನು ಸಹಿಸಲಾಗದೆ ಜೈವಿಕ ಅಸ್ತ್ರವಾಗಿ ಕೊರೋನಾವನ್ನು ಜಗತ್ತಿಗೆ ಹರಿಬಿಟ್ಟಿದೆ ಎಂದು ಹೇಳುತ್ತಿವೆ. ಆದರೆ ಚೀನಾ ದೇಶ ಮಾತ್ರ ಕೊರೊನ ವೈರಸ್ ನಾವು ಸೃಷ್ಟಿ ಮಾಡಿದ್ದಲ್ಲ, ಬದಲಿಗೆ ಅಮೇರಿಕ ದೇಶ ಸೃಷ್ಟಿ ಮಾಡಿ ನಮ್ಮ ಮೇಲೆ ಹಾಕುತ್ತಿದೆ ಎಂದು ಹೇಳುತ್ತಿದೆ. ಸದ್ಯಕ್ಕೆ ಲಭ್ಯವಿರುವ ಒಂದು ಮಾಹಿತಿಯ ಪ್ರಕಾರ ಚೀನಾ ದೇಶದ ಬಾವಲಿಗಳಲ್ಲಿ ಮೊಟ್ಟಮೊದಲಿಗೆ ಕಾಣಿಸಿಕೊಂಡ ಕೊರೊನ ವೈರಸ್ ಅವುಗಳಿಂದ ಮನುಷ್ಯರಿಗೆ ಹಬ್ಬಿ ನಂತರ ಮನುಷ್ಯರಿಂದ ಮನುಷ್ಯರಿಗೆ ಹಬ್ಬುತ್ತಿದೆ ಎಂದು ತಿಳಿದುಬಂದಿದೆ. ಆದರೆ ಯಾವುದು ನಿಜವಾದ ಸತ್ಯ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬಹುದು ಎಂಬ ನಂಬಿಕೆ ಇದೆ.

13. ಹ್ಯಾಂಡ್ ಡ್ರೈಯರ್ ಗಳು ಕೊರೊನ ವೈರಸ್ ಗಳನ್ನು ಸಾಯಿಸುತ್ತವೆ
ಹ್ಯಾಂಡ್ ಡ್ರೈಯರ್ ಬಳಸುವುದು ನೀರಿನಲ್ಲಿ ಕೈ ತೊಳೆದ ನಂತರ ಕೈಗಳನ್ನು ಒಣಗಿಸಿಕೊಳ್ಳಲು. ಅಂದರೆ ಬಿಸಿಯಾದ ಗಾಳಿ ಹ್ಯಾಂಡ್ ಡ್ರೈಯರ್ ನಿಂದ ಬಿಡುಗಡೆಯಾಗುತ್ತದೆ. ಆದರೆ ಗಾಳಿ ಬಿಸಿ ಇದೆ ಎಂದಾಕ್ಷಣ ಅದು ವೈರಸ್ ಕಣಗಳನ್ನು ಸಾಯಿಸುತ್ತದೆ ಎಂದು ಹೇಗೆ ನಂಬಲಾಗದು ಅಲ್ಲವೇ? ಇದರ ಜೊತೆಗೆ ಕೊಠಡಿಯಲ್ಲಿ ಸಹ ತೇವಾಂಶವನ್ನು ಹೀರಿಕೊಳ್ಳುವಂತಹ ತಂತ್ರ ಹ್ಯಾಂಡ್ ಡ್ರೈಯರ್ ನಲ್ಲಿದೆ.
ಹಾಗಾಗಿ ಒಂದು ವೇಳೆ ಯಾವುದೇ ಒಬ್ಬ ವ್ಯಕ್ತಿ ಮನೆಯ ಒಂದು ನಿರ್ದಿಷ್ಟ ಜಾಗದಲ್ಲಿ ಕೆಮ್ಮಿದರೆ ಅಥವಾ ಸೀನಿದರೆ ಅಲ್ಲಿ ಬಳಸಲಾಗುವ ಹ್ಯಾಂಡ್ ಡ್ರೈಯರ್ ಆತನ ಮೂಗಿನಿಂದ ಹಾಗೂ ಬಾಯಿ ನಿಂದ ಹೊರ ಬಿದ್ದಂತಹ ನೀರಿನ ಕಣಗಳನ್ನು ಜೊತೆಗೆ ವೈರಸ್ ಕಣಗಳನ್ನು ತನ್ನಲ್ಲಿ ಹೀರಿಕೊಂಡು ಇನ್ನೊಂದು ಕಡೆ ಬಳಕೆ ಮಾಡಿದಾಗ ಅದನ್ನು ಹರಡುತ್ತದೆ. ಹಾಗಾಗಿ ಹ್ಯಾಂಡ್ ಡ್ರೈಯರ್ ನಿಂದ ಇಡೀ ಮನೆ ಮಂದಿಗೆಲ್ಲಾ ವೈರಸ್ ಹಬ್ಬುವ ಸಾಧ್ಯತೆ ಇರುತ್ತದೆ.

14. ಅತಿನೇರಳೆ ಕಿರಣಗಳು ಕೊರೊನ ವೈರಸ್ ಗಳನ್ನು ಕೊಲ್ಲುತ್ತವೆ
ಇತ್ತೀಚೆಗಷ್ಟೇ ಭಾರತದ ಪ್ರತಿಷ್ಠಿತ ಐಐಟಿ ಸಂಸ್ಥೆಯಲ್ಲಿ ಅತಿನೇರಳೆ ಕಿರಣಗಳನ್ನು ಬಳಸಿಕೊಂಡು ಒಂದು ನಿರ್ದಿಷ್ಟ ಕೊಠಡಿಯ ಸ್ವಚ್ಛತೆಯಲ್ಲಿ ಒಂದು ಪುಟ್ಟ ಯಂತ್ರ ಪಾಲ್ಗೊಂಡು ತಾನು ಹೊರಡಿಸುವ ಅತಿನೇರಳೆ ಕಿರಣಗಳಿಂದ ಸಂಪೂರ್ಣ ಕೊಠಡಿಯನ್ನು ವೈರಸ್ ಮುಕ್ತವಾಗಿ ಮಾಡುತ್ತದೆ ಎಂಬ ಸಂಶೋಧನೆಯೊಂದು ಹೊರಬಿದ್ದಿತ್ತು. ಆದರೆ ಅತಿನೇರಳೆ ಕಿರಣಗಳು ಒಬ್ಬ ಮನುಷ್ಯನ ದೇಹದ ಮೇಲೆ ಅತಿಯಾಗಿ ಬಿದ್ದರೆ ಚರ್ಮದ ಹಾನಿ ಆಗುವುದು ಖಂಡಿತ.

15. ಥರ್ಮಲ್ ಸ್ಕ್ಯಾನರ್ ಗಳು ಕೊರೊನ ವೈರಸ್ ಸೋಂಕನ್ನು ಪತ್ತೆ ಹೆಚ್ಚುತ್ತವೆ
ಪ್ರಸಿದ್ಧ ಮಾಲ್ ಗಳಲ್ಲಿ, ಆಸ್ಪತ್ರೆಗಳಲ್ಲಿ, ಬಸ್ ಸ್ಟಾಂಡ್ ಗಳಲ್ಲಿ ಇತ್ತೀಚೆಗೆ ಥರ್ಮಲ್ ಸ್ಕ್ಯಾನರ್ ಗಳು ಬಳಕೆಯಾಗುತ್ತಿವೆ. ಇವುಗಳು ಕೇವಲ ಒಬ್ಬ ವ್ಯಕ್ತಿಯ ದೇಹದ ತಾಪಮಾನವನ್ನು ಗುರುತು ಹಿಡಿಯುತ್ತವೆ ಹೊರತು ಆತನಿಗೆ ನಿಜವಾಗಲೂ ಕೊರೊನಾ ವೈರಸ್ ಸೋಂಕು ಇದೆಯೋ ಅಥವಾ ಇಲ್ಲವೊ ಎಂಬುದನ್ನು ಹೇಳುವುದಿಲ್ಲ. ಏಕೆಂದರೆ ಕೊರೊನ ವೈರಸ್ ಗುಣ ಲಕ್ಷಣವೇ ಹಾಗೆ. ಸೋಂಕಿತ ವ್ಯಕ್ತಿ ರೋಗಲಕ್ಷಣಗಳನ್ನು ಹೊಂದುವುದು ಸುಮಾರು 10 ರಿಂದ 14 ದಿನಗಳು ಕಳೆದ ನಂತರವಷ್ಟೇ.

16. ಸಾಕು ಪ್ರಾಣಿಗಳಿಂದ ಕೋರೋನ ಬರುತ್ತದೆ
ಒಂದು ವೇಳೆ ನೀವು ಕೊರೊನ ಮುಕ್ತವಾದ ಪ್ರದೇಶದಲ್ಲಿದ್ದರೆ ಅಥವಾ ನಿಮ್ಮ ಮನೆಯ ಸಾಕುಪ್ರಾಣಿಗಳು ಇತರರ ಮನೆಗೆ ಅಥವಾ ಹೊರಗಡೆ ಬೇರೆಲ್ಲೂ ಹೋಗದೆ ಇದ್ದರೆ ನೀವು ಈ ವಿಚಾರದಲ್ಲಿ ಭಯಪಡಬೇಕಿಲ್ಲ. ಅಪ್ಪಿತಪ್ಪಿ ನಿಮ್ಮ ಮನೆಯ ಅಕ್ಕಪಕ್ಕ ಅಥವಾ ಹತ್ತಿರದಲ್ಲೇ ಯಾರಾದರೂ ಸೋಂಕಿತರು ಇದ್ದು, ಅವರ ಮನೆಗೆ ನಿಮ್ಮ ಮನೆಯ ನಾಯಿ, ಬೆಕ್ಕು, ಪಕ್ಷಿ, ಪಾರಿವಾಳ ಹೋಗಿ ಬಂದಿದ್ದರೆ, ಆಗ ನಿಮ್ಮ ಸಾಕುಪ್ರಾಣಿಗಳ ಮೇಲೆ ಅನುಮಾನ ಪಡುವುದಕ್ಕೆ ಒಂದು ಅರ್ಥವಿರುತ್ತದೆ.

17. ಚೀನಾ ದೇಶದಿಂದ ಯಾವುದೇ ಪಾರ್ಸೆಲ್ ತರಿಸಿಕೊಳ್ಳಬಾರದು
ವಿಜ್ಞಾನಿಗಳು ಹೇಳುವ ಪ್ರಕಾರ ಕೊರಣ ವೈರಸ್ ಯಾವುದೇ ಒಂದು ವಸ್ತುವಿನ ಮೇಲೆ ಬಹಳ ದಿನಗಳ ಕಾಲ ಜೀವಿಸಲಾರದು. ಒಂದು ವೇಳೆ ವೈರಸ್ ಗೆ ಮಾನವ ಸಂಪರ್ಕ ಉಂಟಾದರೆ ಮಾತ್ರ ಅದು ಒಬ್ಬರಿಂದ ಒಬ್ಬರಿಗೆ ಹರಡಿ ತನ್ನ ಸಂತತಿ ಹೆಚ್ಚಿಸಿಕೊಳ್ಳಲು ಮುಂದಾಗುತ್ತದೆ. ಹಾಗಾಗಿ ಎಲ್ಲಿಂದಲೋ ಎಷ್ಟೋ ದಿನಗಳ ನಂತರ ಬರುವ ಪಾರ್ಸಲ್ ಮೇಲೆ ವೈರಸ್ ಇರುತ್ತದೆ ಎಂದರೆ ಅದನ್ನು ನಂಬಲು ಅಸಾಧ್ಯ.



Click it and Unblock the Notifications











